ಅಮೆರಿಕದ ಬೋಯಿಂಗ್ ವಿಮಾನವನ್ನೇ ಹಿಂದಿಕ್ಕಿದ ಏರ್ ಬಸ್

By Nagaraja

ಆಧುನಿಕ ಯುಗದಲ್ಲಿ ವಿಮಾನಯಾನ ತಂತ್ರಜ್ಞಾನವೂ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿದ್ದು, ಜಗತ್ತಿನ್ನೆಲ್ಲ ರಾಷ್ಟ್ರಗಳು ಹಿಂಬಾಲಿಸುತ್ತಿದೆ. ಇತರೆ ರಾಷ್ಟ್ರಗಳಿಗೆ ಹೋಲಿಸಿದಾಗ ಭಾರತದ ವ್ಯೋಮಯಾನ ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸಿಲ್ಲ.

ವಿಮಾನಯಾದ ಬಗ್ಗೆ ಯೋಚಿಸಿದಾಗ ಅಮೆರಿಕದ ಐಕಾನಿಕ್ 'ಬೋಯಿಂಗ್' ಸಂಸ್ಥೆಯು ಮೊದಲು ನೆನಪಿಗೆ ಬರುತ್ತದೆ. ಆದರೆ ಬೋಯಿಂಗ್‌ಗೆ ಪ್ರತಿಸ್ಪರ್ಧಿಯಾಗಿ ಫ್ರಾನ್ಸ್ ಮೂಲದ ಏರ್ ಬಸ್ ಸಂಸ್ಥೆಯು ತಲೆಯೆತ್ತಿರುವುದು ಮತ್ತಷ್ಟು ಸ್ಪರ್ಧೆಗೆ ವೇದಿಕೆಯೊದಗಿಸಿದೆ. ಪ್ರಸ್ತುತ ಏರ್ ಬಸ್ ಬಗ್ಗೆ ತಿಳಿದುಕೊಳ್ಳದ ಕೆಲವೊಂದು ಅಂಶಗಳ ಬಗ್ಗೆ ವಿವರಣೆ ನೀಡಲಿದ್ದೇವೆ.

ಅಮೆರಿಕದ ಬೋಯಿಂಗ್ ವಿಮಾನವನ್ನೇ ಹಿಂದಿಕ್ಕಿದ ಏರ್ ಬಸ್

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನ ಎಂಬ ಪಟ್ಟವನ್ನು ಏರ್ ಬಸ್ ಎ380 ಪಡೆದಿದೆ. ಈ ಮೂಲಕ ಬೋಯಿಂಗ್ ವಿಮಾನಕ್ಕೆ ದೊಡ್ಡ ಆಘಾತವನ್ನೇ ನೀಡಿದೆ.

ಅಮೆರಿಕದ ಬೋಯಿಂಗ್ ವಿಮಾನವನ್ನೇ ಹಿಂದಿಕ್ಕಿದ ಏರ್ ಬಸ್

ಫ್ರಾನ್ಸ್‌ನ ಏರ್‌ಬಸ್ ಸಂಸ್ಥೆಯ ಭಾಗವಾಗಿರುವ ಈ ಏರ್‌ಬಸ್ ಏಕಕಾಲಕ್ಕೆ 850ರಷ್ಟು ಪ್ರಯಾಣಿಕರನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ. ಇದರ ತ್ರಿ ಕ್ಲಾಸ್ ಸಂರಚನೆಯಲ್ಲಿ 550ರಿಂದ 600ರಷ್ಟು ಪ್ರಯಾಣಿಕರನ್ನು ಸಾಗಿಸಲಿದೆ.

ಅಮೆರಿಕದ ಬೋಯಿಂಗ್ ವಿಮಾನವನ್ನೇ ಹಿಂದಿಕ್ಕಿದ ಏರ್ ಬಸ್

ಡಬಲ್ ಡೆಕ್, ವಿಶಾಲವಾದ ದೇಹ ರಚನೆ, ನಾಲ್ಕು ಜೆಟ್ ಎಂಜಿನ್ ವಿಮಾನ ಇದಾಗಿದ್ದು, ಸುಧಾರಿತ ಸೌಲಭ್ಯಗಳನ್ನು ಯಾತ್ರಿಕರಿಗೆ ಒದಗಿಸುತ್ತಿದೆ.

