ವಿರಾಟ್ ಕೊಹ್ಲಿ ಗ್ಯಾರೇಜ್‍ಗೆ ಮತ್ತೊಂದು ದುಬಾರಿ ಕಾರು ಸೇರ್ಪಡೆ
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿರವರು ಅಂತರ್‍ರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಂದಾದ ನಂತರ ಮತ್ತೊಂದು ದಾಖಲೆಗಳನ್ನು ಬರೆಯುತ್ತಿದ್ದಾರೆ. ವಿರಾಟ್ ಕೊಹ್ಲಿರವರು ತಾವು ಆಡುವ ಪ್ರತಿಯೊಂದು ಪಂದ್ಯದಲ್ಲೂ ಯಾವುದಾದರೂ ಹೊಸ ದಾಖಲೆಯನ್ನು ನಿರ್ಮಿಸುತ್ತಲೇ ಇರುತ್ತಾರೆ.

ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‍ರವರ ಎಲ್ಲಾ ದಾಖಲೆಗಳನ್ನು ಮುರಿಯಬಲ್ಲ ಸಾಮರ್ಥ್ಯವಿರುವ ಬ್ಯಾಟ್ಸ್ ಮನ್ ಎಂದರೆ ವಿರಾಟ್ ಕೊಹ್ಲಿಯವರು ಮಾತ್ರ. ಜನರು ಕ್ರಿಕೆಟ್ ಹಾಗೂ ವಿರಾಟ್ ಕೊಹ್ಲಿಯವರನ್ನು ಎಷ್ಟು ಇಷ್ಟ ಪಡುತ್ತಾರೋ, ವಿರಾಟ್ ಕೊಹ್ಲಿಯವರು ಕ್ರಿಕೆಟ್‍ನ ಜೊತೆಗೆ ಕಾರುಗಳನ್ನೂ ಸಹ ಅಷ್ಟೇ ಇಷ್ಟಪಡುತ್ತಾರೆ.

ಕ್ರಿಕೆಟರ್ ಆದ ಮೇಲೆ ವಾಹನಗಳ ಮೇಲೆ ಅಷ್ಟೇ ಪ್ರೀತಿಯಿರುವುದು ಸಹಜ. ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿರವರು ಸಹ ವಾಹನಗಳ ಕ್ರೇಜ್ ಹೊಂದಿದ್ದು, ಹಲವಾರು ವಾಹನಗಳನ್ನು ಹೊಂದಿದ್ದಾರೆ.

ಧೋನಿರವರ ಬಳಿ ಬಹುತೇಕ ಎಲ್ಲಾ ರೀತಿಯ ಕಾರ್ ಹಾಗೂ ಬೈಕ್‍ಗಳಿವೆ. ಅಪರೂಪದ ವಾಹನಗಳು ಎಷ್ಟೇ ದುಬಾರಿ ಬೆಲೆಯಾಗಿದ್ದರೂ ಸಹ ಧೋನಿರವರು ಅವುಗಳನ್ನು ಖರೀದಿಸುತ್ತಾರೆ. ಈ ವಿಷಯದಲ್ಲಿ ಕೊಹ್ಲಿರವರು ಧೋನಿರವರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ.

ಕೊಹ್ಲಿರವರು ಬೈಕ್‍ಗಳಿಗಿಂತ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಆಡಿ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಕೊಹ್ಲಿರವರು ಈಗಾಗಲೇ ಹಲವಾರು ಆಡಿ ಕಾರುಗಳನ್ನು ಹೊಂದಿದ್ದಾರೆ. ಈಗ ಮತ್ತೊಂದು ಹೊಸ ಕಾರು ವಿರಾಟ್ ಕೊಹ್ಲಿರವರ ಮನೆಗೆ ಬಂದಿದೆ.

