ಜಪಾನ್ ಬುಲೆಟ್ ಟ್ರೇನ್ ಬಗ್ಗೆ ಒಂದಿಷ್ಟು...

ಜಪಾನ್‌ನಲ್ಲಿ ಶಿಂಕಾನ್ಸೆನ್ ಎಂದು ಅರಿಯಲ್ಪಡುವ ಬುಲೆಟ್ ಟ್ರೇನ್‌ಗಳು ಭಾರತದ ದೀರ್ಘ ಕಾಲದ ಯೋಜನೆಯಾಗಿದೆ. ಬಹಳ ಹಿಂದಿನಿಂದಲೇ ಈ ಮಹತ್ತರ ಯೋಜನೆಯ ಬಗ್ಗೆ ಚರ್ಚೆಯಾಗುತ್ತಿದ್ದು, ಇದೀಗ ಜಪಾನ್ ಹೈ ಸ್ಪೀಡ್ ಟ್ರೇನ್‌ಗಳು ಶರವೇಗದಲ್ಲಿ ಭಾರತೀಯ ಹಳಿಗಳಲ್ಲಿ ಓಡಾಡಲಿವೆ.

ಇತ್ತೀಚೆಗಷ್ಟೇ ಜಪಾನ್ ಪ್ರವಾಸದಲ್ಲಿದ್ದ ಪ್ರಧಾನಿ ಡಾ. ಮನಮೋಹನ್ ಸಿಂಗ್, ಜಪಾನ್ ಪ್ರಧಾನಿ ಶಿನ್ಜೋ ಅಬೆ ನಡುವೆ ನಡೆಸಿದ ಮಾತುಕತೆಯಲ್ಲಿ ಬುಲೆಟ್ ರೈಲು ವ್ಯವಸ್ಥೆಗೆ ಸಹಮತ ಪಡೆಯಲಾಗಿತ್ತು. ಈ ಸಂದರ್ಭದಲ್ಲಿ ಉಭಯ ದೇಶಗಳು 424 ಬಿಲಿಯನ್ ಡಾಲರ್ ಸಾಲವನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ಇದರಲ್ಲಿ ಮುಂಬೈ ಮೆಟ್ರೋಲ್ ರೈಲು ಯೋಜನೆ ಕೂಡ ಸೇರಿವೆ. ಹಾಗೆಯೇ ಮುಂಬೈ-ಅಹಮದಾಬಾದ್ 490 ಕೀ.ಮೀ ರೈಲು ಯೋಜನೆಗೆ ಒಂದು ಶತಕೋಟಿ ಯೆನ್ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.

ಅಂದ ಹಾಗೆ ಏನಿದು ಬುಲೆಟ್ ಟ್ರೇನ್‌ಗಳು? ಅವುಗಳು ಎಷ್ಟು ವೇಗದಲ್ಲಿ ಸಂಚರಿಸಲಿದೆಯೇ ಎಂಬುದರ ಕುರಿತು ತಿಳಿದುಕೊಳ್ಳಬೇಕಾದರೆ ಫೋಟೊ ಫೀಚರ್ ಕ್ಲಿಕ್ಕಿಸಿರಿ...

ಜಪಾನ್ ಬುಲೆಟ್ ಟ್ರೇನ್ ಬಗ್ಗೆ ಒಂದಿಷ್ಟು

ಬುಲೆಟ್ ಟ್ರೇನ್‌ಗಳನ್ನು ಜಪಾನ್‌ನಲ್ಲಿ ಅಲ್ಲಿನ ರೈಲ್ವೇ ಸಂಸ್ಥೆ ನಿರ್ವಹಿಸುತ್ತಿದೆ. 1964ನೇ ಇಸವಿಯಲ್ಲಿ 515.4 ಕೀ.ಮೀ. ದೂರದ ಟೊಕೈಡೊ ಶಿಂಕಾನ್ಸೆನ್‌ನಿಂದ (tokaido shinkansen)ಆರಂಭವಾಗಿದ್ದ ಈ ಜಾಲ ಪ್ರಸ್ತುತ 2,387.7 ಕೀ.ಮೀ. ಉದ್ದದ ವರಗೆ ವರೆಗೆ ಹರಡಿದೆ.

