ಬೇಕಾದ ಜಾಗಕ್ಕೆ ಸಾಗಿಸಬಲ್ಲ ಐಷಾರಾಮಿ ಮೊಬೈಲ್ ಮನೆಗಳಿವು..!
ಎಷ್ಟು ದೊಡ್ಡ ಮನೆಯನ್ನು ಹೊಂದಿದ್ದರೂ, ಯಾರೂ ಇಲ್ಲದ ನಿಶಬ್ದವಾದ ಸ್ಥಳದಲ್ಲಿರುವ ಒಂದು ಸಣ್ಣ ಮನೆ ನೀಡುವ ರೋಮಾಂಚನವನ್ನು ಬೇರೆ ಯಾವುದು ನೀಡಲು ಸಾಧ್ಯವಿಲ್ಲ. ಅಂತಹ ಸುಂದರ ಕಲ್ಪನೆಯ ಮೇಲೆ ಪುಟ್ಟ ಮನೆಯನ್ನು ನಿರ್ಮಿಸಲಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ, ಕ್ಯಾಂಪರ್‌ನಂತಹ ಮೊಬೈಲ್ ಮನೆಯನ್ನು ಹೊಂದಲು ಹಲವಾರು ಜನರು ಬಯಸುತ್ತಾರೆ. ಅವರು ಸಾಮಾನ್ಯವಾಗಿ ಪ್ರಯಾಣ ಬೆಳೆಸುವವರಾಗಿರುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಪ್ರಯಾಣಿಸಲು ಹಾಗೂ ಹೊಸ ಹೊಸ ಜಾಗಗಳಿಗೆ ತೆರಳಲು ಆಸಕ್ತಿ ಹೊಂದಿರುತ್ತಾರೆ.

ಇಂತಹ ಪ್ರವಾಸಗಳಿಗೆ ತೆರಳುವ ಶ್ರೀಮಂತರು ಈ ರೀತಿಯ ಮನೆಗಳನ್ನು ಖರೀದಿಸುತ್ತಾರೆ. ಈ ಮನೆಗಳು ಎಲ್ಲಾ ಸೌಲಭ್ಯಗಳನ್ನು ಹೊಂದಿರುತ್ತವೆ. ಆದರೆ ಬಡವರಿಗೆ ಈ ಮೊಬೈಲ್ ಮನೆಗಳು ಕೇವಲ ಕನಸಾಗಿರುತ್ತವೆ.

ಮನೆ ತುಂಬಾ ಚಿಕ್ಕದಾಗಿದ್ದರೂ ಆರಾಮದಾಯಕವಾಗಿರುತ್ತವೆ. ಈ ಕಲ್ಪನೆಯ ಮನೆಯನ್ನು ಅಮೆರಿಕಾದ ಸೋನಾ ಪೊಲೊವೊ ಎಂಬ ಮಹಿಳೆ ರಚಿಸಿದ್ದಾರೆ. ಈ ಮನೆಯನ್ನು ವಿನ್ಯಾಸ ಸ್ಪರ್ಧೆಗಾಗಿ ರಚಿಸಲಾಗಿತ್ತು. ಅವರು ಈ ಸ್ಪರ್ಧೆಯಲ್ಲಿ ಗೆಲ್ಲದಿದ್ದರೂ, ತಮ್ಮ ಕಲ್ಪನೆಯ ಮನೆಯನ್ನು ನಿರ್ಮಿಸಿದ್ದಾರೆ.

ಮೊಟ್ಟೆಯ ಆಕಾರದಲ್ಲಿರುವ ಈ ಮೊಬೈಲ್ ಮನೆಯನ್ನು ಇಕೋ ಕ್ಯಾಪ್ಸುಲ್ ಎಂದು ಕರೆಯಲಾಗುತ್ತದೆ. ಇದನ್ನು ಕಾರುಗಳ ಮೂಲಕ ಮುಂದಕ್ಕೆ ಸಾಗಿಸಬಹುದು. ಸಣ್ಣ, ಪುಟ್ಟ ರಸ್ತೆಗಳಲ್ಲಿಯೂ ಇದನ್ನು ಸುಲಭವಾಗಿ ಸಾಗಿಸಬಹುದು. ಈ ಮನೆಯ ಛಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಗಳಿದ್ದು, ವಿಂಡ್ ಫ್ಯಾನ್ ಮೂಲಕ ವಿದ್ಯುತ್ ಪಡೆಯಬಹುದು. ಈ ಮನೆಯನ್ನು ಗ್ರೀನ್ ಹೌಸ್ ಗೆ ತಕ್ಕಂತೆ ನಿರ್ಮಿಸಲಾಗಿದೆ.

