ಲಾಕ್‌ಡೌನ್ 3.0: ಯಾವುದಕ್ಕೆಲ್ಲಾ ಇದೆ ವಿನಾಯಿತಿ, ಯಾವುದೆಲ್ಲಾ ನಿರ್ಬಂಧ?

ಕರೋನಾ ವೈರಸ್ ಸೋಂಕಿನಿಂದ ರಕ್ಷಿಸಲು ಕೇಂದ್ರ ಗೃಹ ಇಲಾಖೆಯು ಲಾಕ್‌ಡೌನ್ 3.0 ಅನ್ನು ಘೋಷಿಸಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ, ಈ ಲಾಕ್‌ಡೌನ್ 3.0ನಲ್ಲಿ ಇಡೀ ದೇಶವನ್ನು ಮೂರು ಝೋನ್‌ಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ರೆಡ್ ಝೋನ್, ಆರೇಂಜ್ ಹಾಗೂ ಗ್ರೀನ್ ಝೋನ್‌ಗಳು ಸೇರಿವೆ.

ಲಾಕ್‌ಡೌನ್ 3.0: ಯಾವುದಕ್ಕೆಲ್ಲಾ ಇದೆ ವಿನಾಯಿತಿ, ಯಾವುದೆಲ್ಲಾ ನಿರ್ಬಂಧ?

ಲಾಕ್‌ಡೌನ್ 3.0ನಲ್ಲಿ ಗೃಹ ಇಲಾಖೆಯು ನಿಯಮಗಳನ್ನು ಮೊದಲಿಗಿಂತ ಹೆಚ್ಚು ಕಠಿಣಗೊಳಿಸಿದೆ. ಜೊತೆಗೆ ಕೆಲವು ವಿನಾಯಿತಿಗಳನ್ನು ನೀಡಿದೆ. ಆದರೆ ಈ ವಿನಾಯಿತಿಗಳನ್ನು ಮೂರು ವಲಯಗಳಲ್ಲಿ ಬೇರೆ ಬೇರೆಯಾಗಿ ನೀಡಲಾಗುತ್ತದೆ. ಎಲ್ಲಾ ವಲಯಗಳಲ್ಲಿ ಮನೆಯಿಂದ ಹೊರಬರಲು ವಿವಿಧ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಲಾಕ್‌ಡೌನ್ 3.0: ಯಾವುದಕ್ಕೆಲ್ಲಾ ಇದೆ ವಿನಾಯಿತಿ, ಯಾವುದೆಲ್ಲಾ ನಿರ್ಬಂಧ?

ಗ್ರೀನ್ ಝೋನ್‌ನಲ್ಲಿ ಬಸ್ಸುಗಳು ಸೇರಿದಂತೆ ಬಹುತೇಕ ಎಲ್ಲಾ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಆರೇಂಜ್ ಝೋನ್‌ನಲ್ಲಿ ಖಾಸಗಿ ವಾಹನಗಳಿಗೆ ಹಾಗೂ ಕ್ಯಾಬ್ ಸೇವೆಗಳಿಗೆ ಅನುಮೋದನೆ ನೀಡಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ 3.0: ಯಾವುದಕ್ಕೆಲ್ಲಾ ಇದೆ ವಿನಾಯಿತಿ, ಯಾವುದೆಲ್ಲಾ ನಿರ್ಬಂಧ?

ಈ ಮೂರು ಝೋನ್‌ಗಳಲ್ಲಿ ಖಾಸಗಿ ವಾಹನಗಳಿಗೆ ಗೃಹ ಇಲಾಖೆಯು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ನಾಲ್ಕು ಚಕ್ರದ ವಾಹನಗಳಲ್ಲಿ ಚಾಲಕ ಸೇರಿದಂತೆ ಇಬ್ಬರು ಮಾತ್ರ ಪ್ರಯಾಣಿಸಬಹುದು. ರೆಡ್ ಝೋನ್‌ನಲ್ಲಿ ಬೈಕ್‌ನಲ್ಲಿ ಇಬ್ಬರು ಪ್ರಯಾಣಿಸುವಂತಿಲ್ಲ.

ಲಾಕ್‌ಡೌನ್ 3.0: ಯಾವುದಕ್ಕೆಲ್ಲಾ ಇದೆ ವಿನಾಯಿತಿ, ಯಾವುದೆಲ್ಲಾ ನಿರ್ಬಂಧ?

ರೆಡ್ ಝೋನ್‌ ಹೊರತುಪಡಿಸಿ ಗ್ರೀನ್ ಝೋನ್ ಹಾಗೂ ಆರೇಂಜ್ ಝೋನ್‌ಗಳಲ್ಲಿ ಬೈಕ್‌ಗಳಲ್ಲಿ ಇಬ್ಬರು ಪ್ರಯಾಣ ಮಾಡಬಹುದು. ಇದೇ ವೇಳೆ ರೆಡ್ ಝೋನ್‌ನಲ್ಲಿ ಯಾವುದೇ ಸಾರ್ವಜನಿಕ ಸಾರಿಗೆಯನ್ನು ಬಳಸಲು ಅನುಮತಿ ನೀಡಲಾಗಿಲ್ಲ. ಆರೇಂಜ್ ಹಾಗೂ ಗ್ರೀನ್ ಝೋನ್‌ಗಳಲ್ಲಿ ಟ್ಯಾಕ್ಸಿ ಹಾಗೂ ಕ್ಯಾಬ್ ಸೇವೆಗಳಿಗೆ ಅನುಮತಿ ನೀಡಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ 3.0: ಯಾವುದಕ್ಕೆಲ್ಲಾ ಇದೆ ವಿನಾಯಿತಿ, ಯಾವುದೆಲ್ಲಾ ನಿರ್ಬಂಧ?

ಇನ್ನು ಗ್ರೀನ್ ಝೋನ್‌ನಲ್ಲಿರುವ ಸಾರ್ವಜನಿಕ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಬಗ್ಗೆ ಹೇಳುವುದಾದರೆ, ಬಸ್‌ಗಳ ಆಸನ ಸಾಮರ್ಥ್ಯದ 50%ನಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸಬಹುದು.

ಲಾಕ್‌ಡೌನ್ 3.0: ಯಾವುದಕ್ಕೆಲ್ಲಾ ಇದೆ ವಿನಾಯಿತಿ, ಯಾವುದೆಲ್ಲಾ ನಿರ್ಬಂಧ?

ಎಲ್ಲಾ ವಲಯಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಜನರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಎಲ್ಲಾ ವಲಯಗಳಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಗೃಹ ಇಲಾಖೆಯು ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ 3.0: ಯಾವುದಕ್ಕೆಲ್ಲಾ ಇದೆ ವಿನಾಯಿತಿ, ಯಾವುದೆಲ್ಲಾ ನಿರ್ಬಂಧ?

65 ವರ್ಷ ವಯಸ್ಸಿನ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೊರಗೆ ಬಾರದಂತೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.

Most Read Articles

Kannada
English summary
India lockdown 3.0 relaxation regulations driving riding permissions conditions. Read in Kannada.
Story first published: Monday, May 4, 2020, 17:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X