ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

Written By:

ಗ್ಲೋಬಲ್ ನೇವಿಗೇಷನ್ ಸ್ಯಾಟಲೈಟ್ ಸಿಸ್ಟಂ (Global Navigation Satellite System) ಎಂಬುದು ಅಮೆರಿಕ ಅಭಿವೃದ್ಧಿಪಡಿಸಿದ ಜಾಗತಿಕ ಸ್ಥಾನ ನಿರ್ಣಯ ಹಾಗೂ ದಿಕ್ಸೂಚಿ ವ್ಯವಸ್ಥೆಯಾಗಿದೆ. ಕೃತಕ ಉಪಗ್ರಹಗಳು ಬಿತ್ತರಿಸುವ ಮಾಹಿತಿಯನ್ನು ಉಪಯೋಗಿಸಿಕೊಂಡು ಅವುಗಳನ್ನು ಆಲಿಸುವ ರಿಸೀವರ್ ಗಳು ತಮ್ಮ ಸ್ಥಾನ, ವೇಗ ಹಾಗೂ ತಾಸು ಚಲಿಸುತ್ತಿರುವ ದಿಕ್ಕನ್ನು ನಿರ್ಣಯಿಸಬಲ್ಲವು.

Also Read: ಬ್ರಿಟನ್ ಉಪಗ್ರಹಗಳ ಯಶಸ್ವಿ ಹಾರಾಟ

ಅಮೆರಿಕ ಗ್ಲೋಬರ್ ಪೊಸಿಶನಿಂಗ್ ಸಿಸ್ಟಂ ನಿರ್ವಹಣೆಯು ಅಮೆರಿಕ ದೇಶದ ವಾಯು ಸೇನೆಯ ಅಧಿನತೆಯಲ್ಲಿದೆ. ಆರಂಭದಲ್ಲಿ ಇದನ್ನು ಅಮೆರಿಕ ಸೈನಿಕ ಬಳಕೆಗಾಗಿ ಅಭಿವೃದ್ಧಿಪಡಿಸಿದ್ದಾದರೂ ತದಾ ಬಳಿಕ ನಾಗರಿಕ ಬಳಕೆಗಳಿಗಾಗಿಯೂ ನೀಡಲಾಗಿದೆ. ಆಧುನಿಕ ಜಗತ್ತಿನಲ್ಲಿ ಜಿಪಿಎಸ್ ನಿಖರತೆಯು ರಿಯಲ್ ಟೈಮ್ ಮಾಹಿತಿಯ ವರೆಗೂ ಬೆಳೆದು ನಿಂತಿದೆ.

To Follow DriveSpark On Facebook, Click The Like Button
ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

ದಿಕ್ಸೂಚಿ ವ್ಯವಸ್ಥೆಗಾಗಿ ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶವು ಅಮೆರಿಕವನ್ನೇ ಅವಲಂಬಿಸುತ್ತಿದೆ. ಇದರ ಸೇವೆಯು ಸಂಪೂರ್ಣ ಉಚಿತವಾದರೂ ಯುದ್ಧದಂತಹ ತುರ್ತು ಪರಿಸ್ಥಿತಿಯಲ್ಲಿ ಅಮೆರಿಕಗೆ ಬೇಕಾದ್ದಲ್ಲಿ ತನಗಿಷ್ಟದಂತೆ ಕಾರ್ಯಾಚರಣೆಯನ್ನು ಸ್ಧಗಿತಗೊಳಿಸಬಹುದಾಗಿದೆ. ಅಲ್ಲದೆ ಇತರ ದೇಶಗಳ ಮೇಲಿನ ದಾಳಿಗಾಗಿ ದುರುಪಯೋಗ ಮಾಡುವ ಸಾಧ್ಯತೆಯೂ ಇದೆ.

ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

ಈ ಎಲ್ಲದರ ನಿಟ್ಟಿನಲ್ಲಿ ಎಲ್ಲ ಕ್ಷೇತ್ರದಲ್ಲೂ ಮುಂದುವರಿಯುತ್ತಿರುವ ಭಾರತ ತನ್ನದೇ ಆದ ದೇಶೀಯ ಅಥವಾ ದೇಸಿ ದಿಕ್ಸೂಚಿ ವ್ಯವಸ್ಥೆಯನ್ನು ಆರಂಭಿಸಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಮಹತ್ತರ ಮೈಲುಗಲ್ಲಾಗಿದೆ.

ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

ತನ್ನ ಮೊದಲ ಪ್ರಯತ್ನದಲ್ಲೇ ಮಂಗಳಕ್ಕೆ ಉಪಗ್ರಹ ಉಡಾವಣೆ ಮಾಡುವ ಮೂಲಕ ಇಡೀ ವಿಶ್ವಕ್ಕೆ ಅಚ್ಚರಿ ಮೂಡಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ) ಈ ಮಹತ್ತರ ದಿಕ್ಸೂಚಿ ವ್ಯವಸ್ಥೆಯನ್ನು ನನಸುಗೊಳಿಸುತ್ತಿದೆ.

ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

ಭಾರತದ ಹೊಸ ನೇವಿಗೇಷನ್ ವ್ಯವಸ್ಥೆಯು ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ ಅಥವಾ ಐಆರ್‌ಎನ್‌ಎಸ್‌ಎಸ್ ಎಂಬ ಸಂಕ್ಷಿಪ್ತ ಹೆಸರಿನಲ್ಲಿ ಗುರುತಿಸಿಕೊಳ್ಳಲಿದೆ. ಇದು ಅತಿ ಶೀಘ್ರದಲ್ಲೇ ನಿಮ್ಮ ಮೊಬೈಲ್ ಫೋನ್ ಗಳಲ್ಲೂ ಲಭ್ಯವಾಗಲಿದೆ.

ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

ಈ ಸಂಬಂಧ ಬೆಂಗಳೂರಿನಲ್ಲಿ ಮಹತ್ತರ ಸಭೆ ಕರೆದಿದ್ದ ಇಸ್ರೋ, ಜಿಪಿಎಸ್ ಬದಲಿಯಾಗಿ ಐಆರ್‌ಎನ್‌ಎಸ್‌ಎಸ್ ಬಳಕೆಗೆ ವಿವಿಧ ಫೋನ್ ತಯಾರಕ ಸಂಸ್ಥೆಗಳು, ನೇವಿಗೇಷನ್ ಉಪಕರಣ ತಯಾರಕರು ಹಾಗೂ ಜಾಗತಿಕ ಮಾಹಿತಿ ವ್ಯವಸ್ಥೆ ತಂತ್ರಜ್ಞಾನ ಸಂಶೋಧಕರ ಜೊತೆ ಮಾತುಕತೆ ನಡೆಸಿದೆ.

ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

ಇಸ್ರೋ ಹಿರಿಯ ವಿಜ್ಞಾನಿಗಳು ಭಾಗವಹಿಸಿದ ಈ ಮಹಾ ಸಭೆಯಲ್ಲಿ ಅಮೆರಿಕದ ಜಿಪಿಎಸ್ ಬದಲಿಯಾಗಿ ನಿಖರವಾದ ಐಆರ್‌ಎನ್‌ಎಸ್‌ಎಸ್ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುವುದು. ಮುಂದಿನ ವರ್ಷ ಜುಲೈ ವೇಳೆಯಾಗುವಾಗ ಬಿಡುಗಡೆ ಮಾಡುವ ಯೋಜನೆಯನ್ನು ಇಸ್ರೋ ಹೊಂದಿದೆ.

ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

ಇದರಂತೆ ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಯೋಜನೆಗಾಗಿ 2016 ಮಾರ್ಚ್ ವೇಳೆಯಾಗುವಾಗ ಏಳು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಬಿಡಲಾಗುವುದು. ಪ್ರಸ್ತುತ ವ್ಯವಸ್ಥೆಯು ಪ್ರಮುಖವಾಗಿಯೂ ಭಾರತವನ್ನು ಕೇಂದ್ರಿಕರಿಸಲಿದೆ.

ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

ಅಮೆರಿಕದ ಜಿಪಿಎಸ್ ಗಿಂತಲೂ ಮಿಗಿಲಾಗಿ ಐಆರ್‌ಎನ್‌ಎಸ್‌ಎಸ್ ವ್ಯವಸ್ಥೆಯಲ್ಲಿ ಫೋನ್ ಗಳಲ್ಲಿ ಹೆಚ್ಚುವರಿ ಸಣ್ಣದಾದ ಡಿವೈಸ್ ಲಗತ್ತಿಸಲಾಗುವುದು. ಇದು ಯಾವುದೇ ಹವಮಾನ ಪರಿಸ್ಥಿತಿಯಲ್ಲೂ ಸ್ಯಾಟಲೈಟ್ ಗಳಿಂದ 'ಎಸ್' ಬ್ಯಾಂಡ್ ಸಿಗ್ನಲ್ ಗಳನ್ನು ರಿಸೀವ್ ಮಾಡಲು ಸಹಕಾರಿಯಾಗಲಿದೆ. ಅದೇ ರೀತಿ ಫೋನ್ ನಲ್ಲಿ ಆಳವಡಿಸುವ ವಿಶೇಷ ಸಾಫ್ಟ್ ವೇರ್ ಗಳಿಂದ 'ಎಲ್' ಬ್ಯಾಂಡ್ ಸಿಗ್ನಲ್ ಗಳನ್ನು ಪಡೆಯಲಾಗುವುದು.

ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

ಬಾಹ್ಯಾಕಾಶಕ್ಕೆ ಬಿಡಲಾಗುವು ಏಳು ಸ್ಯಾಟಲೈಟ್ ಗಳಿಂದ 'ಎಲ್' ಹಾಗೂ 'ಎಸ್' ಬ್ಯಾಂಡ್ ಸಿಗ್ನಲ್ ಗಳನ್ನು ಪಡೆಯಲಾಗುವುದು. ಅಲ್ಲದೆ ವಿಶೇಷ ಎಂಬೆಡೆಡ್ ತಂತ್ರಾಂಶವು ನಿಖರ ಮಾಹಿತಿ ರವಾನಿಸಲು ಸಹಕಾರಿಯಾಗಲಿದೆ.

ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

ನಿಮ್ಮ ಮಾಹಿತಿಗಾಗಿ 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತ ಪ್ರಮುಖವಾಗಿಯೂ ಅಮೆರಿಕದ ಜಿಪಿಎಸ್ ತಂತ್ರಾಂಶವನ್ನು ಆಶ್ರಯಿಸಿತ್ತು. ಆದರೆ ಈಗ ತನ್ನದೇ ಆದ ಸ್ವದೇಶಿ ಜಿಪಿಎಸ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಮೂಲಕ ವಿಶ್ವದ ಅಶ್ವಶಕ್ತಿಯಾಗಿ ಬೆಳೆದು ಬರುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಈ ಎಲ್ಲ ಯೋಜನೆಗಳಿಗೆ 1600 ಕೋಟಿ ರು.ಗಳ ವೆಚ್ಚ ಅಂದಾಜಿಸಲಾಗಿದೆ.

Read more on ಜಿಪಿಎಸ್ gps
English summary
Say Goodbye To GPS, India's ready to welcome IRNSS
Story first published: Thursday, December 10, 2015, 11:01 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark