ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿರುವ ಭಾರತದ ಸೆಲೆಬ್ರಿಟಿಗಳು: ಕ್ರಿಕೆಟ್‌ನಿಂದ ಸಿನಿಮಾವರೆಗೆ
ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತಿದೆ. ಇತ್ತೀಚೆಗೆ ಭಾರತದ ಸೆಲಬ್ರಿಟೆಗಳು ಕೂಡ ಎಲೆಕ್ಟ್ರಿಕ್ ಕಾರುಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿರುವ ಸೆಲಬ್ರೆಟಿಗಳ ಬಗ್ಗೆ ಮಾಹಿತಿ ಇಲ್ಲಿದೆ.
ವಿರಾಟ್ ಕೊಹ್ಲಿ: ಭಾರತದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಆಡಿ ಇ-ಟ್ರಾನ್ ಮತ್ತು ಇ-ಟ್ರಾನ್ ಜಿಟಿ ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿವೆ. ಇ-ಟ್ರಾನ್ ಎಸ್‌ಯುವಿ ಶ್ರೇಣಿಯ ಅಗ್ರಸ್ಥಾನದಲ್ಲಿರುವ ಇ-ಟ್ರಾನ್ 55 ರೂಪಾಂತರವಾಗಿದೆ, ಇನ್ನು ಇ-ಟ್ರಾನ್ ಜಿಟಿ ಸರಣಿಯ ಇ-ಟ್ರಾನ್ ಜಿಟಿ RS ರೂಪಾಂತರವಾಗಿದೆ. ಈ ಎರಡೂ ಕಾರುಗಳು ಆಡಿ ಇಂಡಿಯಾದ ಮೂಲ ಕಂಪನಿಯಾಗಿರುವ ಸ್ಕೋಡಾ ಆಡಿ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.

ಮಹೇಶ್ ಬಾಬು; ಜನಪ್ರಿಯ ನಟ ಮಹೇಶ್ ಬಾಬು ಅವರು ಐಷಾರಾಮಿ ಆಡಿ ಇ-ಟ್ರಾನ್ ಕಾರ್ ಅನ್ನು ಹೊಂದಿದ್ದಾರೆ. ಈ ಹೊಸ ಕಾರನ್ನು ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಅವರು ಮಹೇಶ್ ಬಾಬು ಅವರಿಗೆ ವಿತರಿಸಿದರು. ನಟ ಮಹೇಶ್ ಬಾಬು ಅವರು ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಕಾರಿನ ಟಾಪ್ ವೆರಿಯೆಂಟ್ ಇ-ಟ್ರಾನ್ 55 ಅನ್ನು ಹೊಂದಿದ್ದಾರೆ. ಇದು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳ ಸಂಯೋಜನೆಯೊಂದಿಗೆ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ.
ಪೂಜಾ ಬಾತ್ರಾ: ಇವರು ಬಾಲಿವುಡ್‌ನ ಜನಪ್ರಿಯ ಸೆಲಬ್ರೆಟಿ. ಪೂಜಾ ಬಾತ್ರಾ ಅವರು ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರ್ ಅನ್ನು ಹೊಂದಿದ್ದಾರೆ, ಇದು ಪ್ರಸ್ತುತ ಟೆಸ್ಲಾ ಸರಣಿಯಲ್ಲಿ ಜಾಗತಿಕ ಶ್ರೇಣಿಯಿಂದ ಅತ್ಯಂತ ಕೈಗೆಟುಕುವ ಮಾದರಿಯಾಗಿದೆ. ಪೂಜಾ ಬಾತ್ರಾ ಅವರು ಯುಎಸ್‌ನಲ್ಲಿ ಬ್ಲ್ಯಾಕ್ ಬಣ್ಣದ ಮಾಡೆಲ್ 3 ಅನ್ನು ಹೊಂದಿದ್ದಾರೆ, ಟೆಸ್ಲಾ ಭಾರತೀಯ ಮಾರುಕಟ್ಟೆಯಲ್ಲಿ ಇನ್ನೂ ಕೂಡ ಬಿಡುಗಡೆಯಾಗಿಲ್ಲ.

ಮಹೇಂದ್ರ ಸಿಂಗ್ ಧೋನಿ: ಕ್ಯಾಪ್ಟನ್ ಕೂಲ್ ಎಂದು ಕರೆಸಿಕೊಂಡಿರುವ ಭಾರತದ ಮಾಜಿ ಕಪ್ತಾನ, ಅತ್ಯಾಧುನಿಕ ವಾಹನಗಳ ಜೊತೆಗೆ ವಿಂಟೇಜ್ ಕ್ಲಾಸಿಕ್ ವಾಹನಗಳನ್ನು ಹೊಂದಿದೆ. ಧೋನಿ ಇತ್ತೀಚೆಗೆ Kia EV6 ಎಲೆಕ್ಟ್ರಿಕ್ ಕಾರ್ ಅನ್ನು ಖರೀದಿಸಿದ್ದಾರೆ. ಈ Kia EV6 ಎಲೆಕ್ಟ್ರಿಕ್ ಕಾರು ಎರಡು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಈ ಕಿಯಾ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.59.95 ಲಕ್ಷವಾಗಿದೆ.
ರಿತೇಶ್ ಮತ್ತು ಜೆನಿಲಿಯಾ ದೇಶಮುಖ್: ನಟ ರಿತೇಶ್ ದೇಶಮುಖ್ ಈಗಾಗಲೇ ಅಮೆರಿಕದಲ್ಲಿ ಟೆಸ್ಲಾವನ್ನು ಹೊಂದಿದ್ದಾರೆ. ದಂಪತಿಗಳು ಇತ್ತೀಚೆಗೆ ಭಾರತದಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ. ನಟ ರಿತೇಶ್ ದೇಶಮುಖ್ BMW iX xDrive 40 ಕಾರಿನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಈ BMW ಎಲೆಕ್ಟ್ರಿಕ್ ಕಾರು 200 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಮಧುರ್ ದೀಕ್ಷಿತ್ ಮತ್ತು ಡಾ ಶ್ರೀರಾಮ್ ನೆನೆ: ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ ಶ್ರೀರಾಮ್ ನೆನೆ ಅವರು ಕಾರುಗಳ ಬಗ್ಗೆ ಹೆಚ್ಚು ಕ್ರೇಜ್ ಅನ್ನು ಹೊಂದಿದ್ದಾರೆ. ಅವರು ಈ ವರ್ಷ ತಮ್ಮ ಮೊದಲ ಎಲೆಕ್ಟ್ರಿಕ್ ಕಾರಿನ ವಿತರಣೆಯನ್ನು ಪಡೆದುಕೊಂಡರು. ಅವರ ಈ ಹೊಸ ಕಾರ್ ನೆಕ್ಸಾನ್ EV ಡಾರ್ಕ್ ಎಡಿಷನ್ ಆಗಿದೆ. ಮಧುರ್ ದೀಕ್ಷಿತ್ ಮತ್ತು ಡಾ ಶ್ರೀರಾಮ್ ನೆನೆ ದಂಪತಿಗಳು ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.
ಮಂಜು ವಾರಿಯರ್: ಮಲಯಂ ಚಲನಚಿತ್ರ ನಟಿ ಮಂಜು ವಾರಿಯರ್ ಹೊಚ್ಚಹೊಸ ಮಿನಿ ಕೂಪರ್ SE ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಖರೀದಿಸಿದ್ದಾರೆ. ಈ ಮಿನಿ ಕೂಪರ್ ಎಲೆಕ್ಟ್ರಿಕ್ ಕಾರ್ ಮಿನಿ ಕಂಪನಿಯ ಮೊದಲ ಆಲ್-ಎಲೆಕ್ಟ್ರಿಕ್ ಕಾರ್ ಆಗಿದೆ. ಈ ಎಲೆಕ್ಟ್ರಿಕ್ ಕಾರಿನ ಬೆಲೆಯು ಸುಮಾರು 50 ಲಕ್ಷ ರೂ. ಆಗಿದೆ. ಈ ಐಷಾರಾಮಿ ಎಲೆಕ್ಟ್ರಿಕ್ ಕಾರಿಗೆ ಕಸ್ಟಮ್ ಪೇಂಟ್ ಅನ್ನು ಮಾಡಿಸಿದ್ದಾರೆ.


Click it and Unblock the Notifications