ಅಮೆರಿಕದ ಬೋಯಿಂಗ್ ವಿಮಾನವನ್ನೇ ಹಿಂದಿಕ್ಕಿದ ಏರ್ ಬಸ್

ದೊಡ್ಡ ವಿಮಾನ ಮಾರುಕಟ್ಟೆಯಲ್ಲಿ ಬೋಯಿಂಗ್ ಅಧಿಪತ್ಯಕ್ಕೆ ವಿರಾಮ ಹಾಕಲು ಏರ್ ಬಸ್ ಎ380 ವಿಮಾನಕ್ಕೆ ಸಾಧ್ಯವಾಗಿದೆ ಅಂದರೆ ತಪ್ಪಾಗಲಾರದು.

ಅಮೆರಿಕದ ಬೋಯಿಂಗ್ ವಿಮಾನವನ್ನೇ ಹಿಂದಿಕ್ಕಿದ ಏರ್ ಬಸ್

2005 ಎಪ್ರಿಲ್ 27ರಂದು ಮೊದಲ ಹಾರಾಟ ಆರಂಭಿಸಿದ್ದ ಏರ್‌ಬಸ್ ಎ380, 2007ನೇ ಇಸವಿಯಲ್ಲಿ ಸಿಂಗಾಪುರ ಏರ್‌ಲೈನ್ಸ್‌ಗೆ ಸೇರುವ ಮೂಲಕ ಮೊದಲ ವಾಣಿಜ್ಯ ಪಯಣ ಆರಂಭಿಸಿತ್ತು.

ಅಮೆರಿಕದ ಬೋಯಿಂಗ್ ವಿಮಾನವನ್ನೇ ಹಿಂದಿಕ್ಕಿದ ಏರ್ ಬಸ್

2016 ಮಾರ್ಚ್ ವರೆಗಿನ ಲೆಕ್ಕಾಚಾರದ ಪ್ರಕಾರ 184 ಏರ್ ಬಸ್ ವಿಮಾನಗಳನ್ನು ವಿವಿಧ ರಾಷ್ಟ್ರಗಳಿಗೆ ವಿತರಣೆ ಮಾಡಲಾಗಿದೆ. ಈ ಪೈಕಿ ದುಬೈನ ಎಮಿರೇಟ್ಸ್ ಸಂಸ್ಥೆಯು ಅತಿ ಹೆಚ್ಚು ಅಂದರೆ 140ರಷ್ಟು ವಿಮಾನಗಳಿಗೆ ಆರ್ಡರ್ ನೀಡಿದೆ. ಈ ಪೈಕಿ 75ರಷ್ಟನ್ನು ಈಗಾಗಲೇ ವಿತರಣೆ ಮಾಡಲಾಗಿದೆ.

ಅಮೆರಿಕದ ಬೋಯಿಂಗ್ ವಿಮಾನವನ್ನೇ ಹಿಂದಿಕ್ಕಿದ ಏರ್ ಬಸ್

ಗ್ಲೋಬಲ್ ಟ್ರಾವೆಲರ್‌ನಿಂದ ವಿಶ್ವದ ಅತ್ಯುತ್ತಮ ಪ್ರಯಾಣಿಕ ವಿಮಾನ ಎಂಬ ಪ್ರಶಸ್ತಿಗೂ ಏರ್ ಬಸ್ ಭಾಜನವಾಗಿದೆ. ಇದೇ ಮೊದಲ ಬಾರಿಗೆ ಬೋಯಿಂಗ್ ಹೊರತಾದ ಸಂಸ್ಥೆಯು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗುತ್ತಿದೆ.

