ಹಿರೋಷಿಮಾಗಿಂತಲೂ 2000 ಪಟ್ಟು ಹೆಚ್ಚು ವಿನಾಶಕಾರಿ ಬಾಂಬ್; ಕ್ಷಣ ಮಾತ್ರದಲ್ಲಿ ಲಂಡನ್ ನಾಮಾವಶೇಷ
ರಷ್ಯಾ ಮೂರನೇ ಮಹಾಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ ಆರೋಪ ಗಂಭೀರವಾಗಿ ಕೇಳಿ ಬರುತ್ತಿದೆ. ಈ ನಡುವೆ ರಷ್ಯಾ ಅತ್ಯಾಧುನಿಕ ಖಂಡಾಂತರ ಅಣ್ವಸ್ತ್ರ ಕ್ಷಿಪಣಿಯ ರೋಚಕ ಚಿತ್ರವನ್ನು ಬಯಲುಗೊಳಿಸಿದೆ.
ಉಗ್ರ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ದಿಟ್ಟ ಸ್ವರದಿಂದಲೇ ಉತ್ತರ ನೀಡುತ್ತಿರುವ ರಷ್ಯಾ, ಅತಿ ನೂತನ ಸ್ಯಾಟನ್-2 ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿಯ ರೋಚಕ ಚಿತ್ರ ಹಾಗೂ ವಿವರಗಳನ್ನು ಬಹಿರಂಗಪಡಿಸಿದೆ. ಇದು ಎರಡನೇ ಮಹಾಯುದ್ಧದ ಕೊನೆಯಲ್ಲಿ ಅಮೆರಿಕ ಜಪಾನ್ ವಿರುದ್ಧ ನಡೆಸಿದ ಹೀರೋಷಿಮಾ ಮತ್ತು ನಾಗಸಾಕಿ ಅಣ್ವಸ್ತ್ರ ದಾಳಿಗಿಂತಲೂ 2,000 ಪಟ್ಟು ಹೆಚ್ಚು ಬಲಶಾಲಿಯಾಗಿದ್ದು, ಇಡೀ ಜಗತ್ತನ್ನೇ ಸರ್ವನಾಶ ಮಾಡುವ ಸಾಮರ್ಥ್ಯ ಹೊಂದಿದೆ.

ಒಂದೇ ಒಂದು ಕ್ಷಣದಲ್ಲಿ ಸಂಪೂರ್ಣ ಫ್ರಾನ್ಸ್ ದೇಶವನ್ನು ನಾಶಗೊಳಿಸುವ ಶಕ್ತಿ ರಷ್ಯಾದ ನೂತನ ಸ್ಯಾಟನ್-2 ಅಣ್ವಸ್ತ್ರ ಕ್ಷಪಣಿಗಿದೆ.

ಇದರ ನೈಜ ಹೆಸರು ಆರ್ ಎಸ್-28 ಸರ್ಮಾಟ್ ಕ್ಷಿಪಣಿ ಎಂದಾಗಿದ್ದು, ನ್ಯಾಟೋ ಪಡೆಯು ಸ್ಯಾಟನ್ 2 ಎಂದು ಹೆಸರಿಸಿದೆ.

ಪ್ರತಿ ಸೆಕೆಂಡುನಲ್ಲಿ 7 ಕೀ.ಮೀ. ವೇಗದಲ್ಲಿ ಸಂಚರಿಸಲಿರುವ ಸ್ಯಾಟನ್ 2 ಕ್ಷಿಪಣಿಯು 10,000 ಕೀ.ಮೀ. ವ್ಯಾಪ್ತಿಯ ವರೆಗೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೇಶದ ರಕ್ಷಣೆಗೆ ಅತಿ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಇದರಂತೆ ಎಸ್ ಎಸ್-18 ಸ್ಯಾಟನ್ ಆಯುಧಗಳನ್ನು ನೂತನ ಮಿಸೈಲ್ ಬದಲಾಯಿಸಿಕೊಳ್ಳಲಿದೆ.

ರಷ್ಯಾ ಮೂರನೇ ಮಹಾಯುದ್ಧಕ್ಕೆ ಸಿದ್ಧತೆ ನಡೆಸುತ್ತಿಯೆಂಬ ಆರೋಪವಿದೆ. ಈಗ ಅಣು ಬಾಂಬ್ ಸಾಮರ್ಥ್ಯದ ಕ್ಷಿಪಣಿಯು ಅಮೆರಿಕದ ನಿದ್ದೆಗೆಡಿಸಿದೆ.

