ಕಾರುಗಳಿಗೂ ಹುಟ್ಟು-ಸಾವು, ಜೀವನ ಎಂಬುದು ಇದೆಯಾ?

Written By:

ಆಧುನಿಕ ವಾಹನ ಜಗತ್ತಿಗೆ ಸಂಬಂಧಪಟ್ಟ ಪ್ರತಿಯೊಂದು ಅಂಶಗಳನ್ನು ನೀವು ಗಮನಿಸುತ್ತಿರಬಹುದು. ಯಾವತ್ತಾದರೂ ಊಹಿಸಿ ನೋಡಿರುವೀರಾ ವಿಶ್ವದ ಮೊದಲ ಕಾರು ಯಾವುದು ? ಅದರ ಸೃಷ್ಟಿಕರ್ತರು ಯಾರು ? ಹೀಗೆ ಕಾರಿಗೆ ಸಂಬಂಧಪಟ್ಟ ಇತಿಹಾಸ ಪುಟಗಳನ್ನು ತೆರೆದು ನೋಡಿದಾಗ ಹಲವಾರು ಆಸಕ್ತಿದಾಯಕ ವಿಚಾರಗಳು ಬೆಳಕಿಗೆ ಬರುತ್ತದೆ.

Also Read: ವಾಹನ ಜಗತ್ತಿಗೆ ಸಂಬಂಧಿಸಿದ ಕುತೂಹಲಕಾರಿ ಅಂಶಗಳು

ಇಂತಹದೊಂದು ಪ್ರಯತ್ನವನ್ನು ನಿಮ್ಮ ನೆಚ್ಚಿನ ಡ್ರೈವ್ ಸ್ಪಾರ್ಕ್ ಮಾಡಲಿದೆ. ವಾಹನ ಲೋಕದಲ್ಲಿ ವಿಶೇಷವಾಗಿಯೂ ಅತಿ ಹೆಚ್ಚು ಬೇಡಿಕೆಯಿರುವ ಕಾರುಗಳಿಗೆ ಸಂಬಂಧಪಟ್ಟ ಕೆಲವೊಂದು ರೋಚಕ ವಿಷಯಗಳನ್ನು ನಾವಿಲ್ಲಿ ಬಹಿರಂಗಪಡಿಸಲಿದ್ದೇವೆ. ಇದಕ್ಕಾಗಿ ನಮ್ಮ ಚಿತ್ರಪುಟದತ್ತ ಮುಂದವರಿಯಿರಿ.

ವಿಶ್ವದ ಮೊದಲ ಕಾರು

ವಿಶ್ವದ ಮೊದಲ ಕಾರು

ಇದನ್ನು ತಿಳಿದುಕೊಳ್ಳಲು ನಾವು ಒಂದು ಶತಮಾನದಷ್ಟು ಹಿಂದಕ್ಕೆ ತೆರಳಬೇಕಾಗಿದೆ. 1886ನೇ ಇಸವಿಯಲ್ಲಿ ಮರ್ಸಿಡಿಸ್ ಬೆಂಝ್ ಸೂತ್ರಧಾರಿ ಕಾರ್ಲ್ ಬೆಂಝ್ ಪೆಟ್ರೋಲ್ ನಲ್ಲಿ ಚಲಿಸುವ ವಿಶ್ವದ ಮೊದಲ ಮೋಟಾರ್ ವ್ಯಾಗನ್‌ಗಾಗಿ ಪೇಟೆಂಟು ಪಡೆದುಕೊಂಡಿದ್ದರು. ಆಧುನಿಕ ಕಾರುಗಳ ಜನನ ಇಲ್ಲಿಂದಲೇ ಆಗಿದೆ ಎಂಬದಕ್ಕೆ ದಾಖಲೆಗಳಿವೆ. ಇದು ಮೊದಲ ನಿರ್ಮಾಣ ಮಾದರಿ ಕೂಡಾ ಹೌದು. ಇದಕ್ಕೂ ಮೊದಲು 1807ನೇ ಇಸವಿಯಲ್ಲೇ ಹೈಡ್ರೋಜನ್ ನಿಯಂತ್ರಿತ ಮೊದಲ ಆಂತರಿಕ ದಹನಕಾರಿ ಎಂಜಿನ್ ಅನ್ನು ಫ್ರಾನ್ಸಿಸ್ ಐಸಾಕ್ ಡೆ ರಿವಾಝ್ ಕಂಡು ಹುಡುಕಿದ್ದರು.

