ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

By Nagaraja

ಪ್ರಧಾನ ಮಂತ್ರಿ ಹುದ್ದೆಗೇರಿದ ಬಳಿಕ ನರೇಂದ್ರ ಮೋದಿ ಕೈಗೊಂಡಿರುವ ವಿದೇಶ ಪ್ರವಾಸಗಳ ಬಗ್ಗೆ ಸಾಕಷ್ಟು ಟೀಕೆಗೊಳಗಾಗಿತ್ತು. ಆದರೆ ಅದ್ಯಾವುದು ವ್ಯರ್ಥಗೊಂಡಿಲ್ಲ ಎಂಬುದೀಗ ಬಹಿರಂಗವಾಗುತ್ತಿದೆ. ಬೆಳೆದು ಬರುತ್ತಿರುವ ಭಾರತದ ಜೊತೆ ಮಿಲಿಟರಿ ಒಪ್ಪಂದ ಮಾಡಿಕೊಳ್ಳಲು ವಿಶ್ವ ರಾಷ್ಟ್ರಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ಹಲವು ಸುಧಾರಿತ ವೈಮಾನಿಕ ತಂತ್ರಜ್ಞಾನಗಳನ್ನು ಭಾರತದ ಜೊತೆ ಹಂಚಿಕೊಳ್ಳುವುದರ ಜೊತೆಗೆ ವಾಣಿಜ್ಯ ಹಾಗೂ ಸಂಬಂಧ ವೃದ್ಧಿಯನ್ನು ವಿದೇಶಿ ರಾಷ್ಟ್ರಗಳು ಗುರಿ ಮಾಡುತ್ತಿದೆ. ಇನ್ನೊಂದೆಡೆ ಬಾರತದಲ್ಲಿ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಉತ್ತೇಜನ ಸಿಗುತ್ತಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಮುಂದಿನ 100 ವರ್ಷಗಳಲ್ಲಿ ಮುಂದಿನ ತಲೆಮಾರಿನ ಯುದ್ಧ ವಿಮಾನ ವಿನ್ಯಾಸ ಹಾಗೂ ಅಭಿವೃದ್ಧಿ ಘಟಕವನ್ನು ಭಾರತದಲ್ಲೇ ತೆರೆಯುವ ಇರಾದೆಯನ್ನು ಸ್ವೀಡನ್ ಮೂಲದ ರಕ್ಷಣಾ ಉದ್ಯಮ ಸಂಸ್ಥೆ ಸ್ಯಾಬ್ ಆಸಕ್ತಿ ವ್ಯಕ್ತಪಡಿಸಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಆಗಲೇ ಇತರೆ ಜಾಗತಿಕ ರಾಷ್ಟ್ರಗಳಿಂದ ಐದು ಬಿಲಿಯನ್ ಡಾಲರ್ ಗಿಂತಲೂ ಹೆಚ್ಚು ಮೊತ್ತದ ಗ್ರಿಪನ್ ಯುದ್ಧ ವಿಮಾನಕ್ಕಾಗಿ ಒಪ್ಪಂದ ಗಿಟ್ಟಿಸಿಕೊಂಡಿರುವ ಸ್ಯಾಬ್ ಭಾರತದಲ್ಲೂ ಇದಕ್ಕೆ ಸಮಾನವಾದ ಯುದ್ಧ ವಿಮಾನಗಳನ್ನು ಹಸ್ತಾಂತರಿಸಲಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಅತ್ಯಂತ ಶಕ್ತಿಶಾಲಿ 'ಗ್ರಿಪನ್ ಇ' ಯುದ್ಧ ವಿಮಾನದ ತಂತ್ರಜ್ಞಾನವನ್ನು ಭಾರತದ ಜೊತೆ ಹಂಚಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಂಪೂರ್ಣ ಘಟಕ ಹಾಗೂ ನಿರ್ಮಾಣ ಕಾರ್ಯವನ್ನು ಭಾರತದಲ್ಲೇ ಮಾಡಲಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ವಿಮಾನ ಕೈಗಾರಿಕೆಯನ್ನು ಸ್ಥಾಪಿಸುವುದರ ಜೊತೆಗೆ ತಂತ್ರಜ್ಞಾನದ ನಿಜವಾದ ವರ್ಗಾವಣೆ ಹಾಗೂ ವ್ಯಾಪಾರಿ ರಹಸ್ಯಗಳ ಹಂಚಿಕೆಯಾಗಲಿದೆ ಎಂದು ಸ್ಯಾಬ್ ಏರೋನಾಟಿಕ್ಸ್ ಅಭಿಪ್ರಾಯಪಟ್ಟಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ವ್ಯೋಮಯಾನ ತಂತ್ರಜ್ಞಾನದಲ್ಲಿ ಅತಿ ನೂತನ ತಂತ್ರಜ್ಞಾನಗಳನ್ನು ಒಳಗೊಂಡಿರುವ ಗ್ರಿಪನ್ ಹಿಂದಿನಕ್ಕಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದೆ. ಇದು ಹೆಚ್ಚು ಯುದ್ಧ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ, ಸುಧಾರಿತ ವ್ಯಾಪ್ತಿ, ಮತ್ತಷ್ಟು ಶಕ್ತಿಶಾಲಿ ಎಂಜಿನ್ ಮತ್ತು ಹೆಚ್ಚು ಇಂಧನವನ್ನು ಸಾಗಿಸುವಷ್ಟು ಸಮರ್ಥವಾಗಿರಲಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಆಕ್ಟಿವ್ ಎಲೆಕ್ಟ್ರಾನಿಕಲಿ ಸ್ಕಾನ್ಡ್ ಆರೇ (ಎಇಎಸ್ ಎ) ರಾಡಾರ್, ಇನ್ಪ್ರಾ ರೆಡ್ ಸರ್ಚ್ ಆಂಡ್ ಟ್ರ್ಯಾಂಕ್ (ಐಆರ್ ಎಸ್ ಟಿ), ಎಲೆಕ್ಟ್ರಾನಿಕ್ ವಾರ್ ಫೇರ್ (ಇಡಬ್ಲ್ಯು) ಸ್ಯೂಟ್ ಮತ್ತು ಡಾಟಾಲಿಂಕ್ ಅತ್ಯಾಧುನಿಕ ಸೆನ್ಸಾರ್ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಪ್ರಸ್ತುತ ಸ್ವೀಡನ್ ಸೇರಿದಂತೆ ಐದು ರಾಷ್ಟ್ರಗಳಲ್ಲಿ ಗ್ರಿಪನ್ ತಂತ್ರಜ್ಞಾನವಿದೆ. ಇವುಗಳಲ್ಲಿ ದಕ್ಷಿಣ ಆಫ್ರಿಕಾ, ಜೆಕ್ ಗಣರಾಜ್ಯ, ಹಂಗೇರಿ ಮತ್ತು ಥಾಯ್ಲೆಂಡ್ ಸೇರಿದೆ. ಬ್ರೆಜಿಲ್ ಸಹ ಸ್ಯಾಬ್ ತಂತ್ರಜ್ಞಾನ ಪಡೆಯಲು ಉತ್ಸುಕತೆ ತೋರಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

