ನಭೋಮಂಡಲಕ್ಕೆ ಚಿಮ್ಮಿದ ಇಸ್ರೋ ಪುನರ್ಬಳಕೆಯ ಉಡಾವಣಾ ವಾಹನ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಗದೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣಗೊಳಿಸಿದ ಪುನರ್ಬಳಕೆಯ ಉಡಾವಣಾ ವಾಹನದ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೇಡ್ ಇನ್ ಇಂಡಿಯಾ ಪುನರ್ಬಳಕೆಯ ಉಡಾವಣಾ ವಾಹನ - ತಾಂತ್ರಿಕ ಪ್ರದರ್ಶಕ (Reusable Launch Vehicle - Technology Demonstrator ) ಅಥವಾ ಸ್ಪೆಸ್ ಷಟಲ್ ವಾಹನ ನಭೋಮಂಡಲಕ್ಕೆ ಚಿಮ್ಮಿತ್ತು.

ವೆಚ್ಚ ಕಡಿತ
ಉಪಗ್ರಹಗಳ ಉಡಾವಣಾ ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿತ ಮಾಡುವುದು ಇಸ್ರೋ ಗುರಿಯಾಗಿದೆ. ಇದರಿಂದಾಗಿ ಉಪಗ್ರಹಗಳ ಉಡಾವಣೆ ವೆಚ್ಚವು 10 ಪಟ್ಟು ಕಡಿಮೆಯಾಗಲಿದೆ.

ಮರುಬಳಕೆ
ಬಾಹ್ಯಾಕಾಶ ಸ್ಪೇಸ್ ಷಟಲ್ ಮರುಬಳಕೆ ಮಾಡುವ ಯೋಜನೆಯು ಇಸ್ರೋದ ಸಾಧನೆಗೆ ಮಗದೊಂದು ಸುವರ್ಣ ಅಧ್ಯಾಯ ಬರೆಯಲಿದೆ.

600 ವಿಜ್ಞಾನಿಗಳ ಪ್ರಯತ್ನ
600 ವಿಜ್ಞಾನಿಗಳ ಸತತ ಪ್ರಯತ್ನದ ಫಲವಾಗಿ ಇಸ್ರೋ ಮರುಬಳಕೆಯ ಉಡಾವಣಾ ವಾಹನದ ಕನಸು ನನಸಾಗಿದೆ.

ರೆಕ್ಕೆಗಳನ್ನು ಹೊಂದಿದ ರಾಕೆಟ್
ಸಾಮಾನ್ಯಕ್ಕಿಂತಲೂ ವಿರುದ್ಧವಾಗಿ ರೆಕ್ಕೆಗಳನ್ನು ಹೊಂದಿರುವ ರಾಕೆಟ್ ಇದಾಗಿದ್ದು, ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಬಳಿಕ ವಿಮಾನದಂತೆ ಭೂಮಿಗೆ ವಾಪಾಸ್ ಬರುವ ಯೋಜನೆ ಹೊಂದಲಾಗಿದೆ.

ಹೈಪರ್ ಸೋನಿಕ್ ಫ್ಲೈಟ್ ಪ್ರಯೋಗ
ಈ ಮಹತ್ತರ ಯೋಜನೆಗೆ ಹೈಪರ್ ಸೋನಿಕ್ ಫ್ಲೈಟ್ ಪ್ರಯೋಗ ಎಂಬ ಹೆಸರನ್ನಿಡಲಾಗಿದೆ.

6.5 ಮೀಟರ್ ಉದ್ದದ ವಿಮಾನ ಶೈಲಿಯ ಆರ್‌ಎಲ್‌ವಿ-ಟಿವಿ ಉಡಾವಣಾ ವಾಹನವು 1.75 ಟನ್ ಗಳಷ್ಟು ಭಾರವನ್ನು ಹೊಂದಿದೆ.

ಸದ್ಯ ಪ್ರಾಥಮಿಕ ಹಂತದಲ್ಲಿರುವ ಯೋಜನೆಯು ಪೂರ್ಣ ಹಂತವನ್ನು ತಲುಪಲು 10ರಿಂದ 15 ವರ್ಷಗಳಷ್ಟೇ ಬೇಕಾಗುವುದು. ಹಾಗಾಗಿ ಈ ಯೋಜನೆಗೆ ಪ್ರಯೋಗ ಶಿಶು ಎಂಬ ವಿಶ್ಲೇಷಿಸಲಾಗುತ್ತಿದೆ.

ಆರ್‌ಎಲ್‌ವಿ-ಟಿಡಿ ಯೋಜನೆಗಾಗಿ ಸರಕಾರು ಒಟ್ಟು 95 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ.

ಶಬ್ದಕ್ಕಿಂತ ಐದು ಪಟ್ಟು ವೇಗದಲ್ಲಿ ಸಂಚರಿಸಲಿರುವ ಆರ್‌ಎಲ್ ವಿ-ಟಿಡಿ, ಮೊದಲ ಮಾದರಿಯು 70 ಕೀ.ಮೀ ಎತ್ತರಕ್ಕೆ ಸಂಚರಿಸಿ ಬಳಿಕ ಹಿಂತಿರುಗಲಾಗುವುದು.

ಪರೀಕ್ಷಾರ್ಥ ಹಂತದಲ್ಲಿರುವ ಆರ್‌ಎಲ್‌ವಿ-ಟಿಡಿ ಸಮುದ್ರದಿಂದ ಹಿಂಪಡೆಯುವುದು ಅಸಾಧ್ಯ. ಸಮುದ್ರಕ್ಕೆ ಅಪ್ಪಳಿಸಿದ ಬಳಿಕ ಈಜುವ ಸಾಮರ್ಥ್ಯ ಇಲ್ಲದಿರುವುದಿಂದ ಸಂಪೂರ್ಣವಾಗಿ ಒಡೆದು ಹೋಗಲಿದೆ.

ಈ ಪ್ರಯೋಗದ ಉದ್ದೇಶವೇನೆಂದರೆ ಬಂಗಾಳ ಕೊಲ್ಲಿಯ 500 ಕೀ.ಮೀ. ದೂರದಲ್ಲಿ ಸ್ಥಿತಗೊಂಡಿರುವ ವಾಸ್ತವ ರನ್ವೇಯಲ್ಲಿ ಲ್ಯಾಂಡ್ ಮಾಡುವುದಾಗಿದೆ.


Click it and Unblock the Notifications