ಮೊದಲ ಸ್ಟೀರಿಂಗ್ ವೀಲ್

ಮೊದಲ ಸ್ಟೀರಿಂಗ್ ವೀಲ್

ಕಾರುಗಳಿಗೆ ಸ್ಟೀರಿಂಗ್ ವೀಲ್ ಇಲ್ಲದೆ ಚಲಿಸುವುದು ಹೇಗೆ ಎಂಬ ಗೊಂದಲ ನಿಮ್ಮನ್ನು ಕಾಡುತ್ತಿರಬಹುದು. ನಿಮ್ಮ ಮಾಹಿತಿಗಾಗಿ ಆರಂಭಿಕ ಕಾಲಘಟ್ಟದಲ್ಲಿ ಉದ್ದನೆಯ ಹಿಡಿ (tiller) ಮೂಲಕ ವಾಹನವನ್ನು ನಿಯಂತ್ರಿಸಲಾಗುತ್ತಿತ್ತು. ಅಂದ ಹಾಗೆ ಮೊದಲ ಸ್ಟೀರಿಂಗ್ ವೀಲ್ ವಾಹನವನ್ನು 1894ನೇ ಇಸವಿಯಲ್ಲಿ ಅಲ್ಫ್ರೆಡ್ ವ್ಯಾಕೆರನ್ ಕಂಡು ಹುಡುಕಿದರು. 4 ಅಶ್ವಶಕ್ತಿಯ ಈ ಪ್ಯಾನ್ ಹಾರ್ಡ್ (panhard) ಮಾದರಿಯನ್ನು ಪ್ಯಾರಿಸ್-ರುಯೇನ್ ರೇಸ್ ನಲ್ಲಿ ಅವರು ಚಾಲನೆ ಮಾಡಿದ್ದರು.

ಮೊದಲ ಡೀಸೆಲ್ ಕಾರು

ಮೊದಲ ಡೀಸೆಲ್ ಕಾರು

ಡೀಸೆಲ್ ಕಾರುಗಳಿಗೆ ಮೈಲೇಜ್ ಜಾಸ್ತಿ ಪರಿಸರಕ್ಕೆ ಅಷ್ಟೇ ಅಪಾಯಕಾರಿ ಕೂಡಾ ಹೌದು. ಅಂದ ಹಾಗೆ ಮೊದಲ ಡೀಸೆಲ್ ಕಾರು ನಿರ್ಮಿಸಿದ ಕೀರ್ತಿಯೂ ಮರ್ಸಿಡಿಸ್‌ಗೆ ಸಲ್ಲುತ್ತದೆ. 1936ರಲ್ಲಿ ಮೊದಲ ಬಾರಿಗೆ ಪ್ರದರ್ಶನಕ್ಕಿರಿಸಲಾಗ ಮರ್ಸಿಡಿಸ್ 260ಡಿ ಕಾರು 2545 ಸಿಸಿ ಓವರ್ ಹೆಡ್ ವಾಲ್ವ್ 4 ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಟ್ಟಿತ್ತು. ಇದನ್ನು 1940ನೇ ಇಸವಿಯ ವರೆಗೆ ಉತ್ಪಾದಿಸಲಾಗಿತ್ತು.

ಮೊದಲ ಕಾರು ಎಸಿ

ಮೊದಲ ಕಾರು ಎಸಿ

ಸುಖಮಯ ಸಂಚಾರಕ್ಕಾಗಿ ಆಧುನಿಕ ಕಾರುಗಳಲ್ಲಿ ಹವಾನಿಯಂತ್ರಣ ಪಾತ್ರವೂ ಬಹು ಮುಖ್ಯ ಘಟಕವಾಗಿ ಪರಿಣಮಿಸಿದೆ. ಇದರ ಇತಿಹಾಸವನ್ನು ಗಮನಿಸಿದಾಗ 1939ರಲ್ಲಿ ಮೊದಲ ಬಾರಿಗೆ ಪ್ಯಾಕರ್ಡ್ ಮೋಟಾರ್ ಕಾರು ಸಂಸ್ಥೆಯು ಕಾರುಗಳಲ್ಲಿ ಎಸಿ ಬಳಕೆ ಮಾಡಿದ್ದವು. ಈ ಕಾರು ಎಸಿಗಳನ್ನು ಬಿಷಪ್ ಮತ್ತು ಬ್ಯಾಬ್ ಕಾಕ್ ಸಂಸ್ಥೆಯು ನಿರ್ಮಿಸಿತ್ತು.

ಆಟೋಮ್ಯಾಟಿಕ್ ಗೇರ್ ಬಾಕ್ಸ್

ಆಟೋಮ್ಯಾಟಿಕ್ ಗೇರ್ ಬಾಕ್ಸ್

ಸಂಪೂರ್ಣ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದ ಮೊದಲ ಕಾರು ಯಾವುದು? ಉತ್ತರ ಸಿಕ್ಕಿಲ್ಲವೇ? ಇಲ್ಲಿದೆ ನೋಡಿ. 1939ನೇ ಇಸವಿಯಲ್ಲಿ ಜನರಲ್ ಮೋಟಾರ್ಸ್ ಬ್ರಾಂಡ್ ಗಳಾದ ಕ್ಯಾಡಿಲಿಕ್ ಮತ್ತು ಓಲ್ಡ್ಸ್ ಮೊಬೈಲ್ ಗಳಲ್ಲಿ ಮೊದಲ ಬಾರಿಗೆ ಹೈಡ್ರಾಮ್ಯಾಟಿಕ್ ಗಳೆಂಬ ಸಂಪೂರ್ಣ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಬಳಕೆ ಮಾಡಲಾಗಿತ್ತು.

