Water Metro: ಇಂದು ಭಾರತದ ಮೊದಲ ವಾಟರ್ ಮೆಟ್ರೋ ಸೇವೆ ಲೋಕಾರ್ಪಣೆ: ಇದರ ವಿಶೇಷತೆಗಳು

ಭಾರತದಲ್ಲಿ ಮೆಟ್ರೋ ವಿಸ್ತರಣೆಯಲ್ಲಿ ಹೊಸ ಕ್ರಾಂತಿಯಾಗುತ್ತಿದೆ. ಹೊಸ ಮಾದರಿಯ ಮೆಟ್ರೋ ಸಂಚಾರಕ್ಕೆ ಕೇರಳದ ಕೊಚ್ಚಿ ಇನ್ಮುಂದೆ ಸಾಕ್ಷಿಯಾಗಲಿದೆ. ಹೌದು, ಪ್ರಧಾನಿ ನರೇಂದ್ರ ಮೋದಿಯವರು ಬಂದರು ನಗರ ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ (Water Metro) ಸೇವೆಗೆ ಇಂದು ಚಾಲನೆ ನೀಡಲಿದ್ದಾರೆ.

​ಸುಮಾರು 1,137 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗಿರುವ ಈ ಯೋಜನೆಯು, ದೇಶದ ಮೊಟ್ಟ ಮೊದಲ ವಾಟರ್ ಮೆಟ್ರೋ ಸೇವೆ ಆಗಿದೆ. ಕೊಚ್ಚಿಯ 10 ದ್ವೀಪಗಳಿಗೆ ನಿರಂತರವಾದ, ಅತ್ಯಂತ ವೇಗದ ಸಾರಿಗೆ ಸಂಪರ್ಕವನ್ನು ಕಲ್ಪಿಸಿದೆ. ಈ ಯೋಜನೆಗಳಿಗೆ ಬಳಸಲಾಗಿರುವ ಅತ್ಯಾಧುನಿಕ ಸೌಲಭ್ಯಗಳುಳ್ಳ ಎಲೆಕ್ಟ್ರಿಕ್ ಬೋಟ್ ಗಳು, ಪ್ರಯಾಣಿಕರಿಗೆ ವಿಶೇಷ ಅನುಭವವನ್ನು ಒದಗಿಸಲಿದೆ ಎಂದು ಹೇಳಲಾಗಿದೆ. ಇದರಲ್ಲಿ ನಾಗರಿಕರ ಸಂಚಾರ, ಸರಕು ಸಾಗಣೆಯನ್ನು ಅತಿ ವೇಗವಾಗಿ,ಮತ್ತು ಸರಳವಾಗಿ ನಡೆಸಬಹುದು.

Water Metro

ವಾಟರ್ ಮೆಟ್ರೋ ಸೇವೆಯೂ 1,137 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಯೋಜನೆ. ಈ ಯೋಜನೆಗೆ ಜರ್ಮನಿಯ ಕೆಎಫ್ ಡಬ್ಲ್ಯೂ, ಕೇಂದ್ರ ಸರ್ಕಾರ ಹಾಗೂ ಕೇರಳ ರಾಜ್ಯ ಸರ್ಕಾರಗಳು ಹಣ ಹೂಡಿಕೆ ಮಾಡಿವೆ. ಕೊಚ್ಚಿಯ ಸುತ್ತಮುತ್ತಲೂ ಇರುವ 10 ಸಣ್ಣ ದ್ವೀಪಗಳನ್ನು ಜಲಸಾರಿಗೆ ಮೂಲಕ ಸಂಪರ್ಕಿಸುತ್ತದೆ. ಕೊಚ್ಚಿ ನಗರದಾದ್ಯಂತ ತಡೆರಹಿತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು 38 ಟರ್ಮಿನಲ್‌ಗಳು ಮತ್ತು 78 ಎಲೆಕ್ಟ್ರಿಕ್ ಬೋಟ್ ಗಳನ್ನು ಒಳಗೊಂಡಿದೆ.

ವಾಟರ್ ಮೆಟ್ರೋ ದ್ವೀಪಗಳಲ್ಲಿ ವಾಸಿಸುವ ಅಥವಾ ತಮ್ಮ ಕೆಲಸಕ್ಕಾಗಿ ದ್ವೀಪಗಳಿಗೆ ಹೋಗಬೇಕಾದ ಜನರ ಪ್ರಯಾಣ ಸಮಸ್ಯೆಗಳನ್ನು ಪರಿಹರಿಸುತ್ತದೆ. ವಾಟರ್ ಮೆಟ್ರೋ ರೈಲು ಮತ್ತು ದೋಣಿಯ ಹೈಬ್ರಿಡ್‌ನಂತೆ ಕಾಣುವುದನ್ನು ನಾವು ವೀಡಿಯೊದಲ್ಲಿ ನೋಡಬಹುದು. ಇದು ಬಿಳಿ ಮತ್ತು ನೀಲಿ ಬಣ್ಣದ ಉತ್ತಮ ಛಾಯೆಯನ್ನು ಪಡೆಯುತ್ತದೆ. ನೀರಿನ ಮೆಟ್ರೋ ಮೂಲಕ 10 ದ್ವೀಪಗಳನ್ನು ಸಂಪರ್ಕಿಸುವ ಒಟ್ಟು 38 ಟರ್ಮಿನಲ್‌ಗಳು ಇರುತ್ತವೆ. ಈ ದ್ವೀಪಗಳನ್ನು ಸಂಪರ್ಕಿಸಲು 78 ವಾಟರ್ ಮೆಟ್ರೋಗಳು ಕರ್ತವ್ಯ ನಿರ್ವಹಿಸಲಿವೆ.

