ಅಮೆರಿಕಾ ಭಾರತೀಯರಿಗೆ ಪ್ರಧಾನಿ ಮೋದಿ ಅಂದ್ರೆ ಹುಚ್ಚು... ಏನ್ ಮಾಡಿದ್ದಾರೆ ನೀವೆ ನೋಡಿ!
ಭಾರತೀಯರು ವಿಶ್ವದ ಹಲವು ದೇಶಗಳಲ್ಲಿ ವಾಸಿಸುತ್ತಿದ್ದಾರೆ, ಅದರಲ್ಲೂ ಅಮೆರಿಕಾದಲ್ಲಿ ಭಾರತೀಯರ ಸಂಖ್ಯೆ ತುಂಬಾ ಇದೆ. ಅಲ್ಲಿನ ಭಾರತೀಯರಿಗೆ ಪ್ರಧಾನಿ ಮೋದಿ ಅವರನ್ನು ಕಂಡರೆ ಅದೆನೋ ಅಭಿಮಾನ ಎಂಬುದು ಈ ಹಿಂದೆಯೇ ಸಾಭೀತಾಗಿದೆ. ಇದೀಗ ಅಮೆರಿಕಾದಲ್ಲಿ ಮತ್ತೊಬ್ಬರು ಅಭಿಮಾನಿ ವಿಭಿನ್ನವಾಗಿ ಮೋದಿ ಮೆಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಅದಕ್ಕೂ ಒಂದು ಪ್ರಮುಖ ಕಾರಣವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ಇದೆ ಜೂನ್ 21ರಿಂದ 24ರವರೆಗೆ ಅವರು ಅಮೆರಿಕ ಪ್ರವಾಸ ಮಾಡಲಿದ್ದಾರೆ. ಅವರ ಭೇಟಿಯ ಹಿನ್ನೆಲೆ ಅಮೆರಿಕದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹಾಗೆಯೇ ಮೋದಿ ಅಭಿಮಾನಿ ಕೂಡ ತಮ್ಮ ಕಾರಿಗೆ 'ಎನ್‌ಮೋದಿ' ಎಂಬ ಹೆಸರಿನಿಂದ ಅಲಂಕರಿಸಿದ್ದಾರೆ.

ನಿಜಕ್ಕೆ ಈತ ತನ್ನ ಕಾರಿನ ನೋಂದಣಿ ಫಲಕದ ಮೇಲೆ 'ನರೇಂದ್ರ ಮೋದಿ' ಹೆಸರನ್ನು ಬರೆಸಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಈ ಭಾರತೀಯನ ಅಭಿಮಾನಕ್ಕೆ ಬಿಜೆಪಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವ್ಯಕ್ತಿಯನ್ನು ಅಮೆರಿಕದ ಮೇರಿಲ್ಯಾಂಡ್ ನಲ್ಲಿ ನೆಲೆಸಿರುವ ರಾಘವೇಂದ್ರ ಎಂದು ಗುರುತಿಸಲಾಗಿದೆ. ಈತ ಪ್ರಧಾನಿ ಮೋದಿಯವರ ಅಮೆರಿಕ ಭೇಟಿಗಾಗಿ ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಮೇಲಿನ ಪ್ರೀತಿಯಿಂದಾಗಿ ಅವರು ತಮ್ಮ ಕಾರಿನ ಮೇಲೆ "NMODI" ಎಂಬುವ ನಂಬರ್ ಪ್ಲೇಟ್ ಬಳಸುತ್ತಿದ್ದಾರೆ. ಈ ನಂಬರ್ ಪ್ಲೇಟ್‌ನೊಂದಿಗೆ ಮೋದಿಯವರನ್ನು ಸ್ವಾಗತಿಸಲಿದ್ದಾರೆ ಎನ್ನಲಾಗಿದೆ. 2016ರಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸುವ ಸಲುವಾಗಿ ಎನ್‌ಮೋಡಿ ಪರವಾನಗಿ ಫಲಕವನ್ನು ಅವರು ಖರೀದಿಸಿದ್ದರು ಎಂದು ತಿಳಿದುಬಂದಿದೆ.

