ದುರ್ಗಮ ಹಾದಿಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರಿ ಮಾಡಿದ ಭಾರತೀಯ ಸೈನಿಕರು

ಕಳೆದ ಕೆಲವು ದಿನಗಳಿಂದ ಲಡಾಖ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಲಡಾಖ್ ಕಣಿವೆಯಂತಹ ಹಿಮದಿಂದ ಆವೃತವಾದ ಪ್ರದೇಶಗಳಲ್ಲಿ, ಸೈನ್ಯವು ಎಲ್ಲರ ಮೇಲೂ ಕಣ್ಣಿಟ್ಟಿರ ಬೇಕಾಗುತ್ತದೆ.

ದುರ್ಗಮ ಹಾದಿಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರಿ ಮಾಡಿದ ಭಾರತೀಯ ಸೈನಿಕರು

ಇಂತಹ ಸ್ಥಳಗಳಲ್ಲಿ ಗಡಿ ಕಾವಲು ಸವಾಲಿನ ಕೆಲಸವಾಗಿದ್ದು, ಪ್ರಯಾಣಕ್ಕಾಗಿ ವಾಹನಗಳ ಅಗತ್ಯವಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಕಾರ್ಗಿಲ್ ವಿಜಯ ದಿವಸ್ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿದೆ. ಈ ವೀಡಿಯೊದಲ್ಲಿ ಭಾರತೀಯ ಸೈನಿಕರು ಪೂರ್ವ ಲಡಾಖ್‌ನ ಕರಕೋರಂ ಪಾಸ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ಗಳನ್ನು ಚಾಲನೆ ಮಾಡುತ್ತಿದ್ದಾರೆ.

ದುರ್ಗಮ ಹಾದಿಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರಿ ಮಾಡಿದ ಭಾರತೀಯ ಸೈನಿಕರು

ಕರಕೋರಂ ಪಾಸ್, ಚೀನಾ ಹಾಗೂ ಭಾರತದ ಗಡಿಗಳನ್ನು ಪ್ರತ್ಯೇಕಿಸುತ್ತದೆ. 1999ರ ಕಾರ್ಗಿಲ್ ಯುದ್ಧದಲ್ಲಿ, ಭಾರತವು ವಿಜಯ ಸಾಧಿಸಿದ ಸಂಭ್ರಮವನ್ನು ಆಚರಿಸಲು ಪ್ರತಿ ವರ್ಷ ಜೂನ್ 26ರಂದು ವಿಜಯ್ ದಿವಸ್ ಆಚರಿಸಲಾಗುತ್ತದೆ. 2019ರ ಈ ವೀಡಿಯೊದಲ್ಲಿ ಭಾರತೀಯ ಸೈನಿಕರು ಕರಕೋರಂ ಪಾಸ್‌ನ ಹಿಮಭರಿತ ಕಲ್ಲಿನ ಹಾದಿಗಳಲ್ಲಿ ಬೈಕ್ ಸವಾರಿ ಮಾಡುವುದನ್ನು ಕಾಣಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ದುರ್ಗಮ ಹಾದಿಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರಿ ಮಾಡಿದ ಭಾರತೀಯ ಸೈನಿಕರು

ರಾಯಲ್ ಎನ್‌ಫೀಲ್ಡ್ ಹಾಗೂ ಭಾರತೀಯ ಸೇನೆ ಜಂಟಿಯಾಗಿ 11 ಸವಾರರ ರಾಲಿಯನ್ನು ಆಯೋಜಿಸಿದ್ದವು. ಈ ರಾಲಿಯಲ್ಲಿ 6 ಜನ ಭಾರತೀಯ ಸೈನಿಕರಿದ್ದರು. ಈ ತಂಡವು ವಾಸ್ತವಿಕ ನಿಯಂತ್ರಣ ರೇಖೆಯ ಪಕ್ಕದಲ್ಲಿರುವ ಲೇಹ್ ಕೌರ್‌ನಿಂದ ಹೊರಟು ಹಲವಾರು ಪ್ರದೇಶಗಳನ್ನು ದಾಟಿ ಭಾರತದ ಗಡಿಯೊಳಗಿರುವ ಕರಕೋರಂ ತಲುಪಿತು.

ದುರ್ಗಮ ಹಾದಿಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರಿ ಮಾಡಿದ ಭಾರತೀಯ ಸೈನಿಕರು

ಈ ಪ್ರದೇಶವು -30 ಡಿಗ್ರಿಗಿಂತ ಕಡಿಮೆ ತಾಪಮಾನವನ್ನು ಹೊಂದಿರುವ ಕಾರಣ ಇಲ್ಲಿ ನಡೆಯಲು ಹಾಗೂ ಬೈಕ್ ಚಾಲನೆ ಮಾಡಲು ಹರಸಾಹಸ ಪಡಬೇಕಾಗುತ್ತದೆ. ಕರಕೋರಂ ಪಾಸ್‌ನ ಕಿರಿದಾದ ಹಾದಿಗಳಲ್ಲಿ ಯಾವಾಗಲೂ ಹಿಮವಿರುವ ಕಾರಣ, ಜಾರುವಂತಾಗುತ್ತದೆ. ಈ ಕಾರಣಕ್ಕೆ ಇಲ್ಲಿ ಬೈಕ್ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ಆಫ್-ರೋಡಿಂಗ್ ಬೈಕ್ ಆಗಿದ್ದು, ಕಲ್ಲು ರಸ್ತೆಗಳಲ್ಲಿ ಹಾಗೂ ಒರಟು ರಸ್ತೆಗಳಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಬೈಕ್‌ನಲ್ಲಿ ಸವಾರರು ಪರ್ವತ, ಕಲ್ಲು ಹಾಗೂ ಜಾರು ಹಾದಿಗಳಲ್ಲಿ ಸರಾಗವಾಗಿ ಚಲಿಸಬಹುದು.

ದುರ್ಗಮ ಹಾದಿಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರಿ ಮಾಡಿದ ಭಾರತೀಯ ಸೈನಿಕರು

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ 411 ಸಿಸಿಯ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 24.3 ಬಿಹೆಚ್‌ಪಿ ಪವರ್ ಹಾಗೂ 32 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 5 ಸ್ಪೀಡಿನ ಮೆಶ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

Most Read Articles

Kannada
English summary
Indian Army Soldiers rides Royal Enfield Himalyan bikes at Karakoram Pass. Read in Kannada.
Story first published: Saturday, June 27, 2020, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X