ಕೈಕೊಟ್ಟ ಜಿಪಿಎಸ್; ಕಾರಿನೊಂದಿಗೆ ಕೆರೆಯೊಳಗೆ ಧುಮುಕಿದ ಯುವತಿ
ತಂತ್ರಜ್ಞಾನವನ್ನು ಅತಿಯಾಗಿ ನಂಬಿದರೆ ಹೇಗೆ? ಆ ದೇವರೇ ಗತಿ! ಇದಕ್ಕೊಂದು ಉತ್ತಮ ಉದಾಹರಣೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಆಧುನಿಕ ಕಾರುಗಳಲ್ಲಿ ಅತಿ ತಂತ್ರಜ್ಞಾನವನ್ನು ಚಾಲಕರ ನೆರವಿಗಾಗಿ ಆಳವಡಿಸಲಾಗುತ್ತದೆ. ಇವುಗಳಲ್ಲಿ ದಿಕ್ಸೂಚಿ ವ್ಯವಸ್ಥೆಯಾಗಿರುವ ಜಿಪಿಎಸ್ ತಂತ್ರಜ್ಞಾನ ಸಹ ಒಂದಾಗಿದೆ.
ಆದರೆ ಆಪತ್ಕಾಲದಲ್ಲಿ ಯಾರೂ ನೆರವಿಗೆ ಸಿಗಲ್ಲ ಎಂಬ ರೀತಿಯಲ್ಲಿ ಅತಿಯಾಗಿ ನಂಬಿದ ಜಿಪಿಎಸ್ ವ್ಯವಸ್ಥೆಯೇ ಕೈಕೊಟ್ಟರೇ ಹೇಗಿರಬಹುದು ? ಇಂತಹದೊಂದು ಸ್ವಾರಸ್ಯಕರ ಅಪಘಾತ ಸುದ್ದಿಯೊಂದು ಕೆನಡಾದಿಂದ ವರದಿಯಾಗಿದೆ.

23ರ ಹರೆಯದ ಯುವತಿಯೊಬ್ಬಾಕೆ ಪರಿಚಿತವಲ್ಲದ ಹಾದಿಯಲ್ಲಿ ಜಿಪಿಎಸ್ ನಂಬಿಕೊಂಡು ಡ್ರೈವಿಂಗ್ ಮಾಡಲು ಮುಂದಾಗಿದ್ದರು.

ಜಿಪಿಎಸ್ ನೋಡಿಕೊಂಡು ಟೊಬೆರ್ ಮೊರಿಯಲ್ಲಿನ ಒಂಟಾರಿಯೊದಲ್ಲಿ ಬಲಕ್ಕೆ ತಿರುಗಿದ ಈಕೆ ನೇರವಾಗಿ 100 ಅಡಿ ಆಳದ ಕೆರೆಯೊಳಗೆ ಕಾರು ಸಮೇತ ಮುಳುಗಿದ್ದಾರೆ.

ಕಾರನ್ನು ನಿಯಂತ್ರಿಸುವಷ್ಟು ಹೊತ್ತರಲ್ಲಿ ನೇರವಾಗಿ ಕೆರೆಗೆ ಧುಮುಕಿತ್ತು. ಆದರೆ ಅದೃಷ್ಟವಶಾತ್ ಈಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯುವತಿಗೆ ಈಜಾಡಲು ತಿಳಿದಿರುವುದಿಂದ ಬಹು ಬೇಗನೇ ಹೊರಬರಲು ಸಾಧ್ಯವಾಗಿತ್ತು ಎಂದು ಸ್ಥಳೀಯ ಪೊಲೀಸರು ವರದಿ ನೀಡಿದ್ದಾರೆ.

ಜಿಪಿಎಸ್ ನಂಬಿಕೊಂಡು ವಾಹನ ಚಾಲನೆ ಮಾಡುವ ವೇಳೆ ಸಂಭವಿಸುತ್ತಿರುವ ಅಪಘಾತ ಪ್ರಸಂಗಗಳು ಹೆಚ್ಚಾಗುತ್ತಲೇ ಇದ್ದು, ಜಿಪಿಎಸ್ ವಿಶ್ವಸಾರ್ಹತೆಯನ್ನು ಪ್ರಶ್ನೆ ಮಾಡುವಂತಾಗಿದೆ.

ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ದಟ್ಟವಾದ ಮಂಜು ಆವರಿಸಿರುವುದರಿಂದ ಯುವತಿಗೆ ಕಾರಿನ ಮುಂಭಾಗ ನೋಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಜಿಪಿಎಸ್ ನಂಬಿಕೊಂಡು ವಾಹನ ಚಾಲನೆ ಮಾಡಿದ್ದರು ಎನ್ನಲಾಗುತ್ತಿದೆ.

ನೀರಿನೊಳಗೆ ಮುಳುಗಿದ ಕಾರಿಗೆ ಸಣ್ಣ ಪುಟ್ಟ ಹಾನಿ ಸಂಭವಿಸಿದೆ. ಬಳಿಕ ಇದನ್ನು ಮೇಲಕ್ಕೆ ಎತ್ತಲಾಯಿತು.

ಹಾಗಾಗಿ ಇನ್ನು ಮುಂದೆ ಜಿಪಿಎಸ್ ಅವಲಂಬಿಸಿ ವಾಹನ ಚಾಲನೆ ಮಾಡುವಾಗ ಎರಡೆರಡು ಬಾರಿ ಯೋಚಿಸಿದರೆ ಒಳಿತು. ಇಲ್ಲವಾದ್ದಲ್ಲಿ ಯುವತಿಗೆ ಎದುರಾದ ಇದೇ ಗತಿ ಬರಲಿದೆ.


Click it and Unblock the Notifications








