ಬೆರಗುಗೊಳಿಸುವ ಮಾಹಿತಿ ಕೊಟ್ಟ ISRO... ಚಂದ್ರನ ರಹಸ್ಯ ಬಯಲು... ವಿಶ್ವದೇಶಗಳಿಗೆ ಅಚ್ಚರಿ!

ಚಂದ್ರಯಾನ 3 ಬಾಹ್ಯಾಕಾಶ ನೌಕೆಯ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಸಲ್ಫರ್ ಮತ್ತು ಆಮ್ಲಜನಕವನ್ನು ಕಂಡುಹಿಡಿದಿದೆ. ಮುಂದಿನ ಹಂತವು ಹೈಡ್ರೋಜನ್ ಹೊಂದಿರುವ ಸಂಭವನೀಯ ಅಂಶಗಳನ್ನು ಪರೀಕ್ಷಿಸುವುದು. ಈ ಮಾಹಿತಿಯನ್ನು ಈಗ ಇಸ್ರೋ ಬಿಡುಗಡೆ ಮಾಡಿದ್ದು ವಿಶ್ವದ ವಿಜ್ಞಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ಆಗಸ್ಟ್ 23ರಂದು ಇಸ್ರೋದ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು. ಭಾರತೀಯರು ಈ ವಿಜಯೋತ್ಸವ ಆಚರಿಸುತ್ತಿರುವಾಗಲೇ ಲ್ಯಾಂಡ್ ಆದ ಲ್ಯಾಂಡರ್ ನಿಂದ ಬಿಡುಗಡೆಗೊಂಡ ಪ್ರಗ್ಯಾನ್ ರೋವರ್ ಇದೀಗ ಚಂದ್ರನ ವಿವಿಧ ಭಾಗಗಳಿಗೆ ತೆರಳಿ ಅಲ್ಲಿಂದಲೇ ಒಂದಷ್ಟು ಸಂಶೋಧನೆ ನಡೆಸಿ ಆ ಮಾಹಿತಿಯನ್ನು ಲ್ಯಾಂಡರ್ ಮೂಲಕ ಭೂಮಿಗೆ ರವಾನಿಸುತ್ತಿದೆ.

isro-chandrayaan-3-discovers-sulphur-on-the-moon

ಈ ಪ್ರಗ್ಯಾನ್ ರೋವರ್‌ನಲ್ಲಿ LIBS ಎಂಬ ಉಪಕರಣವನ್ನು ಅಳವಡಿಸಲಾಗಿದ್ದು, ಈ ಉಪಕರಣವು ಚಂದ್ರನ ಮೇಲ್ಮೈಯಲ್ಲಿರುವ ಅಣುಗಳನ್ನು ಅಧ್ಯಯನ ಮಾಡಲು ಲೇಸರ್ ಕಿರಣಗಳನ್ನು ಬಳಸಿ ಅದರಿಂದ ಪಡೆದ ಮಾಹಿತಿಯನ್ನು ಭೂಮಿಗೆ ರವಾನಿಸುತ್ತದೆ. ಚಂದ್ರನ ಮೇಲಿನ ಮೇಲ್ಮೈಯಲ್ಲಿ ಸಲ್ಫರ್‌ನ ಹೊಸ ಪುರಾವೆಗಳನ್ನು ಸಹ ಇಸ್ರೋ ಕಂಡುಹಿಡಿದಿದೆ ಎಂಬ ಮಾಹಿತಿ ಇದೀಗ ಬಿಡುಗಡೆಯಾಗಿದೆ.

ಪ್ರಗ್ಯಾನ್ ರೋವರ್ ಚಂದ್ರನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಂಶೋಧನೆ ನಡೆಸುತ್ತಿದ್ದು, ಈ ಅಧ್ಯಯನಗಳಿಂದ ಪಡೆದ ಎಲ್ಲಾ ಫಲಿತಾಂಶಗಳನ್ನು ಇಸ್ರೋ ಸಂಗ್ರಹಿಸಿದೆ. ಚಂದ್ರನ ಮೇಲಿನ ರೋವರ್‌ನ ಅನ್ವೇಷಣೆಯಿಂದ ಪ್ರತಿ ಸ್ಥಳದಲ್ಲಿ ವಿವಿಧ ಫಲಿತಾಂಶಗಳನ್ನು ಪಡೆಯಲಾಗಿದೆ. ಸದ್ಯ ರೋವರ್ ನೀಡಿದ ಮಾಹಿತಿಯಂತೆ ಈ ಕೆಳಗಿನ ಅಂಶಗಳನ್ನು ಖಚಿತಪಡಿಸಲಾಗಿದೆ.

isro-chandrayaan-3-discovers-sulphur-on-the-moon

ಚಂದ್ರನ ಮೇಲೆ ಅಲ್ಯೂಮಿನಿಯಂ, ಸಲ್ಫರ್, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ ಮುಂತಾದ ಅದ್ಬುತ ಅಂಶಗಳು ಇರುವುದಾಗಿ ಇಸ್ರೋ ಈಗ ಕಂಡುಹಿಡಿದಿದೆ. ಹಾಗೆಯೇ ಮೆಗ್ನೀಷಿಯಮ್, ಸಿಲಿಕಾನ್ ಮತ್ತು ಆಮ್ಲಜನಕದ ಪುರಾವೆಗಳಿವೆ. ಹೈಡ್ರೋಜನ್ ನ ಸಾಧ್ಯತೆಯನ್ನು ಅಧ್ಯಯನ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಇಸ್ರೋ ಹೇಳಿದೆ.

