ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ಸೌರ ಮಂಡಲದಲ್ಲಿ ಭೂಮಿಯನ್ನು ಹೊರತುಪಡಿಸಿ ಉಳಿದ ಗ್ರಹಗಳಲ್ಲಿ ಮಾನವರು ವಾಸ ಮಾಡಲು ಅನುಕೂಲಕರವಾದ ಅಂಶಗಳಿವೆಯೇ ಎಂಬ ಬಗ್ಗೆ ಹಲವು ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಸಂಶೋಧನೆ ನಡೆಸುತ್ತಿವೆ.

ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ನಮ್ಮ ಹೆಮ್ಮೆಯ ಇಸ್ರೊ, ಅಮೆರಿಕಾದ ನಾಸಾ ಹಾಗೂ ರಷ್ಯಾದ ರಾಸ್ಕೋಸ್ಮೋಸ್ ಸೇರಿದಂತೆ ಹಲವು ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ಸದ್ಯಕ್ಕೆ ಮಂಗಳ ಗ್ರಹದ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಭಾರತವು ಅತಿ ಕಡಿಮೆ ವೆಚ್ಚದಲ್ಲಿ ಉಪಗ್ರಹವನ್ನು ನಿರ್ಮಿಸಿ ಮಂಗಳ ಗ್ರಹಕ್ಕೆ ಉಡಾಯಿಸಿದೆ. ಮಂಗಳ ಗ್ರಹಕ್ಕೆ ಸಂಬಂಧಿಸಿದ ಮಂಗಳಯಾನ್ ಭಾರತದ ಮಟ್ಟಿಗೆ ಮಹತ್ವದ ಮೈಲಿಗಲ್ಲಾಗಿದೆ.

ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ಕರೋನಾ ವೈರಸ್ ಅಟ್ಟಹಾಸದ ನಡುವೆಯೂ ಮಂಗಳ ಗ್ರಹಕ್ಕೆ ಸಂಬಂಧಿಸಿದ ಸಂಶೋಧನೆ ಪ್ರಗತಿಯಲ್ಲಿದೆ. ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ ಇತ್ತೀಚೆಗಷ್ಟೇ ತನ್ನ ಪರ್ಸಿವಿಯರೆನ್ಸ್ ಹೆಸರಿನ ಬಾಹ್ಯಾಕಾಶ ನೌಕೆಯನ್ನು ಮಂಗಳ ಗ್ರಹಕ್ಕೆ ಉಡಾಯಿಸಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ಈ ನೌಕೆಯು ಮಂಗಳ ಗ್ರಹಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ತನ್ನ ಯಶಸ್ವಿಯಾಗುವ ನಿರೀಕ್ಷೆಗಳಿವೆ. ಜುಲೈ 30 ರಂದು ಅಮೆರಿಕಾದ ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್ ಏರ್ ಫೋರ್ಸ್ ಬೇಸ್ ನಿಂದ ಈ ಬಾಹ್ಯಾಕಾಶ ನೌಕೆಯನ್ನು ಅಟ್ಲಾಸ್ ವಿ ರಾಕೆಟ್ ಮೂಲಕ ಮಂಗಳ ಗ್ರಹಕ್ಕೆ ಉಡಾಯಿಸಲಾಗಿದೆ.

ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ಮಂಗಳ ಗ್ರಹವು ಭೂಮಿಯಿಂದ ಸುಮಾರು 480 ದಶಲಕ್ಷ ಕಿ.ಮೀಗಳಷ್ಟು ದೂರದಲ್ಲಿದೆ. ಪರ್ಸಿವಿಯರೆನ್ಸ್ ಬಾಹ್ಯಾಕಾಶ ನೌಕೆಯು ಮಂಗಳ ಗ್ರಹದಲ್ಲಿ ಇಳಿಯಲು ಸುಮಾರು 7 ತಿಂಗಳು ತೆಗೆದುಕೊಳ್ಳುತ್ತದೆ ಎಂದು ನಾಸಾ ಹೇಳಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ಪರ್ಸಿವಿಯರೆನ್ಸ್ ಬಾಹ್ಯಾಕಾಶ ನೌಕೆ 2021ರ ಫೆಬ್ರವರಿ 18ರಂದು ಮಂಗಳ ಗ್ರಹದಲ್ಲಿ ಇಳಿಯುವ ನಿರೀಕ್ಷೆಗಳಿವೆ. ಮಂಗಳ ಗ್ರಹದ ಜೆಸಿರೊ ಗ್ರೇಟರ್‌ ಪ್ರದೇಶದಲ್ಲಿ ಪರ್ಸಿವಿಯರೆನ್ಸ್ ಬಾಹ್ಯಾಕಾಶ ನೌಕೆಯನ್ನು ಇಳಿಸಲು ನಾಸಾ ಯೋಜಯನ್ನು ಹಾಕಿಕೊಂಡಿದೆ.

ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ಈ ಪ್ರದೇಶವು 3 ಬಿಲಿಯನ್ ವರ್ಷಗಳಿಗಿಂತ ಹೆಚ್ಚು ಕಾಲದಿಂದ ಪರಿಶೋಧಿಸದ ಪ್ರದೇಶವಾಗಿದೆ. ಪರ್ಸಿವಿಯರೆನ್ಸ್ ನಾಸಾ ಸಂಸ್ಥೆಯು ಮಂಗಳ ಗ್ರಹಕ್ಕೆ ಕಳುಹಿಸುತ್ತಿರುವ 4ನೇ ಬಾಹ್ಯಾಕಾಶ ನೌಕೆ ಇದಾಗಿದೆ. ನಾಸಾ ಈ ಹಿಂದೆ ಕ್ಯೂರಿಯಾಸಿಟಿ, ಆಪರ್ಚುನಿಟಿ ಹಾಗೂ ಸೊಗರ್ನರ್ ಎಂಬ ಹೆಸರಿನ ಬಾಹ್ಯಾಕಾಶ ನೌಕೆಗಳನ್ನು ಮಂಗಳ ಗ್ರಹಕ್ಕೆ ಕಳುಹಿಸಿತ್ತು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ಪರ್ಸಿವಿಯರೆನ್ಸ್ ನಾಸಾ ಸಂಸ್ಥೆ ನಿರ್ಮಿಸಿರುವ ಅತಿದೊಡ್ಡದಾದ ಹಾಗೂ ಭಾರವಾದ ಬಾಹ್ಯಾಕಾಶ ನೌಕೆಯಾಗಿದೆ. ಕಾರಿನ ಗಾತ್ರದಷ್ಟಿರುವ ಈ ಪರ್ಸಿವಿಯರೆನ್ಸ್ ಬಾಹ್ಯಾಕಾಶ ನೌಕೆ 6 ವ್ಹೀಲ್ ಗಳನ್ನು ಹೊಂದಿದ್ದು, 2,260 ಪೌಂಡ್ (1,025 ಕೆಜಿ) ತೂಕವನ್ನು ಹೊಂದಿದೆ. ಈ ಬಾಹ್ಯಾಕಾಶ ನೌಕೆಯು ಸುಮಾರು 10 ಅಡಿ ಉದ್ದವಿದೆ.

ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ಈ ಬಾಹ್ಯಾಕಾಶ ನೌಕೆ ಗಂಟೆಗೆ 0.1 ಮೈಲಿಗಿಂತ ಕಡಿಮೆ ವೇಗದಲ್ಲಿ ಚಲಿಸುತ್ತದೆ. ಇದರ ವ್ಹೀಲ್ ಗಳನ್ನು ಅಲ್ಯೂಮಿನಿಯಂ ಟೈಟಾನಿಯಂ ಕಡ್ಡಿಗಳಿಂದ ತಯಾರಿಸಲಾಗಿದೆ. ಪರ್ಸಿವಿಯರೆನ್ಸ್ ಬಾಹ್ಯಾಕಾಶ ನೌಕೆಯಲ್ಲಿ 25 ಕ್ಯಾಮೆರಾ, 2 ಮೈಕ್ರೊಫೋನ್, ಮಂಗಳ ಗ್ರಹದ ಸರ್ಫೇಸ್ ಡ್ರಿಲ್ ಹಾಗೂ ಲೇಸರ್ ಗಳನ್ನು ಅಳವಡಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ಪರ್ಸಿವಿಯರೆನ್ಸ್ ಬಾಹ್ಯಾಕಾಶ ನೌಕೆ ಇನ್ ಜೇನ್ಯೂಟಿ ಎಂಬ ಸಣ್ಣ ಹೆಲಿಕಾಪ್ಟರ್ ಅನ್ನು ಸಹ ತನ್ನೊಂದಿಗೆ ಹೊತ್ತೊಯ್ದಿದೆ. ನಾಸಾ ಮಾಹಿತಿಗಳ ಪ್ರಕಾರ, ಮಂಗಳ ಗ್ರಹದಲ್ಲಿ ಪರ್ಸಿವಿಯರೆನ್ಸ್ ಮಾದರಿಗಳು 2031ರಲ್ಲಿ ಭೂಮಿಗೆ ತಲುಪಲಿವೆ.

ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ನಾಸಾ ವಿಜ್ಞಾನಿಗಳು ಹೇಳುವ ಪ್ರಕಾರ ಮಂಗಳ ಗ್ರಹದ ಮೇಲ್ಮೈನಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕೆಳಕ್ಕಿಳಿಸುವುದು ನಿಜಕ್ಕೂ ಸವಾಲಿನ ಕೆಲಸ. ಏಕೆಂದರೆ ಕೆಳಕ್ಕಿಳಿಯುವ ಸಮಯದಲ್ಲಿ ಪರ್ಸಿವಿಯರೆನ್ಸ್ ಬಾಹ್ಯಾಕಾಶ ನೌಕೆಯು ಗಂಟೆಗೆ 12,000 ಮೈಲುಗಳ ವೇಗದಿಂದ ಶೂನ್ಯಕ್ಕೆ ಬರಬೇಕಾಗುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮಂಗಳ ಗ್ರಹದಲ್ಲಿ ಇಳಿದ ನಂತರ, ಪರ್ಸಿವಿಯರೆನ್ಸ್ ಬಾಹ್ಯಾಕಾಶ ನೌಕೆಯಲ್ಲಿರುವ ಹೆಲಿಕಾಪ್ಟರ್ ಹೊರಗೆ ಬರಲಿದೆ. ಮಂಗಳ ಗ್ರಹದ ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ಆಮ್ಲಜನಕವಾಗಿ ಪರಿವರ್ತಿಸಲು ನಾಸಾದ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು.

ಮಂಗಳ ಗ್ರಹಕ್ಕೆ ಹೊರಟ ಬಾಹ್ಯಾಕಾಶ ನೌಕೆಯ ಬಗೆಗಿನ ರೋಚಕ ಸಂಗತಿಗಳಿವು

ಈ ತಂತ್ರಜ್ಞಾನವು ಭವಿಷ್ಯದ ಗಗನಯಾತ್ರಿಗಳಿಗೆ ನೆರವಾಗಲಿದೆ ಎಂದು ನಾಸಾ ಹೇಳಿದೆ. ಪರ್ಸಿವಿಯರೆನ್ಸ್ ನೌಕೆಯು ಮಂಗಳ ಗ್ರಹಕ್ಕೆ ಸಂಬಂಧಿಸಿದ ಅನೇಕ ನಿಗೂಢ ಸಂಗತಿಗಳನ್ನು ತೆರೆದಿಡುವ ಸಾಧ್ಯತೆಗಳಿವೆ.

Most Read Articles

Kannada
English summary
Interesting facts about Perseverance space craft. Read in Kannada.
Story first published: Monday, August 3, 2020, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X