ಅಮೆರಿಕದ ಬೋಯಿಂಗ್ ವಿಮಾನವನ್ನೇ ಹಿಂದಿಕ್ಕಿದ ಏರ್ ಬಸ್

ಎಮಿರೇಟ್ಸ್ ಹೊರತಾಗಿ ಬ್ರಿಟಿಷ್ ಏರ್ ವೇಸ್, ಲುಫ್ತಾಂಸಾ, ಸಿಂಗಾಪುರ ಏರ್ ಲೈನ್ಸ್, ಥಾಯ್ ಏರ್ ಲೈನ್ಸ್, ಚೀನಾ ಸಥರ್ನ್, ಎಥಿಹಾಡ್, ಏಷಿಯಾನಾ, ಕೊರಿಯನ್ ಏರ್, ಕ್ವಾಂಟಸ್ ಮತ್ತು ತವರಿನ ಏರ್ ಫ್ರಾನ್ಸ್ ಇದರ ಸೇವೆಯನ್ನು ಬಳಸಿಕೊಳ್ಳುತ್ತಿದೆ.

ಅಮೆರಿಕದ ಬೋಯಿಂಗ್ ವಿಮಾನವನ್ನೇ ಹಿಂದಿಕ್ಕಿದ ಏರ್ ಬಸ್

ಹಾಗೊಂದು ವೇಳೆ ಏರ್ ಬಸ್ ಎ380 ವಿಶ್ವದ ಅತಿ ದೊಡ್ಡ ವಿಮಾನ ಅಂದುಕೊಂಡರೆ ತಪ್ಪಾದಿತು. ನಿಜಾಂಶವೆಂದರೆ, ಏರ್ ಬಸ್ ಎ380 ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನವಾಗಿದೆ.

ಅಮೆರಿಕದ ಬೋಯಿಂಗ್ ವಿಮಾನವನ್ನೇ ಹಿಂದಿಕ್ಕಿದ ಏರ್ ಬಸ್

ವಿಶ್ವದ ಅತಿ ದೊಡ್ಡ ವಿಮಾನದ ಪಟ್ಟವನ್ನು ರಷ್ಯಾದ ಆಂಟೊನೊವ್ ಎಎನ್-225 ಪಡೆದಿದೆ. ರಷ್ಯಾ ನಿರ್ಮಿತ ಈ ವಿಮಾನವನ್ನು ಸರಕು ಸಾಗಾಣೆಗೆ ಮಾತ್ರ ಬಳಕೆ ಮಾಡಲಾಗುತ್ತದೆ.

ಆಯಾಮ

ಆಯಾಮ

ಎರಡು ನೀಲ ತಿಮಿಂಗಲಗಳ ಉದ್ದಕ್ಕೆ ಸಮಾನವಾಗಿರುವ ಏರ್ ಬಸ್ ಎ380, 72.7 ಮೀಟರ್ ಉದ್ದವನ್ನೂ 24.1 ಮೀಟರ್ ಎತ್ತರ ಮತ್ತು 80 ಮೀಟರ್ ಅಗಲವನ್ನು ಪಡೆದಿದೆ.

ಭಾರ

ಭಾರ

ಏರ್ ಬಸ್ ಎ380 ಭಾರವನ್ನು ಅಂದಾಜಿಸಬಹುದೇ? ಸಂಶಯ ಬೇಡ ಬರೋಬ್ಬರಿ 590 ಟನ್ ಭಾರವನ್ನು ಹೊಂದಿದೆ.

ರೆಕ್ಕೆಗಳು

ರೆಕ್ಕೆಗಳು

ತನ್ನ ಪ್ರತಿಸ್ಪರ್ಧಿ ಬೋಯಿಂಗ್ 747 ವಿಮಾನಗಿಂತಲೂ ಶೇಕಡಾ 54ರಷ್ಟು ವಿಶಾಲವಾದ ರೆಕ್ಕೆಗಳನ್ನು ಏರ್ ಬಸ್ ಎ380 ಪಡೆದಿದೆ.

