ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು

By Nagaraja

ಉದ್ದೇಶಿತ ಮುಂಬೈ ಮತ್ತು ಅಹಮದಾಬಾದ್ ನಡುವಣ ಭಾರತದ ಚೊಚ್ಚಲ ಬುಲೆಟ್ ರೈಲು, ಸಾಗರದಾಳದಲ್ಲಿ ಸಂಚರಿಸಲಿದೆ ಎಂಬುದನ್ನು ರೈಲ್ವೆ ಮೂಲಗಳು ಬಹಿರಂಗಪಡಿಸಿದೆ. ಇದು ಈ ಬಹುನಿರೀಕ್ಷಿತ ಹಾದಿಯಲ್ಲಿ ಸಂಚರಿಸುವ ಯಾತ್ರಿಕರಿಗೆ ರೋಚಕ ಅನುಭವ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

508 ಕೀ.ಮೀ. ದೂರದ ಬುಲೆಟ್ ರೈಲಿನ ಯೋಜನೆಯ ಪೈಕಿ ಸಮುದ್ರದ ಅಡಿಯಲ್ಲಿ 21 ಕೀ.ಮೀ. ಉದ್ದದ ವರೆಗೆ ಸುರಂಗ ಮಾರ್ಗ ನಿರ್ಮಿಸಲಾಗುವುದು ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು

ಆರಂಭದಲ್ಲಿ ಸಮುದ್ರದ ಮೇಲಿಂದ ಟ್ರ್ಯಾಕ್ ನಿರ್ಮಾಣದ ಬಗ್ಗೆ ಸೂಚಿಸಲಾಗಿತ್ತಾದರೂ ಇದು ಕಠಿಣವಾಗಿದ್ದರಿಂದ ಥಾಣೆ ಕೊಲ್ಲಿಯಲ್ಲಿ ವಿರಾರ್ ವರೆಗೆ ಸಮುದ್ರದಡಿಯಲ್ಲಿ ಹಳಿ ನಿರ್ಮಾಣಕ್ಕೆ ಜೆಐಸಿಎ ಸಮಗ್ರ ವಿವರಣೆ ಸಲ್ಲಿಸಿದೆ.

ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು

ದೇಶದ ಚೊಚ್ಚಲ ಬುಲೆಟ್ ರೈಲ್ವೆ ಯೋಜನೆಗೆ ಆದ್ಯತೆ ಕೊಟ್ಟಿರುವ ಭಾರತೀಯ ರೈಲ್ವೆ ಇದಕ್ಕಾಗಿ ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಮತ್ತು ವಿಶೇಷ ಉದ್ದೇಶದ ವಾಹನಕ್ಕೆ (ಎಸ್‌ಪಿವಿ) ಚಾಲನೆ ನೀಡಿದ್ದು, 500 ಕೋಟಿ ರು.ಗಳನ್ನು ಬಂಡವಾಳ ಹೂಡಲಿದೆ.

ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು

ಈ ನಡುವೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಅಹಮಾದಾಬಾದ್‌ (ಐಐಎಂ- ಎ) ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ದಿನಕ್ಕೆ ಕನಿಷ್ಠ 88,000ದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಿದ್ದಲ್ಲಿ ಮಾತ್ರ ಯೋಜನೆ ಯಶಸ್ವಿಯಾಗಲಿದೆ ಎಂಬುದು ತಿಳಿದು ಬಂದಿತ್ತು.

ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು

ಭಾರತದ ಮಹತ್ತರ ಬುಲೆಟ್ ರೈಲು ಯೋಜನೆಗೆ ವಿಶೇಷ ರಿಯಾಯಿತಿ ಸಾಲ ಒದಗಿಸಿದ್ದ ಜಪಾನ್ ಯೋಜನೆಯ ಶೇಕಡಾ 80ರಷ್ಟು ಅಂದರೆ 97,636 ಕೋಟಿ ರುಪಾಯಿಗಳ ಸಾಲವನ್ನು ನೀಡಲಿದೆ.

ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು

ಇದನ್ನು 50 ವರ್ಷಗಳ ಅವಧಿಯಲ್ಲಿ ಭಾರತ ಮರು ಪಾವತಿ ಮಾಡಬೇಕಾಗಿದೆ. ಬುಲೆಟ್ ರೈಲು ಯೋಜನೆ ಆರಂಭಗೊಂಡ 16ನೇ ವರ್ಷದಿಂದ ಸಾಲ ಮರುಪಾವತಿಯು ಶೇಕಡಾ 0.1ರಲ್ಲಿ ಆರಂಭಗೊಳ್ಳುತ್ತದೆ.

ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು

ವಾಣಿಜ್ಯ ನಗರಿ ಮುಂಬೈ ಮತ್ತು ಗುಜರಾತ್‌ನ ಅಹಮದಾಬಾದ್ ನಡುವಣ ಬುಲೆಟ್ ರೈಲು ಒಟ್ಟು 508 ಕೀ.ಮೀ.ಗಳ ದೂರವನ್ನು ಕ್ರಮಿಸಲಿದೆ.

ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು

ಬುಲೆಟ್ ರೈಲಿನೊಂದಿಗೆ ಮುಂಬೈ-ಅಹಮದಾಬಾದ್ ನಡುವಣ ಪ್ರಯಾಣ ಅವಧಿ ಏಳು ತಾಸಿನಿಂದ ಬರಿ ಎರಡು ಗಂಟೆಗಳಿಗೆ ಇಳಿಕೆಯಾಗಲಿದೆ.

ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು

ಅಲ್ಲದ ತಾಂತ್ರಿಕ ವಿಜ್ಞಾನ, ಪರಿಣಿತ ಕೆಲಸಗಾರರು, ತಯಾರಕ ಯಂತ್ರ ಮತ್ತು ನಿರ್ವಹಣೆಯನ್ನು ಜಪಾನ್ ಭಾರತದ ಜೊತೆ ಹಂಚಿಕೊಳ್ಳಲಿದೆ. ಐದು ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳುವ ಗುರಿಯನ್ನಿಟ್ಟುಕೊಳ್ಳಲಾಗಿದೆ.

ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು

ಪ್ರಸ್ತುತ ಯೋಜನೆಯು ಮುಂಬೈ ಹಾಗೂ ಅಹಮಾದಾಬಾದ್ ನಡುವಣ ಪ್ರಮುಖ ನಗರಗಳಾದ ಥಾಣೆ, ವಿರಾರ್, ಸೂರತ್, ಭರುಚ್ ಮತ್ತು ವಡೋದರಾ ಸೇರಿದಂತೆ 11 ನಿಲ್ದಾಣಗಳನ್ನು ಸಂಪರ್ಕಿಸಲಿದೆ.

ಇವನ್ನೂ ಓದಿ...

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

More from DriveSpark

Article Published On: Thursday, April 21, 2016, 10:00 [IST]
English summary
India's first bullet train to travel under the sea
Read more on ಭಾರತ india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+