ಭಾರತದ ಮೊದಲ ಬುಲೆಟ್ ರೈಲು ನಿಲ್ದಾಣ ಶೇ15 ರಷ್ಟು ಪೂರ್ಣ: ಇನ್ನು 3 ವರ್ಷ ಕಾದರೆ ಸಾಕು!

ಭಾರತದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿರುವ ಬುಲ್ಲೆಟ್ ಟ್ರೈನ್ ಕಾಮಗಾರಿ ಶರವೇಗವಾಗಿ ನಡೆಯುತ್ತಿದೆ. ರೈಲುಗಳು, ಅದರ ಮಾರ್ಗದಲ್ಲಿನ ಹಳಿಗಲು ಮಾತ್ರವಲ್ಲ ಬುಲ್ಲೆಟ್ ರೈಲಿನ ನಿಲ್ದಾಣಗಳು ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ವಿಶ್ವಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಭಾರತದ ಮೊದಲ ಬುಲ್ಲೆಟ್ ಟ್ರೈನ್ ನಿಲ್ದಾಣ ಶೇ 15 ರಷ್ಟು ಪೂರ್ಣಗೊಂಡಿದೆ.

ನಿರ್ಮಾಣಕ್ಕೆ ಹೆಚ್ಚಿನ ಸಮಯ ತೆಗೆದುಕೊಂಡರೂ ಸಧೃಡವಾಗಿ ನಿರ್ಮಾಣಗೊಳ್ಳುತ್ತಿರುವ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಿಲ್ದಾಣ (BKC)ವು ಭಾರತದ ಮೊದಲ ಬುಲೆಟ್ ರೈಲು ನಿಲ್ದಾಣವಾಗಿದೆ. ಇದು ಮುಂಬೈ - ಅಹಮದಾಬಾದ್ ಹೈಸ್ಪೀಡ್ ರೈಲಿಗೆ (HSR) ಪ್ರಮುಖ ನಿಲ್ದಾಣವಾಗಿದ್ದು, ಈ ನಿಲ್ದಾಣವು ಶೇ 15 ರಷ್ಟು ಸಿವಿಲ್ ಕೆಲಸವನ್ನು ಪೂರ್ಣಗೊಳಿಸಿದೆ ಎಂದು ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ (NHRCL) ಸೋಮವಾರ ಪ್ರಕಟಿಸಿದೆ.

indias-first-bullet-train-station-15-percent-finish-details

NHRCL 2027 ರ ವೇಳೆಗೆ ನಿಲ್ದಾಣದ ಒಟ್ಟಾರೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಅಲ್ಲಿಗೆ, ಇನ್ನೇನು 2023 ಮುಗಿಯುತ್ತಿದ್ದು 2024 ರಿಂದ ಗಣನೆಗೆ ತೆಗೆದುಕೊಂಡರೆ ಇನ್ನೂ 3 ವರ್ಷ ಕಾದರೆ ಸಂಪೂರ್ಣ ನಿರ್ಮಿತ ನಿಲ್ದಾಣವನ್ನು ನೋಡಬಹುದು. ಅಲ್ಲದೇ ಈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಿಲ್ದಾಣವು ಮಾರ್ಗದ ಏಕೈಕ ಭೂಗತ ನಿಲ್ದಾಣ(Underground station) ಆಗಿದೆ.

ಹೌದು, ಈ ಹೈ - ಸ್ಪೀಡ್ ರೈಲ್ ಕಾರಿಡಾರ್‌ನಲ್ಲಿ ಏಕೈಕ ಭೂಗತ ನಿಲ್ದಾಣವಾಗಲಿರುವ BKC ನಿಲ್ದಾಣವನ್ನು ನಿರ್ದಿಷ್ಟವಾಗಿ 16 - ಕೋಚ್ ಬುಲೆಟ್ ಟ್ರೈನ್‌ಗಳಿಗೆ ಅನುಗುಣವಾಗಿ ಆರು ಪ್ಲಾಟ್‌ಫಾರ್ಮ್‌ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ನಿಲ್ದಾಣಕ್ಕೆ ಅಗತ್ಯವಿರುವ ವ್ಯಾಪಕ ಉತ್ಖನನವು ಪ್ರಸ್ತುತ 32 ಮೀಟರ್ ಆಳವನ್ನು ತಲುಪಿದೆ ಎಂದು NHRCL ತಿಳಿಸಿದೆ.

