ಯಾವುದೇ ಎನ್‌ಬಿಎ ಪಂದ್ಯವಾಡದೇ ಎನ್‌ಬಿಎ ಹಾಲ್ ಆಫ್ ಫೇಮ್‌ ಗೌರವ ಪಡೆದ ಕಾರು ಮಾರಾಟಗಾರ

ಭಾರತೀಯ ಮೂಲದ ಕಾರು ಮಾರಾಟಗಾರರಾದ ನವ್ ಭಾಟಿಯಾ ಅವರನ್ನು ಇತ್ತೀಚೆಗೆ ಎನ್‌ಬಿಎಯ ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಳ್ಳಲಾಗಿದೆ. ನವ್ ಭಾಟಿಯಾರವರು ಬಾಸ್ಕೆಟ್ ಬಾಲ್'ನಲ್ಲಿ ಯಾವುದೇ ತಂಡದ ಪರ ಆಡದೇ, ಯಾವುದೇ ತಂಡಕ್ಕೆ ತರಬೇತಿ ನೀಡದೇ ಈ ಗೌರವ ಪಡೆದಿದ್ದಾರೆ.

ಯಾವುದೇ ಎನ್‌ಬಿಎ ಪಂದ್ಯವಾಡದೇ ಎನ್‌ಬಿಎ ಹಾಲ್ ಆಫ್ ಫೇಮ್‌ ಗೌರವ ಪಡೆದ ಕಾರು ಮಾರಾಟಗಾರ

ಈ ಗೌರವವು ಕೆನಡಾದಲ್ಲಿ ವಾಸಿಸುವ ಭಾರತೀಯ ಮೂಲದವರಿಗೆ ದೊಡ್ಡ ಗೌರವದ ವಿಷಯವಾಗಿದೆ. ನವ್ ಭಾಟಿಯಾ ಅವರು ಹುಟ್ಟಿ ಬೆಳೆದದ್ದು ನವದೆಹಲಿಯಲ್ಲಿ. ಅವರು ದೆಹಲಿಯಲ್ಲಿ ಮೆಕ್ಯಾನಿಕಲ್‌ನಲ್ಲಿ ಎಂಜಿನಿಯರ್ ಪದವಿ ಪಡೆದಿದ್ದಾರೆ. 1984ರ ಸಿಖ್ ವಿರೋಧಿ ಗಲಭೆಯ ನಂತರ ಅವರು ದೇಶ ತೊರೆದು ಕೆನಡಾದಲ್ಲಿ ನೆಲೆಸಿದರು. ಭಾರತದಿಂದ ವಲಸೆ ಹೋದ ಕಾರಣಕ್ಕೆ ಹಾಗೂ ಸಿಖ್ ಎಂಬ ಕಾರಣಕ್ಕೆ ಕೆನಡಾದಲ್ಲಿ ಅವರ ಜೀವನ ಸುಖಮಯವಾಗಿರಲಿಲ್ಲ.

ಯಾವುದೇ ಎನ್‌ಬಿಎ ಪಂದ್ಯವಾಡದೇ ಎನ್‌ಬಿಎ ಹಾಲ್ ಆಫ್ ಫೇಮ್‌ ಗೌರವ ಪಡೆದ ಕಾರು ಮಾರಾಟಗಾರ

ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದರೂ ಅವರಿಗೆ ಅಲ್ಲಿ ಕೆಲಸ ಸಿಗಲಿಲ್ಲ. ನೂರಾರು ಕೆಲಸಗಳಿಗೆ ಅರ್ಜಿ ಸಲ್ಲಿಸಿದ ನಂತರ ಅವರು ಅಂತಿಮವಾಗಿ ಕಾರು ಮಾರಾಟಗಾರನ ಕೆಲಸವನ್ನು ಪಡೆದರು. ಕೆಲಸ ಸಿಕ್ಕ ನಂತರ ಅವರು ತಮ್ಮ ಕೆಲಸದ ಮೇಲೆ ಹೆಚ್ಚು ಗಮನ ಹರಿಸಿದರು.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಯಾವುದೇ ಎನ್‌ಬಿಎ ಪಂದ್ಯವಾಡದೇ ಎನ್‌ಬಿಎ ಹಾಲ್ ಆಫ್ ಫೇಮ್‌ ಗೌರವ ಪಡೆದ ಕಾರು ಮಾರಾಟಗಾರ

