ಮೊಸಳೆ ಚರ್ಮ ಹೊಂದಿದ್ದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ವಶಕ್ಕೆ ಪಡೆದ ಕಸ್ಟಮ್ಸ್ ಇಲಾಖೆ

ರೋಲ್ಸ್ ರಾಯ್ಸ್ ಫ್ಯಾಂಟಮ್ ವಿಶ್ವದ ಅತ್ಯಂತ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಈ ಕಾರ್ ಅನ್ನು ವಿಶ್ವದ ಹಲವು ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಇಟಲಿಯ ಕಸ್ಟಮ್ಸ್ ಇಲಾಖೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ವಶಪಡಿಸಿಕೊಂಡಿದೆ.

ಮೊಸಳೆ ಚರ್ಮ ಹೊಂದಿದ್ದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ವಶಕ್ಕೆ ಪಡೆದ ಕಸ್ಟಮ್ಸ್ ಇಲಾಖೆ

ಈ ಐಷಾರಾಮಿ ಕಾರಿನ ಇಂಟಿರಿಯರ್'ನಲ್ಲಿ ಅಕ್ರಮ ಚರ್ಮವನ್ನು ಬಳಸಲಾಗಿದೆ ಎಂಬ ಕಾರಣಕ್ಕೆ ಕಾರ್ ಅನ್ನು ವಶಪಡಿಸಿ ಕೊಳ್ಳಲಾಗಿದೆ. ಮಾಹಿತಿಗಳ ಪ್ರಕಾರ, ಈ ರೋಲ್ಸ್ ರಾಯ್ಸ್ ಫ್ಯಾಂಟಮ್‌ ಕಾರಿನಲ್ಲಿ ಅಳಿವಿನಂಚಿನಲ್ಲಿರುವ ಮೊಸಳೆ ಚರ್ಮವನ್ನು ಅಪ್ ಹೊಲೆಸ್ಟರಿಯಾಗಿ ಬಳಸಲಾಗಿದೆ.

ಮೊಸಳೆ ಚರ್ಮ ಹೊಂದಿದ್ದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ವಶಕ್ಕೆ ಪಡೆದ ಕಸ್ಟಮ್ಸ್ ಇಲಾಖೆ

ರೋಲ್ಸ್ ರಾಯ್ಸ್‌ ಕಂಪನಿಯ ಅಧಿಕೃತ ಬ್ರೌಷರ್'ನಲ್ಲಿ ಈ ಚರ್ಮದ ಬಗ್ಗೆ ಮಾಹಿತಿ ಕಂಡುಬರುವುದಿಲ್ಲ. ಈ ಕಾರು ಖರೀದಿಸಿರುವವರು ಕಾರ್ ಅನ್ನು ಹೊರಗಡೆ ಕಸ್ಟಮೈಸ್ ಮಾಡಿಸಿದ್ದಾರೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಮೊಸಳೆ ಚರ್ಮ ಹೊಂದಿದ್ದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ವಶಕ್ಕೆ ಪಡೆದ ಕಸ್ಟಮ್ಸ್ ಇಲಾಖೆ

ಐಷಾರಾಮಿ ಕಾರುಗಳ ಮಾಲೀಕರು ತಮ್ಮ ಕಾರುಗಳನ್ನು ವಿಪರೀತವಾಗಿ ಕಸ್ಟಮೈಸ್ ಮಾಡಿಸುತ್ತಾರೆ ಎಂಬುದು ಗಮನಾರ್ಹ. ಮೊಸಳೆ ಚರ್ಮದ ಅಪ್ ಹೊಲೆಸ್ಟರಿ ಹೊಂದಿರುವ ಈ ಕಾರನ್ನು ರಷ್ಯಾದಿಂದ ಇಟಲಿಗೆ ಆಮದು ಮಾಡಿಕೊಳ್ಳಲಾಗುತ್ತಿತ್ತು.

ಮೊಸಳೆ ಚರ್ಮ ಹೊಂದಿದ್ದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ವಶಕ್ಕೆ ಪಡೆದ ಕಸ್ಟಮ್ಸ್ ಇಲಾಖೆ

ಇಟಲಿಯಲ್ಲಿ ಈ ಕಾರ್ ಅನ್ನು ರೋಮ್‌ನ ವಿದೇಶಿ ಕಾರ್ ಶೋರೂಂನಲ್ಲಿ ಮರು ಮಾರಾಟ ಮಾಡಬೇಕಿತ್ತು. ಆದರೆ ಈ ಬಗ್ಗೆ ಮಾಹಿತಿ ಪಡೆದ ಇಟಲಿಯ ಕಸ್ಟಮ್ಸ್ ಅಧಿಕಾರಿಗಳು ಕಾರ್ ಅನ್ನು ವಶಕ್ಕೆ ಪಡೆದಿದ್ದಾರೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಮೊಸಳೆ ಚರ್ಮ ಹೊಂದಿದ್ದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ವಶಕ್ಕೆ ಪಡೆದ ಕಸ್ಟಮ್ಸ್ ಇಲಾಖೆ

ರೋಲ್ಸ್ ರಾಯ್ಸ್ ಫ್ಯಾಂಟಮ್‌ನಂತಹ ಐಷಾರಾಮಿ ಕಾರುಗಳನ್ನು ಅಪರೂಪದ ವಸ್ತುಗಳೊಂದಿಗೆ ಕಸ್ಟಮೈಸ್ ಮಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಆದರೆ ಮೊಸಳೆ ಚರ್ಮದಿಂದ ತಯಾರಾದ ಅಪ್ ಹೊಲೆಸ್ಟರಿ ಬಳಸಿದ್ದು ಇದೇ ಮೊದಲು.