indias-first-bullet-train-station-15-percent-finish-details

ಇನ್ನೂ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿರುವ NHRCL, ಪ್ರಸ್ತುತ ನಿರ್ಮಾಣ ಚಟುವಟಿಕೆಯು 4.8 ಹೆಕ್ಟೇರ್ ಭೂಮಿಯನ್ನು ವ್ಯಾಪಿಸಿದೆ. ನೆಲದ ಮಟ್ಟದಿಂದ ಸುಮಾರು 24 ಮೀಟರ್ ಆಳದಲ್ಲಿ ವೇದಿಕೆಯನ್ನು ಯೋಜಿಸಲಾಗಿದೆ. ನಿಲ್ದಾಣವು ಮೂರು ಮಹಡಿಗಳನ್ನು ಒಳಗೊಂಡಿರಲಿದ್ದು, ಇದರಲ್ಲಿ ವೇದಿಕೆ, ಕಾನ್ಕೋರ್ಸ್ ಮತ್ತು ಸೇವಾ ಮಹಡಿ ಇರಲಿದೆ ಎಂದು ತಿಳಿಸಿದೆ.

ಈ ನಿರ್ಧಿಷ್ಟ ಸಮಯದಲ್ಲಿ, ದಿನಕ್ಕೆ ಅಗತ್ಯವಿರುವ ಅಂದಾಜು ಗರಿಷ್ಠ ಕೆಲಸಗಾರರ ಸಂಖ್ಯೆ 6,000 ಕ್ಕೆ ತಲುಪಬಹುದು. ಆಳವಾದ ಉತ್ಖನನವು 17 ರಿಂದ 21 ಮೀಟರ್ ಆಳದಲ್ಲಿ 3,382 ಸೆಕೆಂಟ್ ಪೈಲ್‌ಗಳ ಸ್ಥಾಪನೆಯನ್ನು ಒಳಗೊಂಡಿರುತ್ತದೆ. ಉತ್ಖನನವು ಮುಂದುವರೆದಂತೆ ನಿರ್ದಿಷ್ಟ ಮಧ್ಯಂತರಗಳಲ್ಲಿ (2.5 ರಿಂದ 3.5 ಮೀಟರ್‌ಗಳವರೆಗೆ) ಈ ಸೆಕೆಂಟ್ ಪೈಲ್‌ಗಳನ್ನು ನೆಲದ ಆಂಕರ್‌ಗಳು ಮತ್ತು ವಾಲರ್‌ಗಳೊಂದಿಗೆ ಬಲಪಡಿಸಲಾಗುತ್ತದೆ.

indias-first-bullet-train-station-15-percent-finish-details

NHRCL ತನ್ನ ಹೇಳಿಕೆಯಲ್ಲಿ, ನಿರ್ಮಾಣ ಪ್ರಕ್ರಿಯೆಯ ಉದ್ದಕ್ಕೂ ಪರಿಸರ ಸುಸ್ಥಿರತೆಗೆ ಆದ್ಯತೆ ನೀಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಇಟ್ಟಿನಲ್ಲಿ ನಿಲ್ದಾಣದ ನಿರ್ಮಾಣದ ಜೊತೆಗೆ, ನಿಗಮವು ಮುಂಬೈನಲ್ಲಿ ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ ಎಂದು ಒತ್ತಿಹೇಳಿದೆ. ಧೂಳನ್ನು ತಗ್ಗಿಸಲು, ಮಂಜುಗಡ್ಡೆಗಳು, ಟಾರ್ಪಾಲಿನ್ ಮತ್ತು ಹಸಿರು ಬಲೆಗಳನ್ನು ಆಯಕಟ್ಟಿನ ರೀತಿಯಲ್ಲಿ ಇರಿಸಲಾಗಿದೆ.

ಮೇಲಾಗಿ, ವೀಲ್ ವಾಶ್ ಸೌಲಭ್ಯಗಳು ಮತ್ತು ಗಾಳಿಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸಾಧನಗಳನ್ನು ಸ್ಥಳದಲ್ಲಿ ಸ್ಥಾಪಿಸಲಾಗಿದೆ. ಕಾರ್ಮಿಕರಿಗೆ ಕಡ್ಡಾಯವಾದ ವೈಯಕ್ತಿಕ ರಕ್ಷಣಾ ಸಾಧನಗಳು ಸೇರಿದಂತೆ ಕಠಿಣ ಸುರಕ್ಷತಾ ಕ್ರಮಗಳ ಅನುಷ್ಠಾನ, ಸುರಕ್ಷಿತೆ ಮತ್ತು ಸ್ವಚ್ಛವಾದ ನಿರ್ಮಾಣ ಪರಿಸರಕ್ಕೆ ಕೊಡುಗೆ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

indias-first-bullet-train-station-15-percent-finish-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, November 29, 2023, 13:10 [IST]
English summary
Indias first bullet train station 15 percent finish details
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+