ಕಾರ್ಲ್ ಬೆಂಝ್ - 'ದಿ ಗಾಡ್' ಆಫ್ ಆಟೋಮೊಬೈಲ್ಸ್

By Nagaraja

ಕಾರ್ಲ್ ಬೆಂಝ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಲೇಖನ

1844 ನವೆಂಬರ್ 25ರಂದು ಜರ್ಮನಿಯ ಬೇಡನ್ ನಲ್ಲಿ ಓರ್ವ ಎಂಜಿನ್ ಚಾಲಕನ ಮಗನಾಗಿ ಜನಿಸಿದ ಕಾರ್ಲ್ ಬೆಂಝ್ ಅವರಿಗೆ ಕಡು ಬಡತನದ ನಡುವೆಯೂ ಅವರ ತಾಯಿ ಅತ್ಯುತ್ತಮ ತಾಂತ್ರಿಕ ವಿದ್ಯಾಭ್ಯಾಸ ಕೊಡಿಸಿದ್ದರು. ಚಿಕ್ಕವನಿಂದಲೇ ಓದುವಿಕೆಯಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿದ್ದ ಕಾರ್ಲ್ ಬೆಂಝ್ 1864ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಪದವಿಯನ್ನು ಪಡೆದಿದ್ದರು.

Also Read: ಹೆಲ್ಮೆಟ್ ಸತ್ಯಾಸತ್ಯತೆ ಇತಿಹಾಸದತ್ತ ಒಂದು ಪಯಣ

1871ರಲ್ಲಿ ತನ್ನ 27ರ ಹರೆಯದಲ್ಲೇ ಸ್ನೇಹಿತ ಆಗಸ್ಟ್ ರಿಟ್ಟರ್ ಜೊತೆಗೂಡಿ ಮೆಕ್ಯಾನಿಕಲ್ ವರ್ಕ್ ಶಾಪ್ ವೊಂದರಲ್ಲಿ ತನ್ನ ವೃತ್ತಿಯನ್ನು ಆರಂಭಿಸಿದರು. ಆರಂಭದಲ್ಲಿ ಟು ಸ್ಟ್ರೋಕ್ ಎಂಜಿನ್‌ನಲ್ಲಿ ಕೆಲಸ ಪ್ರಾರಂಭಿಸಿದ ಅವರು ನಾವೀನ್ಯ ತಂತ್ರಜ್ಞಾನ ಕಂಡುಹಿಡಿಯುವುದರಲ್ಲಿ ಸದಾ ಉತ್ಸುಕರಾಗಿದ್ದರು.

ಕಾರ್ಲ್ ಬೆಂಝ್ - 'ದಿ ಗಾಡ್' ಆಫ್ ಆಟೋಮೊಬೈಲ್ಸ್

ಸತತ ಪ್ರಯತ್ನವೇ ಸಾಧನೆಯ ರಹಸ್ಯ ಎಂಬಂತೆ 1879ನೇ ಇಸವಿಯಲ್ಲಿ ಒಳವುರಿಕೆಯ ಬಿಣಿಗೆ ಅಥವಾ ಆಂತರಿಕ ದಹನಕಾರಿ ಎಂಜಿನ್ ಅವಿಷ್ಕರಿಸಿದ ಅವರು ಇದಕ್ಕಾಗಿ ಪೇಟೆಂಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕಾರ್ಲ್ ಬೆಂಝ್ - 'ದಿ ಗಾಡ್' ಆಫ್ ಆಟೋಮೊಬೈಲ್ಸ್

