ಹಾರ್ದಿಕ್ ಪಾಂಡ್ಯಾ ಪೋಸ್ಟ್‌ಗೆ ಲೈಕ್‌ಗಳ ಸುರಿಮಳೆ..ಅಪ್ಪ-ಮಗನ ಕಾರು ಪ್ರೀತಿಗೆ ನೆಟ್ಟಿಗರು ಫಿದಾ
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್‌ಗಳಲ್ಲಿ ಒಬ್ಬರಾದ ಹಾರ್ದಿಕ್ ಪಾಂಡ್ಯ ಅವರು ಇತ್ತೀಚೆಗೆ ತಮ್ಮ ಮಗನೊಂದಿಗೆ ಇರುವ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. ಫೋಟೋವನ್ನು ವೈರಲ್ ಮಾಡಿ 28 ಲಕ್ಷಕ್ಕೂ ಅಧಿಕ ಲೈಕ್ಸ್ ನೀಡಿದ್ದಾರೆ.

ಈ ಫೋಟೋದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಮರ್ಸಿಡಿಸ್ ಬೆಂಝ್ ಎಎಂಜಿ ಜಿ63 (ಎಂಡಿಎಸ್-ಡಿಎಸ್ಎಸ್ಎಲ್ ಎಎಂಜಿ ಜಿ63) ಮುಂದೆ ನಿಂತಿದ್ದರೆ, ಪಾಂಡ್ಯಾ ಅವರ ಮಗ ತನ್ನ ಮೆಕ್ ಲಾರೆನ್ ಪಿ1 ನಲ್ಲಿ ಕುಳಿತ್ತಿದ್ದಾನೆ. ಮಗ ಕುಳಿತಿರುವುದು ಆಟಿಕೆ ಕಾರಿನಲ್ಲಾದರೂ, ಸದ್ಯ ಈ ಫೋಟೋ ಎಲ್ಲರ ಗಮನ ಸೆಳೆದಿದೆ.

ಈ ಫೋಟೋಗೆ 28 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಅಭಿಮಾನಿಗಳು ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡುತ್ತಾ ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ. "ಕಾರುಗಳ ಮೇಲಿನ ಪ್ರೀತಿ ಮುಂದುವರೆದಿದೆ" ಎಂದು ಹಾರ್ದಿಕ್ ಪಾಂಡ್ಯ ಈ ಫೋಟೋದೊಂದಿಗೆ ಶೀರ್ಷಿಕೆ ನೀಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇತರ ಕ್ರಿಕೆಟಿಗರಂತೆ ಹಾರ್ದಿಕ್ ಪಾಂಡ್ಯ ಕೂಡ ಕಾರು ಪ್ರೇಮಿಯಾಗಿದ್ದು, ಈ ಪೋಸ್ಟ್ ಮೂಲಕ ಹಾರ್ದಿಕ್ ಪಾಂಡ್ಯಾರಂತೆ ಅವರ ಮಗನಿಗೂ ಕಾರುಗಳೆಂದರೆ ಪ್ರೀತಿ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಪಾಂಡ್ಯ ಸದ್ಯ ಸಾಕಷ್ಟು ಕಾರುಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಪ್ರತಿಯೊಂದೂ ವಿವಿಧ ವಿಭಾಗಗಳಿಗೆ ಸೇರಿವೆ.

ಹಾರ್ದಿಕ್ ಪಾಂಡ್ಯ ಒಡೆತನದ ಪ್ರಮುಖ ಕಾರುಗಳಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ಕೂಡಾ ಒಂದು. ಇದು ಶ್ರೀಮಂತರ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದ್ದು, ಇದು ಐಷಾರಾಮಿ ಎಸ್‌ಯುವಿ ಕಾರಾಗಿದೆ. ಇದಲ್ಲದೆ ಹಾರ್ದಿಕ್ ಪಾಂಡ್ಯಾ ಅವಗೆ ಲಂಬೋರ್ಗಿನಿ ಹುರಾಕನ್ ಇವೊ ಇದೆ.

ಲಂಬೋರ್ಗಿನಿ ಹುರಾಕನ್ ಇವೊ 5.2 ಲೀಟರ್, ವಿ10, ಸ್ವಾಭಾವಿಕ ಆಸ್ಪೆರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಗರಿಷ್ಠ 638 ಬಿಎಚ್‌ಪಿ ಶಕ್ತಿ ಮತ್ತು 600 ಎನ್‌ಎಂ ಟಾರ್ಕ್ ಹೊಂದಿದೆ. ಲಂಬೋರ್ಗಿನಿ ಹುರಾಕನ್ ಇವೊ ಕೇವಲ 2.9 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಲೋಮೀಟರ್ ವೇಗವನ್ನು ತಲುಪುತ್ತದೆ.