ವಿರಾಟ್ ಕೊಹ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾದ ಹೊಸ ಕ್ಯೂ8 ಕಾರ್ ಅನ್ನು ಖರೀದಿಸಿದ್ದಾರೆ. ಅಂದ ಹಾಗೆ ಕೊಹ್ಲಿರವರು ಈ ಹೊಸ ಕಾರ್ ಅನ್ನು ಭಾರತದಲ್ಲಿ ಮೊದಲು ಖರೀದಿಸಿದ ಗ್ರಾಹಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಡಿ ಕ್ಯೂ 8 ಕಾರ್ ಅನ್ನು ಭಾರತದಲ್ಲಿ ಸಂಕ್ರಾಂತಿ ಹಬ್ಬದ ದಿನ ಬಿಡುಗಡೆಗೊಳಿಸಲಾಯಿತು. ಆಡಿ ಕ್ಯೂ 8 ಎಸ್‍ಯುವಿಯಾಗಿದೆ. ಈ ಕಾರು ಭಾರತದ ಕಾರು ಪ್ರಿಯರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಆಡಿ ಕ್ಯೂ 8 ಕಾರಿನಲ್ಲಿ, 3.0 ಲೀಟರಿನ ಟರ್ಬೊ ಫ್ಯೂಯಲ್ ಸ್ಟ್ರಾಟಿಫೈಡ್ ಇಂಜೆಕ್ಷನ್ (ಟಿಎಫ್‍ಎಸ್‍ಐ) ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ಹಾಗೂ 500 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಡಿ ಕ್ಯೂ 8 ಎಸ್‍ಯುವಿಯು 0 ಯಿಂದ 100 ಕಿ.ಮೀವರೆಗಿನ ವೇಗವನ್ನು ಕೇವಲ 6 ಸೆಕೆಂಡುಗಳಲ್ಲಿ ಆಕ್ಸೆಲರೇಟ್ ಮಾಡುತ್ತದೆ. ಆಡಿ ಕ್ಯೂ 8 ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.33 ಕೋಟಿಗಳಾಗಿದೆ. ವಿರಾಟ್ ಕೊಹ್ಲಿರವರು ಆಡಿ ಕ್ಯೂ 8 ಎಸ್‍ಯುವಿಯನ್ನು ಚಲಾಯಿಸುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಇದರ ಜೊತೆಗೆ ವಿರಾಟ್ ಕೊಹ್ಲಿರವರು ಇದೇ ಮೊದಲ ಬಾರಿಗೆ ಆಡಿ ಕಂಪನಿಯ ಕಾರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ನಿನ್ನೆ ರಾಜ್‍ಕೋಟ್‍ನಲ್ಲಿ ನಡೆದ ಇಂಡಿಯಾ - ಆಸ್ಟ್ರೇಲಿಯಾ ಪಂದ್ಯದಲ್ಲಿ ಟೀಂ ಇಂಡಿಯಾ ಜಯಗಳಿಸಿತ್ತು. ವಿರಾಟ್ ಕೊಹ್ಲಿರವರು ಎಂದಿನಂತೆ ಬ್ಯಾಟ್ ಬೀಸಿ ಭಾರತದ ಗೆಲುವಿಗೆ ನೆರವಾಗಿದ್ದರು.
ಈ ಪಂದ್ಯದಲ್ಲಿ ಭಾಗವಹಿಸಲು ವಿರಾಟ್ ಕೊಹ್ಲಿರವರು ಆಡಿ ಕ್ಯೂ8 ಎಸ್‍ಯುವಿಯಲ್ಲಿಯೇ ಬಂದಿದ್ದರು. ಕೊಹ್ಲಿರವರು ಆಡಿ ಕ್ಯೂ8 ಚಾಲನೆ ಮಾಡುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಅಭಿಮಾನಿಗಳು ಹಾಗೂ ಕಾರು ಪ್ರಿಯರು ಈ ವೀಡಿಯೊವನ್ನು ಶೇರ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ನಂತರ ಮತ್ತಷ್ಟು ಕ್ರಿಕೆಟಿಗರು ಹಾಗೂ ಚಿತ್ರ ತಾರೆಯರು ಈ ಹೊಸ ಆಡಿ ಕ್ಯೂ 8 ಎಸ್‍ಯುವಿಯನ್ನು ಖರೀದಿಸುವ ಸಾಧ್ಯತೆಗಳಿವೆ.


Click it and Unblock the Notifications