ಕಷ್ಟ ಕಾಲದಲ್ಲಿ ಜೊತೆಗಿದ್ದ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ ಕಿಸ್‌ಫ್ಲೋ ಕಂಪನಿ

ಇತ್ತೀಚೆಗಷ್ಟೇ ಚೆನ್ನೈ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ 100 ಮಾರುತಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಸುದ್ದಿಯಾಗುತ್ತು, ಇದೀಗ ಇದೇ ಚೆನ್ನೈ ಮೂಲದ ಮತ್ತೊಂದು ಐಟಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.

ಕಷ್ಟದಲ್ಲೂ ಜೊತೆಗಿದ್ದ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ ಕಿಸ್‌ಫ್ಲೋ ಕಂಪನಿ

ಹೌದು ಚೆನ್ನೈ ಮೂಲದ ಐಟಿ ಕಂಪನಿಯಾದ, ಕಿಸ್‌ಫ್ಲೋ ತನ್ನ ಐವರು ಹಿರಿಯ ಉದ್ಯೋಗಿಗಳಿಗೆ ಬಿಎಂಡಬ್ಲ್ಯು 5 ಸಿರೀಸ್ ಐಷಾರಾಮಿ ಕಾರುಗಳನ್ನು ಅನಿರೀಕ್ಷಿತ ಉಡುಗೊರೆಯಾಗಿ ನೀಡಿದೆ. ಈ ಪ್ರತಿಯೊಂದು ಕಾರಿನ ಬೆಲೆ 1 ಕೋಟಿ ರೂ. ಇದ್ದು, ಈ ಕುರಿತ ಸುದ್ದಿಯನ್ನು ಕೇಳಿದವರೆಲ್ಲ ಹುಬ್ಬೇರಿಸುವಂತಾಗಿದೆ.

ಕಷ್ಟದಲ್ಲೂ ಜೊತೆಗಿದ್ದ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ ಕಿಸ್‌ಫ್ಲೋ ಕಂಪನಿ

ಕಠಿಣ ಪರಿಶ್ರಮಕ್ಕಾಗಿ ಉಡುಗೊರೆ

ಈ ಐವರು ಉದ್ಯೋಗಿಗಳ ನಿಷ್ಠೆ, ಬೆಂಬಲ ಮತ್ತು ಶ್ರದ್ಧೆಯ ಕೆಲಸಕ್ಕೆ ಪ್ರತಿಯಾಗಿ ಈ ಉಡುಗೊರೆಯನ್ನು ನೀಡಲಾಗಿದೆ ಎಂದು ಕಂಪನಿ ಹೇಳಿದೆ. ಕಿಸ್‌ಫ್ಲೋ ಇಂಕ್‌ನ ಸಿಇಒ ಸುರೇಶ್ ಸಂಬಂದಂ ಅವರ ಪ್ರಕಾರ, ಈ ಐವರು ಉದ್ಯೋಗಿಗಳು ಕಂಪನಿಯ ಪ್ರಾರಂಭದಿಂದಲೂ ಅವರೊಂದಿಗೆ ಇದ್ದಾರೆ.

ಕಷ್ಟದಲ್ಲೂ ಜೊತೆಗಿದ್ದ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ ಕಿಸ್‌ಫ್ಲೋ ಕಂಪನಿ

ಅಲ್ಲದೇ ಕಂಪನಿಯ ಕಷ್ಟದ ಸಮಯದಲ್ಲಿ ಅವರೊಂದಿಗೆ ಇದ್ದು, ಎಷ್ಟೇ ಸಮಸ್ಯೆಗಳು ಎದುರಾದರು ಒಗ್ಗಟ್ಟಾಗಿ ಸಹಕರಿಸುತ್ತಿದ್ದರು. ಅಲ್ಲದೇ ಕಂಪನಿಯ ಈ ಉದ್ಯೋಗಿಗಳು ಸರಳ ಕುಟುಂಬದಿಂದ ಬಂದವರು ಮತ್ತು ತಮ್ಮ ಕಂಪನಿಗೆ ಸೇರುವ ಮೊದಲು ಹಲವಾರು ಸವಾಲುಗಳನ್ನು ಎದುರಿಸಿದ್ದರು.

ಕಷ್ಟದಲ್ಲೂ ಜೊತೆಗಿದ್ದ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ ಕಿಸ್‌ಫ್ಲೋ ಕಂಪನಿ

ಸಂಸ್ಥೆಯು ತನ್ನ ಪ್ರಯಾಣದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿದೆ. COVID-19 ಸಾಂಕ್ರಾಮಿಕ ಸಮಯದಲ್ಲಿ ಎದುರಾದ ಕೆಟ್ಟ ಪರಿಸ್ಥಿತಿಯನ್ನು ಗಮನಿಸಿದರೆ, ಕೆಲವು ಹೂಡಿಕೆದಾರರು ಕಂಪನಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬ ಅನುಮಾನವನ್ನು ಸಹ ವ್ಯಕ್ತಪಡಿಸಿದ್ದರು ಎಂದು ಸುರೇಶ್ ಹೆಳಿದರು.

