ಭಾರತೀಯ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

By Nagaraja

ಇಡೀ ವಿಶ್ವವನ್ನೇ ಹೋಲಿಸಿದಾಗ ಅತ್ಯಂತ ಸುಂದರವಾದ ರಸ್ತೆ ಭಾರತದಲ್ಲಿ ಹಾಗು ಹೋಗುತ್ತಿದೆ. ಪ್ರಕೃತಿ ಸೌಂದರ್ಯದೊಂದಿಗೆ ತಿರುವುಗಳಿಂದ ಕೂಡಿರುವ ಭಾರತೀಯ ರಸ್ತೆ ವಾಹನ ಪ್ರೇಮಿಗಳನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ದೇಶದ ಸ್ವರ್ಗ ಹಿಮಾಲಯಕ್ಕೆ ಬೈಕ್ ರೈಡಿಂಗ್ ಕೈಗೊಳ್ಳುವುದು ಪ್ರತಿಯೊಬ್ಬನ ಕನಸಾಗಿರುತ್ತದೆ.

ಆದರೂ ಕಳಪೆ ಆಡಳಿತ ವರ್ಗದಿಂದಾಗಿ ಭಾರತೀಯ ರಸ್ತೆಯ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ಬಂದು ತಲುಪಿರುವುದು ದುರದೃಷ್ಟಕರ ಸಂಗತಿ. ಪ್ರಸ್ತುತ ಲೇಖನದಲ್ಲಿ ಭಾರತೀಯ ಹೆದ್ದಾರಿಗಳ ಬಗ್ಗೆಪ್ರತಿಯೊಬ್ಬ ಭಾರತೀಯ ತಿಳಿದುಕೊಳ್ಳಬೇಕಾದ ಅಂಶಗಳ ಬಗ್ಗೆ ವಿವರಿಸಿಕೊಡಲಿದ್ದೇವೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ದೇಶದ ಹೆದ್ದಾರಿ, ಎಕ್ಸ್ ಪ್ರೆಸ್ ವೇ, ಗ್ರಾಮೀಣ, ಜಿಲ್ಲೆ ರಸ್ತೆಗಳನ್ನು ಒಟ್ಟುಗೂಡಿಸಿದಾಗ ಭಾರತವು ಒಟ್ಟು 33 ಲಕ್ಷ ಕೀ.ಮೀ. ಉದ್ದದ ರಸ್ತೆ ಜಾಲವನ್ನು ಹೊಂದಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ದೇಶದಲ್ಲಿ 200ಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳಿವೆ. ಇವೆಲ್ಲ ಒಟ್ಟು ಸೇರಿ 92,851.07 ಕೀ.ಮೀ. ದೂರವನ್ನು ಕ್ರಮಿಸುತ್ತದೆ. ಹಾಗೆಯೆ 1,31,899 ಕೀ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು ಪಡೆದಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ದೇಶದ ಬಹುತೇಕ ಹೆದ್ದಾರಿಗಳು ಡಬಲ್ ಲೇನ್ ಗಳಾಗಿವೆ. ಆದರೆ 22,900 ಕೀ.ಮೀ.ಗಳಿಗೂ ಉದ್ದದ ರಸ್ತೆಗಳು ನಾಲ್ಕು ಹಾಗೂ ಆರು ಲೇನ್ ಗಳನ್ನು ಪಡೆದಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ದೇಶದಲ್ಲಿ ಹೆದ್ದಾರಿ ಜಾಲದ ಅಭಿವೃದ್ಧಿ, ನಿರ್ಮಾಣ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಭಾರತೀಯ ಸಾರಿಗೆ ಸಚಿವಾಲಯದ ಅಡಿಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ) ವಹಿಸಿಕೊಳ್ಳುತ್ತಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ದೇಶದ ಒಟ್ಟು ರಸ್ತೆಯ ಶೇಕಡಾ 1.7ರಷ್ಟು ಪಾಲನ್ನು ಮಾತ್ರ ರಾಷ್ಟ್ರೀಯ ಹೆದ್ದಾರಿಗಳು ಹೊಂದಿದೆ. ಹಾಗಿದ್ದರೂ ಶೇಕಡಾ 40ರಷ್ಟು ರಸ್ತೆ ಟ್ರಾಫಿಕ್ ಪಾಲನ್ನು ಹೊಂದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ಭಾರತದಲ್ಲಿ ಟ್ರಾಫಿಕ್ ವರ್ಷದಿಂದ ವರ್ಷಕ್ಕೆ ಸರಾಸರಿ ಶೇಕಡಾ 10.16ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಹಿರಂಗಡಿಸಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ಎರ್ನಾಕುಳಂದಿಂದ ಕೊಚ್ಚಿ ಬಂದರನ್ನು ತಲುಪುವ ಎನ್ ಎಚ್47ಎ ದೇಶದ ಅತ್ಯಂತ ಚಿಕ್ಕದಾದ ರಾಷ್ಟ್ರೀಯ ಹೆದ್ದಾರಿಯಾಗಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ಅದೇ ಹೊತ್ತಿಗೆ ಎನ್ ಎಚ್7 ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ವಾರಣಾಸಿಯಿಂದ ಕನ್ಯಾಕುಮಾರಿ ವರೆಗೆ ಒಟ್ಟು 2369 ಕೀ.ಮೀ. ದೂರವನ್ನು ಕ್ರಮಿಸುತ್ತದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ಕೇಂದ್ರ ಸರಕಾರ ಮಹತ್ತರ ಉತ್ತರ-ದಕ್ಷಿಣ-ಪೂರ್ಣ-ಪಶ್ಚಿಮ ಕಾರಿಡಾರ್ ನಿರ್ಮಾಣದಲ್ಲಿ ತೊಡಗಿದ್ದು, ಬರೋಬ್ಬರಿ 7300 ಕೀ.ಮೀ. ದೂರವನ್ನು ಕ್ರಮಿಸಲಿದೆ. ಉತ್ತರದಿಂದ ದಕ್ಷಿಣಕ್ಕೆ ಜಮ್ಮು ಕಾಶ್ಮೀರದಿಂದ ಆರಂಭವಾಗಲಿರುವ ರಸ್ತೆಯು ಕನ್ಯಾಕುಮಾರಿಯನ್ನು ತಲುಪಲಿದೆ. ಹಾಗೆಯೇ ಪಶ್ಚಿಮದಿಂದ ಪೂರ್ವಕ್ಕೆ ಗುಜರಾತ್ ನ ಫೋರ್ ಬಂದರಿನಿಂದ ಅಸ್ಸಾಂನ ಸಿಲ್ಚಾರ್ ಪ್ರದೇಶವನ್ನು ತಲುಪಲಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ಇದೇ ಯೋಜನೆಯಡಿಯಲ್ಲಿ 'ಸ್ವರ್ಣ ಚತುಷ್ಪಥ; ರಸ್ತೆ ಸಂಪರ್ಕವನ್ನು ಜಾರಿಗೊಳಿಸಲಾಗುತ್ತಿದೆ. ಇದು ದೇಶದ ನಾಲ್ಕು ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳನ್ನು ಸಂಪರ್ಕಿಸಲಿದ್ದು, ಒಟ್ಟು 5846 ಕೀ.ಮೀ. ದೂರವನ್ನು ಕ್ರಮಿಸಲಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ಭಾರತೀಯ ರಸ್ತೆಗಳಲ್ಲಿ 'ಮೈಲಿಗಲ್ಲು' ಪ್ರಮುಖ ಪಾತ್ರವನ್ನು ವಹಿಸಲಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಳದಿ ಮತ್ತು ಬಿಳಿ ವರ್ಣದ ಮೈಲುಗಲ್ಲನ್ನು ಕಾಣಬಹುದಾಗಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ಹಾಗೆಯೇ ರಾಜ್ಯ ಹೆದ್ದಾರಿ ಸೂಚಕವಾಗಿ ಹಸಿರು ಮತ್ತು ಬಿಳಿ ವರ್ಣದ ಮೈಲಿಗಲ್ಲನ್ನು ಲಗತ್ತಿಸಲಾಗಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ಇನ್ನು ಸಿಟಿ ಹೆದ್ದಾರಿಯನ್ನು ಬಳಿ ಮತ್ತು ಕಪ್ಪು ವರ್ಣಗಳ ಮೈಲಿಗಲ್ಲುಗಳು ಸೂಚಿಸಲಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

