ಉಪಯುಕ್ತ ಮಾಹಿತಿ; ಆಟೋ ಜಗತ್ತಿನ ಸ್ವಾರಸ್ಯಕರ ಅಂಶ
ನಮಗೆ ವಾಹನಗಳ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟಿವೆ. ಅದರ ಬಿಡಿ ಭಾಗಗಳಿಂದ ಹಿಡಿದು ಕಾರು ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆಯುವುದು ಕಾರು ಪ್ರಿಯರ ಹಂಬಲವಾಗಿರುತ್ತದೆ. ಕೆಲವರು ಹೊಸತನ ತಿಳಿದುಕೊಳ್ಳುವುದರಲ್ಲಿ ಮಗ್ನವಾಗಿದ್ದರೆ ಇನ್ನು ಕೆಲವರು ಅದನ್ನೇ ತಮ್ಮ ಛಲವನ್ನಾಗಿ ರೂಪಿಸಿಕೊಳ್ಳುತ್ತಾರೆ.
ಇದೇ ರೀತಿಯ ಆಟೋ ಜಗತ್ತಿನ ಸ್ವಾರಸ್ಯಕರ ಮಾಹಿತಿಯ ಖಣಜದೊಂದಿಗೆ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದೆ ಹಾಜರಾಗುತ್ತಿದ್ದು, ಉಪಯುಕ್ತ ಮಾಹಿತಿಯನ್ನು ನಿಮಗೆ ಹಸ್ತಾಂತರಿಸಲಿದೆ.
ಖಂಡಿತವಾಗಿಯೂ ಈ ಎಲ್ಲ ಉಪಯುಕ್ತ ಮಾಹಿತಿಗಳನ್ನು ಓದಿದ ಬಳಿಕ ವಾಹನ ಜಗತ್ತಿನಲ್ಲಿ ನಾವು ಕಲಿಯ ಬೇಕಾಗಿರುವ ವಿಚಾರಗಳು ಬೇಕಾದಷ್ಟಿವೆ ಎಂಬ ವಿಚಾರವನ್ನು ಮನಗಾನಲಿದ್ದೀರಿ. ಹಾಗಿದ್ದರೆ ಬನ್ನಿ ಈ ಕೂಡಲೇ ಡ್ರೈವ್ ಸ್ಪಾರ್ಕ್ ವಿನೂತನ ಲೇಖನವನ್ನು ಓದಲು ಆರಂಭಿಸಿರಿ...

ವಿಂಡ್‌ಶಿಲ್ಡ್ ವೈಪರ್
ನಮಗೆಲ್ಲರಿಗೂ ತಿಳಿದಿರುವ ಹಾಗೆ ಕಾರಿನ ವಿಂಡ್ ಶೀಲ್ಡ್ ಮಳೆಗಾಲದಲ್ಲಿ ತುಂಬಾ ಉಪಯುಕ್ತವೆನಿಸಿದೆ. ಆದರೆ ನಾವಿದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಂದ ಹಾಗೆ 1903ನೇ ಇಸವಿಯಲ್ಲಿ ವಿಂಡ್ ಶೀಲ್ಡ್ ಮೊದಲ ಬಾರಿಗೆ ಆವಿಷ್ಕಾರ ಮಾಡಲಾಗಿತ್ತು. ಮೇರಿ ಆಂಡ್ರೆಸನ್ (Mary Anderson) ಎಂಬ ಮಹಿಳೆ ಇದನ್ನು ಕಂಡು ಹುಡುಕಿರುವುದು ಇನ್ನು ವಿಶೇಷ.

ಮೊದಲ ವಾಣಿಜ್ಯ ಕಾರು ರೆಡಿಯೋ
ಮೊದಲ ವಾಣಿಜ್ಯ ಕಾರು ರೆಡಿಯೋವನ್ನು ಹೊರತಂದವರು ಗಾಲ್ವಿನ್ ಸಹೋದರರು (Galvin brothers). ಆದರ ಆರಂಭಿಕ ದರ 7,033 ರು.ಗಳಾಗಿವೆ. ಅಂದರೆ 1930ನೇ ಕಾಲಘಟ್ಟದ ಅತಿ ದುಬಾರಿ ವೈಶಿಷ್ಟ್ಯ ಇದಾಗಿತ್ತು.