2011ರಲ್ಲಿ ಭಾರತೀಯ ವಾಯುಪಡೆಯ ಜೊತೆಗಿನ ಬಹು ಪಾತ್ರಧಾರಿ ಯುದ್ಧ ವಿಮಾನ ಒಪ್ಪಂದವನ್ನು ಗೆಲ್ಲುವಲ್ಲಿ ಸ್ಯಾಬ್ ವಿಫಲವಾಗಿತ್ತು. ಬಳಿಕ ಇದನ್ನು ರಫೇಲ್ ಯುದ್ಧ ವಿಮಾನಕ್ಕಾಗಿ ಫ್ರಾನ್ಸ್ ನ ದಸ್ಸಾಲ್ಟ್ ಎವಿಯೇಷನ್ ಗೆ ನೀಡಲಾಗಿತ್ತು.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಸ್ಯಾಬ್ ಅನಾರಣಗೊಳಿಸಿರುವ ಅತ್ಯಾಧುನಿಕ ಗ್ರಿಪನ್ ಇ ಪ್ರೊಟೊಟೈಪ್ 39-8 'ಸ್ಮಾರ್ಟ್ ಫೈಟರ್', ಪ್ರಮುಖವಾಗಿಯೂ ಲಾಕ್ ಹೀಡ್ ಮಾರ್ಟಿನ್ ಎಫ್-35 ಜಂಟಿ ಫೈಟರ್ ವಿಮಾನಕ್ಕೆ ಎದುರಾಳಿಯಾಗಿರಲಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಹಳೆಯ ಜನಾಂಗಕ್ಕಿಂತಲೂ ದೊಡ್ಡದಾಗಿರುವ ಸ್ಯಾಬ್ ಗ್ರಿಪನ್, ಶಕ್ತಿಶಾಲಿ ಎಂಜಿನ್ ಮತ್ತು ಸುಧಾರಿತ ರಾಡಾರ್ ವ್ಯವಸ್ಥೆಗಳನ್ನು ಪಡೆದಿದೆ. ಇದು ಅನೇಕ ಅಪಾಯಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

