ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

By Nagaraja

ಅತ್ಯಾಧುನಿಕ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯದ ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಭಾರತ ಮತ್ತು ಫ್ರಾನ್ಸ್ ರಾಷ್ಟ್ರಗಳು ಶುಕ್ರವಾರದಂದು ಸಹಿ ಹಾಕಿವೆ. ಈ ಐತಿಹಾಸಿಕ ಬರೋಬ್ಬರಿ 59 ಕೋಟಿ ರುಪಾಯಿಗಳ ಒಪ್ಪಂದದಿಂದ ಭಾರತ ಎಲ್ಲ ಹಂತದಲ್ಲೂ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮೀರಿಸಲಿದೆ.

ಭಾರತದ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ನ ರಕ್ಷಣಾ ಸಚಿವ ಜೀನ್ ಯುವೆಸ್ ಲೆ ಡ್ರಿಯಾನ್ ಅವರು ಈ ಮಹತ್ತರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ತನ್ಮೂಲಕ ವಾಯು ಬಲದಲ್ಲಿ ಭಾರತ ಮಗದೊಂದು ಮೈಲುಗಲ್ಲನ್ನಿಟ್ಟಿದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ಒಟ್ಟು 36 ಯುದ್ಧ ವಿಮಾನಗಳ ಆಮದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಹಿಂದೆ ಫ್ರಾನ್ಸ್ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಬಂಧ ಒಪ್ಪಂದ ಮಾಡಿಕೊಂಡಿದ್ದರು.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ಇಲ್ಲಿ ಗಮನಾರ್ಹ ಸಂಗತಿಯೆಂದರೆ 1990ರ ದಶಕದಲ್ಲಿ ರಷ್ಯಾ ಜೊತೆಗಿನ ಸುಖೋಯ್ ನಂತರ 20 ವರ್ಷಗಳ ಬಳಿಕವೀಗ ಭಾರತ ಯುದ್ಧ ವಿಮಾ ಖರೀದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ. 2019ರ ವೇಳೆಯಾಗುವಾಗ ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರವಾಗಲಿದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ರಫೇಲ್ ಯುದ್ಧ ವಿಮಾನ ಆಗಮನದೊಂದಿಗೆ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನಕ್ಕೆ ಯಾವುದೇ ಕ್ಷಣವಾದರೂ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಇದರಿಂದ ಪಾಕಿಸ್ತಾನ ಹಾಗೂ ಚೀನಾ ಎಚ್ಚೆತ್ತುಕೊಳ್ಳುವಂತಾಗಿದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ರಫೇಲ್ ಯುದ್ಧ ವಿಮಾನಗಳ ಒಪ್ಪಂದದಿಂದ 5,600 ಕೋಟಿ ರುಪಾಯಿಗಳ ಉಳಿತಾಯವಾಗಿದೆ. ಇದಕ್ಕೂ ಮುನ್ನ ಯುಪಿಎ ಸರ್ಕಾರದ ಒಪ್ಪಂದವನ್ನು ರದ್ದುಗೊಳಿಸಿದ್ದ ಮೋದಿ ಸರ್ಕಾರ ಹೊಸ ಒಪ್ಪಂದಕ್ಕೆ ಸಹಿ ಹಾಕಿತ್ತು.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ಆಕಾಶಕ್ಕೆ ಆಕಾಶಕ್ಕೆ ನೆಗೆಯುವ 150 ಕೀ.ಮೀ. ವರೆಗೂ ಕ್ರಮಿಸಬಲ್ಲ ದೃಷ್ಟಿಗೋಚರದ ಆಚೆಗಿನ ಅತ್ಯಾಧುನಿಕ ಮಿಟಿಯೋರ್ ಕ್ಷಿಪಣಿಗಳು ಈ ಯುದ್ಧ ವಿಮಾನಗಳಲ್ಲಿ ಇರಲಿದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

