ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಭಾರತದಲ್ಲಿ ವಾಯು ಮಾಲಿನ್ಯ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೆಹಲಿಯೂ ಸೇರಿದಂತೆ ಭಾರತದ ಪ್ರಮುಖ ನಗರಗಳು ವಾಯು ಮಾಲಿನ್ಯದಿಂದಾಗಿ ಹದಗೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಕೇಂದ್ರ ಸರ್ಕಾರವೂ ಸಹ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ವಾತಾವರಣವು ಹಲವಾರು ಕಾರಣಗಳಿಗಾಗಿ ಹದಗೆಡುತ್ತಿದೆ. ಇವುಗಳಲ್ಲಿ ಫ್ಯಾಕ್ಟರಿಗಳಿಂದ ಹೊರಬರುವ ಹಾಗೂ ವಾಹನಗಳು ಹೊರಸೂಸುವ ಹೊಗೆ ಪ್ರಮುಖ ಕಾರಣವಾಗಿದೆ.

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಅದರಲ್ಲೂ ಪೆಟ್ರೋಲ್ - ಡೀಸೆಲ್ ವಾಹನಗಳಿಂದ ಹೆಚ್ಚಿನ ಪ್ರಮಾಣದ ಮಾಲಿನ್ಯ ಉಂಟಾಗುತ್ತಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನವನ್ನು ನೀಡುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಹೊರತಾಗಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಪರ್ಯಾಯಗಳಿಲ್ಲ.

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಸದ್ಯಕ್ಕೆ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳಿಲ್ಲ. ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ದೂರವನ್ನು ಕ್ರಮಿಸದೇ ಇರುವ ಕಾರಣಕ್ಕೆ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಮಧ್ಯ ದಾರಿಯಲ್ಲಿ ಎಲೆಕ್ಟ್ರಿಕ್ ವಾಹನಗಳು ನಿಂತು ಹೋಗಬಹುದೆಂಬುದು ಸಹ ಗ್ರಾಹಕರ ಭಯಕ್ಕೆ ಕಾರಣವಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಮಧ್ಯ ದಾರಿಯಲ್ಲಿ ವಾಹನದ ಚಾರ್ಜ್ ಖಾಲಿಯಾದರೆ ಅದಕ್ಕೆ ಪರ್ಯಾಯವಿಲ್ಲ.

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಈ ಸಮಸ್ಯೆಗೆ ಬೆಂಗಳೂರು ಮೂಲದ ಕಂಪನಿಯೊಂದು ಪರಿಹಾರ ಕಂಡು ಹಿಡಿದಿದೆ. ಮೆಲಾದತ್ ಆಟೋ ಕಾಂಪೊನೆಂಟ್ ಕಂಪನಿಯನ್ನು 2016ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಯಿತು. ಈ ಕಂಪನಿಯನ್ನು ಸ್ಥಾಪಿಸಿದವರು ರಾಕೇಶ್ ಮೆಲಾದತ್ ಕರುಣಾಕರನ್ ಹಾಗೂ ಅವರ ಪತ್ನಿ ವಿನ್ನಿ ಗಂಗಾಧರನ್.

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಈ ಕಂಪನಿಯನ್ನು ಪೆಟ್ರೋಲ್ ಎಂಜಿನ್ ಹೊಂದಿರುವ ಸ್ಕೂಟರ್‍‍ಗಳಿಗೆ ಮಾರಾಟದ ನಂತರದ ಕಿಟ್‍‍ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಶುರುಮಾಡಲಾಯಿತು. ಈಗ ಕಂಪನಿಯು ಎಲೆಕ್ಟ್ರಿಕ್ ಕನ್ವರ್ಷನ್ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಈ ಕಿಟ್‍ ಅನ್ನು ಅಳವಡಿಸಿದರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ಎಲೆಕ್ಟ್ರಿಕ್ ಹೈಬ್ರಿಡ್ ಸ್ಕೂಟರ್‍‍ಗಳಾಗಿ ಬದಲಾಗುತ್ತವೆ. ಇದರಿಂದಾಗಿ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಹಾಗೂ ಪೆಟ್ರೋಲ್ ಎಂಬ ಎರಡು ಮೋಡ್‍‍ಗಳಲ್ಲಿ ಚಲಾಯಿಸಬಹುದಾಗಿದೆ.

MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಎಲೆಕ್ಟ್ರಿಕ್ ಮೋಟರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಈ ಸ್ಕೂಟರ್ 40 ಕಿ.ಮೀವರೆಗೂ ಚಲಿಸುತ್ತದೆ. ಚಾರ್ಜ್ ಖಾಲಿಯಾದರೆ ಪೆಟ್ರೋಲ್‍‍ನಿಂದ ಸ್ಕೂಟರ್ ಅನ್ನು ಚಲಾಯಿಸಬಹುದು. ಈ ಕಿಟ್ ಅನ್ನು ಅಳವಡಿಸಲು ಸ್ಕೂಟರಿನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬೇಕಾಗಿಲ್ಲ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಇದು ಈ ಕಿಟ್‍‍ನ ವಿಶೇಷತೆಯಾಗಿದೆ. ಹೈಬ್ರಿಡ್ ಬೇಡ ಎನ್ನುವುದಾದರೆ ಈ ಕಿಟ್ ಅನ್ನು ತೆಗೆದು ಹಾಕಿ ಪೆಟ್ರೋಲ್ ಎಂಜಿನ್ ಅನ್ನು ಮಾತ್ರ ಹೊಂದಬಹುದು. ಇದಕ್ಕಾಗಿ ಯಾವುದೇ ರೀತಿಯ ವೆಲ್ಡಿಂಗ್ ಅಥವಾ ಕಟ್ಟಿಂಗ್‍‍ನ ಅವಶ್ಯಕತೆಯಿಲ್ಲ.

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಈ ಕಿಟ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಮನೆಯಲ್ಲಿಯೇ ಚಾರ್ಜ್ ಮಾಡಬಹುದಾಗಿದೆ. ಬ್ಯಾಟರಿ ಖಾಲಿಯಾದರೆ ಸ್ಕೂಟರ್ ಪೆಟ್ರೋಲ್‍‍ನಿಂದ ಚಲಿಸಲಿದೆ. ಈ ಫೀಚರ್‍‍ನಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳಿಗಿಂತ ವಿಭಿನ್ನವಾಗಿರಲಿದೆ.

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಈ ಕಿಟ್‍‍ನಿಂದ ಜನರು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಹೊಂದುವುದರಿಂದ ಉಂಟಾಗುವ ತಲೆನೋವಿನಿಂದ ಪಾರಾಗಬಹುದು. ಏಕೆಂದರೆ ಬ್ಯಾಟರಿಯಲ್ಲಿರುವ ಚಾರ್ಜ್ ಖಾಲಿಯಾದರೆ ಪೆಟ್ರೋಲ್‍‍ನಿಂದ ಸ್ಕೂಟರ್ ಅನ್ನು ಚಲಾಯಿಸಬಹುದಾಗಿದೆ.

ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಈ ಕಿಟ್ ಅನ್ನು ಇನ್ನೂ ಕಮರ್ಷಿಯಲ್ ಮಾಡಲಾಗಿಲ್ಲ. ಆದರೆ ಪ್ರಯತ್ನಗಳು ಮುಂದುವರೆದಿವೆ. ಆಟೋಮೊಬೈಲ್ ಉದ್ಯಮದಲ್ಲಿರುವ ಸ್ಟಾರ್ಟ್ ಅಪ್ ಕಂಪನಿಗಳು ಈ ರೀತಿಯ ಕಿಟ್‍‍ಗಳನ್ನು ಅಭಿವೃದ್ಧಿಪಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮೆಲಾದತ್‍ ಆಟೋ ಕಾಂಪೊನೆಂಟ್ ಕಂಪನಿಗೆ ಅಭಿನಂದನೆಗಳು.

More from DriveSpark

Article Published On: Tuesday, December 31, 2019, 12:39 [IST]
English summary
Indian startup created e conversion kit that converts any petrol scooter to a hybrid scooter - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+