ಬೆಂಝ್‌ಗೆ ಟಾಂಗ್ ಕೊಟ್ಟ 'ಜಾಗ್ವಾರ್ vs ಚಿಕನ್' ಜಾಹೀರಾತು
ಕೆಲವು ತಿಂಗಳುಗಳ ಹಿಂದೆಯಷ್ಟೇ ಮರ್ಸಿಡಿಸ್ ಬೆಂಝ್ 'ಮ್ಯಾಜಿಕ್ ಬಾಡಿ ಕಂಟ್ರೋಲ್' ಸಸ್ಫೆಷನ್ ಜಾಹೀರಾತಿನ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೆವು. ಇದರಲ್ಲಿ ಪ್ರಮುಖವಾಗಿಯೂ ಒಂದು ಕೋಳಿಯನ್ನು ಬಳಕೆ ಮಾಡಲಾಗಿತ್ತು.
ಐಷಾರಾಮಿ ಬೆಂಝ್ ಗಾಡಿ ಒಂದು ಕೋಳಿಗೆ ಸಮವಂತೆ?
ಒರಟಾದ ರಸ್ತೆಗಳಲ್ಲೂ ಒಂದು ಕೋಳಿ ತರಹನೇ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಬೆಂಝ್ ಸಸ್ಪೆಷನ್ ಖಾತ್ರಿಪಡಿಸುತ್ತದೆ ಎಂಬುದನ್ನು ಈ ಜಾಹೀರಾತು ಸಾರಿತ್ತು. ಇದೀಗ ಬೆಂಝ್ ಪ್ರತಿಸ್ಪರ್ಧಿ ಜಾಗ್ವಾರ್ ಇಂತಹದೊಂದು ಜಾಹೀರಾತು ಮೂಲಕ ಮುಂದೆ ಬಂದಿದೆ. ಬೆಂಝ್‌ಗಿಂತಲೂ ಜಾಗ್ವಾರ್ ಶ್ರೇಷ್ಠ ಎಂಬುದನ್ನು ಉಲ್ಲೇಖಿಸಲು ಇದನ್ನು ಬಿಡುಗಡೆಗೊಳಿಸಲಾಗಿದೆ.
'ಜಾಗ್ವಾರ್ ವರ್ಸಸ್ ಚಿಕನ್' ಎಂಬ ಹೆಸರಿನ ಚಿಕನ್ ಜಾಹೀರಾತು ಸಾಮಾಜಿಕ ತಾಲತಾಣ ಯೂಬ್ಯೂಬ್‌ನಲ್ಲಿ ಅತ್ಯಂತ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ.

ಜಾಗ್ವಾರ್ ಮುಂದೆ ಬೆಂಝ್ ಬಾಡಿ ಕಂಟ್ರೋಲ್ ಏನೂ ಅಲ್ಲ ಎಂಬುದನ್ನು ಈ ವೀಡಿಯೋ ಮೂಲಕ ಸಾರಲಾಗಿದೆ.
ಇಲ್ಲಿದೆ ನೋಡಿ ಜಾಗ್ವಾರ್ ವರ್ಸಸ್ ಚಿಕನ್ ವೀಡಿಯೋ. ಅಷ್ಟಕ್ಕೂ ಬೆಂಝ್ ಮ್ಯಾಜಿಕ್ ಬಾಡಿ ಕಂಟ್ರೋಲ್ ವೀಡಿಯೋ ನೋಡಲು ಮಿಸ್ ಮಾಡಿಕೊಂಡಿದ್ದರೆ ಮುಂದಿನ ಸ್ಲೈಡರ್‌ನತ್ತ ಮುಂದುವರಿಯಿರಿ...
ಇದುವೇ ಬೆಂಝ್ ಚಿಕನ್ ಟೆಕ್ನಾಲಜಿ. 2014 ಬೆಂಝ್ ಎಸ್550 ಕಾರಿನಲ್ಲಿ ನೂತನ ಸಸ್ಪೆಷನ್ ತಂತ್ರಜ್ಞಾನ ಆಳವಡಿಕೆಯಾಗಲಿದೆ ಎಂಬುದನ್ನು ಈ ಮೂಲಕ ನಿರೂಪಿಸಲಾಗಿದೆ.
ಜಾಗ್ವಾರ್ ನಿಪುಣತೆ ಇಲ್ಲಿಗೆ ಅಂತ್ಯವಾಗುವುದಿಲ್ಲ. ಇಲ್ಲಿದೆ ನೋಡಿ ಇನ್ನೊಂದು ಆಕರ್ಷಕ ವೀಡಿಯೋ


Click it and Unblock the Notifications