ಈ ಕಾರಿನ ಅತ್ಯುತ್ತಮ ಕಾರ್ಯಕ್ಷಮತೆ ಆನ್‌ರೋಡ್‌ನಲ್ಲಿ ನೋಡಬಹುದು. ಇದಲ್ಲದೆ, ಹಾರ್ದಿಕ್ ಪಾಂಡ್ಯ ಅವರು ಮರ್ಸಿಡಿಸ್ ಬೆಂಝ್ ಎಎಂಜಿ ಜಿ63 (ಎಂಡಿಎಸ್-ಡಿಎಸ್ಎಲ್ ಎಎಂಜಿ ಜಿ63) ಅನ್ನು ಸಹ ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯಾ ಅವರು ತಮ್ಮ ಮಗನೊಂದಿಗೆ ಪೋಸ್ಟ್ ಮಾಡಿರುವ ಫೋಟೋದಲ್ಲಿ ಇದೇ ಕಾರಿನ ಮುಂದೆ ನಿಂತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಮರ್ಸಿಡಿಸ್ ಬೆಂಜ್ ಎಎಂಜಿ ಜಿ63 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಆಗಿದ್ದು, ಇದು ವಿನ್-ಟರ್ಬೋಚಾರ್ಜ್ ಎಂಜಿನ್ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಈ ಎಂಜಿನ್ ಗರಿಷ್ಠ 585 ಬಿಎಚ್‌ಪಿ ಶಕ್ತಿ ಮತ್ತು 850 ಎನ್‌ಎಂ ಟಾರ್ಕ್ ಹೊಂದಿದೆ. ಈ ಕಾರಿನಲ್ಲಿನ ಎಂಜಿನ್ ಶಕ್ತಿಯನ್ನು ಸ್ವಯಂಚಾಲಿತ ಟ್ರಾನ್ಸ್‌ಮಿಷನ್ ಮೂಲಕ ಕಾರಿನ ಎಲ್ಲಾ ಚಕ್ರಗಳಿಗೆ ಓದಗಿಸಲಾಗುತ್ತದೆ. ಇದಲ್ಲದೆ ಹಾರ್ದಿಕ್ ಪಾಂಡ್ಯ ಅವರಿಗೆ ಇನ್ನೂ ಒಂದು ಐಷಾರಾಮಿ ಕಾರಿದ ಆಡಿ ಎ6 (ಎಡಿಎಸ್ ಎ6) ಇದೆ. ಇದು ಪ್ರೀಮಿಯಂ ಸೆಡಾನ್ ಆಗಿದೆ.

ಹಾರ್ದಿಕ್ ಪಾಂಡ್ಯಾ ಟೊಯೊಟಾ ಎಟಿಯೋಸ್ ಅನ್ನು ಸಹ ಹೊಂದಿದ್ದಾರೆ. ಟೊಯೊಟಾ ಎಟಿಯೋಸ್ ಅನ್ನು ಹಾರ್ದಿಕ್ ಪಾಂಡ್ಯ ಹೊಂದಿರುವ ಸಾಮಾನ್ಯ ಕಾರುಗಳಲ್ಲಿ ಒಂದೆಂದು ಹೇಳಬಹುದು. ಅವರಿಗಿರುವ ಇತರ ಕಾರುಗಳಿಗೆ ಹೋಲಿಸಿದರೆ ಇದು ಸಾಮಾನ್ಯ ಕಾರು.

ಸಾಮಾನ್ಯವಾಗಿ ಸಿನಿಮಾ ಇಂಡಸ್ಟ್ರಿಯ ನಟ, ನಟಿಯರು, ನಿರ್ದೇಶಕರೇ ಹೆಚ್ಚು ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಇನ್ನು ಕ್ರಿಕೆಟ್ ವಿಷಯಕ್ಕೆ ಬಂದರೆ ವಿರಾಟ್ ಕೊಹ್ಲಿ, ಧೋನಿ, ಗಂಭರ್‌ನಂತಹ ಆಟಗಾರರಿಗೆ ಕಾರುಗಳ ಮೇಲೆ ವ್ಯಾಮೋಹ ಹೆಚ್ಚು. ಧೋನಿ ಅವರಿಗೆ ಬೈಕುಗಳೆಂದರೂ ತುಂಬಾ ಇಷ್ಟ.

ಹಾರ್ದಿಕ್ ಪಾಂಡ್ಯ ಕೂಡ ಸಾಕಷ್ಟು ಕಾರುಗಳನ್ನು ಹೊಂದುವ ಮೂಲಕ ಇದೇ ಸಾಲಿಗೆ ಸೇರುತ್ತಾರೆ. ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರುಗಳನ್ನು ಖರೀದಿಸುವ ನಿರೀಕ್ಷೆಯಿದೆ. ಹಾರ್ದಿಕ್ ಪಾಂಡ್ಯಾ ಅವರು ತಮ್ಮ ಕಾರುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಓಡಿಸುವುದನ್ನು ನೋಡಲು ಅವರ ಅಭಿಮಾನಿಗಳು ತುಂಬಾ ಉತ್ಸುಕರಾಗಿ ಕಾಯುತ್ತಿದ್ದಾರೆ.


Click it and Unblock the Notifications