15.2 ಮೀಟರ್ ಉದ್ದದ ದೇಹ ಹಾಗೂ 8.6 ಮೀಟರ್ ಅಗಲವಾಗ ರೆಕ್ಕೆಗಳನ್ನು ಇದು ಪಡೆದಿದೆ. ಅಲ್ಲದೆ 16,500 ಕೀ.ಮೀ.ಗಳಷ್ಟು ಟೇಕ್ ಆಫ್ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಸ್ಯಾಬ್ ಗ್ರಿಪನ್ ಇ, ಮ್ಯಾಕ್ 2 ವೇಗಕ್ಕಿಂತ ಹೆಚ್ಚು ಅಂದರೆ ಗಂಟೆಗೆ 2450 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಲ್ಲದೆ ಹೆಚ್ಚು ಯುದ್ಧ ಸಾಮಾಗ್ರಿಗಳು ಹೊತ್ತೊಯ್ಯುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಗೈಡಡ್ ಗ್ಲೈಡ್ ಬಾಂಬ್, ಲಾಂಗ್ ರೇಜ್ ಏರ್-ಟು-ಏರ್ ಮಿಸೈಲ್, ಹೆವಿ ಆ್ಯಂಟಿ-ಶಿಪ್ ಶಸ್ತ್ರಾಸ್ತ ಮತ್ತು ಸಮುದ್ರ ಮತ್ತು ನೆಲವನ್ನು ಗುರಿ ಮಾಡಬಹಬಲ್ಲ 27ಎಂಎಂ ಮೌಸರ್ ಬಿಕೆ27 ಗನ್ ಹೊತ್ತೊಯ್ಯಲಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಇತರೆ ದೀರ್ಘ ವ್ಯಾಪ್ತಿ ಯುದ್ಧ ವಿಮಾನಗಳಂತೆ ಡೆಲ್ಟಾ ವಿಂಗ್ ಮತ್ತು ಫ್ಲೈ-ಬೈ-ವೈರ್ ಫ್ಲೈಟ್ ಏವಿಯಾನಿಕ್ಸ್ ತಂತ್ರಗಾರಿಕೆಯೂ ಇದರಲ್ಲಿದೆ. ಅಲ್ಲದೆ ಹೆಚ್ಚಿನ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಸ್ಯಾಬ್ ಗ್ರಿಪನ್ ವಿಮಾನಗಳನ್ನು ಭಾರತೀಯ ವೈಮಾನಿಕ ಅಗತ್ಯಗಳಿಗಾನುಸಾರವಾಗಿ ಮಾರ್ಪಾಡುಗೊಳಿಸಲು ಸಾಧ್ಯತೆಯಿದೆ. ಇದು ಭಾರತೀಯ ವಾಯುಸೇನೆಗೆ ತನ್ನ ಬೇಡಿಕೆಯನ್ನು ಈಡೇರಿಸಲು ಸಹಕಾರಿಯಾಗಲಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಗ್ರಿಪನ್ ಯುದ್ಧ ವಿಮಾನಗಳನ್ನು ಸಮರ್ಥವಾಗಿ ನಿರ್ವಹಿಸುವ ಭಾರತದಲ್ಲಿ ಪೈಲಟ್ ತರಬೇತಿ ಕೇಂದ್ರವನ್ನು ತೆರೆಯುವ ಯೋಜನೆಯನ್ನು ಸ್ಯಾಬ್ ವ್ಯಕ್ತಪಡಿಸಿದೆ. ಇದರೊಂದಿಗೆ ಭಾರತದಲ್ಲಿ ನಿರ್ಮಾಣ, ವಿನ್ಯಾಸ ಹಾಗೂ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ಸೀಗಲಿದೆ.

ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

ಭಾರತದಲ್ಲಿ ಹಿಂದೂಸ್ತನ್ ಏರೋನಾಟಿಕ್ಸ್ ಲಿಮಿಟೆಡ್ ಜೊತೆಗೆ ಯುದ್ಧ ವಿಮಾನಗಳನ್ನು ತಯಾರಿಸುವ ಸಾಧ್ಯತೆಯಿದೆ. ತನ್ಮೂಲಕ ಸುಧಾರಿಕ ಮೈಮಾನಿಕ ತಂತ್ರಜ್ಞಾನಗಳನ್ನು ಹಂಚಿಕೊಳ್ಳಲಿದೆ.

More from DriveSpark

Article Published On: Thursday, October 6, 2016, 10:29 [IST]
English summary
Interesting details about Saab Gripen fighter jets
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+