ಕರ್ನಾಟಕ TO ಹರಿಯಾಣ: ಟೊಯೊಟಾ ಇನ್ನೋವಾ ಹೈಕ್ರಾಸ್, ಹೈರೈಡರ್ ಸಾಗಿಸಿದ ರೈಲ್ವೆ

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಗಳು ತಮ್ಮ ಹೊಸ ವಾಹನಗಳ ಸಾಗಾಟಕ್ಕೆ ಭಾರತೀಯ ರೈಲ್ವೆ ಮೇಲೆ ಅವಲಂಬನೆಯಾಗುತ್ತಿವೆ. ರಾಮನಗರದ ಬಿಡದಿಯಲ್ಲಿ ಉತ್ಪಾದನಾ ಘಟಕ ಹೊಂದಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಇಂಡಿಯಾ, ತನ್ನ ಕಾರುಗಳನ್ನು ರೈಲ್ವೆ ಮೂಲಕ ರವಾನಿಸಿದೆ.

ಟೊಯೊಟಾ ಕಂಪನಿ ಹೈರೈಡರ್ ಹಾಗೂ ಇನ್ನೋವಾ ಹೈಕ್ರಾಸ್ ಎಸ್‌ಯುವಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ನಿಡವಂದ ರೈಲ್ವೆ ನಿಲ್ದಾಣದಿಂದ ಹರಿಯಾಣದ ಫಾರುಖ್‌ನಗರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ರೈಲ್ವೆ ಸಚಿವಾಲಯವು ಟೊಯೊಟಾದ ಸುಮಾರು 200 ಕಾರುಗಳನ್ನು ಆಟೋ ಕ್ಯಾರಿಯರ್ ವ್ಯಾಗನ್‌ಗಳಲ್ಲಿ ಲೋಡ್ ಮಾಡುತ್ತಿರುವ ಫೋಟೋಗಳನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕ TO ಹರಿಯಾಣ: ಟೊಯೊಟಾ ಇನ್ನೋವಾ ಹೈಕ್ರಾಸ್ ಸಾಗಿಸಿದ ರೈಲ್ವೆ.. ವಿತರಣೆ ಜೋರು!

ಟೊಯೊಟಾದೊಂದಿಗೆ ಸಹಭಾಗಿತ್ವ ಹೊಂದಿರುವ ಮಾರುತಿ ಸುಜುಕಿ, ತನ್ನ ಕಾರುಗಳನ್ನು ಸಾಗಿಸಲು ರೈಲ್ವೆಯ ಆಟೋ ಕ್ಯಾರಿಯರ್ ಅನ್ನು ದಶಕದಿಂದ ಬಳಕೆ ಮಾಡುತ್ತಿದೆ. 2013 ರಿಂದ 2022ರವರೆಗೆ ಬರೋಬ್ಬರಿ 3.2 ಲಕ್ಷ ವಾಹನಗಳನ್ನು ರವಾನಿಸಿ, ದಾಖಲೆ ನಿರ್ಮಿಸಿದೆ. ಇದೀಗ ಟೊಯೊಟಾ ಕೂಡ ಮಾರುತಿ ಸುಜುಕಿ ಹಾದಿ ಹಿಡಿದಿರುವುದು ಗಮನಾರ್ಹ ವಿಚಾರವಾಗಿದ್ದು, ತನ್ನ ವಾಹನಗಳನ್ನು ಸಾಗಿಸಲು ರೈಲ್ವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಕಾರುಗಳ ವಿತರಣೆ ವೇಗವಾಗಲಿದೆ.

ರೈಲ್ವೆ ಸಚಿವಾಲಯವು ಎಸ್‌ಯುವಿ ಹಾಗೂ ಕಾರುಗಳ ಸಾಗಾಟವನ್ನು ಉತ್ತೇಜಿಸುವ ಜೊತೆಗೆ ತನ್ನ ಪ್ರಯಾಣಿಕೇತರ ಆದಾಯವನ್ನು ವೃದ್ಧಿಸಿಕೊಳ್ಳಲು ಹೊಸ ವಿನ್ಯಾಸಗಳೊಂದಿಗೆ ಆಟೋ ಕ್ಯಾರಿಯರ್ ವ್ಯಾಗನ್‌ಗಳನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ. ಸದ್ಯ ರೈಲ್ವೆ ಇಲಾಖೆಯ ಈ ಸೇವೆಯನ್ನು ಬಳಕೆ ಮಾಡಿಕೊಳ್ಳಲು ವಿವಿಧ ವಾಹನ ತಯಾರಕ ಕಂಪನಿಗಳು ಮುಂದೆ ಬರುತ್ತಿವೆ. 2013-14ರಲ್ಲಿ 1.5% ಇದ್ದ ಪ್ರಯಾಣಿಕ ವಾಹನ ಸಾಗಾಟದ ಪಾಲು, 2022-23ರಲ್ಲಿ 68% ವೃದ್ಧಿಯಾಗಿದ್ದು, ಈ ಮೂಲಕ ರೈಲ್ವೆ ಉತ್ತಮ ಸಾಧನೆ ಮಾಡಿದೆ.