ಸತತವಾದ ಅವಿಷ್ಕಾರಗಳು ಹಾಗೂ ಕಠಿಣ ಪ್ರಯತ್ನವು ಕಾರ್ಲ್ ಬೆಂಝ್ ಅವರನ್ನು ಆಟೋಮೊಬೈಲ್ ಕ್ಷೇತ್ರದಲ್ಲಿ ನಿಜವಾದ ಪ್ರತಿಭೆಯನ್ನಾಗಿಸಿತ್ತು. ಅಲ್ಲದೆ ತಮ್ಮ ಕಾಲಘಟ್ಟದಲ್ಲಿ ವೇಗ ನಿಯಂತ್ರಣ ವ್ಯವಸ್ಥೆ, ಸ್ಪಾರ್ಕ್ ಪ್ಲಸ್, ಕಾರ್ಬ್ಯುರೇಟರ್, ಕ್ಲಚ್, ಗೇರ್ ಶಿಫ್ಟ್, ವಾಟರ್ ರೇಡಿಂಗ್, ಬ್ಯಾಟರಿ ಬಳಸಿ ದಹನಕಾರಿ ಇತ್ಯಾದಿ ತಂತ್ರಜ್ಞಾನಗಳಿಗಾಗಿ ಪೇಟೆಂಟು ಗಿಟ್ಟಿಸಿಕೊಂಡಿದ್ದರು.

ಜಗತ್ತಿನ ಮೊತ್ತ ಮೊದಲ ಆಟೋಮೊಬೈಲ್

ಜಗತ್ತಿನ ಮೊತ್ತ ಮೊದಲ ಆಟೋಮೊಬೈಲ್

1886ರಲ್ಲಿ ಜಗತ್ತಿನ ಮೊತ್ತ ಮೊದಲ ಆಟೋಮೊಬೈಲ್ ಬೆಂಝ್ ಪೇಟೆಂಟ್ ಮೋಟಾರ್ ವ್ಯಾಗನ್ (ಮೋಟಾರು ಕಾರು) ನಿರ್ಮಿಸಿದ ಕೀರ್ತಿಯೂ ಬೆಂಝ್ ಅವರನ್ನು ಸೇರುತ್ತದೆ. ಇದೊಂದು ಒಳವುರಿಕೆಯ ಬಿಣಿಗೆ ನಿಯಂತ್ರಿತ ವಾಹನವಾಗಿದೆ. 1885ರಲ್ಲಿ ಬೆಂಝ್ ಪೇಟೆಂಟ್ ಮೋಟಾರ್ ವ್ಯಾಗನ್ ನಿರ್ಮಾಣಕ್ಕೆ 1000 ಅಮೆರಿಕನ್ ಡಾಲರ್ ವೆಚ್ಚ ತಗುಲಿತ್ತು.

ಬೆಂಝ್ ಪೇಟೆಂಟ್ ಮೋಟಾರ್ ವ್ಯಾಗನ್ - ವಿಶಿಷ್ಟತೆಗಳು

ಬೆಂಝ್ ಪೇಟೆಂಟ್ ಮೋಟಾರ್ ವ್ಯಾಗನ್ - ವಿಶಿಷ್ಟತೆಗಳು

  • ಮೂರು ಚಕ್ರಗಳು,
  • ಟ್ಯೂಬುಲರ್ ಸ್ಟೀಲ್ ಫ್ರೇಮ್,
  • ರಾಕ್ ಮತ್ತು ಪಿನಿಯನ್ ಸ್ಟೀರಿಂಗ್,
  • ಮುಂಭಾಗದ ಚಕ್ರದಲ್ಲಿ ವೀಲ್ ಚೈನ್,
  • ಎಲೆಕ್ಟ್ರಿಕ್ ಇಗ್ನಿಷನ್,
  • ಡಿಫರೆನ್ಷಿಯಲ್ ರಿಯರ್ ಎಂಡ್ ಗೇರ್,
  • ಬೆಂಝ್ ಪೇಟೆಂಟ್ ಮೋಟಾರ್ ವ್ಯಾಗನ್ - ವಿಶಿಷ್ಟತೆಗಳು

