ಅಂತಾರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಐಸಿಎಂಆರ್

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಂತರರಾಜ್ಯ ಪ್ರಯಾಣಕ್ಕಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆ ತೆಗೆದುಕೊಳ್ಳುವ ಅಗತ್ಯವಿಲ್ಲವೆಂದು ತಿಳಿಸಿದೆ. ಆದರೆ ಈ ನಿಯಮವು ಕೇವಲ ಸಂಪೂರ್ಣವಾಗಿ ಆರೋಗ್ಯವಾಗಿರುವವರಿಗೆ ಮಾತ್ರ ಅನ್ವಯವಾಗುತ್ತದೆ.

ಅಂತರ್ ರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಐಸಿಎಂಆರ್

ಕರೋನಾ ವೈರಸ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಲ್ಯಾಬ್'ಗಳು ಜನರಿಂದ ತುಂಬಿ ಹೋಗಿವೆ. ಲ್ಯಾಬ್'ಗಳಲ್ಲಿ ಜನದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಈ ಸಲಹೆ ನೀಡಲಾಗಿದೆ. ಒಮ್ಮೆಆರ್‌ಟಿ-ಪಿಸಿಆರ್ ಟೆಸ್ಟ್'ನಲ್ಲಿ ಪಾಸಿಟಿವ್ ಬಂದ ವ್ಯಕ್ತಿಯನ್ನು ಮತ್ತೆ ಪರೀಕ್ಷಿಸಬಾರದು ಎಂದು ಐಸಿಎಂಆರ್ ಸಲಹೆ ನೀಡಿದೆ.

ಅಂತರ್ ರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಐಸಿಎಂಆರ್

ಇದರಿಂದ ಕೋವಿಡ್ 19 ಪರೀಕ್ಷೆ ನಡೆಸುವ ಲ್ಯಾಬ್'ಗಳಲ್ಲಿ ಜನ ದಟ್ಟಣೆ ಕಡಿಮೆಯಾಗಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ವರದಿಗಳು ಜನರ ಕೈ ಸೇರಲಿವೆ.ಇದರಿಂದ ಅಂತರರಾಜ್ಯ ಪ್ರಯಾಣ ಕೈಗೊಳ್ಳುವವರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಅಂತರ್ ರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಐಸಿಎಂಆರ್

ಹೊಸ ಆದೇಶದ ಪ್ರಕಾರ, ಕರೋನಾ ರೋಗ ಲಕ್ಷಣಗಳನ್ನು ಹೊಂದಿರದ ವ್ಯಕ್ತಿಗಳು ಕರೋನಾ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ. ಬಸ್, ರೈಲು ಹಾಗೂ ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಈ ನಿಯಮ ಅನ್ವಯವಾಗುತ್ತದೆ.

ಅಂತರ್ ರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಐಸಿಎಂಆರ್

ಐಸಿಎಂಆರ್ ಅನಗತ್ಯವಾಗಿ ಅಂತರರಾಜ್ಯ ಪ್ರಯಾಣವನ್ನು ಕೈಗೊಳ್ಳಬಾರದೆಂದು ಸಲಹೆ ನೀಡಿದೆ. ಅದರಲ್ಲೂ ಜ್ವರ ಸೇರಿದಂತೆ ಕರೋನಾ ರೋಗ ಲಕ್ಷಣಗಳನ್ನುಹೊಂದಿರುವವರು ಪ್ರಯಾಣಿಸಬಾರದು ಎಂದು ಹೇಳಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಅಂತರ್ ರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಐಸಿಎಂಆರ್

ಎಲ್ಲಾ ಪ್ರಯಾಣಿಕರು ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದೆ. ಈ ನಡುವೆ ಕೆಲವು ರಾಜ್ಯಗಳು ಲಾಕ್‌ಡೌನ್ ಅವಧಿಯಲ್ಲಿ ಪ್ರಯಾಣಿಸಲು ಇ-ಪಾಸ್'ಗಳನ್ನು ಕಡ್ಡಾಯಗೊಳಿಸಿವೆ.

ಅಂತರ್ ರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಐಸಿಎಂಆರ್

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿಸ್ಚಾರ್ಜ್ ನೀತಿಯ ಪ್ರಕಾರ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಕೋವಿಡ್ 19 ರೋಗಿಗಳನ್ನು ಪರೀಕ್ಷಿಸುವ ಅಗತ್ಯವಿಲ್ಲ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಅಂತರ್ ರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಐಸಿಎಂಆರ್

ಸದ್ಯಕ್ಕೆ ಭಾರತದಲ್ಲಿ ಆರ್‌ಟಿ-ಪಿಸಿಆರ್, ಟ್ರೂನಾಟ್, ಸಿಬಿಎನ್ಎಟಿ ಸೇರಿದಂತೆ ಒಟ್ಟು 2,506 ಪರೀಕ್ಷಾ ಲ್ಯಾಬ್'ಗಳಿವೆ. ಈ ಲ್ಯಾಬ್'ಗಳು ಪ್ರತಿ ನಿತ್ಯ ಮೂರು ಶಿಫ್ಟ್ ಕಾರ್ಯಾಚರಣೆ ನಡೆಸಿ ಪ್ರತಿ ದಿನ 1.5 ಮಿಲಿಯನ್ ಪರೀಕ್ಷೆಗಳನ್ನು ಮಾಡಬಹುದು.

ಅಂತರ್ ರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಐಸಿಎಂಆರ್

ಪ್ರತಿ ದಿನ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಮಯೋಚಿತ ವರದಿಗಳನ್ನು ನೀಡಲು ಲ್ಯಾಬ್'ಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಪರೀಕ್ಷೆಗಳನ್ನು ಹೆಚ್ಚಿಸಲು ಐಸಿಎಂಆರ್ ಶಿಫಾರಸು ಮಾಡಿದೆ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ಹೇಳಿದೆ.

Most Read Articles

Kannada
English summary
ICMR issues new guide lines for interstate travel. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X