ದೇಶದ ಮೊದಲ ವಂದೇ ಮೆಟ್ರೋಗೆ ಚಾಲನೆ: 30 ರೂಪಾಯಿ ಟಿಕೆಟ್ ಅಂತೆ.. ಎಸಿ ಕೋಚ್‌ನಲ್ಲಿ ಕೆಲಸಕ್ಕೆ ಹೋಗಬಹುದು!

ದೇಶದ ಮೊದಲ ವಂದೇ ಭಾರತ್ ಮೆಟ್ರೋ (Vande Bharat metro) ರೈಲಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಇಂದು (ಸೆಪ್ಟೆಂಬರ್ 16) ಹಸಿರು ನಿಶಾನೆ ತೋರಿಸಿದ್ದಾರೆ. ರೈಲ್ವೆ ಇಲಾಖೆ ಈ ನೂತನ ರೈಲಿಗೆ ನಮೋ ಭಾರತ್ ರಾಪಿಡ್ ರೈಲು (Namo Bharat Rapid Rail) ಎಂದು ಮರುನಾಮಕರಣ ಮಾಡಿದೆ. ನಾಳೆಯಿಂದ ಕಾರ್ಯಾಚರಣೆ ಶುರುವಾಗಲಿದೆ. ನಮೋ ಭಾರತ್ ರಾಪಿಡ್ ರೈಲು ಗುಜರಾತ್‌ನ ಭುಜ್ (Bhuj) ಮತ್ತು ಅಹಮದಾಬಾದ್ (Ahmedabad) ನಡುವೆ ಸಂಚರಿಸಲಿದ್ದು, 360 ಕಿಲೋಮೀಟರ್ ದೂರವನ್ನು ಕೇವಲ 6 ಗಂಟೆಗಳಲ್ಲಿ ಕ್ರಮಿಸಲಿದೆ.

ಹೊಸ ನಮೋ ಭಾರತ್ ರಾಪಿಡ್ ರೈಲು ಗಂಟೆಗೆ ಗರಿಷ್ಠ 110 ಕಿಲೋಮೀಟರ್ (Km) ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಭುಜ್ ಹಾಗೂ ಅಹಮದಾಬಾದ್ ಮಾರ್ಗ ಮಧ್ಯೆ ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಾಧ್ರಾ, ಚಂದ್ಲೋಡಿಯಾ ಹಾಗೂ ಸಬರಮತಿ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

India s First Namo Bharat Rapid Rail Flag Off By Pm Narendra Modi Low Ticket Price Expected

ಈ ರೈಲು ಅಹಮದಾಬಾದ್‌ನಿಂದ ಶನಿವಾರ ಹೊರತುಪಡಿಸಿ, ವಾರದ ಎಲ್ಲ ದಿನಗಳು ಕಾರ್ಯಾಚರಣೆ ನಡೆಸಲಿದೆ. ಸಂಜೆ 5:30ಕ್ಕೆ ಅಹಮದಾಬಾದ್‌ನಿಂದ ಹೊರಟು ರಾತ್ರಿ 11:10ಕ್ಕೆ ಭುಜ್ ನಿಲ್ದಾಣವನ್ನು ತಲುಪುತ್ತದೆ. ಭುಜ್‌ನಿಂದ ಭಾನುವಾರ ಹೊರತುಪಡಿಸಿ, ಪ್ರತಿದಿನ ಬೆಳಗ್ಗೆ 05.05ಕ್ಕೆ ಸಂಚಾರ ಆರಂಭಿಸಿ, ಬೆಳಗ್ಗೆ 10:50ಕ್ಕೆ ಅಹಮದಾಬಾದ್‌ಗೆ ಹೋಗುತ್ತದೆ.