    ಬೆಂಝ್ ಪೇಟೆಂಟ್ ಮೋಟಾರ್ ವ್ಯಾಗನ್ - ವಿಶಿಷ್ಟತೆಗಳು

    • ವಾಟರ್ ಕೂಲ್ಡ್ ಆಂತರಿಕ ದಹನಕಾರಿ ಎಂಜಿನ್,
    • ಪೆಟ್ರೋಲ್ ಫೋರ್ ಸ್ಟ್ರೋಕ್ ಎಂಜಿನ್,
    • ಸಿಂಗಲ್ ಸಿಲಿಂಡರ್, ಬೋರ್ 116 ಎಂಎಂ, ಸ್ಟ್ರೋಕ್ 160 ಎಂಎಂ,
    • ಪೇಟೆಂಟು ಮಾದರಿ: 958 ಸಿಸಿ, 0.8 ಎಚ್‌ಪಿ, 600 ಡಬ್ಲ್ಯು,
    • ವೇಗ ಗಂಟೆಗೆ 16 ಕೀ.ಮೀ.,
    • ಬೆರ್ಥಾ ಬೆಂಝ್

      ಬೆರ್ಥಾ ಬೆಂಝ್

      ಕಾರ್ಲ್ ಬೆಂಝ್ ಜೀವನ ಯಾತ್ರೆಯಲ್ಲಿ ಪತ್ನಿ ಬೆರ್ಥಾ ಬೆಂಝ್ ಪಾತ್ರವೂ ಮಹತ್ವದೆನಿಸುತ್ತದೆ. ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಕಾರ್ಲ್ ಬೆಂಝ್ ಪಾಲಿಗೆ ಸಹಾಯಿಯಾಗಿ ಆಮಮಿಸಿದ್ದ ಬೆರ್ಥಾ ಕೊನೆಗೆ ಜೀವನ ಸಂಗಾತಿಯಾಗಿದ್ದರು. ಅಷ್ಟೇ ಅಲ್ಲದೆ 1888ರಲ್ಲಿ ಪೇಟೆಂಟ್ ಮೋಟಾರ್ ವ್ಯಾಗನ್ ನಂ.3 ರಲ್ಲಿ ಬೆರ್ಥಾ ಬೆಂಝ್ ಮೊದಲ ದೂರ ಪ್ರಯಾಣ ಹಮ್ಮಿಕೊಂಡಿರುವುದು ಈಗ ಇತಿಹಾಸ.

      ಕಾರ್ಲ್ ಬೆಂಝ್ - 'ದಿ ಗಾಡ್' ಆಫ್ ಆಟೋಮೊಬೈಲ್ಸ್

      ಬಳಿಕ ನಿರಂತರ ಅಧ್ಯಯನದ ಬಳಿಕ 1887ರಲ್ಲಿ ಮೊದಲ ಡಿಫೆನಿಟೀವ್ ಕಮರ್ಷಿಯಲ್ ವಾಹನ ಮಾಡೆಲ್ 3 ಪರಿಚಯಲಾಗಿತ್ತು. ಫೋರ್ ಸ್ಟ್ರೋಕ್ ಪೆಟ್ರೋಲ್ ಎಂಜಿನ್ ನಿಯಂತ್ರಿತ ಈ ವಾಹನದಲ್ಲಿ ಮರದ ಚಕ್ರಗಳನ್ನು ಆಳವಡಿಸಲಾಗಿತ್ತು. ಬಳಿಕ 1889ರಲ್ಲಿ ಪ್ಯಾರಿಸ್ ವರ್ಲ್ಡ್ ಫೇರ್ ನಲ್ಲಿ ಜಾಗತಿಕ ಪ್ರವೇಶ ಕಂಡಿತ್ತು.