ತ್ರಿ ಪಾಯಿಂಟ್ ಸೀಟು ಬೆಲ್ಟ್

ತ್ರಿ ಪಾಯಿಂಟ್ ಸೀಟು ಬೆಲ್ಟ್

ಆಧುನಿಕ ಕಾರುಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ತ್ರಿ ಪಾಯಿಂಟ್ ಸೀಟು ಬೆಲ್ಟ್ ಗಳನ್ನು ಮೊದಲ ಬಾರಿಗೆ ಯಾವಾಗ ಆರಂಭಿಸಲಾಯಿತು? ಇದಕ್ಕುತ್ತರ ಕಂಡು ಹುಡುಕುವುದು ಹೆಚ್ಚು ಕಷ್ಟದ ಕೆಲಸವಲ್ಲ. ಏಕೆಂದರೆ ವಾಹನಗಳ ಭದ್ರತೆಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಸ್ವೀಡನ್‌ನ ವೋಲ್ವೋ ಸಂಸ್ಥೆಯು ಮೊದಲ ಬಾರಿಗೆ 1959ರಲ್ಲಿ ಪಿವಿ544 ಮಾದರಿಯಲ್ಲಿ ತ್ರಿ ಪಾಯಿಂಟ್ ಸೀಟು ಬೆಲ್ಟ್ ಗಳನ್ನು ಆಳವಡಿಸಿತ್ತು. ಇದಕ್ಕೂ ಮೊದಲು 2, 4,5 ಹಾಗೂ 6 ಪಾಯಿಂಟ್ ಸೀಟು ಬೆಲ್ಟ್ ಗಳು ಬಳಕೆಯಲ್ಲಿದ್ದವು.

ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ

ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ

1955ರಲ್ಲಿ ಎಸ್‌ಎಲ್ ಗುಲ್ ವಿಂಗ್ ಕಾರಿನಲ್ಲಿ ಮೊದಲ ಬಾರಿಗೆ ಫೋರ್ ಸ್ಟ್ರೋಕ್ ಪೆಟ್ರೋಲ್ ಎಂಜಿನ್ ಜೊತೆ ಡೈರಕ್ಟ್ ಫ್ಯೂಯಲ್ ಇಂಜೆಕ್ಷನ್ ವ್ಯವಸ್ಥೆಯನ್ನು ಆಳವಡಿಸಲಾಗಿತ್ತು. ಇದರಲ್ಲಿ ಬಾಷ್ ಫ್ಯೂಯಲ್ ಇಂಜೆಕ್ಟರ್ ಗಳನ್ನು ಬಳಕೆ ಮಾಡಲಾಗಿತ್ತು.

ಡಿಸ್ಕ್ ಬ್ರೇಕ್

ಡಿಸ್ಕ್ ಬ್ರೇಕ್

ಡಿಸ್ಕ್ ಬ್ರೇಕ್ ಆಳವಡಿಸಿದ ಮೊದಲ ಕಾರು ಯಾವುದು? 1955ರಲ್ಲಿ ಸಿಟ್ರೊಯೆನ್ ಡಿಎಸ್ ಕಾರಿಗೆ ಪ್ರಪ್ರಥಮ ಬಾರಿಗೆ ಡಿಸ್ಕ್ ಬ್ರೇಕ್ ಆಳವಡಿಸಲಾಗಿತ್ತು. ಅನೇಕ ಭವಿಷ್ಯತ್ತಿನ ವೈಶಿಷ್ಟ್ಯಗಳೊಂದಿಗೆ ಸಿಟ್ರೊಯನ್ ಆಗಮನವಾಗಿರುವುದರಿಂದ ಹೆಚ್ಚು ಜನಪ್ರಿಯತೆ ಸಾಧಿಸಿತ್ತು.