ಈತ ಮಾತ್ರವಲ್ಲದೇ ಅಮೆರಿಕಾದಲ್ಲಿ ಇಂತಹ ಅಭಿಮಾನಿಗಳು ಹಲವರಿದ್ದಾರೆ. ರಾಘವೇಂದ್ರ ಅವರಂತೆಯೇ ಭಾರತ ಮೂಲದ ಮತ್ತೊಬ್ಬರು ಅಭಿಮಾನಿ ನ್ಯೂಯಾರ್ಕ್‌ನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ತಮ್ಮ ರೆಸ್ಟಾರೆಂಟ್‌ನಲ್ಲಿ ಮೋದಿ ಮೇಲಿನ ಅಭಿಮಾನಕ್ಕೆ ಹೊಸ ಥಾಲಿ ಖಾದ್ಯವನ್ನು ಪರಿಚಯಿಸಿದ್ದು, ಮೋದಿಯವರ ಅಮೆರಿಕ ಭೇಟಿಗೂ ಮುನ್ನ ಇದನ್ನು ಪರಿಚಯಿಸಲಾಗಿದೆ.
ಇವರು ಕೂಡ ಭಾರತ ಮೂಲದ ಶ್ರೀಪಾದ್ ಕುಲಕರ್ಣಿ ಎಂದು ತಿಳಿದುಬಂದಿದೆ. ಅವರು ತಮ್ಮ ಹೊಸ ಥಾಲಿ ಖಾದ್ಯಕ್ಕೆ "ಮೋದಿ ಜಿ ಥಾಲಿ" ಎಂದು ಹೆಸರಿಸಿದ್ದಾರೆ. ಹೇಗೂ ಅಮೆರಿಕಾದಂತಹ ದೇಶಗಳಲ್ಲಿ ಭಾರತೀಯರಿಗೆ ದೇಶೀಯ ಆಹಾರ ಸಿಕ್ಕರೆ ಅದೇನೋ ಖುಷಿಯಂತೆ. ಅದರಲ್ಲೂ ಖಾದ್ಯಕ್ಕೆ ಪ್ರಧಾನಿ ಮೋದಿಯವರ ಹೆಸರಿಟ್ಟಿರುವುದು ಅಮೆರಿಕಾ ಭಾರತೀಯರನ್ನು ಸೆಳೆಯಲಿದೆ.
ನಮ್ಮ ಕರ್ನಾಟಕ ಮೂಲದವರು ಕೂಡ ಅಮೆರಿಕಾದಲ್ಲಿ ಹಲವರಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಸ್ಕೂಲು ಪ್ರಯಾಣಕ್ಕೆ ಬಳಸುತ್ತಿದ್ದ ಬಿಎಂಟಿಸಿ ಬಸ್ಸಿನ ನಂಬರ್ ಅನ್ನು ತಮ್ಮ ಹೊಸ ಟೆಸ್ಲಾ ಕಾರಿನ ನಂಬರ್ ಪ್ಲೇಟ್‌ಗೆ ಬಳಸಿದ್ದು ಕೂಡ ಇತ್ತೀಚೆಗೆ ತುಂಬಾ ವೈರಲ್ ಆಗಿತ್ತು. ಹೇಳುತ್ತಾ ಹೋದರೆ ಇಂತಹ ಹಲವು ಉದಾಹರಣೆಗಳು ಇವೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ವಿದೇಶಗಳಲ್ಲಿ ಭಾರತೀಯರು ಯಾವುದೋ ಒಂದು ಕಾರಣದಿಂದ ತುಂಬಾ ವೈರಲ್ ಆಗುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಅಲ್ಲಿನವರಿಗೆ ನಮ್ಮ ಭಾಷೆಯನ್ನು ಕಲಿಸುವುದು, ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ವಿದೇಶಿಗರಲ್ಲಿ ಗೌರವ ಹೆಚ್ಚಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ. ಇವು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿವೆ. ಈ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ಗಳಲ್ಲಿ ತಿಳಿಸಿ.


Click it and Unblock the Notifications