      ಕಾರ್ಲ್ ಬೆಂಝ್ - 'ದಿ ಗಾಡ್' ಆಫ್ ಆಟೋಮೊಬೈಲ್ಸ್

      ಕುದುರೆ ರಹಿತ ಗಾಡಿ (horseless carriage) ಪರಿಕಲ್ಪನೆಯನ್ನೇ ಪ್ರಮುಖ ವಿನ್ಯಾಸ ತಂತ್ರಗಾರಿಕೆಯನ್ನಾಗಿ ಮಾರ್ಪಾಡುಗೊಳಿದ್ದ ಬೆಂಝ್, ಬಳಿಕ 1893ರಲ್ಲಿ ನಾಲ್ಕು ಚಕ್ರದ ವಾಹನ ಹಾಗೂ 1899ರಲ್ಲಿ ರೇಸಿಂಗ್ ಕಾರುಗಳನ್ನು ವಿಶ್ವಕ್ಕೆ ಪರಿಚಯಿಸಿದರು.

      ಕಾರ್ಲ್ ಬೆಂಝ್ - 'ದಿ ಗಾಡ್' ಆಫ್ ಆಟೋಮೊಬೈಲ್ಸ್

      ಹೀಗೆ ಕಾರ್ಲ್ ಬೆಂಝ್ ಸಾಧನೆಯನ್ನು ಪಟ್ಟಿ ಮಾಡಿದರೆ ಪುಟಗಳೇ ಸಾಲದು. ಆಧುನಿಕ ವಾಹನ ಯುಗದಲ್ಲಿ ಬೆಳೆದು ನಿಂತಿರುವ ಮರ್ಸಿಡಿಸ್ ಬೆಂಝ್ ಎಂಬ ಐಷಾರಾಮಿ ಸಂಸ್ಥೆಯ ಎಲ್ಲ ಏಳಿಗೆಯ ಶ್ರೇಯಸ್ಸು ಸಂಸ್ಥೆಯ ಸ್ಥಾಪಕರಲ್ಲಿ ಓರ್ವರಾಗಿರುವ ಕಾರ್ಲ್ ಬೆಂಝ್‌ಗೆ ಸಲ್ಲುತ್ತದೆ.

      ಕಾರ್ಲ್ ಬೆಂಝ್ ಅವಿಷ್ಕಾರವೇನು?

      ಕಾರ್ಲ್ ಬೆಂಝ್ ಅವಿಷ್ಕಾರವೇನು?

      ಮೊದಲ (1885) ಆಂತರಿಕ ದಹನಕಾರಿ ಗ್ಯಾಸೋಲೇನ್ ಎಂಜಿನ್ ನಿಯಂತ್ರಿತ ಮೂರು ಚಕ್ರಗಳ ಮೋಟಾರ್ ವ್ಯಾಗನ್ ನಿರ್ಮಿಸಿದ ಖ್ಯಾತಿ ಕಾರ್ಲ್ ಬೆಂಝ್ ಅವರಿಗೆ ಸಲ್ಲುತ್ತದೆ.

      ವಿಶ್ವದ ಮೊದಲ ಪೆಟ್ರೋಲ್ ಚಾಲಿತ ಕಾರನ್ನು ಯಾರು ಕಂಡು ಹುಡುಕಿದರು?

      ವಿಶ್ವದ ಮೊದಲ ಪೆಟ್ರೋಲ್ ಚಾಲಿತ ಕಾರನ್ನು ಯಾರು ಕಂಡು ಹುಡುಕಿದರು?

      ಕಾರ್ಲ್ ಬೆಂಝ್ ವಿಶ್ವದ ಮೊದಲ ಪೆಟ್ರೋಲ್ ಚಾಲಿತ ಆಂತರಿಕ ದಹನಕಾರಿ ನಿಯಂತ್ರಿತ ಬೆಂಝ್ ಮೋಟಾರ್ ವ್ಯಾಗನ್ ನಿರ್ಮಿಸಿದ್ದರು.

      ಇವನ್ನೂ ಓದಿ

      ವಿಶ್ವದ ಮೊದಲ ಟ್ರಾಫಿಕ್ ದೀಪ

More from DriveSpark

Article Published On: Wednesday, November 25, 2015, 14:55 [IST]
English summary
Interesting facts about Karl Benz
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+