ಏರ್ ಬ್ಯಾಗ್
ಕಾರಿನಲ್ಲಿ ಜೀವರಕ್ಷಕ ಎಂದೇ ಬಿಂಬಿತವಾಗಿರುವ ಏರ್ ಬ್ಯಾಗ್‌ಗಳು ಪ್ರತಿ 22 ಮಂದಿಯನ್ನು ರಕ್ಷಿಸುವ ಪೈಕಿ ಒಬ್ಬರನ್ನು ಸಾಯಿಸುತ್ತಿದೆ ಎಂಬ ಆಘಾತಕಾರಿ ಸುದ್ದಿಯನ್ನು ಸಂಶೋಧಕರು ಹೊರಗೆಡವಿದ್ದಾರೆ. ಯಾಕೆಂದರೆ ಇದು ಪ್ರತಿ ಸೆಕೆಂಡುಗೆ 322 ಕೀ.ಮೀ ವೇಗದಲ್ಲಿ ಬಂದಪ್ಪಳಿಸುತ್ತದೆ.

ಓವರ್ ಸ್ಪೀಡ್
ಓವರ್ ಸ್ಪೀಡ್‌ನಲ್ಲಿ ಕಾರು ಚಲಾಯಿಸಿರುವುದಕ್ಕೆ ಸ್ವೀಡನ್‌ನಲ್ಲಿ ಚಾಲಕನೊಬ್ಬನಿಗೆ 4,62,84,638 ರು. ದಂಡ ವಿಧಿಸಲಾಗಿತ್ತು. ಇದು ಓವರ್ ಸ್ಪೀಡ್‌ಗಾಗಿ ದಾಖಲಾದ ಅತಿ ದುಬಾರಿ ದಂಡವಾಗಿತ್ತು. ಈ ಸ್ವೀಡನ್ ಚಾಲಕ ಪ್ರತಿ ಗಂಟೆಗೆ 289 ಕೀ.ಮೀ. ವೇಗದಲ್ಲಿ ಮರ್ಸಿಡಿಸ್ ಎಸ್‌ಎಲ್‌ಎಸ್ ಎಎಂಜಿ ಸೂಪರ್ ಕಾರು ಚಲಾಯಿಸಿದ್ದರು.

ಸ್ಮಾರ್ಟ್ ಫಾರ್ ಟು ಮಿನಿ ಕಾರು
ನ್ಯಾನೋಗಿಂತಲೂ ಚಿಕ್ಕದಾದ ಸ್ಮಾರ್ಟ್ ಫಾರ್ ಟು ಮಿನಿ ಕಾರಿನಲ್ಲಿ 19 ಮಹಿಳೆಯರನ್ನು ತುಂಬಿಸಿಕೊಳ್ಳುವ ಮೂಲಕ ಗಿನ್ನೆಸ್ ದಾಖಲೆ ಸ್ಥಾಪಿಸಲಾಗಿದೆ. 2010ರಲ್ಲಿ 19 ಪಾಕಿಸ್ತಾನಿ ಹುಡುಗಿಯರು ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಕಾರು 2690 ಎಂಎಂ ಉದ್ದ ಹಾಗೂ 1560 ಎಂಎಂ ಅಗಲ ಹೊಂದಿದೆ.

ನಿಮ್ಮ ದಿನಚರಿಯಲ್ಲಿ ಪೆಟ್ರೋಲ್ ಅತಿ ದುಬಾರಿ ಅಂತ ಅಂದುಕೊಂಡಿದ್ದರೆ ತಪ್ಪಾದಿತ್ತು. ಯಾಕೆಂದರೆ ಅಮೆರಿಕದಲ್ಲಿ ಸಿಗುವ ಸ್ಟಾರ್‌ಬಕ್ಸ್ ಕಾಫಿ, ಪೆಟ್ರೋಲ್ ದರಗಿಂತಲೂ 8ರಿಂದ 10 ಪಟ್ಟು ಹೆಚ್ಚಾಗಿದೆ.

ಮತ್ತೊಂದು ಸ್ವಾರಸ್ಯಕರ ಮಾಹಿತಿ ಪ್ರಕಾರ, ಮಾನವ ಜನನ ಪ್ರಮಾಣಕ್ಕಿಂತಲೂ ಮೂರು ಪಟ್ಟು ವೇಗದಲ್ಲಿ ಕಾರುಗಳ ಸಂಖ್ಯೆ ವೃದ್ಧಿಯಾಗುತ್ತಿದೆ. 2012ರಲ್ಲಿ ಮಾತ್ರವಾಗಿ 60 ಮಿಲಿಯನ್ ಕಾರುಗಳು ಉತ್ಪಾದನೆಯಾಗಿದ್ದವು.

ಇನ್ನೊಂದು ಕುತೂಹಲಕಾರಿ ಮಾಹಿತಿ ಪ್ರಕಾರ, ಗಂಟೆಗೆ 60 ಕೀ.ಮೀ ವೇಗದಲ್ಲಿ ಚಲಿಸುವ ಒಂದು ಸಾಮಾನ್ಯ ಕಾರಿನಲ್ಲಿ ಶನಿ ಗ್ರಹದ ರಿಂಗ್ ಸುತ್ತಾಡಲು ಭರ್ತಿ 516 ದಿನಗಳು ಬೇಕಾಗುತ್ತದೆ.