ಮೊಸಳೆ ಚರ್ಮ ಹೊಂದಿದ್ದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ವಶಕ್ಕೆ ಪಡೆದ ಕಸ್ಟಮ್ಸ್ ಇಲಾಖೆ

ರೋಲ್ಸ್ ರಾಯ್ಸ್‌ನ ಇಂಟಿರಿಯರ್'ನಲ್ಲಿರುವ ಡ್ಯಾಶ್‌ಬೋರ್ಡ್‌ನಲ್ಲಿ ಹರ್ಮ್ಸ್ ಲೆದರ್ ಹಾಗೂ ಹವಾಯಿಯನ್ ಕೋವಾ ಮರವನ್ನು ಬಳಸಲಾಗಿದೆ ಎಂದು ಕೆಲವು ವರದಿಗಳು ಸೂಚಿಸಿವೆ. ಆದರೆ ಇವುಗಳ ಬಳಕೆ ಸಂಪೂರ್ಣವಾಗಿ ಕಾನೂನುಬದ್ಧವಾಗಿವೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಮೊಸಳೆ ಚರ್ಮ ಹೊಂದಿದ್ದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ವಶಕ್ಕೆ ಪಡೆದ ಕಸ್ಟಮ್ಸ್ ಇಲಾಖೆ

ಈ ರೋಲ್ಸ್ ರಾಯ್ಸ್‌ನ ಮಾಲೀಕರು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಈ ರೋಲ್ಸ್ ರಾಯ್ಸ್ ಫ್ಯಾಂಟಮ್‌ನಲ್ಲಿರುವ ಇಂಟಿರಿಯರ್ ಅನ್ನು ಸಹ ತೆಗೆದುಹಾಕಬೇಕಾಗುತ್ತದೆ.

ಮೊಸಳೆ ಚರ್ಮ ಹೊಂದಿದ್ದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ವಶಕ್ಕೆ ಪಡೆದ ಕಸ್ಟಮ್ಸ್ ಇಲಾಖೆ

ವಾಷಿಂಗ್ಟನ್ ಕನ್ವೆನ್ಷನ್ ಆನ್ ಇಂಟರ್ನ್ಯಾಷನಲ್ ಟ್ರೇಡ್ ಇನ್ ಅಳಿವಿನಂಚಿನಲ್ಲಿರುವ ಪ್ರಭೇದಗಳ ವನ್ಯಜೀವಿ ಹಾಗೂ ಸಸ್ಯಗಳ (ಸಿಐಟಿಇಎಸ್) ಅಡಿಯಲ್ಲಿ ಮೊಸಳೆಗಳನ್ನು ಸಂರಕ್ಷಿತ ಪ್ರಭೇದಗಳೆಂದು ಪಟ್ಟಿ ಮಾಡಲಾಗಿದೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಮೊಸಳೆ ಚರ್ಮ ಹೊಂದಿದ್ದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ವಶಕ್ಕೆ ಪಡೆದ ಕಸ್ಟಮ್ಸ್ ಇಲಾಖೆ

ಸರಕುಗಳನ್ನು ಮೊಸಳೆ ಹಾಗೂ ಅಲಿಗೇಟರ್ ಚರ್ಮದಿಂದ ಕಾನೂನುಬದ್ಧವಾಗಿ ತಯಾರಿಸಬಹುದು. ಆದರೆ ಇವುಗಳ ತಯಾರಿಕೆಗೆ ಸಿಐಟಿಇಎಸ್'ನಿಂದ ಪ್ರಮಾಣಪತ್ರ ಪಡೆಯಬೇಕಾಗುತ್ತದೆ. ಸಿಐಟಿಇಎಸ್ ತನ್ನ ವ್ಯಾಪ್ತಿಗೆ ಬರುವ 160 ದೇಶಗಳಲ್ಲಿ ಮೊಸಳೆ ಚರ್ಮ ಬಳಸಲು ಅನುಮತಿ ನೀಡಿದೆ.

ಚಿತ್ರಕೃಪೆ: ಇನ್ಸ್ಟಾಗ್ರಾಮ್/ ಎಡಿಎಂ_ಜಿ‌ಒವಿ

Most Read Articles

Kannada
English summary
Italy custom department seizes Rolls Royce Phantom car for using crocodile leather. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X