IPL ಸಂಬಳ 14 ಕೋಟಿ... ಆದ್ರೂ ಸಿಂಪಲ್ ಕಾರುಗಳ ಬಳಕೆ... ಜೂನಿಯರ್ ಯುವಿ ಅಭಿಷೇಕ್ ಶರ್ಮಾ!

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 (T20) ಪಂದ್ಯದಲ್ಲಿ ಟೀಮ್ ಇಂಡಿಯಾದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಅಭಿಷೇಕ್ ಶರ್ಮಾ ಸದ್ಯ ಟ್ರೆಂಡಿಂಗ್‌ನಲ್ಲಿದ್ದಾರೆ. 13 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿರುವ ಅವರನ್ನು ಜೂನಿಯರ್ ಯುವರಾಜ್ ಸಿಂಗ್ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪಟ್ಟಾ ಕಟ್ಟಿಬಿಟ್ಟಿದ್ದಾರೆ. ಭಾರತದ ಪರವಾಗಿ ಟಿ20 ಗಳಲ್ಲಿ ಎರಡನೇ ಅತಿ ವೇಗದ ಶತಕ ದಾಖಲಿಸಿದವರಾಗಿಯೂ ಜನಪ್ರಿಯತೆ ಪಡೆದಿದ್ದಾರೆ. ದೇಶವೇ ಕೊಂಡಾಡುತ್ತಿರುವ ಅಭಿಷೇಕ್ ಶರ್ಮಾ ಇತರ ಕ್ರಿಕೆಟಿಗರಂತಲ್ಲದೆ ಸಿಂಪಲ್ ಜೀವನ ಹಾಗೂ ಸಿಂಪಲ್ ಕಾರುಗಳನ್ನು ಹೊಂದಿದ್ದಾರೆ.

ಅಭಿಷೇಕ್ ಶರ್ಮಾ 2018 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ನೊಂದಿಗೆ IPL ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಲ್ಲಿ ಅವರಿಗೆ 55 ಲಕ್ಷ ರೂ. ಸಿಗುತ್ತಿತ್ತು. 2019 ರಲ್ಲಿ, ಸನ್‌ರೈಜರ್ಸ್ ಹೈದರಾಬಾದ್ (SRH)ತಂಡವನ್ನು ಸೇರಿಕೊಂಡರು, 2019 ರಿಂದ 2021 ರವರೆಗೆ 55 ಲಕ್ಷ ರೂ.ಗೆ ತಂಡದೊಂದಿಗೆ ಇದ್ದರು. ನಂತರ, 2022 ರಲ್ಲಿ SRH 6.50 ಕೋಟಿಗೆ ಉಳಿಸಿಕೊಂಡಿತು.

indian-cricketer-abhishek-sharma-simple-cars-collection

ಐಪಿಎಲ್ 2025 ರಲ್ಲಿ SRH ಅಭಿಷೇಕ್ ಶರ್ಮಾ ಅವರನ್ನು 14 ಕೋಟಿ ರೂ.ಗೆ ಉಳಿಸಿಕೊಂಡಿದೆ. ಇಂತಹ ಆಟಗಾರ ಇದೀಗ ಟೀಮ್ ಇಂಡಿಯಾದ ಪರವಾಗಿ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 (T20) ಪಂದ್ಯದಲ್ಲಿ ದಾಖಲೆಯ ಶತಕ ಹಾಗೂ ಎರಡು ವಿಕೆಟ್ ಕಬಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಸಿಂಪಲ್ ಫ್ಯಾಮಿಲಿಯನ್ನು ಹೊಂದಿರುವ ಇವರು ಎರಡು ಸಿಂಪಲ್ ಕಾರುಗಳನ್ನು ಹೊಂದಿದ್ದಾರೆ.

ವರದಿಗಳ ಪ್ರಕಾರ, ಅಭಿಷೇಕ್ ಅವರ ಪ್ರಸ್ತುತ ಆಸ್ತಿ 12 ಕೋಟಿ ರೂ. ಇದ್ದು, ಇದು ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಿಂದ ಬಂದಿರುವ ಆದಾಯವಾಗಿದೆ. ಕಾರುಗಳ ವಿಷಯಕ್ಕೆ ಬಂದರೆ, ಅಭಿಷೇಕ್ ಶರ್ಮಾ ಅವರು ಇತರ ಕ್ರಿಕೆಟ್ ಆಟಗಾರರಂತಲ್ಲದೆ 60.74 ಲಕ್ಷ ರೂಪಾಯಿ ಮೌಲ್ಯದ BMW 320d ಕಾರು ಮತ್ತು 14.76 ಲಕ್ಷ ರೂ. ಮೌಲ್ಯದ ಮಹೀಂದ್ರಾ XUV300 SUV ಹೊಂದಿದ್ದಾರೆ.

