ಎಚ್‌ಎಎಲ್ ನಿರ್ಮಿತ ದೇಶದ ಮೊದಲ ತರಬೇತಿ ವಿಮಾನ ಯಶಸ್ವಿ ಹಾರಾಟ
ಬೆಂಗಳೂರು ತಳಹದಿಯ ಹಿಂದೂಸ್ತಾನ್ ಏರನೋನಾಟಿಕಲ್ಸ್ ಲಿಮಿಟೆಡ್ (ಎಚ್‌ಎಎಲ್) ನಿರ್ಮಿತ ಭಾರತದ ಮೊದಲ ತರಬೇತಿ ವಿಮಾನ ಎಚ್‌ಟಿಟಿ-40 ಯಶಸ್ವಿ ಹಾರಾಟವನ್ನು ನಡೆಸಿದೆ.
ಭಾರತದ ಮೊದಲ ಮೂಲಭೂತ ತರಬೇತಿ ವಿಮಾನವಾಗಿರುವ ಎಚ್‌ಟಿಟಿ-40 ಪೂರ್ಣರೂಪ 'ಹಿಂದೂಸ್ತಾನ್ ಟರ್ಬೊ ಟ್ರೈನರ್-40' ಎಂಬುದಾಗಿದೆ. ಇದನ್ನು 'ಮೇಕ್ ಇನ್ ಇಂಡಿಯಾ' ಯೋಜನೆಯ ಭಾಗವಾಗಿ ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಿಸಲಾಗಿದೆ.

ಭಾರತೀಯ ವಾಯುಪಡೆಯ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಿರುವ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ 70ರಷ್ಟು ತರಬೇತಿ ವಿಮಾನಗಳನ್ನು ವಿತರಣೆ ಮಾಡಲಿದೆ.

ಹಿಂದೂಸ್ತಾನ್ ಟರ್ಬೊ ಟ್ರೈನರ್ ನಿರ್ಮಾಣ ಯೋಜನೆಗಾಗಿ ಒಟ್ಟಾರೆಯಾಗಿ 363 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಾಗುವುದು.

ಪ್ರಸ್ತುತ ಭಾರತೀಯ ವಾಯುಪಡೆಯು ತರಬೇತಿಗಾಗಿ ಪೈಲಟಸ್ ಪಿಸಿ-7, ಎಂಕೆ-II, ಕಿರಣ್ ಎಂಕೆ-1/ಎ ಮತ್ತು ಹಾಕ್ ಎಂಕೆ-132 ವಿಮಾನಗಳನ್ನು ಬಳಕೆ ಮಾಡುತ್ತಿದೆ. ಈ ಪೈಕಿ ನೂತನ ಎಚ್‌ಟಿಟಿ-40, ಪೈಲಟಸ್ ಪಿಸಿ-7 ಎಂಕೆ-II ತರಹನೇ ಬೇಸಿಕ್ ಟ್ರೈನರ್ ವಿಮಾನವಾಗಿರಲಿದೆ. ಇನ್ನುಳಿದಂತೆ ಕಿರಣ್ ಎಂಕೆ-1/ಎ ಮತ್ತು ಹಾಕ್ ಎಂಕೆ-132 ವಿಮಾನಗಳನ್ನು ಎರಡು ಮತ್ತು ಮೂರನೇ ಹಂತದ ತರಬೇತಿಗಳಿಗಾಗಿ ಬಳಕೆ ಮಾಡಲಾಗುತ್ತದೆ.

ಭಾರತೀಯ ವಾಯುಸೇನೆಯು 183ರಷ್ಟು ಬೇಸಿಕ್ ಟ್ರೈನರ್ ವಿಮಾನಗಳ ಅವಶ್ಯಕತೆಯಿದೆ. ಈ ಪೈಕಿ 75ರಷ್ಟು ಸ್ವಿಜರ್ಲೆಂಡ್ ನಿರ್ಮಿತ ಪಿಸಿ-7 ಎಂಕೆII ಗಳಿದ್ದು ಪ್ರಸಕ್ತ ಸಾಲಿನಲ್ಲೇ 38ರಷ್ಟು ಪಿಸಿ-7 ಎಂಕೆII ವಿಮಾನಗಳು ಸೇರಲಿದೆ. ಇದರ ಹೊರತಾಗಿ 70ರಷ್ಟು ಸ್ವದೇಶಿ ನಿರ್ಮಿತ ಎಚ್‌ಟಿಟಿ-40 ವಾಯುಪಡೆಗೆ ಬಲ ತುಂಬಲಿದೆ.

ಬಲ್ಲ ಮೂಲಗಳ ಪ್ರಕಾರ, 2018ರಲ್ಲಿ ಎರಡು ಎಚ್‌ಟಿಟಿ-40 ವಿಮಾನಗಳನ್ನು ಹಸ್ತಾಂತರಿಸಲಿರುವ ಎಚ್‌ಎಎಲ್, 2020ರ ಬಳಿಕ ಪ್ರತಿ ಸಾಲಿನಲ್ಲೂ 20 ವಿಮಾನಗಳನ್ನು ವಿತರಿಸಲಿದೆ. ಭಾರತ ನಿರ್ಮಿತ ಎಚ್‌ಟಿಟಿ-40 ತರಬೇತಿ ವಿಮಾನಗಳನ್ನು ಮ್ಯಾನ್ಮರ್ ಮತ್ತು ಆಫ್ರಿಕಾ ದೇಶಗಳಿಗೂ ರಫ್ತು ಮಾಡುವ ಯೋಜನೆಯನ್ನು ಎಚ್ ಎಎಲ್ ಹೊಂದಿದೆ.

ಪಾತ್ರ
- ಬೇಸಿಕ್ ಫ್ಲೈಯಿಂಗ್ ಟ್ರೈನಿಂಗ್,
- ಏರೋಬೇಟಿಕ್ಸ್,
- ಇನ್ಸ್ಟ್ರುಮೆಂಟ್ ಫ್ಲೈಯಿಂಗ್,
- ನೇವಿಗೇಷನ್,
- ರಾತ್ರಿ ಹಾರಾಟ,
- ಕ್ಲೋಸ್ ಫೋರ್ಮಷನ್
- ಭಾರ: 2800 ಕೆ.ಜಿ
- ವೇಗ: ಗಂಟೆಗೆ 600 ಕೀ.ಮೀ.
- ವ್ಯಾಪ್ತಿ: 1000 ಕೀ.ಮೀ.
- ಅಶ್ವಶಕ್ತಿ: 850
- ಎಷ್ಟು ಮಂದಿಗೆ?: ಇಬ್ಬರು

ತಾಂತ್ರಿಕತೆ

ಅಂದ ಹಾಗೆ ನೂತನ ಎಚ್‌ಟಿಟಿ-40 ಸೇವೆಯಿಂದ ನಿವೃತ್ತಿಯಾಗಿರುವ ಹಳೆಯ ಎಚ್‌ಪಿಟಿ-32 ದೀಪಕ್ ವಿಮಾನದ ಸ್ಥಾನವನ್ನು ತುಂಬಲಿದೆ.


Click it and Unblock the Notifications








