ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತೀಯ

ಇರುವ ಬಂಡವಾಳವನ್ನು ಸಹ ಸಂಪೂರ್ಣವಾಗಿ ಖರ್ಚು ಮಾಡಿ ಒಂದು ಹೊಸ ವಾಹನ ಖರೀದಿ ಮಾಡಬೇಕು ಅಂದ್ರೆ ಹಲವಾರು ಬಾರಿ ಯೋಚನೆ ಮಾಡುತ್ತೇವೆ. ಆದರೆ ಯಾವುದೇ ಖರ್ಚಿಲ್ಲದೆ ಲಕ್ಕಿ ಡ್ರಾನಲ್ಲಿ ಯಾವುದಾದರು ಒಂದು ಐಷಾರಾಮಿ ವಾಹನ ಸಿಕ್ಕರೆ ಅದಕ್ಕಿಂತಾ ಸಂತೋಷದ ವಿಷಯ ಬೇರೊಂದಿಲ್ಲ ಎನಿಸುತ್ತದೆ ಅಲ್ಲವೇ.? ನಾವಿಂದು ಈ ಲೇಖನದಲ್ಲಿ ಅಂತದ್ದೆ ವಿಚಾರದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.

ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತದ ಮೂಲದ ಕಾರ್ಪೆಂಟರ್

ದುಬೈಯಲ್ಲಿರುವ ಭಾರತೀಯ ಉದ್ಯಮಿ ಬಲ್ವೀರ್ ಸಿಂಗ್ ತನ್ನ ಮೊಬೈಲ್ ಸಂಖ್ಯೆಯ ಐಡಿಯನ್ನು ನವೀಕರಿಸಿದಾಗ, ಅವರು ಒಂದು ಐಷಾರಾಮಿ ಕಾರಿನ ಮಾಲೀಕರಗುತ್ತರೆ ಎಂದು ಅವರಿಗೆ ಸಣ್ಣ ಆಸೆ ಇತ್ತು. ಈ ಮರು-ನೋಂದಣಿ ಯುಎಇ ನೋಂದಣಿ ನೀತಿಗೆ ಅನುಗುಣವಾಗಿ, ಅವಧಿ ಮುಗಿಯುವ ಐಡಿ ನೋಂದಣಿ ಗ್ರಾಹಕರನ್ನು 2019 ರ ಜನವರಿ 31 ಕ್ಕೆ ಮುಂಚಿತವಾಗಿ ಅವರ ಸಂಖ್ಯೆಗಳನ್ನು ನವೀಕರಿಸುವ ಸಲುವಾಗಿ ಆಹ್ವಾನಿಸಲಾಯಿತು.

ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತದ ಮೂಲದ ಕಾರ್ಪೆಂಟರ್

ಮೊಬೈಲ್ ಸಂಖ್ಯೆ ಐಡಿ ನವೀಕರಿದ ಲಕ್ಕಿ ಡ್ರಾನಲ್ಲಿ ಗ್ರಾಹಕರು ಈ ಮೆಕ್ಲಾರೆನ್ 570 ಎಸ್ ಸ್ಪೈಡರ್ ಕಾರು ಗೆಲ್ಲುವ ಸುವರ್ಣಾವಕಾಷವನ್ನು ಹೊಂದಿರುತ್ತಾರೆ. ಈ ಲಕ್ಕಿ ಡ್ರಾನಲ್ಲಿ ಸಾವಿರಾರು ಗ್ರಾಹಕರು ಭಾಗವಹಿಸಿದ್ದು, ಅದೃಷ್ಟ ಲಕ್ಷಿ ಮಾತ್ರ ಬಲ್ವೀರ್ ಸಿಂಗ್‍ರವರ ಕೈ ಹಿಡಿದಿದ್ದಾರೆ.

ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತದ ಮೂಲದ ಕಾರ್ಪೆಂಟರ್

ಬಲ್ವೀರ್ ಸಿಂಗ್ ಸ್ವತಃ ನಮ್ಮ ಭಾರತದ ಪಂಜಾಬ್‍ನಲ್ಲಿನ ಬಿಶನ್ ಕೋಟ್ ಮೂಲದವರಾಗಿದ್ದು, ಕಳೆದ 10 ವರ್ಷಗಳಿಂದ ದುಬೈನ ರಾಸ್‍-ಅಲ್ ಕೈಮಾನಲ್ಲಿನ ಘನ ಮೇಲ್ಮೈ ತಯಾರಿಕಾ ಕಂಪನಿಯಲ್ಲಿ (ಸಾಲಿಡ್ ಸರ್ಫೇಸ್ ಮ್ಯಾನುಫ್ಯಾಕ್ಚುರಿಂಗ್ ಕಂಪೆನಿ) ಕಾರ್ಯನಿರ್ವಹಿಸುತ್ತಿದ್ದರು.

ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತದ ಮೂಲದ ಕಾರ್ಪೆಂಟರ್

ಬಲ್ವೀರ್ ಸಿಂಗ್‍ಗೆ ಲಕ್ಕಿ ಡ್ರಾನಲ್ಲಿ ಮೆಕ್ಲರೆನ್ 570ಎಸ್ ಸ್ಪೈಡರ್ ಐಷಾರಾಮಿ ಸ್ಪೋರ್ಟ್ ಕಾರನ್ನು ಗೆದ್ದಿರುವುದಾಗಿ ಕರೆ ಬಂದಾಗ ಆತನಿಗೆ ನಂಬಲಾಗಲಿಲ್ಲವಾದರೂ ಇದೊಂದು ಪ್ರಾಂಕ್ ಕಾಲ್ ಎಂದು ಸುಮ್ಮನಿದ್ದರು. ಆದರೆ ಕೆಲ ಸಮಯದ ನಂತರ ಇದು ನಿಜವೆಂದು ಗೊತ್ತಾಗಿ ಇದೀಗ ಸುಮಾರು 1.5 ಕೋಟಿ ಬೆಲೆ ಬಾಳುವ ಐಷಾರಾಮಿ ಸ್ಪೋರ್ಟ್ ಕಾರಿನ ಮಾಲೀಕರಾಗಿದ್ದಾರೆ.

ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತದ ಮೂಲದ ಕಾರ್ಪೆಂಟರ್

ಅದಾಗ್ಯೂ, ಬಲ್ವೀರ್ ಸಿಂಗ್ ದುಬೈನಲ್ಲಿ ಕಾರ್ಪೆಂಟರ್ ವೃತ್ತಿಯಲ್ಲಿರುವ ಒಬ್ಬ ಸರಳ ವ್ಯಕ್ತಿ. ಆತನಿಗೆ ಈ ರೀತಿಯ ಕರೆ ಬಂದರೆ ಅವರಿಗೆ ನಂಬಲಾದರೂ ಹೇಗೆ ಸಾಧ್ಯ ನೀವೇ ಹೇಳಿ. ಹಾಗೆಯೆ ಐಷಾರಾಮಿ ಕಾರನ್ನು ಗೆದ್ದ ನಂತರವೂ ಅದನ್ನು ನಿಭಾಯಿಸುವ ಸಾಮರ್ಥ್ಯ ಬಲ್ವೀರ್ ಸಿಂಗ್‍ರವರಿಗೆ ಹೇಗಾದರು ಬರಬೇಕು ಅಲ್ಲವೇ..?

ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತದ ಮೂಲದ ಕಾರ್ಪೆಂಟರ್

ಆದುದರಿಂದ ಲಕ್ಕಿ ಡ್ರಾನಲ್ಲಿ ಮೆಕ್ಲಾರೆನ್ 570 ಐಷಾರಾಮಿ ಸ್ಪೋರ್ಟ್ ಕಾರನ್ನು ಗೆದ್ದ ಕೆಲವೇ ದಿನಗಳಲ್ಲಿ ಅದನ್ನು ಮಾರಿಕೊಂಡು, ಹೊಸ ವ್ಯವಹಾರವನ್ನು ಶುರು ಮಾಡಲು ಯೋಜನೇ ಮಾಡಿಕೊಂಡರು ಮತ್ತು ಇದರ ಜೊತೆಗೆ ಇನ್ನು ಹಲವಾರು ಯೋಜನೆಗಳನ್ನು ಸಹ ಹೊಂದಿದ್ದಾರೆ.