Water Metro

ವಾಟರ್ ಮೆಟ್ರೋದ ಪ್ರಮುಖ ಫೀಚರ್ಸ್ ಗಳೆಂದರೆ, ಅದರ ಬಳಕೆದಾರರಿಗೆ ಸುಲಭವಾಗಿ ಪ್ರವೇಶಿಸಲು ಮತ್ತು ಹೊರಬರಲು ದೋಣಿಯಂತೆಯೇ ಅದೇ ಮಟ್ಟದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ 1 ನೇ ಹಂತದ ಭಾಗವಾಗಿ, ವಾಟರ್ ಮೆಟ್ರೋ ಸೇವೆಗಳು ಹೈಕೋರ್ಟ್-ವೈಪಿನ್ ಟರ್ಮಿನಲ್‌ಗಳಿಂದ ವೈಟಿಲ್ಲಾ-ಕಾಕ್ಕನಾಡು ಟರ್ಮಿನಲ್‌ಗಳಿಗೆ ಪ್ರಾರಂಭವಾಗಲಿದೆ. ಕೊಚ್ಚಿಯ ಸುತ್ತಲಿನ 10 ದ್ವೀಪಗಳ ಸಂಪರ್ಕಕ್ಕಾಗಿ ಒಟ್ಟು 16 ಮಾರ್ಗಗಳನ್ನು ನಿಗದಿಗೊಳಿಸಲಾಗಿದೆ.

ಪ್ರತಿ ಮಾರ್ಗದಲ್ಲಿಯೂ ಸರಾಸರಿ 76 ಕಿ.ಮೀ.ಗಳ ಸಂಚಾರವಿರುತ್ತದೆ. ಅಲ್ಲಿ ನದಿಗಳ ದಡದಿಂದ ಹಡಗು ಹತ್ತುವವರೆಗೆ ರ‍್ಯಾಂಪ್ ಗಳನ್ನು ನಿರ್ಮಿಸಲಾಗಿದ್ದು, ಅದರ ಮೂಲಕವೇ ಜನರು ಎಲೆಕ್ಟ್ರಿಕ್ ಚಾಲಿತ ಬೋಟ್ ಗಳಿಗೆ ಹತ್ತಿಳಿಯಬಹುದಾಗಿದೆ. ಈ ವಾಟರ್ ಮೆಟ್ರೋ ಕೇವಲ ಕೊಚ್ಚಿ ಸಮೀಪವಿರುವ 10 ದ್ವೀಪಗಳಿಗೆ ಕೇವಲ ಜಲಸಂಪರ್ಕ ಕೊಡುವುದು ಮಾತ್ರವಲ್ಲದೆ, ಕೊಚ್ಚಿಯ ಸುತ್ತಮುತ್ತಲೂ ಇರುವ ಭೂ ಸಂಪರ್ಕ ಸಾರಿಗೆ ವ್ಯವಸ್ಥೆಗಳಾದ ರಸ್ತೆ ಸಾರಿಗೆ ಹಾಗೂ ರೈಲ್ವೆ ಸಾರಿಗೆಗೂ ಸಂಪರ್ಕ ಕಲ್ಪಿಸುತ್ತದೆ.

Water Metro

ಅಂತಹ ಬೃಹತ್ ಯೋಜನೆಯಾಗಿದ್ದರೂ, ಎಲ್ಲಾ ವರ್ಗದ ಜನರಿಗೆ ಕೈಗೆಟುಕುವಂತೆ ಮಾಡಲು ಟಿಕೆಟ್‌ಗಳ ಬೆಲೆಯನ್ನು ಕೇವಲ 20 ರೂ. ನಿಗಧಿಪಡಿಸಿದೆ. ಇದಲ್ಲದೇ, ಪ್ರಯಾಣಿಕರು ನಗರದ ಮೆಟ್ರೋ ನೆಟ್‌ವರ್ಕ್‌ನ "ಕೊಚ್ಚಿ 1" ಕಾರ್ಡ್ ಅನ್ನು ಬಳಸಬಹುದು ಮತ್ತು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇನ್ನು ಕೊಚ್ಚಿ ವಾಟರ್ ಮೆಟ್ರೋದ ಪ್ರಯಾಣಿಕರು ಮಾಸಿಕ ಮತ್ತು ವಾರದ ಪಾಸ್‌ಗಳನ್ನು ಸಹ ಪಡೆಯಬಹುದು.

ಕೇವಲ 20 ರೂ.ಗಳಿಂದ ಪ್ರಾರಂಭವಾಗುವ ಟಿಕೆಟ್ ದರಗಳೊಂದಿಗೆ, ಕೊಚ್ಚಿ ವಾಟರ್ ಮೆಟ್ರೋ ಸೇವೆಯು ಅನೇಕರಿಗೆ ಪ್ರವೇಶಿಸಲು ಮಾತ್ರವಲ್ಲ, ಇದು ರಸ್ತೆಮಾರ್ಗಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಳಕೆಯ ಕಡೆ ಮಹತ್ವದ ಹೆಚ್ಚೆಯಾಗಿದೆ, ಇನ್ನು ಕರ್ನಾಟಕ ಕರವಾಳಿ ಭಾಗದಲ್ಲೂ ವಾಟರ್ ಮೆಟ್ರೋ ಯೋಜನೆ ಆದಷ್ಟು ಬೇಗ ವಾಟರ್ ಮೆಟ್ರೋ ಸೇವೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ.

Article Published On: Tuesday, April 25, 2023, 15:24 [IST]
English summary
India s first water metro service starts today in kochi details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+