ಗರಿಷ್ಠ ವೇಗ ಎಷ್ಟು?

ಅಂದ ಹಾಗೆ ಈ ಹೈ ಸ್ಪೀಡ್ ಟ್ರೈನ್‌ಗಳು ಪ್ರತಿ ಗಂಟೆಗೆ 240ರಿಂದ 320 ಕೀ.ಮೀ ವೇಗದಲ್ಲಿ ಓಡಾಡುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಮಿನಿ ಶಿಂಕಾನ್ಸೆನ್ ಟ್ರೇನ್‌ಗಳು ಪ್ರತಿ ಗಂಟೆಗೆ 130 ಕೀ.ಮೀ. ವೇಗತೆಯಲ್ಲಿ ಓಡಾಡಲಿದೆ.

ಶಿಂಕಾನ್ಸೆನ್ ಪದದ ಅರ್ಥ?

ಶಿಂಕಾನ್ಸೆನ್ ಎಂಬ ಪದವು 'ನೇರ ಮಾರ್ಗ' ಎಂಬ ಅರ್ಥವನ್ನು ಹೊಂದಿದೆ. ಪ್ರಸ್ತುತ ಪದವು ಜಪಾನ್‌ನಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಇನ್ನು ಟೊಕೈಡೊ ಶಿಂಕಾನ್ಸೆನ್ ಜಗತ್ತಿನ ಬಿಡುವಿಲ್ಲದ ಹೈ ಸ್ಪೀಡ್ ರೈಲ್ವೇ ಹಳಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎಷ್ಟು ಮಂದಿ ಪ್ರಯಣಿಸುತ್ತಾರೆ?

ಜಪಾನ್ ಬುಲೆಟ್ ಟ್ರೇನ್‌ ಜಾಲದ ಪ್ರಯೋಜನವನ್ನು 10 ಬಿಲಿಯನ್ ಪ್ರಯಾಣಿಕರು ಪಡೆಯುತ್ತಾರೆ. ಈ ಪೈಕಿ ಟೊಕೈಡೊ ಶಿಂಕಾನ್ಸೆನ್ ಜಾಲದಲ್ಲಿ ಮಾತ್ರವಾಗಿ 5 ಬಿಲಿಯನ್ ಯಾತ್ರಿಕರು ಪಯಣಿಸುತ್ತಾರೆ.

ಪ್ರತಿ ಗಂಟೆಗೆ 13 ಟ್ರೇನ್ ಓಡಾಟ

ಇನ್ನು ಜಪಾನ್‌ನ ಎರಡು ಪ್ರಮುಖ ನಗರಗಳಾದ ಟೊಕಿಯೊ ಹಾಗೂ ಓಸಾಕಾ ನಡುವೆ ಪ್ರತಿ ಗಂಟೆಗೆ 13 ಟ್ರೇನ್‌ಗಳು ಓಡಾಡುತ್ತಿರುತ್ತವೆ. ಪ್ರತಿಯೊಂದು ಟ್ರೇನ್‌ನಲ್ಲಿ 1,323 ಮಂದಿಗೆ ಕುಳಿತುಕೊಳ್ಳಬಹುದಾದ 16 ಬೋಗಿಗಳಿವೆ.

ವಿಶ್ವದರ್ಜೆಯ ಸೌಲಭ್ಯ

ವಿಶ್ವದರ್ಜೆಯ ಸೌಲಭ್ಯಗಳಿರುವುದು ಬುಲೆಟ್ ಟ್ರೇನ್‌ಗಳು ಮತ್ತೊಂದು ವಿಶೇಷತೆಯಾಗಿದೆ. ಹಾಗೆಯೇ ಕೆಲವೇ ಗಂಟೆಗಳಲ್ಲಿ ಪ್ರಮುಖ ನಗರಗಳನ್ನು ಬಂಧಿಸುವಲ್ಲಿ ಬುಲೆಟ್ ಟ್ರೇನ್‌ಗಳು ಯಶಸ್ವಿಯಾಗಲಿದೆ.

