ಭಾರತೀಯ ನಾಗರಿಕ, ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ

Written By:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಗದೊಂದು ಮೈಲುಗಲ್ಲನ್ನಿಡುತ್ತಿದ್ದು, ಭಾರತೀಯ ಪ್ರಾದೇಶಿಕ ಮಾರ್ಗದರ್ಶಿ ಉಪಗ್ರಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವಂತೆಯೇ ಇದು ನೆಲ, ಸಮುದ್ರ, ಮತ್ತು ವಾಯು ಸಂಚಾರ ಮಾರ್ಗಕ್ಕೆ ನೆರವು ಮಾಡಲಿದೆ.

Also Read: ಚಂದ್ರನಲ್ಲಿಗೆ ಆಡಿ; ಕನಸು ನನಸಾದಿತೇ?

ಶ್ರೀಹರಿಕೋಟಾದಲ್ಲಿ ಸ್ಥಿತಗೊಂಡಿರುವ ಇಸ್ರೊ ಉಡ್ಡಯನ ಕೇಂದ್ರದಿಂದ ಈಗಲೇ ಐದು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದ್ದು, ಇನ್ನೆರಡು ಉಪಗ್ರಹಗಳ ಹಾರಾಟದೊಂದಿಗೆ ಕೋಟಿಗಟ್ಟಲೆ ಭಾರತೀಯ ಕನಸು ನನಸಾಗಲಿದೆ.

ಭಾರತೀಯ ನಾಗರಿಕ, ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ

ವಿಶ್ವ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಅಧ್ಯಾಯ ರಚಿಸಿರುವ ಭಾರತ, ಪ್ರಮುಖವಾಗಿಯೂ ಅಮೆರಿಕ ಅಭಿವೃದ್ಧಿಪಡಿಸಿರುವ ಗ್ಲೋಬಲ್ ನೇವಿಗೇಷನ್ ಸ್ಯಾಟಲೈಟ್ ಸಿಸ್ಟಂ ಬದಲಿ ವ್ಯವಸ್ಥೆಯನ್ನು ಕಂಡುಕೊಳ್ಳುತ್ತಿದೆ.

ಭಾರತೀಯ ನಾಗರಿಕ, ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ

ಅಮೆರಿಕ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ ನಿರ್ವಹಣೆಯು ಅಮೆರಿಕ ದೇಶದ ವಾಯು ಸೇನೆಯ ಅಧಿನತೆಯಲ್ಲಿದ್ದು, ಪಾರದರ್ಶಕತೆ ಬಗ್ಗೆ ಶಂಕೆ ಮೂಡುವಲ್ಲಿ ಕಾರಣವಾಗಿದೆ. ಇದರಿಂದಾಗಿ ದೇಶೀಯ ಸ್ಥಾನ ನಿರ್ಣಯ ಹಾಗೂ ದಿಕ್ಸೂಚಿ ವ್ಯವಸ್ಥೆ ಅಭಿವೃದ್ಧಿಪಡಿಸಲು ಭಾರತಕ್ಕೆ ಪ್ರೇರಣೆಯಾಗಿದೆ.

ಭಾರತೀಯ ನಾಗರಿಕ, ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ

ತನ್ನ ಮೊದಲ ಪ್ರಯತ್ನದಲ್ಲೇ ಮಂಗಳಕ್ಕೆ ಉಪಗ್ರಹ ಉಡಾವಣೆ ಮಾಡುವ ಮೂಲಕ ಕೀರ್ತಿ ಪತಾಕೆ ಹಾರಿಸಿರುವ ಇಸ್ರೊ, ಈಗ ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ ಅಥವಾ ಐಆರ್‌ಎನ್‌ಎಸ್‌ಎಸ್ ಮುಖಾಂತರ ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳುವಂತಾಗಿದೆ.

ಭಾರತೀಯ ನಾಗರಿಕ, ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ

ಪ್ರಸಕ್ತ ಸಾಲಿನ ಜುಲೈ ವೇಳೆಯಾಗುವಾಗ ಈ ಮಹತ್ತರ ಯೋಜನೆಯನ್ನು ಬಿಡುಗಡೆ ಮಾಡುವ ಇರಾದೆಯನ್ನು ಇಸ್ರೊ ಹೊಂದಿದೆ. ಈ ನಿಟ್ಟಿನಲ್ಲಿ ಏಳು ಉಪಗ್ರಹಗಳನ್ನು ಮಾರ್ಚ್ ವೇಳೆಯಾಗುವಾಗ ಬಾಹ್ಯಾಕಾಶಕ್ಕೆ ಬಿಡಲಾಗುವುದು. ಈ ಪೈಕಿ ಐದು ಉಪಗ್ರಹಗಳು ಈಗಲೇ ಕಕ್ಷೆ ಸೇರಿವೆ.

ಭಾರತೀಯ ನಾಗರಿಕ, ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ

ಅಮೆರಿಕದ ಜಿಪಿಎಸ್ ಗಿಂತಲೂ ಮಿಗಿಲಾಗಿ ಐಆರ್‌ಎನ್‌ಎಸ್‌ಎಸ್ ವ್ಯವಸ್ಥೆಯಲ್ಲಿ ಫೋನ್ ಗಳಲ್ಲಿ ಸಣ್ಣದಾದ ಡಿವೈಸ್ ಲಗತ್ತಿಸಲಾಗುವುದು. ಇದು ಯಾವುದೇ ಹವಮಾನ ಪರಿಸ್ಥಿತಿಯಲ್ಲೂ ಸ್ಯಾಟಲೈಟ್ ಗಳಿಂದ 'ಎಸ್' ಬ್ಯಾಂಡ್ ಸಿಗ್ನಲ್ ಗಳನ್ನು ರಿಸೀವ್ ಮಾಡಲು ಸಹಕಾರಿಯಾಗಲಿದೆ. ಅದೇ ರೀತಿ ಫೋನ್ ನಲ್ಲಿ ಆಳವಡಿಸುವ ವಿಶೇಷ ಸಾಫ್ಟ್ ವೇರ್ ಗಳಿಂದ 'ಎಲ್' ಬ್ಯಾಂಡ್ ಸಿಗ್ನಲ್ ಗಳನ್ನು ಪಡೆಯಲಾಗುವುದು.

ಭಾರತೀಯ ನಾಗರಿಕ, ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ

ಮುಖ್ಯವಾಗಿಯೂ ಭಾರತೀಯ ಪ್ರಾದೇಶಿಕ ಮಾರ್ಗದರ್ಶಿ ಉಪಗ್ರಹ ವ್ಯವಸ್ಥೆಯು ಎರಡು ಸೇವೆಗಳನ್ನು ಒದಗಿಸಲಿದೆ. ಇದರಲ್ಲಿ ಮೊದಲನೆಯದ್ದು ನಾಗರಿಕ ಬಳಕೆಗಾಗಿ ಸ್ಟ್ಯಾಂಡರ್ಡ್ ಸ್ಥಾನ ನಿರ್ಣಯ ಮತ್ತು ಎರಡನೇಯದ್ದನ್ನು ಭಾರತೀಯ ಸೈನ್ಯದ ಬಳಕೆಗಾಗಿ ನಿರ್ಬಂಧಿತ ಸೇವೆಯನ್ನು ನೀಡಲಿದೆ.

ಭಾರತೀಯ ನಾಗರಿಕ, ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ

ಈ ಎಲ್ಲ ಯೋಜನೆಗಳಿಗೆ 1600 ಕೋಟಿ ರು.ಗಳ ವೆಚ್ಚ ಅಂದಾಜಿಸಲಾಗಿದೆ. ಸಮುದ್ರಯಾನ, ಸಾರಿಗೆ ಸಂಪರ್ಕ ನಿಯಂತ್ರಣ ಇತ್ಯಾದಿ ದಿಕ್ಸೂಚಿ ನಿರ್ಣಯಗಳಿಗೆ ನೆರವಾಗಲಿದೆ.