ನಿರ್ಮಾಣ ಹೇಗೆ

ನಿರ್ಮಾಣ ಹೇಗೆ

ಏರ್ ಬಸ್ ಎ380 ವಿಮಾನದ ರೆಕ್ಕೆಗಳನ್ನು ಇಂಗ್ಲೆಂಡ್ ನಲ್ಲಿ ರಚಿಸಲಾಗುತ್ತಿದ್ದು, ಬಾಲ ಮತ್ತು ಮೈಕಟ್ಟನ್ನು ಸ್ಪೇನ್ ಮತ್ತು ಜರ್ಮನಿಯಲ್ಲಿ ನಿರ್ಮಿಸಲಾಗುತ್ತಿದೆ. ಬಳಿಕ ಹಡಗಿನ ಮೂಲಕ ಫ್ರಾನ್ಸ್‌ಗೆ ಸ್ಥಳಾಂತರಿಸಿ ಜೋಡಣೆ ಮಾಡಲಾಗುವುದು.

ಮರ್ಸಿಡಿಸ್ ಬೆಂಝ್ ಸಿ ಸಿರೀಸ್ ಕಾರು

ಮರ್ಸಿಡಿಸ್ ಬೆಂಝ್ ಸಿ ಸಿರೀಸ್ ಕಾರು

ಜರ್ಮನಿಯ ಐಕಾನಿಕ್ ಮರ್ಸಿಡಿಸ್ ಬೆಂಝ್ ನ ಸಿ ಶ್ರೇಣಿಗೆ ಸಮಾನವಾದ ಉದ್ದವನ್ನು ಏರ್ ಬಸ್ ಎ380 ಕಾಪಾಡಿಕೊಂಡಿದೆ.

ರನ್ವೇ

ರನ್ವೇ

ಹಾಗೆಂದ ಮಾತ್ರಕ್ಕೆ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಏರ್ ಬಸ್ ಇಳಿಸಲು ಸಾಧ್ಯವಿಲ್ಲ. ಸದ್ಯಕ್ಕೆ ವಿಶ್ವದ 20 ವಿಮಾನ ನಿಲ್ದಾಣಗಳು ಮಾತ್ರ ಏರ್ ಬಸ್ ಇಳಿಸುವ ಸಾಮರ್ಥ್ಯವನ್ನು ಹೊಂದಿದೆ.

ವಿಮಾನದ ಪರಿಚಾರಕರು

ವಿಮಾನದ ಪರಿಚಾರಕರು

ಏರ್ ಬಸ್ ವಿಮಾನದ ಪರಿಚಾರಕರಿಗೂ ಗರಿಷ್ಠ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ವೇಗ

ವೇಗ

43,000 ಅಡಿ ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿರುವ ಏರ್ ಬಸ್ ಗಂಟೆಗೆ ಗರಿಷ್ಠ 640 ಮೈಲು ವೇಗದಲ್ಲಿ ಸಂಚರಿಸಲಿದೆ.

ಪೈಂಟ್

ಪೈಂಟ್

ಏರ್ ಬಸ್ ವಿಮಾನದ ಒಳಗೂ ಹೊರಗೂ ಬಳಿಯಲು 3600 ಲೀಟರ್ ಗಳಷ್ಟು ಪೈಂಟ್ ಗಳ ಅಗತ್ಯವಿರುತ್ತದೆ.

ಸುಲಭ ಚಾಲನೆ

ಸುಲಭ ಚಾಲನೆ

ಇಬ್ಬರು ಪೈಲಟ್ ಗಳಿಂದ ನಿಯಂತ್ರಿಸಲ್ಪಡುವ ಏರ್ ಬಸ್ ವಿಮಾನಗಳು ಸುಲಭವಾಗಿ ನಿರ್ವಹಿಸಬಹುದಾದ ಕಂಪ್ಯೂಟರ್ ತಂತ್ರಗಾರಿಕೆಯನ್ನು ಹೊಂದಿದೆ.

More from DriveSpark

Article Published On: Monday, April 18, 2016, 11:39 [IST]
English summary
Interesting facts about world's largest passenger airliner 'Airbus A380'
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+