ಆ್ಯಂಟಿ ಬ್ರೇಕಿಂಗ್ ಸಿಸ್ಟಂ

ಆ್ಯಂಟಿ ಬ್ರೇಕಿಂಗ್ ಸಿಸ್ಟಂ

ಆ್ಯಂಟಿ ಬ್ರೇಕಿಂಗ್ ಸಿಸ್ಟಂ ಭದ್ರತಾ ವ್ಯವಸ್ಥೆಯನ್ನು ಪಡೆದ ಮೊದಲ ಕಾರು ಯಾವುದು? ನಿಮ್ಮ ಗಮನಕ್ಕೆ, ಭಾರತದಲ್ಲಿ ಈಗಷ್ಟೇ ಎಬಿಎಸ್ ತಂತ್ರಜ್ಞಾನವು ಜನಪ್ರಿಯತೆ ಸಾಧಿಸುತ್ತಿದೆ. ಇನ್ನೊಂದೆಡೆ ಬಹುತೇಕ ರಾಷ್ಟ್ರಗಳಲ್ಲಿ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಬಳಕೆ ಮಾಡಲಾಗುತ್ತದೆ. ಅಂದ ಹಾಗೆ 1966ನೇ ಇಸವಿಯಲ್ಲಿ ಬ್ರಿಟನ್ ಸಂಸ್ಥೆ ಜೆನ್ಸನ್ ಮೋಟಾರ್ಸ್ ತನ್ನ ಜೆನ್ಸನ್ ಎಫ್‌ಎಫ್ ಮಾದರಿಯಲ್ಲಿ ಮೊದಲ ಬಾರಿಗೆ ಎಬಿಎಸ್ ತಂತ್ರಜ್ಞಾನ ಆಳವಡಿಸಿತ್ತು. ಅಲ್ಲದೆ 1966ರಿಂದ 1971ರ ಕಾಲಘಟ್ಟದಲ್ಲಿ 360ರಷ್ಟು ಇಂತಹ ಕಾರುಗಳು ರಂಗ ಪ್ರವೇಶ ಮಾಡಿದ್ದವು.

ಪ್ರಯಾಣಿಕ ಏರ್ ಬ್ಯಾಗ್

ಪ್ರಯಾಣಿಕ ಏರ್ ಬ್ಯಾಗ್

ಏರ್ ಬ್ಯಾಗ್ ಅಥವಾ ಗಾಳಿಚೀಲಗಳ ಅಧ್ಯಯನ ಹಿಂದಿನಿಂದಲೇ ಜಾರಿಯಲ್ಲಿದ್ದರೂ 1973ನೇ ಇಸವಿಯಲ್ಲಷ್ಟೇ ಮೊದಲ ಬಾರಿಗೆ ಪ್ರಯಾಣಿಕ ಕಾರಿನಲ್ಲಿ ಆಳವಡಿಸಲಾಗಿತ್ತು. ಅಮೆರಿಕದ ಜನರಲ್ ಮೋಟಾರ್ಸ್‌ನ ಓಲ್ಡ್ಸ್ ಮೊಬೈಲ್ ಟೊರ್ನಡೊ ಕಾರಿನಲ್ಲಿ ಮೊದಲ ಬಾರಿಗೆ ಏರ್ ಬ್ಯಾಗ್ ಬಳಕೆ ಮಾಡಲಾಗಿತ್ತು.

ಲೈಟ್ ಬಲ್ಬ್ ಇಲ್ಲದ ಕಾರು

ಲೈಟ್ ಬಲ್ಬ್ ಇಲ್ಲದ ಕಾರು

ಹಳೆಯ ಕಾರಿನಲ್ಲಿ ಸಾಂಪ್ರದಾಯಿಕ ಲೈಟ್ ಬಲ್ಬ್ ಗಳನ್ನು ಬಳಕೆ ಮಾಡಲಾಗಿತ್ತು. ಆದರೆ ಇಡೀ ಜಗತ್ತೇ ಡಿಜಿಟಲ್ ಯುಗಕ್ಕೆ ಕಾಲಿರಿಸಿರುವುದರೊಂದಿಗೆ ಹಳೆಯ ತಂತ್ರಜ್ಞಾನಗಳು ಮೂಲೆ ಗುಂಪಾಗಿದೆ. ಅಂದ ಹಾಗೆ 2014ರ ಮರ್ಸಿಡಿಸ್ ಎಸ್ ಕ್ಲಾಸ್ ನಲ್ಲಿ ಮೊದಲ ಬಾರಿಗೆ ಸಾಂಪ್ರದಾಯಿಕ ಬೆಳಕಿನ ಬದಲು 500ರಷ್ಟು ಎಲ್‌ಇಡಿ ಹೆಡ್ ಲೈಟ್ ಹಾಗೂ ಹಿಂಬದಿಯಲ್ಲಿ ಟೈಲ್ ಲೈಟ್ ಬಳಕೆ ಮಾಡಲಾಗಿತ್ತು.

ಇವನ್ನೂ ಓದಿ

ಹೆಲ್ಮೆಟ್ ಸತ್ಯಾಸತ್ಯತೆ; ಇತಿಹಾಸದತ್ತ ಒಂದು ಪಯಣ

English summary
First cars in the world to get important technologies
Story first published: Thursday, January 14, 2016, 10:03 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more