ಪ್ರಯಾಣಿಕ ವಾಹನ ಸಾಗಾಟ ಉತ್ತೇಜಿಸುವ ಸಂಬಂಧ ರೈಲ್ವೆ ಇಲಾಖೆಯು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತಿಳಿಸಲು ಇತ್ತೀಚೆಗಷ್ಟೇ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ರೈಲು ಕ್ಯಾರಿಯರ್ ಮೂಲಕ ಸಾಗಿಸುತ್ತಿದ್ದ ಬಸ್ ಗಳ ಚಿತ್ರಗಳನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದರು. ಈ ಬಸ್ ಗಳನ್ನು ನಮ್ಮದೇ ರಾಜ್ಯದ ನವಲೂರಿನಿಂದ ಜಾರ್ಖಂಡ್‌ನ ಟಾಟಾನಗರಕ್ಕೆ (ಸುಮಾರು 1872 ಕಿ.ಮೀ ದೂರ) ರವಾನಿಸಲಾಗಿತ್ತು.

ಇನ್ನು ಬಹುನೀರಿಕ್ಷಿತ ಟೊಯೊಟಾದ ಇನ್ನೋವಾ ಹೈಕ್ರಾಸ್ ಬಗ್ಗೆ ಮಾತನಾಡವುದರೆ, ಇದು ರೂ.18.30 ಲಕ್ಷದಿಂದ 28.97ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 1987 ಸಿಸಿ 2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 186 PS ಗರಿಷ್ಠ ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 21.1kmpl ಮೈಲೇಜ್ ನೀಡಲಿದ್ದು, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಡ್ಯೂಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬಾಗ್ಸ್ ಪಡೆದಿದೆ.

ಟೊಯೊಟಾ ಕಂಪನಿಯ ಬಹುನಿರೀಕ್ಷಿತ ಎಸ್‌ಯುವಿ, ಅರ್ಬನ್ ಕ್ರೂಸರ್ ಹೈರಿಡರ್ ಆಗಿದ್ದು, ಇದು ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ರೂ.10.48 ಲಕ್ಷದಿಂದ ರೂ.19.49 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಇದು ಎರಡು ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದೆ. ಅವುಗಳೆಂದರೆ, 1.5-ಲೀಟರ್ ಮೈಲ್ಡ್-ಹೈಬ್ರಿಡ್,1.5-ಲೀಟರ್ ಸ್ಟ್ರಾಂಗ್- ಹೈಬ್ರಿಡ್. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಕರ್ಷಕ ಸನ್ ರೂಫ್ ಹಾಗೂ ಆರು ಏರ್ ಬಾಗ್ಸ್ ಹೊಂದಿದೆ.

ಒಟ್ಟಾರೆ, ಟೊಯೊಟಾದ ಹೈರೈಡರ್ ಹಾಗೂ ಇನ್ನೋವಾ ಹೈಕ್ರಾಸ್ ಎಸ್‌ಯುವಿಗಳನ್ನು ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇವುಗಳ ಆಕರ್ಷಕ ವೈಶಿಷ್ಟ್ಯ ಹಾಗೂ ಅತ್ಯುತ್ತಮ ವೈಶಿಷ್ಟ್ಯಗಳು ಪ್ರತಿಯೊಬ್ಬರನ್ನು ಸೆಳೆಯುತ್ತವೆ ಎಂದು ಹೇಳಬಹುದು. ಅಲ್ಲದೆ, ಟೊಯೊಟಾ ಕಂಪನಿಯು ತನ್ನ ಕಾರುಗಳನ್ನು ಗ್ರಾಹಕರಿಗೆ ವೇಗವಾಗಿ ತಲುಪಿಸಲು ರೈಲ್ವೆಯ ಆಟೋ ಕ್ಯಾರಿಯರ್ ಗಳನ್ನು ಬಳಕೆ ಮಾಡುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ.

Article Published On: Friday, February 24, 2023, 15:01 [IST]
English summary
Indian railways transports toyota cars karnataka to haryana details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+