ಏಳು ಉಪಗ್ರಹಗಳು

ಏಳು ಉಪಗ್ರಹಗಳು

ಐಆರ್‌ಎನ್‌ಎಸ್‌ಎಸ್-1ಎ, ಐಆರ್‌ಎನ್‌ಎಸ್‌ಎಸ್-1ಬಿ, ಐಆರ್‌ಎನ್‌ಎಸ್‌ಎಸ್-1ಸಿ, ಐಆರ್‌ಎನ್‌ಎಸ್‌ಎಸ್-1ಡಿ, ಐಆರ್‌ಎನ್‌ಎಸ್‌ಎಸ್-1ಇ, ಐಆರ್‌ಎನ್‌ಎಸ್‌ಎಸ್-1ಎಫ್ ಮತ್ತು ಐಆರ್‌ಎನ್‌ಎಸ್‌ಎಸ್-1ಜಿ ಗಳೆಂಬ ಏಳು ಉಪಗ್ರಹಗಳಲ್ಲಿ ಐದು ಈಗಾಗಲೇ ಕಕ್ಷೆಗೆ ಸೇರಿದ್ದು, ಇನ್ನೆರಡು ಉಪಗ್ರಹಗಳು ಇದೇ ತಿಂಗಳಲ್ಲಿ ಬಾಹ್ಯಾಕಾಶವನ್ನು ತಲುಪಲಿದೆ. ಇದರ ಹೊರತಾಗಿ ಎರಡು ಸ್ಟ್ಯಾಂಡ್ ಬೈ ಉಪಗ್ರಹಗಳು ನೆರವಾಗಲಿದೆ.

ಭಾರತೀಯ ನಾಗರಿಕ, ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ

ಈ ಪೈಕಿ ನಾಲ್ಕು ಉಪಗ್ರಹಗಳು ಜಿಎಸ್‌ಒ (geosynchronous orbit ) ಹಾಗೂ ಉಳಿದ ಮೂರು ಉಪಗ್ರಹಗಳು ಜಿಇಒ (geostationary orbit) ಪರಿಭ್ರಮಣದಲ್ಲಿ ಸ್ಥಿತಗೊಳ್ಳಲಿದೆ.

ಭಾರತೀಯ ನಾಗರಿಕ, ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ

ಅಮೆರಿಕದ ಜಿಪಿಎಸ್ ವ್ಯವಸ್ಥೆಗಿಂತಲೂ ನಿಖರವಾಗಲಿರುವ ಐಆರ್‌ಎನ್‌ಎಸ್‌ಎಸ್ ಪ್ರಮುಖವಾಗಿಯೂ ಭಾರತವನ್ನು ಕೇಂದ್ರಿಕರಿಸಲಿದೆ. ಇದು ದೇಶದ ಗಡಿಯಾಚೆಗೆ 1,500 ಕೀ.ಮೀ. ವರೆಗಿನ ಪ್ರದೇಶದ ವರೆಗೂ ತನ್ನ ಪ್ರಭಾವವನ್ನು ಹೊಂದಿರಲಿದೆ.

ಇವನ್ನೂ ಓದಿ

ಜಿಪಿಎಸ್‌ಗೆ ಗುಡ್ ಬೈ ಹೇಳಿ; ಬರುತ್ತಿದೆ ದೇಶೀಯ ನೇವಿಗೇಷನ್ ಸಿಸ್ಟಂ

ಭಾರತದ ಐತಿಹಾಸಿಕ ಮಂಗಳಯಾನ

English summary
One Step Closer To Our Own Navigation System
Story first published: Monday, March 7, 2016, 15:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark