ಚೀನಾ ಬೆನ್ನಲ್ಲೇ ಜಪಾನ್ ರಹಸ್ಯ ಜೆಟ್; ಎಚ್ಚೆತ್ತುಕೊಂಡ ಭಾರತ!

By Nagaraja

ಪೂರ್ವ ಏಷ್ಯಾದಲ್ಲಿ ಜನವಾಸವಿಲ್ಲದ 'ಸೆಂಕಾಕು' ದ್ವೀಪಕ್ಕೆ ಸಂಬಂಧಪಟ್ಟಂತೆ ಜಪಾನ್ ಮತ್ತು ಚೀನಾ ನಡುವೆ ಕಳೆದ ಹಲವಾರು ವರ್ಷಗಳಿಂದ ಉದ್ವಿಗ್ನ ಪರಿಸ್ಥಿತಿ ನೆಲೆಗೊಂಡಿದೆ. ಇದರ ಮುಂದುವರಿದ ಬೆಳವಣಿಗೆಯಲ್ಲಿ ಚೀನಾ ಗುಪ್ತ ವಿಮಾನಗಳನ್ನು ಅಭಿವೃದ್ಧಿಪಡಿಸಿರುವುದನ್ನು ಮನಗಂಡಿರುವ ಜಪಾನ್ ಸಹ ಇದೇ ಸಾಲಿನಲ್ಲಿ ಮತ್ತಷ್ಟು ಶಕ್ತಿಶಾಲಿ ಪ್ರಯೋಗಕ್ಕೆ ಮುಂದಾಗಿದೆ.

ಅಮೆರಿಕ, ರಷ್ಯಾ, ಚೀನಾ ಬಳಿಕವೀಗ ಪೂರ್ವ ಏಷ್ಯಾದ ಜಪಾನ್ ಗುಪ್ತ ಜೆಟ್ ವಿಮಾನವನ್ನು ಪರೀಕ್ಷೆ ನಡೆಸಿದೆ. ಇನ್ನೊಂದೆಡೆ ಭಾರತ ಸಹ ತನ್ನದೇ ಆದ ಗುಪ್ತ ಜೆಟ್ ಗಳ ಅಭಿವೃದ್ಧಿಯಲ್ಲಿ ಮಗ್ನವಾಗಿದೆ. ಪ್ರಸ್ತುತ ಅಗ್ರ ರಾಷ್ಟ್ರಗಳ ರಹಸ್ಯವಾದ ಚಲನವಲನಗಳ ಗುಪ್ತ ಜೆಟ್ ವಿಮಾನಗಳ ಬಗ್ಗೆ ವಿವರಣೆಯನ್ನು ನೀಡುವ ಪ್ರಯತ್ನ ಮಾಡಲಿದ್ದೇವೆ.

ಜಪಾನ್ - ಮಿಟ್ಸುಬಿಸಿ ಎಕ್ಸ್-2 ಶಿನ್ಸಿನ್

ಜಪಾನ್ - ಮಿಟ್ಸುಬಿಸಿ ಎಕ್ಸ್-2 ಶಿನ್ಸಿನ್

ಮಿಟ್ಸುಬಿಸಿ ಎಕ್ಸ್-2 ಶಿನ್ಸಿನ್ ಜಪಾನ್ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ರಹಸ್ಯ ಜೆಟ್ ಯುದ್ಧ ವಿಮಾನವಾಗಿದೆ. ಇದು 14.17 ಮೀಟರ್ ಉದ್ದ ಮತ್ತು 9.9 ಮೀಟರ್ ಅಗಲವಾದ ರೆಕ್ಕೆಗಳನ್ನು ಪಡೆದಿದೆ. ಶಕ್ತಿಶಾಲಿ ಟರ್ಬೊಫ್ಯಾನ್ ಎಂಜಿನ್ ಗಳಿಂದ ನಿಯಂತ್ರಿತ ಈ ಯುದ್ಧ ವಿಮಾನ ಮ್ಯಾಕ್ 1 ಸೂಪರ್ ಸಾನಿಕ್ ವೇಗಕ್ಕೆ ಸಮಾನವಾಗಿ ಗಂಟೆಗೆ 2778 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 2900 ಕೀ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವೆನಿಸಿದೆ.

ಚೀನಾ - ಮೆನಸ್ 1 - ಶೆಂಗ್ಯಾಂಗ್ ಜೆ-31

ಚೀನಾ - ಮೆನಸ್ 1 - ಶೆಂಗ್ಯಾಂಗ್ ಜೆ-31

ವಿಶ್ವದ ಅಶ್ವ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಚೀನಾ ಮಿಲಿಟರಿ ಬಲದಲ್ಲೂ ಸಾಕಷ್ಟು ಮುಂದುವರಿದಿದೆ. ಇದಕ್ಕೆ ಸಾಕ್ಷಿಯಾಗಿ ಮೆನಸ್ 1 - ಶೆಂಗ್ಯಾಂಗ್ ಜೆ-31 ಗುಪ್ತ ವಿಮಾನ ಮೂಡಿ ಬಂದಿದೆ. 16.9 ಮೀಟರ್ ಉದ್ದ ಮತ್ತು 11.5 ಮೀಟರ್ ಅಗಲವಾದ ರೆಕ್ಕೆಗಳನ್ನು ಹೊಂದಿರುವ ಈ ಲೋಹದ ಹಕ್ಕಿ ಗಂಟೆಗೆ 2222 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ಸಾಮರ್ಥ್ಯ ಹೊಂದಿದೆ. 2018ರ ವೇಳೆಯಾಗುವಾಗ ಚೀನಾ ಮಿಲಿಟರಿಯನ್ನು ಸೇರ್ಪಡೆಯಾಗಲಿರುವ ಈ ಗುಪ್ತ ವಿಮಾನ ಬರೋಬ್ಬರಿ 4,000 ಕೀ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವಾಗಿದೆ.

ಚೀನಾ - ಮೆನಸ್ 2 - ಚೆಂಗ್ಡು ಜೆ20

ಚೀನಾ - ಮೆನಸ್ 2 - ಚೆಂಗ್ಡು ಜೆ20

ಕೇವಲ ಜಪಾನ್ ಮಾತ್ರವಲ್ಲ ಚೀನಾದಿಂದ ಎದುರಾಗುವ ಅಪಾಯವನ್ನು ನೆರೆಯ ಭಾರತ ಕೂಡಾ ಎಚ್ಚರಿಕೆಯಿಂದ ಕಾಣಬೇಕಾಗಿದೆ. ಏಕೆಂದರೆ ಚೀನಾ ದೇಶವು 20 ಮೀಟರ್ ಉದ್ದ ಮತ್ತು 13 ಮೀಟರ್ ಅಗಲವಾದ ರೆಕ್ಕೆಗಳುಳ್ಳ ಮೇನಸ್ 2 ಟೆಂಗ್ಡು ಜೆ20 ರಹಸ್ಯ ಯುದ್ಧ ವಿಮಾನವನ್ನು ಪಡೆದಿದೆ.

ರಷ್ಯಾ - ಸುಖೋಯ್ ಪಿಎಕೆ ಎಫ್‌ಎ

ರಷ್ಯಾ - ಸುಖೋಯ್ ಪಿಎಕೆ ಎಫ್‌ಎ

ಅಂತರಾಷ್ಟ್ರೀಯ ಬಾಂಧವ್ಯದ ವಿಚಾರಕ್ಕೆ ಬಂದಾಗ ಭಾರತದ ದೀರ್ಘ ಕಾಲದ ಮಿತ್ರ ರಾಷ್ಟ್ರವಾಗಿರುವ ರಷ್ಯಾ ಸಹ ಶಕ್ತಿಶಾಲಿ ರಹಸ್ಯ ಯುದ್ಧ ಜೆಟ್ ತಮ್ಮದಾಗಿಸಿಕೊಂಡಿದೆ. ರಷ್ಯಾದಲ್ಲಿರುವ ಬಹು ಪಾತ್ರಧಾರಿ ಸುಖೋಯ್ ಪಿಎಕೆ ಎಫ್‌ಎ ಯುದ್ಧ ವಿಮಾನ 19.8 ಮೀಟರ್ ಉದ್ದವನ್ನು 13.95 ಮೀಟರ್ ಅಗಲವಾದ ರೆಕ್ಕೆಗಳನ್ನು ಪೆಡದಿದ್ದು, ಗಂಟೆಗೆ 2440 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ 5500 ಕೀ.ಮೀ. ವ್ಯಾಪ್ತಿಯಲ್ಲಿ ಆಕ್ರಮಣ ನಡೆಸಲಿದೆ.

ಭಾರತ - ಸುಖೋಯ್-ಎಚ್ ಎಎಲ್ ಎಫ್ ಜಿಎಫ್ ಎ

ಭಾರತ - ಸುಖೋಯ್-ಎಚ್ ಎಎಲ್ ಎಫ್ ಜಿಎಫ್ ಎ

ರಷ್ಯಾ ಸಹಯೋಗದಲ್ಲಿ ಭಾರತಕ್ಕೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ನಿರ್ಮಿಸುತ್ತಿರುವ ಭಾರತೀಯ ಏರೋನಾಟಿಕಲ್ಸ್ ಲಿಮಿಟೆಡ್ ಸಹ, ಶಕ್ತಿಶಾಲಿ ಸುಖೋಯ್ ಪಿಎಕೆ ಎಫ್ ಎ ಗುಪ್ತ ವಿಮಾನದ ಮಾದರಿಯಲ್ಲಿ ಎಫ್ ಜಿ ಎಫ್ಎ ನಿರ್ಮಿಸಿದೆ. ಭಾರತ ಈಗ ಇತರೆ ರಾಷ್ಟ್ರಗಳ ಬೆಂಬಲವಿಲ್ಲದೆ ತನ್ನದೇ ಆದ ಗುಪ್ತ ಯುದ್ಧ ವಿಮಾನ ಅಭಿವೃದ್ಧಿಸುವುದರಲ್ಲಿ ಕಾರ್ಯ ಮಗ್ನವಾಗಿದೆ. ಹಾಗಿದ್ದರೂ ಇದು ನನಸಾಗಲು ಇನ್ನು ಕೆಲವು ವರ್ಷಗಳಷ್ಟು ಕಾಲ ಕಾಯಬೇಕಾಗಿದೆ.

ಅಮೆರಿಕ - ಬಿ2 ಸ್ಪಿರಿಟ್ ಬಾಂಬರ್

ಅಮೆರಿಕ - ಬಿ2 ಸ್ಪಿರಿಟ್ ಬಾಂಬರ್

ವಿಶ್ವದ ದೊಡ್ಡಣ್ಣ ಅಮೆರಿಕ ಆಗಲೇ ಬಾಂಬ್ ದಾಳಿ ನಡೆಸುವ ಗುಪ್ತ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸಿದೆ. ಬಿ2 ಸ್ಪಿರಟ್ ಬಾಂಬರ್ 1997ನೇ ಇಸವಿಯಿಂದಲೇ ಅಮೆರಿಕ ಸೇನೆಯ ಸೇವೆಯಲ್ಲಿದ್ದು, ಅಪಘಾನಿಸ್ತಾನ ಮತ್ತು ಇರಾಕ್ ವಿರುದ್ಧದ ಯುದ್ಧದಲ್ಲೂ ಗಮನಾರ್ಹ ಪಾತ್ರವನ್ನು ವಹಿಸಿತ್ತು. ಇದು ಗಂಟೆಗೆ 1010 ಕೀ.ಮೀ. ವೇಗ ಮತ್ತು ಗರಿಷ್ಠ 11,100 ಕೀ.ಮೀ. ವ್ಯಾಪ್ತಿಯ ವರೆಗೆ ಕಾರ್ಯಾಚರಿಸುವಷ್ಟು ಸಮರ್ಥವಾಗಿದೆ.

ಎಫ್ 35 ಲೈಟ್ನಿಂಗ್ II

ಎಫ್ 35 ಲೈಟ್ನಿಂಗ್ II

ಏಕಮಾತ್ರ ಎಂಜಿನ್ ನಿಯಂತ್ರಿತ ಎಫ್ 35 ಲೈಟ್ನಿಂಗ್ II ಗುಪ್ತ ಯುದ್ದ ವಿಮಾನವು ಅಮೆರಿಕವನ್ನು ಮತ್ತಷ್ಟು ಶಕ್ತಿಶಾಲಿ ರಾಷ್ಟ್ರವನ್ನಾಗಿಸುತ್ತದೆ. ಅತ್ಯಂತ ಕಡಿಮೆ ರನ್ವೇಯಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡುವ ಸಾಮರ್ಥ್ಯವುಳ್ಳ ಈ ರಹಸ್ಯ ವಿಮಾನ ಗಂಟೆಗೆ ಗರಿಷ್ಠ 1988 ಕೀ.ಮೀ. ವೇಗವನ್ನು ಮತ್ತು ಗಂಟೆಗೆ 2200 ಕೀ.ಮೀ. ವ್ಯಾಪ್ತಿಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಎಫ್ 22 ರಾಪ್ಟಾರ್

ಎಫ್ 22 ರಾಪ್ಟಾರ್

ಅಮೆರಿಕ ಅಭಿವೃದ್ಧಿಪಡಿಸಿರುವ ಮಗದೊಂದು ಪವರ್ ಫುಲ್ ಗುಪ್ತ ಯುದ್ಧ ಜೆಟ್ ಇದಾಗಿದೆ. ಕೋಟಿಗಟ್ಟಲೆ ರುಪಾಯಿ ವೆಚ್ಚ ವ್ಯಯಿಸಿ ನಿರ್ಮಿಸಿರುವ ಈ ರಾಪ್ಟಾರ್ ಗಳು ಗಂಟೆಗೆ 2410 ಕೀ.ಮೀ. ವೇಗವನ್ನು ಮತ್ತು ಗರಿಷ್ಠ 3220 ಕೀ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವಾಗಿದೆ.

ಎಫ್-117

ಎಫ್-117

ಬಹು ಪಾತ್ರಧಾರಿ ಎಫ್ 117 ಗುಪ್ತ ಯುದ್ಧ ವಿಮಾನವು 1983ನೇ ಇಸವಿಯಲ್ಲಿ ಅಮೆರಿಕ ಸೈನ್ಯವನ್ನು ಸೇರ್ಪಡೆಗೊಂಡಿತ್ತು. ಅಚ್ಚರಿಯೆಂದರೆ 1988ರ ವರೆಗೆ ಈ ವಿಚಾರವನ್ನು ಅಮೆರಿಕ ಗೌಪ್ಯವಾಗಿರಿಸಿಕೊಂಡಿತ್ತು. ಇದು ಗಂಟೆಗೆ 993 ಕೀ.ಮೀ. ಮತ್ತು 1720 ಕೀ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ಸಾಮರ್ಥ್ಯ ಪಡೆದಿದೆ.

ರಹಸ್ಯ ಯುದ್ಧ ವಿಮಾನ

ರಹಸ್ಯ ಯುದ್ಧ ವಿಮಾನ

ಹಾಗಿದ್ದರೆ ಮೊದಲ ರಹಸ್ಯ ಯುದ್ಧ ವಿಮಾನ ಯಾವುದು ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿರಬಹುದು. ಇದಕ್ಕಾಗಿ ನಾವು ಎರಡನೇ ಮಹಾಯುದ್ಧದ ಅಂತ್ಯಕ್ಕೆ ತೆರಳಬೇಕಾಗಿದ್ದು, ಅಂದು ಅಡಾಲ್ಪ್ ಹಿಟ್ಲರ್ ನೇತೃತ್ವದಲ್ಲಿ ನಾಜಿ ಜರ್ಮನಿಯು ಮೊದಲ ಬಾರಿಗೆ ಬಳಕೆ ಮಾಡಿತ್ತು.

ಹಾರ್ಟನ್ ಎಚ್ಒ 229 ಬಾಂಬರ್

ಹಾರ್ಟನ್ ಎಚ್ಒ 229 ಬಾಂಬರ್

ಎರಡನೇ ಮಹಾಯುದ್ಧದಲ್ಲಿ ಸೋಲಿನ ಅಂಚಿಗೆ ತಲುಪಿದಾಗ ನಾಜಿ ಜರ್ಮನಿಯ ಮುಖಂಡ ಅಡಾಲ್ಫ್ ಹಿಟ್ಲರ್ ಅವರು ಹಾರ್ಟನ್ ಸೋದರರಿಗೆ ಎಚ್ಒ 229 ಬಾಂಬರ್ ಅಭಿವೃದ್ಧಿಪಡಿಸಲು ಸೂಚಸಿದರು. ಇದು ವಿಶ್ವದ ಮೊದಲ ಟರ್ಬೊಜೆಟ್ ಹೊಂದಿದ ವಿಮಾನ ನಿರ್ಮಾಣಕ್ಕೆ ಹೇತುವಾಯಿತು. ಶತ್ರು ರಾಷ್ಟ್ರಗಳ ರಾಡಾರ್ ಗಳನ್ನು ತಪ್ಪಿಸಲು ಕಾರ್ಬನ್ ಪೌಡರ್ ಮಿಶ್ರಣ ಮತ್ತು ವಿಮಾನಗಳ ರೆಕ್ಕೆಗಳನ್ನು ಮರದಿಂದ ತಯಾರಿಸಲಾಗಿತ್ತು. ಯುದ್ಧದಲ್ಲಿ ಜರ್ಮನಿಯು ಸೋಲನ್ನಪ್ಪಿದರೆ ಬಳಿಕ ಇದರಿಂದಲೇ ಸ್ಪೂರ್ತಿ ಪಡೆದ ಅಮೆರಿಕ 40 ವರ್ಷಗಳ ಬಳಿಕ ಬಿ-2 ಗುಪ್ತ ವಿಮಾನವನ್ನು ಅಭಿವೃದ್ಧಿಪಡಿಸಿತ್ತು.

More from DriveSpark

Article Published On: Tuesday, April 26, 2016, 15:21 [IST]
English summary
Japan Gets Its Own Stealth Jet! Is India Even Close?
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+