ಈ ಮನೆಯ ಒಳ ಭಾಗದಲ್ಲಿ ಎರಡು ಮಲಗುವ ಕೋಣೆಗಳು, ಒಂದು ಸೋಫಾ ಸೆಟ್, ಬಟ್ಟೆ ಹಾಗೂ ಇತರೆ ವಸ್ತುಗಳನ್ನಿಡಲು ಕಪಾಟು, ಎಲೆಕ್ಟ್ರಿಕ್ ಸ್ಟವ್ ಹಾಗೂ ಒಂದು ಮನೆಗೆ ಬೇಕಾಗಿರುವ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ವಿಶ್ರಾಂತಿ ಕೊಠಡಿಗಳಿವೆ.

ಈ ಮೊಬೈಲ್ ಮನೆಯಲ್ಲಿ ಕುರ್ಚಿ ಹಾಗೂ ದೊಡ್ಡ ಛತ್ರಿಗಳನ್ನು ನೀಡಲಾಗಿದೆ. ಈ ಮೊಬೈಲ್ ಮನೆ ಹೊರಗೆ ಪ್ರಯಾಣ ಮಾಡುವವರಿಗೆ ಆರಾಮವನ್ನು ನೀಡುತ್ತದೆ. ಸೋನಾರವರು ಇಂತಹ 50 ಮನೆಗಳನ್ನು ತಯಾರಿಸಿ, ಮಾರಾಟ ಮಾಡಲು ತೀರ್ಮಾನಿಸಿದ್ದಾರೆ.
MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಈ ಮನೆಗಳನ್ನು ಅಮೆರಿಕಾ, ಜಪಾನ್, ಯುರೋಪಿಯನ್ ದೇಶಗಳು ಹಾಗೂ ಆಸ್ಟ್ರೇಲಿಯಾಗಳಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯಾದರೆ ಹೆಚ್ಚು ಮನೆಗಳನ್ನು ನಿರ್ಮಿಸಿ, ಪ್ರಪಂಚದ ಬೇರೆ ದೇಶಗಳಿಗೂ ಮಾರಾಟ ಮಾಡಲಾಗುವುದೆಂದು ಸೋನಾರವರು ಹೇಳಿದ್ದಾರೆ.
MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?
ಈ ಮನೆಗಳ ಬೆಲೆಗಳನ್ನು ಕಡಿಮೆ ಮಾಡಲಾಗುವುದು ಎಂದು ಸಹ ಹೇಳಿದ್ದಾರೆ. ಈ ಮೊಬೈಲ್ ಮನೆಯ ಬೆಲೆ 91,000 ಡಾಲರ್ ಗಳಾಗಿದೆ. 2,200 ಡಾಲರ್ ಗಳನ್ನು ಅಡ್ವಾನ್ಸ್ ಆಗಿ ಪಾವತಿಸಿ ಈ ಮೊಬೈಲ್ ಮನೆಗಳನ್ನು ಬುಕ್ಕಿಂಗ್ ಮಾಡಬಹುದು. ಸೋನಾರವರು ವಿನ್ಯಾಸಗೊಳಿಸಿರುವ ಈ ಮೊಬೈಲ್ ಮನೆಯನ್ನು ನೈಸ್ ಅಂಡ್ ವೈಸ್ ಸ್ಟುಡಿಯೋ ತಯಾರಿಸಿ, ವಿತರಿಸಿದೆ.
MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಭಾರತದಲ್ಲಿಯೂ ಈ ರೀತಿಯ ಮೊಬೈಲ್ ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬೆಲೆ ಹೆಚ್ಚಾಗಿರುವ ಕಾರಣ ಕೇವಲ ಶ್ರೀಮಂತರು ಮಾತ್ರ ಖರೀದಿಸಲು ಸಾಧ್ಯವಾಗಿದೆ. ಕೈಗೆಟುಕುವ ದರದಲ್ಲಿ ಮಾರಾಟ ಮಾಡಿದರೆ ಭಾರತದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.


Click it and Unblock the Notifications