ಈ ಥರ್ಮೋ ನ್ಯೂಕ್ಲಿಯರ್ ಖಂಡಾಂತರ ಕ್ಷಿಪಣಿಯು 16 ಪರಮಾಣು ಬಾಂಬ್ ಗಳನ್ನು ಹೊತ್ತೊಯ್ಯಲು ಸಾಮರ್ಥ್ಯ ಹೊಂದಿರಲಿದೆ.

ಶತ್ರುಗಳಿಗೆ ರಾಡಾರ್ ಗಳಿಗೆ ಸಿಗದೆ ರಹಸ್ಯ ರೀತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಲಿದೆ. ಇದು 2018ರಲ್ಲಿ ಪೂರ್ಣ ಸೇವೆಗೆ ಲಭ್ಯವಾಗಲಿದೆ.

ರಷ್ಯಾದ ಮೇಕ್ ಯೇವ್ ರಾಕೆಟ್ ಡಿಸೈನ್ ಬ್ಯುರೋ ಈ ವಿನಾಶಕಾರಿ ಕ್ಷಿಪಣಿಯ ಚಿತ್ರಗಳನ್ನು ಬಿತ್ತರಿಸಿದೆ. ಇದು ಅಮೆರಿಕ, ಬ್ರಿಟನ್ ಅಥವಾ ಇತರೆ ಯುರೋಪ್ ರಾಷ್ಟ್ರಗಳನ್ನು ಧ್ವಂಸಗೊಳಿಸುವಷ್ಟು ಬಲಶಾಲಿಯಾಗಿದೆ.

ಹೈಪರ್ ಸೋನಿಕ್ ವಿಮಾನಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಷ್ಯಾ, ಅತ್ಯಾಧುನಿಕ ಮಿಸೈಲ್ ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಗರಡಿಯಲ್ಲಿ ಪಳಗಿಸುತ್ತಿದೆ.

ರಷ್ಯಾದ ಮಿಯಾಸ್ ನಲ್ಲಿ ಸ್ಯಾಟನ್ 2 ಖಂಡಾಂತರ ಅಣ್ವಸ್ತ್ರ ಕ್ಷಿಪಣಿಯ ಪರೀಕ್ಷೆಯು ನಡೆಯುತ್ತದೆ. 2009ರಲ್ಲೇ ಯೋಜನೆ ಆರಂಭಿಸಲಾಗಿತ್ತು.

ಇತಿಹಾಸದಲ್ಲಿ...
1945ರಲ್ಲಿ ನಡೆದ ಎರಡನೇ ಜಾಗತಿಕ ಮಹಾಯುದ್ಧದ ಅಂತಿಮ ಹಂತದಲ್ಲಿ ಅಮೆರಿಕಾ, ಜಪಾನ್ ನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಪರಮಾಣು ಬಾಂಬ್ ದಾಳಿಯನ್ನು ನಡೆಸಿತ್ತು.

1945 ಆಗಸ್ಟ್ 06ರಂದು ಲಿಟ್ಲ್ ಬಾಯ್ ಎಂಬ ಹೆಸರಿನ ಪರಮಾಣು ಬಾಂಬನ್ನು ಹಿರೋಷಿಮಾ ನಗರದ ಮೇಲೆ ಅಮೆರಿಕ ಬೀಳಿಸಿತ್ತು.

ಇದಾದ ಬಳಿಕ ಆಗಸ್ಟ್ 9ರಂದು ನಾಗಸಾಕಿಯ ಮೇಲೆ ಫ್ಯಾಟ್ ಮ್ಯಾನ್ ಎಂಬ ಅಣ್ವಸ್ತ್ರವನ್ನು ಸ್ಪೋಟಿಸಿತ್ತು.

ಪರಿಣಾಮ ಹಿರೋಷಿಮಾದಲ್ಲಿ 1.6 ಲಕ್ಷ ಹಾಗೂ ನಾಗಸಾಕಿಯಲ್ಲಿ 80,000ರಷ್ಟು ಜನರನ್ನು ಬಲಿ ಪಡೆದುಕೊಂಡಿತ್ತು. ಅಣ್ವಸ್ತ್ರ ದಾಳಿಯ ಶಾಪವನ್ನು ಜಪಾನ್ ಇಂದಿಗೂ ಎದುರಿಸುತ್ತಿದೆ.


Click it and Unblock the Notifications