MOST READ: ಮಗುವಿನ ಪ್ರಾಣವನ್ನು ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್

ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತದ ಮೂಲದ ಕಾರ್ಪೆಂಟರ್

ಇನ್ನು ಬಲ್ವೀರ್ ಸಿಂಗ್‍ರವರು ಲಕ್ಕಿ ಡ್ರಾನಲ್ಲಿ ಗೆದ್ದ ಮೆಕ್ಲಾರೆನ್ 570ಎಸ್ ಕಾರಿನ ಬಗ್ಗೆ ಹೇಳುವುದಾರೇ ಈ ಕಾರು ಸುಮಾರು ರೂ. 1.47 ಕೋಟಿಗೆ ಮಾರಾಟವಾಗುತ್ತಿದ್ದು, ಈ ಕಾರು 3.8 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ8 ಎಂಜಿನ್ ಸಹಾಯದಿಂದ 562 ಬಿಹೆಚ್‍ಪಿ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದೆ.

ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತದ ಮೂಲದ ಕಾರ್ಪೆಂಟರ್

ಸುಮಾರು 1359 ಕಿಲೋಗ್ರಾಂ ತೂಕ ಹೊಂದಿರುವ ಈ ಕಾರು 3.2 ಸೆಕೆಂಡಿನಲ್ಲಿ 0 ಇಂದ 100 ಗಳ ಆಕ್ಸಿಲರೇಷನ್ ಸಾಮರ್ಥ್ಯ ಮತ್ತು ಗಂಟೆಗೆ ಸುಮಾರು 328 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

MOST READ: ಅಪಘಾತದ ಸಮಯದಲ್ಲಿ ಪ್ರಯಾಣಿಕರನ್ನು ಕಾಪಾಡಿದ ಟಿಯಾಗೊ - ಟಾಟಾ ಮೋಟಾರ್ಸ್ ಹಾಡಿಹೊಗಳಿದ ಮಾಲೀಕ

ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತದ ಮೂಲದ ಕಾರ್ಪೆಂಟರ್

ಹೀಗಾಗಿ ತಿಂಗಳಿಗೆ ಸುಮಾರು ರೂ. 36 ಸಾವಿರ ಸಂಪಾದನೆಯನ್ನು ಹೊಂದಿರುವ ಬಲ್ವೀರ್ ಸಿಂಗ್ ಈ ಕಾರಿನ ಮೈನ್‍ಟೈನೆನ್ಸ್ ಅನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಮತ್ತು ಅವರ ಬಳಿ ಡ್ರೈವಿಂಗ್ ಲೈಸೆನ್ಸ್ ಕೂಡಾ ಇರಲಿಲ್ಲ. ಈ ಕಾರಿನ ಬಗ್ಗೆ ಏನೂ ತಿಳಿಯದ ಸಿಂಗ್ ನಂತರ ಗೂಗಲ್ ಮಾಡಿ, ಆನಂತರ ಕಾರನ್ನು 1.13 ಕೋಟಿಗೆ ಮಾರಿ ಬಿಷನ್ ಕೋಟ್‍ನಲ್ಲಿನ ತನ್ನ ಮನೆಗೆ ಕಳುಹಿಸಿದ್ದಾರೆ. ನಂತರ ಅವರು ಭಾರತಕ್ಕೆ ಮರಳಿದಾಗ ಹೊಸ ಕಾರನ್ನು ಕೂಡಾ ಖರೀದಿ ಮಾಡುವ ಯೋಜನೆಯಲ್ಲಿದ್ದಾರಂತೆ.

Source: Gulflifestyle

More from DriveSpark

Article Published On: Wednesday, April 24, 2019, 11:27 [IST]
English summary
Indian Wins McLaren 570S Spyder Luxury Sport Car In Lucky Draw. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+