ಕಷ್ಟದಲ್ಲೂ ಜೊತೆಗಿದ್ದ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ ಕಿಸ್‌ಫ್ಲೋ ಕಂಪನಿ

ಉದ್ಯೋಗಿಗಳು ಕಂಪನಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಕಂಪನಿಯು ಅವರಿಗೆ ಕಾರು ನೀಡುತ್ತಿಲ್ಲ, ಅವರು ತಮ್ಮ ಸ್ವಂತ ದುಡಿಮೆಯ ಹಣದಿಂದ ಗಳಿಸಿದ್ದಾರೆ ಎಂದ ಸುರೇಶ್, Kisflow ಕಂಪನಿಯು ತನ್ನ ಸ್ಥಾಪನೆಯ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಅಂಗವಾಗಿ ಶ್ರಮವಹಿಸಿ ದುಡಿಯುವ ಉದ್ಯೋಗಿಗಳಿಗೆ ಉಡುಗೊರೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದರು.

ಕಷ್ಟದಲ್ಲೂ ಜೊತೆಗಿದ್ದ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ ಕಿಸ್‌ಫ್ಲೋ ಕಂಪನಿ

ನೌಕರರು ನಿರೀಕ್ಷಿಸಿರಲಿಲ್ಲ

ಈ ಐಷಾರಾಮಿ ಉಡುಗೊರೆಯನ್ನು ಪಡೆದ ಕಿಸ್‌ಫ್ಲೋ ಕಂಪನಿಯ ಉದ್ಯೋಗಿಗಳು ಮಾತನಾಡಿ, ಈ ವಾರ್ಷಿಕೋತ್ಸವವು ತಮಗೆ ವಿಶೇಷವಾಗಿರುತ್ತದೆ ಎಂದು ಬಾಸ್ ಮೊದಲೇ ಹೇಳಿದ್ದರು. ಉಡುಗೊರೆಯನ್ನು ಇಷ್ಟು ದೊಡ್ಡ ಮಟ್ಟದಲ್ಲಿರುತ್ತದೆ ಎಂದು ನಾವು ಉಹಿಸಿರಲಿಲ್ಲ.

ಕಷ್ಟದಲ್ಲೂ ಜೊತೆಗಿದ್ದ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ ಕಿಸ್‌ಫ್ಲೋ ಕಂಪನಿ

ಬಾಸ್ ನಮ್ಮನ್ನು ಒಟ್ಟಿಗೆ ಊಟಕ್ಕೆ ಆಹ್ವಾನಿಸಬಹುದು ಅಥವಾ ಹೆಚ್ಚಿನ ಕಂಪನಿಗಳಲ್ಲಿರುವಂತೆ ಚಿನ್ನದ ನಾಣ್ಯಗಳು, ವೋಚರ್‌ಗಳಂತಹ ಕೆಲವು ಉಡುಗೊರೆಗಳನ್ನು ನೀಡುತ್ತಾರೆ ಎಂದು ಭಾವಿಸಿದ್ದೆವು. ಆದರೆ ಬಾಸ್ ಬಿಎಂಡಬ್ಲ್ಯು ಕೀಗಳನ್ನು ನೀಡಿ ಉಡುಗೊರೆ ಎಂದು ಹೇಳಿದಾಗ ಆಶ್ಚರ್ಯಚಕಿತರಾದೆವು ಎಂದು ಉದ್ಯೋಗಿಗಳು ತಿಳಿಸಿದರು.

ಕಷ್ಟದಲ್ಲೂ ಜೊತೆಗಿದ್ದ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ ಕಿಸ್‌ಫ್ಲೋ ಕಂಪನಿ

BMW 5 ಸರಣಿಯ ವಿಶೇಷತೆ

BMW 5 ಸರಣಿಯು ಅತ್ಯಂತ ಶಕ್ತಿಶಾಲಿ ಐಷಾರಾಮಿ ಕಾರು. ಇದು ತನ್ನ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು ಕೇವಲ 5.1 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಅಂದರೆ ಪಿಕ್-ಅಪ್ ವಿಷಯದಲ್ಲಿ ಇದು ಅತ್ಯುತ್ತಮವಾಗಿದೆ.

ಕಷ್ಟದಲ್ಲೂ ಜೊತೆಗಿದ್ದ ಉದ್ಯೋಗಿಗಳಿಗೆ ದುಬಾರಿ ಉಡುಗೊರೆ ನೀಡಿದ ಕಿಸ್‌ಫ್ಲೋ ಕಂಪನಿ

BMW ತನ್ನ ಮೂರು ಎಂಜಿನ್ ರೂಪಾಂತರಗಳೊಂದಿಗೆ 8-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನ ಆಯ್ಕೆಯನ್ನು ನೀಡುತ್ತದೆ. ರೂಪಾಂತರ ಮತ್ತು ಇಂಧನ ಪ್ರಕಾರವನ್ನು ಅವಲಂಬಿಸಿ 5 ಸರಣಿಯ ಮೈಲೇಜ್ 14.82 ರಿಂದ 20.37 kmpl ಆಗಿದೆ. BMW 5 ಸರಣಿಯು 5 ಆಸನಗಳ ಸೆಡಾನ್ ಕಾರಾಗಿದೆ.

Most Read Articles

Kannada
English summary
It company in chennai surprise gifts bmw 5 series to 5 employees
Story first published: Friday, April 15, 2022, 21:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X