ನೂತನ ನಮೋ ಭಾರತ್ ರಾಪಿಡ್ ರೈಲಿನಲ್ಲಿ 1,150 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. 2,058 ಜನರು ನಿಂತುಕೊಂಡು ತೆರಳಬಹುದು. 12 ಹವಾನಿಯಂತ್ರಿತ (ಎಸಿ) ಕೋಚ್‌ಗಳನ್ನು ಹೊಂದಿರುವ ಈ ರೈಲು, ಸಾಕಷ್ಟು ಉತ್ತಮ ಸೌಕರ್ಯಗಳನ್ನು ಹೊಂದಿದೆ. ಆಟೋಮೆಟಿಕ್ ಸ್ಲೈಡಿಂಗ್ ಡೋರ್‌ಗಳು, ಎಲ್‌ಇಡಿ ಲೈಟಿಂಗ್, ಸಿಸಿಟಿವಿ, ಫೋನ್ ಚಾರ್ಜಿಂಗ್ ಫ್ಯಾಸಿಲಿಟೀಸ್, ಆಟೋಮೆಟಿಕ್ ಸ್ಮೋಕ್/ಫೈರ್ ಡಿಟೆಕ್ಷನ್ ಸಿಸ್ಟಮ್, ಪನೊರೊಮಿಕ್ ವಿಂಡೋಗಳು ಹಾಗೂ ಅತ್ಯಾಧುನಿಕ ಶೌಚಾಲಯಗಳನ್ನು (Toilets) ಒಳಗೊಂಡಿದೆ.

India s First Namo Bharat Rapid Rail Flag Off By Pm Narendra Modi Low Ticket Price Expected

ನಮೋ ಭಾರತ್ ರಾಪಿಡ್ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದು ಕವಾಚ್‌ (KAVACH) ವ್ಯವಸ್ಥೆಯನ್ನು ಪಡೆದಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ನೂತನ ರೈಲಿನ ಕನಿಷ್ಠ ಟಿಕೆಟ್ ದರ ರೂ.30ರಿಂದ ಆರಂಭವಾಗಲಿದೆ. ಭುಜ್‌ನಿಂದ ಅಹಮದಾಬಾದ್‌ಗೆ ಟಿಕೆಟ್‌ವೊಂದಕ್ಕೆ ರೂ.430 ದರವನ್ನು ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ, ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ತಯಾರಿಕಾ ಘಟಕದಲ್ಲಿ ಸಿದ್ಧಪಡಿಸಲಾದ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅನಾವರಣಗೊಳಿಸಿದ್ದರು. ಈ ರೈಲು ಗಂಟೆಗೆ ಗರಿಷ್ಠ 160 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ. ಒಟ್ಟು 16 ಕೋಚ್‌ಗಳನ್ನು ಒಳಗೊಂಡಿದ್ದು, ರಾತ್ರಿ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದೆ.

ನೂತನ ವಂದೇ ಭಾರತ್ ಸ್ಲೀಪರ್ ರೈಲು 800 ಕಿಲೋಮೀಟರ್‌ನಿಂದ 1,200 ಕಿಲೋಮೀಟರ್‌ ದೂರದ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿದೆ. ಈ ರೈಲು ಜಿಎಫ್‌ಆರ್‌ಪಿ ಪ್ಯಾನೆಲ್‌ಗಳು, ಸ್ಪೆಷಲ್ ಬರ್ತ್‌ಗಳು, ಯುಎಸ್‌ಬಿ ಚಾರ್ಜಿಂಗ್, ರೀಡಿಂಗ್ ಲೈಟ್ ಹಾಗೂ ದೊಡ್ಡದಾಗಿರುವ ಲಗೇಜ್ ರೂಮ್ ಕೂಡ ಹೊಂದಿದೆ. ಜೊತೆಗೆ ಸ್ವಯಂ ಚಾಲಿತ ಬಾಗಿಲು (ಆಟೋಮೆಟಿಕ್ ಡೋರ್‌ಗಳು) ಮತ್ತು ಮೊದಲ ದರ್ಜೆ ಎಸಿ ಕೋಚ್‌ನಲ್ಲಿ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆಯನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, September 16, 2024, 18:15 [IST]
English summary
Indias first vande bharat metro flag off by pm narendra modi low ticket price expected
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+