17 ತಿಂಗಳುಗಳ ಹಿಂದೆ ರಫೇಲ್ ಯುದ್ಧ ವಿಮಾನ ಖರೀದಿಗೆ ಪ್ರಧಾನಿ ಮೋದಿ ಚುರುಕು ಮುಟ್ಟಿಸಿದ್ದರು. ಅತ್ಯಾಧುನಿಕ ವಿಮಾನಗಳ ಕೊರತೆಯ ಹಿನ್ನಲೆಯಲ್ಲಿ ರಫೇಲ್ ಯುದ್ಧ ವಿಮಾನ ಖರೀದಿಯೂ ಭಾರತೀಯ ವಾಯುಸೇನೆಯ ತುರ್ತು ಅವಶ್ಯಕತೆಯೂ ಆಗಿತ್ತು.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ಟ್ವಿನ್ ಎಂಜಿನ್ ನಿಯಂತ್ರಿತ ರಫೇಲ್ ಫೈಟರ್ ಜೆಟ್ ಒಂದು ಬಹು ಪಾತ್ರಧಾರಿ ಯುದ್ಧ ವಿಮಾನವಾಗಿದೆ. ಫ್ರಾನ್ಸ್ ವಿಮಾನಯಾನ ಸಂಸ್ಥೆ ದಸ್ಸಾಲ್ಟ್ ಹೇಳುವ ಪ್ರಕಾರ ಇದು ಎಲ್ಲ ರೀತಿಯ ವಾಯು ದಾಳಿಗಳಿಗೆ ಸಮರ್ಥವಾಗಿ ನಿಯೋಜಿಸಬಹುದಾಗಿದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ವಾಯು ದಾಳಿಯಿಂದ ಹಿಡಿದು ವಾಯು ರಕ್ಷಣೆ, ಗ್ರೌಂಡ್ ಸಪೋರ್ಟ್, ಆಳವಾದ ದಾಳಿ, ಬೇಹುಗಾರಿಕೆ, ಆ್ಯಂಟಿ ಶಿಪ್ ದಾಳಿ ಮತ್ತು ಅಣ್ವಸ್ತ್ರ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ತಾರತಮ್ಯ ಹಳೆಯದೆನಿಸಿಕೊಂಡಿರುವ ಮಿರಾಜ್ ಫೈಟರ್ ವಿಮಾನಗಳನ್ನು ಅತಿ ನೂತನ ರಫೇಲ್ ಯುದ್ಧ ವಿಮಾನಗಳು ಸ್ಥಾನ ತುಂಬಲಿದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ನೂತನ ಒಪ್ಪಂದದಂತೆ ಮುಂದಿನ ಐದು ವರ್ಷಗಳ ವರೆಗೆ ಶಸ್ತ್ರಾಸ್ತ್ರ, ದುರಸ್ತಿ ಸೌಲಭ್ಯ, ತಂಗುದಾಣ ವ್ಯವಸ್ಥೆ, ನಿರ್ವಹಣೆ ಮತ್ತು ಕಾರ್ಯಕ್ಷಮತೆಗೆ ಆಧಾರಿಸಿದ ಬೆಂಬಲವನ್ನು ಫ್ರಾನ್ಸ್ ಒದಗಿಸಲಿದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ಇನ್ನು ಭಾರತೀಯ ವಾಯುಸೇನೆಯ ಅಗತ್ಯಗಳಿಗೆ ಅನುಸಾರವಾಗಿ ಮಾರ್ಪಾಡುಗೊಳಿಸುವ ಅವಕಾಶವೂ ಇರುತ್ತದೆ. ಇದರಲ್ಲಿ ಹೆಲ್ಮೆಟ್ ಜೋಡಿಸಿದ ಪರದೆ, ರಾಡಾರ್ ವಾರ್ನಿಂಗ್ ರಿಸೀವರ್ ಹಾಗೂ ಪತ್ತೆಹಚ್ಚುವ ಉಪಕರಣಗಳನ್ನು ಲಗತ್ತಿಸಬಹುದಾಗಿದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ಗಂಟೆಗೆ 2000 ಕೀ.ಮೀ. ವೇಗದಲ್ಲಿ ಸಂಚರಿಸಲಿರುವ (ಮ್ಯಾಕ್ 1.8) ರಫೇಲ್ ಯುದ್ಧ ವಿಮಾನ ಕುಶಲ ಹಾಗೂ ಶತ್ರು ಕ್ಷಿಪಣಿಗಳನ್ನು ತಪ್ಪಿಸುವಷ್ಟು ಸಮರ್ಥವೆನಿಸಿಕೊಂಡಿದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ರಫೇಲ್ ಯುದ್ಧ ವಿಮಾನದಲ್ಲಿ ಆಮ್ಲಜನಕ ಉತ್ಪಾದನಾ ವ್ಯವಸ್ಥೆಯು (OBOGS)ಇರುತ್ತದೆ. ಇಂದೊಂದು ಧನಾತ್ಮಕ ಅಂಶವಾಗಿದೆ ಎಂದು ದಸ್ಸಾಲ್ಟ್ ಅಭಿಪ್ರಾಯಪಡುತ್ತದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ಗುರಿಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ರಫೇಲ್ ಹೊಂದಿದೆ. ಅಲ್ಲದೆ ಎಲೆಕ್ಟ್ರಾನಿಕ್ ಸ್ಕ್ಯಾನರ್ ರಾಡಾರ್ ಬಳಕೆಯಾಗುತ್ತಿರುವ ಏಕಮಾತ್ರ ಯುರೋಪ್ ಯುದ್ಧ ವಿಮಾನ ಇದಾಗಿದೆ.

ಪಾಕಿಸ್ತಾನ ನಿದ್ದೆಗೆಡಿಸಿದ ಭಾರತ; ಫ್ರಾನ್ಸ್ ಜೊತೆ 'ರಫೇಲ್' ಒಪ್ಪಂದಕ್ಕೆ ಸಹಿ

ನೂತನ ರಫೇಲ್ ಯುದ್ಧ ವಿಮಾನ ಆಗಮನದೊಂದಿಗೆ ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನದ ಮೇಲೆ ನೇರ ದಾಳಿ ಮಾಡಬಹುದಾಗಿದೆ. ಪಾಕಿಸ್ತಾನದ ಯಾವುದೇ ಪ್ರದೇಶವನ್ನು ಭಾರತದಲ್ಲಿದ್ದುಕೊಂಡೇ ಗುರಿ ಮಾಡಬಹುದಾಗಿದೆ.

More from DriveSpark

Article Published On: Saturday, September 24, 2016, 11:31 [IST]
English summary
Interesting Facts About Rafale Fighter Jet
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+