indian-cricketer-abhishek-sharma-simple-cars-collection

ಇತರ ಆಟಗಾರರ ಐಷಾರಾಮಿ ಕಾರುಗಳಿಗೆ ಹೋಲಿಸಿದರೆ ಇವೆರಡು ತುಂಬಾ ಸಿಂಪಲ್ ಕಾರುಗಳಾಗಿವೆ. ಭಾರತದಲ್ಲಿ ಮಾರಾಟವಾಗುವ ಪ್ರಸ್ತುತ ಪೀಳಿಗೆಯ BMW 3 ಸರಣಿಯ ಬೆಲೆ ಎಕ್ಸ್ ಶೋ ರೂಂ ಪ್ರಕಾರ 60.6 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು 3 ಸರಣಿಯ ಗ್ರ್ಯಾನ್ ಲಿಮೋಸಿನ್ ಆವೃತ್ತಿಯಾಗಿ ಅಥವಾ 369 bhp 6-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ M340i ಟ್ರಿಮ್ ಆಗಿ ಲಭ್ಯವಿದೆ.

ಅಭಿಷೇಕ್ ಅವರ ಮಹೀಂದ್ರಾ XUV300 ಕಾರು 5-ಸೀಟರ್ ಸಬ್ ಕಾಂಪ್ಯಾಕ್ಟ್ SUV ಆಗಿದ್ದು, ಇದು ಆಧುನಿಕ ಬಾಹ್ಯ ವಿನ್ಯಾಸದ ಅಂಶಗಳನ್ನು ಹೊಂದಿದೆ. ಉತ್ತಮ ಇನ್ಫೋಟೈನ್‌ಮೆಂಟ್ ಮತ್ತು ಸೌಕರ್ಯಯುತ ವೈಶಿಷ್ಟ್ಯಗಳಿಂದ ತುಂಬಿದ ಒಳಾಂಗಣವನ್ನು ಹೊಂದಿದೆ. ಮಹೀಂದ್ರಾ ಪ್ರಸ್ತುತ ಈ ಕಾರಿನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು XUV 3X0 ಹೆಸರಿನಲ್ಲಿ ಹೆಚ್ಚಿನ ಬದಲಾವಣೆಗಳೊಂದಿಗೆ ಸದ್ಯ ಮಾರಾಟ ಮಾಡುತ್ತಿದೆ.

indian-cricketer-abhishek-sharma-simple-cars-collection

ಮಿಂಚುತ್ತಿದ್ದಾರೆ ಅಭಿಷೇಕ್ ಶರ್ಮಾ: ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಐಪಿಎಲ್ 2024 ರಿಂದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಫಾರ್ಮ್ ಕಾರಣದಿಂದಾಗಿ, ಟೀಮ್ ಇಂಡಿಯಾದ ಟಿ 20 ತಂಡದಲ್ಲಿ ಸ್ಥಾನ ಪಡೆದರು. ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು 2025 ರ ಭಾರತ ಮತ್ತು ಇಂಗ್ಲೆಂಡ್ ಟಿ 20 ಸರಣಿಯಲ್ಲಿ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದ್ದಾರೆ.

ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 535 ರನ್ ಗಳಿಸಿದ್ದಾರೆ. 2025ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5ನೇ ಟಿ20 ಪಂದ್ಯದಲ್ಲಿ 135 ರನ್ ಗಳಿಸಿರುವುದು ಅವರ ಗರಿಷ್ಠ ಸ್ಕೋರ್ ಆಗಿದೆ. ಐಪಿಎಲ್‌ನ ಚೊಚ್ಚಲ ಪಂದ್ಯದಿಂದ ಈ ಐಪಿಎಲ್ ಸೀಸನ್ ಅಂತ್ಯದವರೆಗೆ, ಐಪಿಎಲ್‌ನಿಂದ ಅವರ ಒಟ್ಟು ಗಳಿಕೆ ಸುಮಾರು 36 ಕೋಟಿ ರೂ. ಎನ್ನಲಾಗಿದೆ.

Article Published On: Monday, February 3, 2025, 13:12 [IST]
English summary
Indian cricketer abhishek sharma simple cars collection
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+