ಕಾರು ಮಾರಾಟಗಾರನ ಕೆಲಸ ಸಿಕ್ಕ ನಂತರ ನವ್ ಭಾಟಿಯಾ ತಮ್ಮ ಮಾರ್ಕೆಟಿಂಗ್ ಕೌಶಲ್ಯದ ಮೂಲಕ ಕೇವಲ 90 ದಿನಗಳಲ್ಲಿ 127 ಕಾರುಗಳನ್ನು ಮಾರಾಟ ಮಾಡಿದರು. ಈ ದಾಖಲೆ ಇನ್ನೂ ಹಾಗೇ ಇದೆ. ನಂತರ ಅವರನ್ನು ನಗರದ ದೊಡ್ಡ ಡೀಲರ್ ಶಿಪ್'ನಲ್ಲಿ ಜನರಲ್ ಮ್ಯಾನೇಜರ್ ಆಗಿ ನೇಮಿಸಲಾಯಿತು. ಈ ಡೀಲರ್ ಶಿಪ್ ದಿವಾಳಿಯ ಅಂಚಿನಲ್ಲಿತ್ತು.

ಯಾವುದೇ ಎನ್‌ಬಿಎ ಪಂದ್ಯವಾಡದೇ ಎನ್‌ಬಿಎ ಹಾಲ್ ಆಫ್ ಫೇಮ್‌ ಗೌರವ ಪಡೆದ ಕಾರು ಮಾರಾಟಗಾರ

ನವ್ ಭಾಟಿಯಾ ಹಾಗೂ ಅವರ ತಂಡದ ಕಠಿಣ ಪರಿಶ್ರಮದಿಂದಾಗಿ ಈ ಡೀಲರ್ ಶಿಪ್ ದಿವಾಳಿಯಾಗುವುದು ತಪ್ಪಿದ್ದಲ್ಲದೇ ಕೆನಡಾದ ಜನಪ್ರಿಯ ಡೀಲರ್ ಶಿಪ್'ಗಳಲ್ಲಿ ಒಂದಾಯಿತು. ನಂತರ ನವ್ ಭಾಟಿಯಾ ಈ ಡೀಲರ್ ಶಿಪ್ ಅನ್ನು ಖರೀದಿಸಿದರು. ಇದರ ಜೊತೆಗೆ ಹಲವು ಡೀಲರ್ ಶಿಪ್'ಗಳನ್ನು ಖರೀದಿಸರು.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಯಾವುದೇ ಎನ್‌ಬಿಎ ಪಂದ್ಯವಾಡದೇ ಎನ್‌ಬಿಎ ಹಾಲ್ ಆಫ್ ಫೇಮ್‌ ಗೌರವ ಪಡೆದ ಕಾರು ಮಾರಾಟಗಾರ

ಹ್ಯುಂಡೈ ಕಂಪನಿಯ ಸಿಇಒಗಳು ಅವರ ಯಶಸ್ಸಿನಿಂದ ಪ್ರಭಾವಿತರಾದರು. ನವ್ ಭಾಟಿಯಾ 2018ರಲ್ಲಿ ಆರ್‌ಬಿ‌ಸಿ ಟಾಪ್ 25 ಕೆನಡಿಯನ್ ಎಮಿಗ್ರಂಟ್ ಪ್ರಶಸ್ತಿ ಪಡೆದಿದ್ದಾರೆ. ಇದರ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ನವ್ ಭಾಟಿಯಾ ಕಾರುಗಳ ಜೊತೆಗೆ ರಾಪ್ಟರ್ಸ್ ಎನ್‌ಬಿಎ ತಂಡವನ್ನು ಇಷ್ಟಪಟ್ಟಿದ್ದರು.

ಯಾವುದೇ ಎನ್‌ಬಿಎ ಪಂದ್ಯವಾಡದೇ ಎನ್‌ಬಿಎ ಹಾಲ್ ಆಫ್ ಫೇಮ್‌ ಗೌರವ ಪಡೆದ ಕಾರು ಮಾರಾಟಗಾರ

1995ರಲ್ಲಿ ರಾಪ್ಟರ್‌ ತಂಡವು ಪಂದ್ಯಾವಳಿಯಲ್ಲಿ ಭಾಗವಹಿಸಲು ಶುರು ಮಾಡಿದಾಗಿನಿಂದ, ಅವರು ಒಂದೇ ಒಂದು ಪಂದ್ಯವನ್ನು ತಪ್ಪಿಸಿಕೊಂಡಿಲ್ಲ. ತಂಡವು ಸೋತರೂ ಗೆದ್ದರೂ ನವ್ ಭಾಟಿಯಾ ತಂಡವನ್ನು ಬೆಂಬಲಿಸಿದರು. ರಾಪ್ಟರ್‌ಗಳ ಜೊತೆಗಿನ ಬಾಂಧವ್ಯದಿಂದಾಗಿ 1998ರಲ್ಲಿ ರಾಪ್ಟರ್ಸ್ ಸೂಪರ್‌ಫ್ಯಾನ್ ಪ್ರಶಸ್ತಿಯನ್ನು ಪಡೆದರು. ಮೈದಾನದಲ್ಲಿಯೇ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಯಾವುದೇ ಎನ್‌ಬಿಎ ಪಂದ್ಯವಾಡದೇ ಎನ್‌ಬಿಎ ಹಾಲ್ ಆಫ್ ಫೇಮ್‌ ಗೌರವ ಪಡೆದ ಕಾರು ಮಾರಾಟಗಾರ

