ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆ ಒಂದಿಷ್ಟು...

By Nagaraja

ಯಾವುದೇ ಒಂದು ಕಾರು ಖರೀದಿಸುವ ಮೊದಲು ಅದರ ತಯಾರಕ ಸಂಸ್ಥೆ ಬಗ್ಗೆ ತಿಳಿದುಕೊಳ್ಳುವುದು ತುಂಬಾನೇ ಮುಖ್ಯ. ದೇಶದಲ್ಲಿ ಅತಿ ಹೆಚ್ಚು ಯಶಸ್ಸು ಗಳಿಸಿದ ಸಂಸ್ಥೆ ಮಾರುತಿ ಸುಜುಕಿ ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ. ಹಾಗೆಯೇ ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆಯೂ ತಿಳಿದುಕೊಳ್ಳುವುದು ಹೆಚ್ಚು ಅಗತ್ಯ.

ಅಂದ ಹಾಗೆ ನಮ್ಮಲ್ಲಿ ಎಷ್ಟು ಮಂದಿ ಸುಜುಕಿ ಬಗ್ಗೆ ನಿಖರ ಮಾಹಿತಿಯನ್ನು ಹೊಂದಿದ್ದೀರಾ? ಸುಜುಕಿ ಸ್ಥಾಪಿತಗೊಂಡ ವರ್ಷ ಯಾವುದು? ಅದರ ಪ್ರಧಾನ ಕಾರ್ಯಾಲಯ ಎಲ್ಲಿದೆ ಎಂಬಿತ್ಯಾದಿ ಆಸಕ್ತಿದಾಯಕ ವಿಚಾರಗಳ ಬಗ್ಗೆ ಈ ಲೇಖನದ ಬಗ್ಗೆ ಮಾಹಿತಿ ಕಲೆಹಾಕುವ ಪ್ರಯತ್ನ ಮಾಡಲಿದ್ದೇವೆ.

ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆ ಒಂದಿಷ್ಟು...

ಜಪಾನ್ ಬಹುರಾಷ್ಟ್ರೀಯ ವಾಹನ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಕಾರ್ಪೋರೇಷನ್ ಸಂಸ್ಥೆಯನ್ನು ಮಾಚಿಯೊ ಸುಜುಕಿ (Machio Suzuki) ಎಂಬವರು 1909ನೇ ಇಸವಿಯಲ್ಲಿ ಮಿನಾಮಿ-ಕು, ಹಮಮಟ್ಸು (Minami-ku, Hamamats) ಎಂಬಲ್ಲಿ ಸ್ಥಾಪಿಸಿದ್ದರು.

ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆ ಒಂದಿಷ್ಟು...

ಕಂಪನಿಯ ಆರಂಭಿಕ ಕಾಲಘಟ್ಟದಲ್ಲಿ ಹಮಮಟ್ಸು ಎಂಬ ಸಣ್ಣದಾದ ತೀರ ಗ್ರಾಮ ಪ್ರದೇಶದಲ್ಲಿ ಕೈಮಗ್ಗ ಮೆಷಿನ್ ಉತ್ಪಾದನೆ ಕೆಲಸ ಪ್ರಾರಂಭಿಸಲಾಗಿತ್ತು. ಬಳಿಕ ಜಪಾನ್ ರೇಷ್ಮೆ ಕೈಗಾರಿಕಾ ದೈತ್ಯ ಸಂಸ್ಥೆಯೊಂದಕ್ಕೆ ಮೆಷಿನ್ ಉತ್ಪಾದಿಸಲು ಆರಂಭಿಸಿತ್ತು. 1929ನೇ ಇಸವಿಯಲ್ಲಿ ಸುಜುಕಿ ನೇಯ್ಗೆ ಯಂತ್ರಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿತ್ತು. ಅಲ್ಲದೆ ಮೊದಲ 30 ವರ್ಷಗಳ ವರೆಗೂ ಸಂಕೀರ್ಣ ಮೆಷಿನ್ ಉತ್ಪಾದನೆಯಲ್ಲಿ ಗಮನ ಕೇಂದ್ರಿತವಾಗಿತ್ತು.

ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆ ಒಂದಿಷ್ಟು...

ಬೆಳೆದು ಬರುತ್ತಿರುವ ಬೇಡಿಕೆಯನ್ನು ಪರಿಗಣಿಸಿದ ಸುಜುಕಿ, 1937ರಲ್ಲಿ ಸಣ್ಣ ಕಾರು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿತ್ತು. ಇದರ ಪರಿಣಾಮವೆಂಬಂತೆ ಒಂದೆರಡು ವರ್ಷಗಳಲ್ಲೇ ಹಲವಾರು ಮೊದಲ ಮಾದರಿಯ ಕಾರುಗಳು ಉತ್ಪಾದನೆಗೊಂಡಿದ್ದವು. ಈ ಸುಜುಕಿ ಮೋಟಾರ್ ವಾಹನಗಳು ಸಂಶೋಧಿತ, ಲಿಕ್ವಿಡ್ ಕೂಲ್ಡ್, ಫೋರ್ ಸ್ಟ್ರೋಕ್, ಫೋರ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದ್ದವು.

ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆ ಒಂದಿಷ್ಟು...

ಆದರೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸುಜುಕಿ ವಾಹನ ಉತ್ಪಾದನೆ ಸ್ಥಗತಗೊಂಡಿದ್ದರ ಪರಿಣಾಮವಾಗಿ ಮತ್ತೆ ಮೆಷಿನ್ ಉತ್ಪಾದನೆದತ್ತ ಹಿಂದಿರುಗಿತ್ತು. ದೇಶೀಯ ಜವುಳಿ ತಯಾರಕರಲ್ಲಿ ಸುಜುಕಿ ನಿರೀಕ್ಷೆ ಮೂಡಿಸಿತ್ತಾದರೂ 1951ರಲ್ಲಿ ಹತ್ತಿ ಮಾರುಕಟ್ಟೆ ಕುಸಿತದೊಂದಿಗೆ ಸುಜುಕಿ ಕನಸಿಗೆ ದೊಡ್ಡ ಹೊಡೆತ ನೀಡಿತ್ತು.

ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆ ಒಂದಿಷ್ಟು...

ಈ ಬೃಹತ್ ಸವಾಲನ್ನು ಎದುರಿಸಲು ಸನ್ನದ್ಧವಾಗಿದ್ದ ಸುಜುಕಿ ಮಗದೊಮ್ಮೆ ಮೋಟಾರು ವಾಹನ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿತ್ತು. ಎರಡನೇ ಮಹಾಯುದ್ಧದ ಬಳಿಕ ಜಪಾನ್‌ಗೆ ವೈಯಕ್ತಿಕ ಸಾರಿಗೆ ವ್ಯವಸ್ಥೆಯ ಅಗತ್ಯ ಹೆಚ್ಚಿತ್ತು.

ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆ ಒಂದಿಷ್ಟು...

ಸುಜುಕಿಯ ಮೊದಲ ದ್ವಿಚಕ್ರ ವಾಹನ 'ಪವರ್ ಫ್ರಿ' 1952ನೇ ಇಸವಿಯಲ್ಲಿ ಲಾಂಚ್ ಆಗಿತ್ತು. ಇದು 36ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿತ್ತು. ಬಳಿಕ 1953ರಲ್ಲಿ ಡೈಮಂಡ್ ಫ್ರಿ 60ಸಿಸಿ ಮೋಟಾರ್ ಸೈಕಲ್ ಸಹ ಬಿಡುಗಡೆಯಾಗಿತ್ತು.

ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆ ಒಂದಿಷ್ಟು...

1954ರಲ್ಲಿ ಸುಜುಕಿ ಮೋಟಾರ್ ಕಂಪನಿ ಲಿಮಿಟೆಡ್ ಆಗಿ ಹೆಸರು ಪರಿವರ್ತನೆ. ಅಲ್ಲಿಯ ವರೆಗೆ ಮೋಟಾರ್ ಸೈಕಲ್ ಮಾತ್ರ ಉತ್ಪಾದಿಸುತ್ತಿದ್ದ ಸುಜುಕಿ 1955ನೇ ಇಸವಿಯಲ್ಲಿ ಚೊಚ್ಚಲ ಕಾರು 'ಸುಜುಲೈಟ್' ಲಾಂಚ್ (360ಸಿಸಿ, ಟು ಸ್ಟ್ರೋಕ್) ಮಾಡಿತ್ತು.

ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆ ಒಂದಿಷ್ಟು...

1958ರಲ್ಲಿ ಎಸ್ ವಾಣಿಜ್ಯ ಲಾಂಛನವಾಗಿ ಇಂಗ್ಲಿಂಷ್ ವರ್ಣಮಾಲೆಯ 'ಎಸ್' ಅಕ್ಷರ ಆಯ್ಕೆ. ಹಾಗೆಯೇ ಜಗತ್ತಿನ ಅತಿ ವೇಗ ಬೈಕ್‌ಗಳಲ್ಲಿ ಒಂದಾಗಿರುವ ಸುಜುಕಿ ಹಯಾಬುಸ ಗಂಟೆಗೆ 300 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆ ಒಂದಿಷ್ಟು...

2010ನೇ ಇಸವಿಯಲ್ಲಿ ಶೇಕಡಾ 19.9ರಷ್ಟು ಶೇರು ವಶಪಡಿಸಿಕೊಂಡಿರುವ ಫೋಕ್ಸ್‌ವ್ಯಾಗನ್ ಎಜಿ, ಸುಜುಕಿ ಕಂಪನಿಯಲ್ಲಿ ಗರಿಷ್ಠ ಶೇರುಗಳನ್ನು ಹೊಂದಿದೆ.

ಮಾರುತಿ ಮಾತೃಸಂಸ್ಥೆ ಸುಜುಕಿ ಬಗ್ಗೆ ಒಂದಿಷ್ಟು...

ಜಗತ್ತಿನ ಟಾಪ್ 10 ವಾಹನ ತಯಾರಕ ಸಂಸ್ಥೆಗಳಲ್ಲಿ ಸ್ಥಾನ ಪಡೆದುಕೊಂಡಿರುವ ಸುಜುಕಿಯ ಸಹಸಂಸ್ಥೆ ಮಾರುತಿ ಸುಜುಕಿ ಆಗಿದೆ. ಇದು 1970-80ರ ದಶಕದಲ್ಲಿ ಬೆಳೆದು ಬಂದಿತ್ತು.

More from DriveSpark

Article Published On: Wednesday, October 30, 2013, 6:04 [IST]
English summary
Iconic Japanese car manufacturer Suzuki has an interesting history. Here are some Suzuki facts that you probably did not know.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+