ಚಂದ್ರನ ಮೇಲ್ಮೈಯಲ್ಲಿ ಮೇಲಿನ ಎಲ್ಲಾ ಅಣುಗಳು ಇರುತ್ತವೆ ಎಂಬುದಕ್ಕೆ ಪುರಾವೆಗಳನ್ನು ಸಂಗ್ರಹಿಸಲಾಗಿದೆಯಾದರೂ ಯಾವ ಪ್ರಮಾಣದಲ್ಲಿವೆ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಲಾಗಿಲ್ಲ. ಪ್ರತಿ ಪ್ರಯೋಗದಲ್ಲಿ ರೋವರ್ ಲ್ಯಾಂಡರ್ ಮೂಲಕ ಅದರ ಅಳತೆಗಳನ್ನು ISRO ಗೆ ವರದಿ ಮಾಡಲಾಗಿದ್ದರೂ ISRO ಇನ್ನೂ ಸಾರ್ವಜನಿಕರಿಗೆ ಡೇಟಾವನ್ನು ಬಿಡುಗಡೆ ಮಾಡಿಲ್ಲ.

ಪ್ರಸ್ತುತ ಚಂದ್ರನ ಮೇಲೆ ಆಮ್ಲಜನಕದ ಸಾಕ್ಷ್ಯದೊಂದಿಗೆ ಜಲಜನಕದ ಸಾಕ್ಷ್ಯವೂ ದೊರೆತರೆ ಚಂದ್ರನ ಮೇಲೆ ನೀರು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಈ ರೀತಿ ಚಂದ್ರನ ಮೇಲೆ ನೀರು ಸೃಷ್ಟಿಯಾದರೆ ಅಲ್ಲಿ ಮನುಷ್ಯರು ವಾಸಿಸಲು ಯೋಗ್ಯವಾದ ಸ್ಥಳವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಭೂಮಿಯ ಮೇಲೆ ಮನುಷ್ಯ ವಾಸಿಸುವ ರೀತಿಯಲ್ಲಿ ಚಂದ್ರನ ಮೇಲೆ ನೇರವಾಗಿ ವಾಸಿಸಲು ಸಾಧ್ಯವಿಲ್ಲವಾದರೂ, ಪರ್ಯಾಯ ವ್ಯವಸ್ಥೆ ಮಾಡಬಹುದು.

ಚಂದ್ರನ ಮೇಲೆ ಮನುಷ್ಯರು ವಾಸಿಸುವ ಯೋಗ್ಯ ಪರಿಸ್ಥಿತಿಯನ್ನು ಸೃಷ್ಟಿಸಲು ಸಾಧ್ಯವಿದೆ ಎಂದು ಬಹುತೇಕ ವಿಜ್ಞಾನಿಗಳು ನಂಬಿದ್ದಾರೆ. ಇದಕ್ಕಾಗಿ ಭೂಮಿಯಿಂದ ಚಂದ್ರನಿಗೆ ಸಾಗಿಸಲು ಸಾಧ್ಯವಾಗದ ನೀರಿನಂತಹ ಕೆಲವು ವಸ್ತುಗಳ ಅಗತ್ಯಗಳನ್ನು ಚಂದ್ರನಿಗೆ ಪೂರೈಸಲು ಸಾಧ್ಯವಾಗದ ಕಾರಣ ಇಂತಹ ಎಲ್ಲಾ ಅಧ್ಯಯನಗಳನ್ನು ಚಂದ್ರನ ಮೇಲೆ ನಡೆಸಲಾಗುತ್ತಿದೆ.

ಈ ಕುರಿತು ಎಲ್ಲಾ ಅಧಿಕೃತ ಪ್ರಕಟಣೆಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ರೋವರ್ 14 ದಿನಗಳ ಜೀವಿತಾವಧಿಯನ್ನು ಹೊಂದಿದೆ. ಅಂದರೆ ಸೂರ್ಯನು ಆ ಪ್ರದೇಶದಲ್ಲಿ ಇರುವವರೆಗೆ ಮಾತ್ರ ರೋವರ್ ಅಲ್ಲಿ ಕಾರ್ಯಾಚರಣೆಯನ್ನು ಮಾಡಬಹುದು. ಅದರಂತೆ ಇದುವರೆಗೆ ಏಳು ದಿನಗಳು ಕಳೆದಿದ್ದು, ಇನ್ನು ಏಳು ದಿನ ರೋವರ್ ತನ್ನ ಕೆಲಸವನ್ನು ಮುಂದುವರೆಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Wednesday, August 30, 2023, 15:59 [IST]
English summary
Isro chandrayaan 3 discovers sulphur on the moon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+