ಭಾರತದಲ್ಲಿ ಯಶ ಕಾಣಬಹುದೇ?

ಪ್ರಸ್ತುತ ಬುಲೆಟ್ ಟ್ರೇನ್‌ಗಳು ಪ್ರಾಯೋಗಿಯಕವಾಗಿ ಭಾರತದಲ್ಲಿ ಯಶ ಕಾಣಬಹುದೇ ಅಥವಾ ಇಂತಹ ಹೈ ಸ್ಪೀಡ್ ಟ್ರೇನ್‌ಗಳಿಗಾಗಿ ಇನ್ನು ಎಷ್ಟು ವರ್ಷ ಕಾಯಬೇಕು ಎಂಬುದಕ್ಕೆ ಕೇಂದ್ರ ಸರಕಾರವೇ ಉತ್ತರಿಸಬೇಕಾಗಿದೆ.

ಬುಲೆಟ್ ಟ್ರೇನ್ ರೇಸ್‌ನಲ್ಲಿ ಫ್ರಾನ್ಸ್

ಈ ನಡುವೆ ಮುಂಬೈ ಟ್ರೇನ್ ಯೋಜನೆ ಕೈಗೆತ್ತಿಗೊಳ್ಳಲು ಫ್ರಾನ್ಸ್ ಕೂಡಾ ಪ್ರಯತ್ನ ನಡೆಸುತ್ತಿದೆ. ಮುಂಬೈ ಹಾದಿಯಾಗಿ ಹೋಗುವ 630 ಕೀ.ಮೀ ಉದ್ದದ ಅಹಮಾದಾಬಾದ್-ಪುಣೆ ಯೋಜನೆ ಕೈಗೆತ್ತಿಕೊಳ್ಳಲು ಭಾರತೀಯ ರೈಲ್ವೇ ಜತೆ ಫ್ರಾನ್ಸ್ ಮಾತುಕತೆ ನಡೆಸಿವೆ. ಪ್ರಸ್ತುತ ವರದಿಯು ಜೂನ್ ತಿಂಗಳಲ್ಲಿ ರೈಲ್ವೇ ಮಂಡಳಿಗೆ ತಲುಪಲಿದೆ.

ನಿಮ್ಮ ಅನಿಸಿಕೆ

ಇದೀಗ ಬುಲೆಟ್ ಟ್ರೇನ್‌ಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ಜಪಾನ್ ಬುಲೆಟ್ ಟ್ರೇನ್ ಭಾರತಕ್ಕೆ ಬರುತ್ತಾ?
ಜಪಾನ್ ಬುಲೆಟ್ ಟ್ರೇನ್ ಭಾರತಕ್ಕೆ ಬರುತ್ತಾ?
ಜಪಾನ್ ಬುಲೆಟ್ ಟ್ರೇನ್ ಭಾರತಕ್ಕೆ ಬರುತ್ತಾ?
ಜಪಾನ್ ಬುಲೆಟ್ ಟ್ರೇನ್ ಭಾರತಕ್ಕೆ ಬರುತ್ತಾ?
ಜಪಾನ್ ಬುಲೆಟ್ ಟ್ರೇನ್ ಭಾರತಕ್ಕೆ ಬರುತ್ತಾ?
ಜಪಾನ್ ಬುಲೆಟ್ ಟ್ರೇನ್ ಭಾರತಕ್ಕೆ ಬರುತ್ತಾ?
ಜಪಾನ್ ಬುಲೆಟ್ ಟ್ರೇನ್ ಭಾರತಕ್ಕೆ ಬರುತ್ತಾ?
ಜಪಾನ್ ಬುಲೆಟ್ ಟ್ರೇನ್ ಭಾರತಕ್ಕೆ ಬರುತ್ತಾ?
ಜಪಾನ್ ಬುಲೆಟ್ ಟ್ರೇನ್ ಭಾರತಕ್ಕೆ ಬರುತ್ತಾ?

More from DriveSpark

Article Published On: Tuesday, June 4, 2013, 16:29 [IST]
English summary
The Shinkansen also known as the "Bullet Train", is a network of high-speed railway lines in Japan operated by four Japan Railways Group companies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+