ಇನ್ನು ಒಬ್ಬ ಸರಾಸರಿ ಮಾನವ, ತನ್ನ ಜೀವಮಾನದಲ್ಲಿ ಎರಡು ವಾರಗಳಷ್ಟು ಸಮಯವನ್ನು ಟ್ರಾಫಿಕ್ ಸಿಗ್ನಲ್‌ಗಾಗಿ ಕಳೆಯುತ್ತಿರುತ್ತಾನೆ.

ಜಗತ್ತಿನ ಅತಿ ಉದ್ದವಾದ ಟ್ರಾಫಿಕ್ ಜಾಮ್ 1980ರಲ್ಲಿ ಫ್ರಾನ್ಸ್‌ನ ಪ್ಯಾರಿಸ್ ಹಾಗೂ ಲೈನ್ ರಸ್ತೆ ಮಧ್ಯೆ ಸಂಭವಿಸಿತ್ತು. ಇದು 177 ಕೀ.ಮೀ. ದೂರದ ತನಕ ಹರಡಿತ್ತು.

ಮತ್ತೊಂದೆಡೆ ವಿಶ್ವದ ಸುದೀರ್ಘ ಟ್ರಾಫಿಕ್ ಜಾಮ್ ಕಂಡುಬಂದಿರುವುದು 2010ರಲ್ಲಿ ಚೀನಾದ ಬೀಜಿಂಗ್‌ನಲ್ಲಿ. 12 ದಿನಗಳ ಪರ್ಯಂತ ಅವಿಶ್ವಸನೀಯ ರೀತಿಯಲ್ಲಿ ಕಂಡುಬಂದಿದ್ದ ಈ ಟ್ರಾಫಿಕ್ ಜಾಮ್ 100 ಕೀ.ಮಿ. ತನಕ ಹರಡಿತ್ತು.

ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕವು ಅತಿ ಹೆಚ್ಚು ಕಾರು ಪ್ರಮಾಣವನ್ನು (per capita) ಹೊಂದಿದ್ದು, ಅಲ್ಲಿ ಪ್ರತಿಯೊಬ್ಬ ವ್ಯಕ್ತಿ ಒಂದೊಂದು ಕಾರನ್ನು ಹೊಂದಿರುತ್ತಾನೆ.

ಮೊದಲ ಸ್ಪೀಡಿಂಗ್ ಟಿಕೆಟನ್ನು 1902ನೇ ಇಸವಿಯಲ್ಲಿ ಜಾರಿಗೊಳಿಸಲಾಗಿತ್ತು. ಅಂದು ಬಲು ಅಪರೂಪವೆಂಬಂತೆ ಕಾರುಗಳು 60 ಕೀ.ಮೀ ವೇಗದ ಮಿತಿಯನ್ನು ದಾಟುತ್ತಿದ್ದವು.

ಜಗತ್ತಿನ ಮೊದಲ ಆಟೋ ಮೊಬೈಲ್ ವಿಮಾ ಸೌಲಭ್ಯವನ್ನು 1897ನೇ ಇಸವಿಯಲ್ಲಿ ಅಮೆರಿದ ವೆಸ್ಟ್‌ಫೀಲ್ಡ್‌ನಲ್ಲಿ ಮಾರಾಟ ಮಾಡಲಾಗಿತ್ತು.

1887ನೇ ಇಸವಿಯಲ್ಲಿ ಮಾರಾಟಕ್ಕಿರಿಸಿದ ಮೊದಲ ಕಾರು ಸಂಸ್ಥೆಯೆಂಬ ಹೆಗ್ಗಳಿಕೆಗೆ ಬೆಂಝ್ ಪಾತ್ರವಾಗಿದೆ.

1876ನೇ ಇಸವಿಯಲ್ಲಿ ಒಟ್ಟೊ ಹಾಗೂ ಲ್ಯಾಂಗನ್ (Otto and Langen) ಮೊದಲ ಯಶಸ್ವಿ ಫೋರ್ ಸ್ಟ್ರೋಕ್ ಎಂಜಿನ್ ತಯಾರಿಸಿದ್ದರು.

ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟದ ಕಾರು ಎಂಬ ಹೆಗ್ಗಳಿಕೆಯನ್ನು ಫೋಕ್ಸ್‌ವ್ಯಾಗನ್ ಬೀಟ್ಲ್ ಪಡೆದುಕೊಂಡಿದೆ. 2003ನೇ ಇಸವಿಯ ವರೆಗೆ 65 ವರ್ಷಗಳ ಅವಧಿಯಲ್ಲಿ 21,529,464 ಬೀಟ್ಲ್ ಕಾರುಗಳನ್ನು ಉತ್ಪಾದಿಸಲಾಗಿತ್ತು.


Click it and Unblock the Notifications