2018ರಲ್ಲಿ ರಾಪ್ಟರ್‌ಗಳು ಎನ್‌ಬಿಎ ಚಾಂಪಿಯನ್‌ಶಿಪ್ ಗೆದ್ದ ದಿನದಂದು ನವ್ ಭಾಟಿಯಾ ಹೊಸ ಇತಿಹಾಸ ಬರೆದರು. ಅವರು ಎನ್‌ಬಿಎ ಇತಿಹಾಸದಲ್ಲಿ ಅಧಿಕೃತ ಚಾಂಪಿಯನ್‌ಶಿಪ್ ಉಂಗುರವನ್ನು ಪಡೆದ ಮೊದಲ ಅಭಿಮಾನಿಯಾದರು. ಜೊತೆಗೆ ತಂಡದ ಚಾಂಪಿಯನ್‌ಶಿಪ್ ಪೆರೇಡ್‌ನ ಭಾಗವೂ ಆಗಿದ್ದರು.

ಯಾವುದೇ ಎನ್‌ಬಿಎ ಪಂದ್ಯವಾಡದೇ ಎನ್‌ಬಿಎ ಹಾಲ್ ಆಫ್ ಫೇಮ್‌ ಗೌರವ ಪಡೆದ ಕಾರು ಮಾರಾಟಗಾರ

ನವ್ ಭಾಟಿಯಾ ಅವರನ್ನು ಎನ್‌ಬಿಎಯ ಹಾಲ್ ಆಫ್ ಫೇಮ್‌ಗೆ ಸೇರಿಸಿದ ನಂತರ ಅವರ ಆಟದ ಮೇಲಿನ ಪ್ರೀತಿ ಮತ್ತೊಮ್ಮೆ ಇತಿಹಾಸದಲ್ಲಿ ಸ್ಥಾನ ಗಳಿಸಿದೆ. ಈ ಬಗ್ಗೆ ಮಾತನಾಡಿರುವ ಅವರು, ನಾನು ನನ್ನ ಪೇಟವನ್ನು ತೆಗೆಯುವುದಿಲ್ಲ ಎಂದು ಬಾಲ್ಯದಲ್ಲಿ ನನ್ನ ತಾಯಿಗೆ ಮಾತು ನೀಡಿದ್ದೆ. ಇಂದು ಅದನ್ನು ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಳ್ಳಲಾಗಿದೆ. ನಿಮ್ಮನ್ನು ವಿಭಿನ್ನವಾಗಿರಿಸಿಕೊಳ್ಳಿ, ಅದು ನಿಮ್ಮ ಮಹಾಶಕ್ತಿ. ಧನ್ಯವಾದಗಳು, ಅಮ್ಮ ಎಂದು ಹೇಳಿದರು.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಯಾವುದೇ ಎನ್‌ಬಿಎ ಪಂದ್ಯವಾಡದೇ ಎನ್‌ಬಿಎ ಹಾಲ್ ಆಫ್ ಫೇಮ್‌ ಗೌರವ ಪಡೆದ ಕಾರು ಮಾರಾಟಗಾರ

ಪ್ರತಿ ಋತುವಿನಲ್ಲಿ ವಿವಿಧ ವಯಸ್ಸಿನ ಮಕ್ಕಳು ರಾಪ್ಟರ್‌ಗಳ ಆಟವನ್ನು ವೀಕ್ಷಿಸಲು ನವ್ ಭಾಟಿಯಾ 300,000 ಅಮೆರಿಕನ್ ಡಾಲರ್‌ಗಳನ್ನು ಖರ್ಚು ಮಾಡುತ್ತಾರೆ. ಈ ಮೂಲಕ ವಿವಿಧ ಹಿನ್ನೆಲೆಯ ಮಕ್ಕಳನ್ನು ಕ್ರೀಡೆಗಳ ಮೂಲಕ ಒಟ್ಟಿಗೆ ಸೇರಿಸಲು ಅವರು ಬಯಸುತ್ತಾರೆ.

ಚಿತ್ರ ಕೃಪೆ: ಜೋ ಪಾಂಪ್ಲಿಯಾನೊ/ಟ್ವಿಟರ್

Most Read Articles

Kannada
English summary
Indian origin car salesman gets NBA hall of fame honor. Read in Kannada.
Story first published: Tuesday, May 25, 2021, 16:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X