ಇತಿಹಾಸ ಬರೆಯಲಿರುವ ಇಸ್ರೋ; ಏಕಕಾಲಕ್ಕೆ 22 ಉಪಗ್ರಹ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ) ನೂತನ ಇತಿಹಾಸ ಬರೆಯಲು ಹೊರಟಿದ್ದು, ಏಕಕಾಲಕ್ಕೆ 22 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಈ ಭವ್ಯ ಮುಹೂರ್ತಕ್ಕೆ ಮೇ ತಿಂಗಳಲ್ಲಿ ಇಡೀ ದೇಶವೇ ಸಾಕ್ಷ್ಯ ವಹಿಸಲಿದೆ.
Also Read: ಭಾರತದ ಐತಿಹಾಸಿಕ ಮಂಗಳಯಾನ
ಇಸ್ರೋ ಮಹತ್ತರ ಮಿಷನ್ ದೇಶದ ಬಾಹ್ಯಾಕಾಶ ಇತಿಹಾಸದಲ್ಲೇ ಹೊಸ ಮೈಲುಗಲ್ಲನ್ನು ಸೃಷ್ಟಿ ಮಾಡಲಿದೆ. ಇವುಗಳಲ್ಲಿ ವಿದೇಶ ರಾಷ್ಟ್ರಗಳ ಮೈಕ್ರೋ ಹಾಗೂ ನ್ಯಾನೋ ಉಪಗ್ರಹಗಳು ಸೇರಿವೆ.

ಭಾರತದ ರಿಮೋಟ್ ಸೆನ್ಸಿಂಗ್ ಕಾರ್ಟೊಸ್ಯಾಟ್ 2ಸಿ ಸೇರಿದಂತೆ ಅಮೆರಿಕ, ಕೆನಡಾ, ಇಂಡೋನೇಷ್ಯಾ ಮತ್ತು ಜರ್ಮನಿಗೆ ಸೇರಿದಂತೆ ಒಟ್ಟು 22 ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಸಿ34 ಹೊತ್ತೊಯ್ಯಲಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಇಸ್ರೋ, ಇದೇ ಮೊದಲ ಬಾರಿಗೆ ಒಂದೇ ಮಿಷನ್‌ನಲ್ಲಿ 22 ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಸಿ34 ಹೊತ್ತೊಯ್ಯಲಿದೆ ಎಂದಿದೆ.

22 ಉಪಗ್ರಹಗಳ ಪೈಕಿ 4ರಿಂದ 30 ಕೆ.ಜಿ ವಿಭಾಗಕ್ಕೆ ಸೇರಿದ 17 ನ್ಯಾನೋ ಹಾಗೂ 85ರಿಂದ 130ಕೆ.ಜಿ ವಿಭಾಗಕ್ಕೆ ಸೇರಿದ ನಾಲ್ಕು ಮೈಕ್ರೋ ಉಪಗ್ರಹಗಳು ಸೇರಿದಂತೆ ಭಾರತದ ಕಾರ್ಟೊಸ್ಯಾಟ್ ಇರಲಿದೆ.

ಇಸ್ರೋ ಒಂದೇ ಅಭಿಯಾನದಲ್ಲಿ 10 ಉಪಗ್ರಹಗಳನ್ನು ಉಡಾವಣೆ ಮಾಡಿರುವುದು ಇದುವರೆಗಿನ ದಾಖಲೆಯಾಗಿತ್ತು. ಈಗ ಇದನ್ನು ದ್ವಿಗುಣಗೊಳಿಸುವ ಯೋಜನೆಯಿದೆ.

ಚೆನ್ನೈನಿಂದ 100 ಕೀ.ಮೀ. ದೂರದಲ್ಲಿ ಸ್ಥಿತಗೊಂಡಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಎಲ್ಲ 22 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಲಾಗುವುದು.

ಈ ಹಿಂದೆ 2008ನೇ ಇಸವಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು 10 ಸ್ಯಾಟ್‌ಲೈಟ್ ಗಳನ್ನು ಏಕಕಾಲಕ್ಕೆ ಉಡಾವಣೆಗೊಳಿಸಿ ದಾಖಲೆ ಬರೆದಿತ್ತು.

ಹಾಗಿದ್ದರೂ ಜಾಗತಿಕ ಬಾಹ್ಯಾಕಾಶ ಇತಿಹಾಸ ಪುಟ ತೆರೆದು ನೋಡಿದಾಗ 2013ನೇ ಸಾಲಿನಲ್ಲಿ ನಾಸಾ ಏಕಕಾಲಕ್ಕೆ 29 ಉಪಗ್ರಹಗಳನ್ನು ಉಡಾವಣೆ ಮಾಡಿರುವುದು ಇದುವರೆಗಿನ ವಿಶ್ವ ದಾಖಲೆಯಾಗಿದೆ.

ಇಸ್ರೋ ಉಡಾವಣೆ ಮಾಡಲಿರುವ ಕೆಲವು ಮಹತ್ವದ ವಿದೇಶ ಉಪಗ್ರಹಗಳು ಇಂತಿದೆ: ಲ್ಯಾಪಾನ್ ಎ3 - ಇಂಡೋನೇಷ್ಯಾ, ಬೈರೊಸ್ - ಜರ್ಮನಿ, ಸ್ಕೈಸ್ಯಾಟ್ ಜೆನ್ 2-1 - ಅಮೆರಿಕ, ಎಂವಿವಿ - ಜರ್ಮನಿ.

ಭಾರತೀಯ ನಾಗರಿಕ ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ
ಇಸ್ರೋ ಮಹಾ ಸಾಧನೆ; ಬ್ರಿಟನ್ ಉಪಗ್ರಹಗಳ ಯಶಸ್ವಿ ಹಾರಾಟ


Click it and Unblock the Notifications