2010ರಲ್ಲಿ ಭಾರತೀಯ ಹೆದ್ದಾರಿಗಳನ್ನು ಗುರುತಿಸಿಕೊಳ್ಳಲು ಸಂಖ್ಯಾ ಪದ್ಧತಿಯನ್ನು ಜಾರಿಗೆ ತರಲಾಗಿತ್ತು. ಇದರಂತೆ ಉತ್ತರದಿಂದ ದಕ್ಷಿಣಕ್ಕೆ ಸಮ ಅಂಕಿ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಬೆಸ ಸಂಖ್ಯೆ ನೀತಿಯನ್ನು ಅನುಸರಿಸಲಾಗಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ಹಾಗೆಯೇ ಮೂರು ಅಂಕಿಗಳನ್ನು ಪಡೆದ ಹೆದ್ದಾರಿಗಳು ಮುಖ್ಯ ಹೆದ್ದಾರಿಗಳ ಉಪ ಮಾರ್ಗಗಳಾಗಿರುತ್ತದೆ. ಉದಾಹರಣೆಗೆ 144 ಎಂಬುದು ರಾಷ್ಟ್ರೀಯ ಹೆದ್ದಾರಿ 44ರ ಭಾಗವಾಗಿದೆ.

ಭಾರತದ ಹೆದ್ದಾರಿಗಳ ಬಗ್ಗೆ ನಿಮಗೆ ಗೊತ್ತಿರದ ಅಂಶಗಳು!

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿಗಳ ಪ್ರಕಾರ ಸದ್ಯ 30,000 ಕೀ.ಮೀ.ಗಳಷ್ಟು ಉದ್ದದ ನೂತನ ಹೆದ್ದಾರಿಗಳ ನಿರ್ಮಾಣವು ಜಾರಿಯಲ್ಲಿದೆ.

More from DriveSpark

Article Published On: Thursday, September 29, 2016, 11:16 [IST]
English summary
Interesting Facts about Indian Highways
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+