ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಶೇ100 ರಷ್ಟು ಭೂಸ್ವಾಧೀನ: ವಿಶೇಷತೆಗಳೇನು?
2026ರ ವೇಳೆಗೆ ದಕ್ಷಿಣ ಗುಜರಾತ್‌ನ ಸೂರತ್-ಬಿಲಿಮೋರಾ ನಡುವೆ ಮೊದಲ ಬುಲೆಟ್ ರೈಲನ್ನು ಓಡಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಇದಕ್ಕಾಗಿ ಎಲ್ಲಾ ಕಾರ್ಯಗಳು ಶರವೇಗದಿಂದ ಸಾಗುತ್ತಿವೆ. ಪ್ರಮುಖವಾಗಿ ಭೂಸ್ವಾಧೀನ ಕಾರ್ಯಕ್ಕೆ ಕೆಲ ಅಡೆತಡೆಗಳು ಎದುರಾಗಿದ್ದವು, ಕೊನೆಗೂ ಈಗ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಖುಷಿ ಸುದ್ದಿಯನ್ನು ಹಂಚಿಕೊಂಡಿದೆ.
ಗುಜರಾತ್, ಮಹಾರಾಷ್ಟ್ರ ಮತ್ತು ದಾದ್ರಾ ಮತ್ತು ಹವೇಲಿಯಾದ್ಯಂತ ಸಂಚರಿಸಲಿರುವ ಮೊದಲ ಬುಲೆಟ್ ರೈಲು ಎಂದು ಜನಪ್ರಿಯವಾಗಿರುವ ಮುಂಬೈ - ಅಹಮದಾಬಾದ್ ರೈಲು ಕಾರಿಡಾರ್‌ಗಾಗಿ ಶೇ100 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿರುವುದಾಗಿ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಕಳೆದ ಸೋಮವಾರ ಹೇಳಿದೆ.

ಜಪಾನ್‌ನಿಂದ 88,000 ಕೋಟಿ ರೂಪಾಯಿಗಳ ಮೃದು ಸಾಲದೊಂದಿಗೆ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಈ ಯೋಜನೆಗೆ ಹಣವನ್ನು ನೀಡಿದೆ. 1.10 ಲಕ್ಷ ಕೋಟಿ ವೆಚ್ಚದ ಯೋಜನೆಯು 2022 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು, ಆದರೆ ಭೂಸ್ವಾಧೀನದಲ್ಲಿ ಅಡಚಣೆಗಳನ್ನು ಎದುರಿಸಿದ್ದರಿಂದ ಈಗ 2026ರ ವೇಳೆಗೆ ಪೂರ್ಣಗೊಳಿಸುವ ಸಾಧ್ಯತೆಯಿದೆ.
NHSRCL ಪ್ರಕಟಣೆಯಲ್ಲಿ, ಯೋಜನೆಯ ಎಲ್ಲಾ ಸಿವಿಲ್ ಗುತ್ತಿಗೆಗಳನ್ನು ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ನೀಡಲಾಗಿದ್ದು, 120.4 ಕಿ.ಮೀ ಗರ್ಡರ್‌ಗಳನ್ನು ಪ್ರಾರಂಭಿಸಲಾಗಿದ್ದು, 271 ಕಿ.ಮೀ ಪಿಯರ್ ಕಾಸ್ಟಿಂಗ್ ಪೂರ್ಣಗೊಂಡಿದೆ. "ಜಪಾನಿನ ಶಿಂಕನ್‌ಸೆನ್‌ನಲ್ಲಿ ಬಳಸಿದಂತೆ MAHSR ಕಾರಿಡಾರ್ ಟ್ರ್ಯಾಕ್ ಸಿಸ್ಟಮ್‌ಗಾಗಿ ಮೊದಲ ಬಲವರ್ಧಿತ ಕಾಂಕ್ರೀಟ್ (RC) ಟ್ರ್ಯಾಕ್ ಬೆಡ್ ಹಾಕುವುದನ್ನು ಸೂರತ್ ಮತ್ತು ಆನಂದ್‌ನಲ್ಲಿ ಪ್ರಾರಂಭಿಸಲಾಗಿದೆ.

ಇನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿ, ಯೋಜನೆಗೆ ಅಗತ್ಯವಿರುವ ಸಂಪೂರ್ಣ 1389.49 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದೇ ಮೊದಲ ಬಾರಿಗೆ J- ಸ್ಲ್ಯಾಬ್ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಸಿಸ್ಟಮ್ ಅನ್ನು ಬಳಸಲಾಗುತ್ತಿದೆ ಎಂದು NHSRCL ತಿಳಿಸಿದೆ.
ಪರ್ವತ ಸುರಂಗ: ಗುಜರಾತ್‌ನ ವಲ್ಸಾದ್ ಜಿಲ್ಲೆಯ ಜರೋಲಿ ಗ್ರಾಮದ ಬಳಿ 350 ಮೀಟರ್ ಉದ್ದ ಮತ್ತು 12.6 ಮೀಟರ್ ವ್ಯಾಸದ ಮೊದಲ ಪರ್ವತ ಸುರಂಗವನ್ನು ಕೇವಲ 10 ತಿಂಗಳಲ್ಲಿ ಪೂರ್ಣಗೊಳಿಸುವುದರೊಂದಿಗೆ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಹಾಗೆಯೇ 70 ಮೀಟರ್ ವ್ಯಾಪಿಸಿರುವ ಮತ್ತು 673 MT ತೂಕವಿರುವ ಮೊದಲ ಉಕ್ಕಿನ ಸೇತುವೆ ಸೂರತ್‌ನಲ್ಲಿ NH 53 ಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

ಒಟ್ಟು 28 ರಲ್ಲಿ 16 ಸೇತುವೆಗಳು ತಯಾರಿಕೆಯ ವಿವಿಧ ಹಂತಗಳಲ್ಲಿವೆ. ಹಾಗೆಯೇ MAHSR ಕಾರಿಡಾರ್‌ನಲ್ಲಿ ಬರುವ 24 ಸೇತುವೆಗಳಲ್ಲಿ ಆರು ನದಿಗಳ ಮೇಲಿನ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ. ಉಳಿದಂತೆ ನರ್ಮದಾ, ತಪತಿ, ಮಾಹಿ ಮತ್ತು ಸಬರಮತಿ ನದಿಗಳ ಕಾಮಗಾರಿ ನಡೆಯುತ್ತಿದೆ. ರೈಲು ಮತ್ತು ಸಿವಿಲ್ ರಚನೆಗಳಿಂದ ಉಂಟಾಗುವ ಶಬ್ದವನ್ನು ತಗ್ಗಿಸಲು ವಾಯಡಕ್ಟ್‌ನ ಎರಡೂ ಬದಿಗಳಲ್ಲಿ ಶಬ್ದ ತಡೆಗಳನ್ನು ನಿರ್ಮಿಸಲಾಗುತ್ತಿದೆ ಎಂದು NHSRCL ಹೇಳಿದೆ.
ಸಾಗರದೊಳಗಿನ ಸುರಂಗ: ಮಹಾರಾಷ್ಟ್ರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ಶಿಲ್ಪಾಟಾ ನಡುವಿನ 21 ಕಿ.ಮೀ ಉದ್ದದ ಸುರಂಗದ ಭಾಗವಾಗಿರುವ ಭಾರತದ ಮೊದಲ 7 ಕಿ.ಮೀ ಸಾಗರದೊಳಗಿನ ರೈಲು ಸುರಂಗಕ್ಕಾಗಿ ಕೆಲಸ ಪ್ರಾರಂಭವಾಗಿದೆ. ಮುಂಬೈ ಎಚ್‌ಎಸ್‌ಆರ್ ನಿಲ್ದಾಣದ ನಿರ್ಮಾಣಕ್ಕಾಗಿ ಉತ್ಖನನ ಕಾರ್ಯಗಳು ಪ್ರಾರಂಭವಾಗಿದೆ ಎಂದು NHSRCL ಹೇಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








