ಕಾರು ಪ್ರಿಯರಿಗೆ ಮಾತ್ರ; ಜೇ ಲೆನೊ ಗ್ಯಾರೇಜ್
ಅಮೆರಿಕದ ಪ್ರಸಿದ್ಧ ಟಿ.ವಿ ನಿರೂಪಕರಾಗಿರುವ ಜೇ ಲೆನೊ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹಿಂದೊಮ್ಮೆ ಅಮೆರಿಕದ ಎನ್‌ಬಿಸಿ ಚಾನೆಲ್‌ನಲ್ಲಿ ಪ್ರಸಾರವಾಗಿದ್ದ 'ದಿ ಟುನೈಟ್ ಶೋ' ಕಾರ್ಯಕ್ರಮದಲ್ಲಿ ಭಾರತದ ಸ್ವರ್ಣ ಮಂದಿರದ ಕುರಿತು ಲಘುವಾಗಿ ಮಾತನಾಡಿರುವುದು ಭಾರಿ ವಿವಾದಕ್ಕೆಡೆ ಮಾಡಿತ್ತು.
'ದಿ ಟುನೈಟ್ ಶೋ ವಿತ್ ಜೇ ಲೆನೊ' ಕಾರ್ಯಕ್ರಮದಲ್ಲಿ ಅಮೃತಸರದ ಸಿಖ್ಖ್‌ರ ಪವಿತ್ರ ಸ್ವರ್ಣ ಮಂದಿರ ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಿಟ್ ರೂಮ್ನೆ ಅವರ ಬೇಸಿಗೆಯ ನಿವಾಸವಾಗಿರಲಿದೆ ಎಂಬ ಹೇಳಿಕೆ ಭಾರಿ ರಾದ್ದಾಂತಕ್ಕೆ ಕಾರಣವಾಗಿದ್ದು, ಈ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಪ್ರಸ್ತುತ ಇಲ್ಲಿ ಜೇ ಲೆನೊ ಹೆಸರನ್ನು ಉಲ್ಲೇಖಿಸಲು ಕಾರಣವೊಂದಿದೆ. ಜೇ ಲೆನೊ ಕಾರು ಪ್ರೇಮಿ ಎಂಬುದು ನಿಮ್ಮಲ್ಲಿ ಎಷ್ಟು ಜನರಿಗೆ ಗೊತ್ತು? ಹೌದು, ಜೇ ಲೆನೊ ಬಳಿ 190 ವಾಹನಗಳಿವೆ. ಅವುಗಳ ಪೈಕಿ 90 ಬೈಕ್‌ಗಳನ್ನು ಹೊಂದಿದ್ದಾರೆ.
ಜೇ ಲೆನೊ ಗ್ಯಾರೇಜ್ ಎಂಬ ವೆಬ್‌ಸೈಟ್‌ನಲ್ಲಿ ತಮ್ಮ ವಿಂಟೇಜ್ ಕಾರುಗಳ ಸಂಪೂರ್ಣ ಪಟ್ಟಿಯನ್ನು ಕೊಟ್ಟಿದ್ದಾರೆ. ಇದರಲ್ಲಿ ವೀಡಿಯೋ ಕ್ಲಿಪಿಂಗ್ ಜತೆ ಫೋಟೊಸ್‌ಗಳ ದೊಡ್ಡ ಕಲೆಕ್ಷನ್ ಇದೆ.
ಹಾಗಿದ್ದರೆ ಜೇ ಲೆನೊ ಗ್ಯಾರೇಜ್‌ನತ್ತ ಜಾಲಿ ರೈಡ್ ಹಾಕೋಣ ಬನ್ನಿ...

ಪೊಪ್ಯುಲರ್ ಮೆಕಾನಿಕ್ಸ್‌ನಲ್ಲಿ ತಮ್ಮ ಕಾರು ಕಲೆ ಬಗ್ಗೆ ಬರೆಯುವ ಜೇ ಲೆನೊ ವಾಹನಗಳ ಸಲಹೆಗಳನ್ನು ಕೊಡುತ್ತಾರೆ.

1913 Packard
ವಿಶ್ವದ ಅತಿ ಪುರಾತರ ವಿಂಟೇಜ್ ಕಾರುಗಳ ಸಂಗ್ರಹವನ್ನು ಜೇ ಲೆನೊ ಹೊಂದಿದ್ದಾರೆ. ಈ ಪೈಕಿ 100 ವರ್ಷಗಿಂತಲೂ ಹಿಂದಿನ 1913 ಪ್ಯಾಕರ್ಡ್ ಕಾರು ಸಹ ಹೊಂದಿದೆ.

1914 Premier

1918 Cadillac Type 57
1918ರ ಕ್ಯಾಡಿಲ್ಯಾಕ್ ಟೈಪ್ 57 ಕಾರು ಈಗಲೂ ಹಳೆಯ ರೂಪವನ್ನು ಹೊಂದಿದೆ. ಇದು ಜೇ ಲೆನೊ ಅವರ ಕಾರು ಪ್ರೀತಿಗೆ ಕಾರಣವಾಗಿದೆ.

1932 Alpha Romeo Monza
ಜಗತ್ತಿನಲ್ಲಿರುವ ಅತಿ ವಿರಳ ಕಾರುಗಳ ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದೆ. ಇದು ತನ್ನದೇ ಆದ ವಿಶೇಷ ಶೈಲಿ, ವೇಗ ಹಾಗೂ ನಾವೀನ್ಯತೆಗೆ ಕಾರಣವಾಗಿದೆ.

1932 Ford Roadster Medal of Honor
ಅಮೆರಿಕ ಕಾರು ತಯಾರಕ ಸಂಸ್ಥೆಯು ತಯಾರಿಸಿರುವ ಮಿಲಿಟರಿ ತಲಹದಿಯ 1932 ಫೋರ್ಡ್ ರೋಡ್‌ಸ್ಟರ್ ಕಾರು ಜೇ ಲೆನೊ ಕಾರು ಸಂಗ್ರಹಕ್ಕೆ ಮತ್ತೊಂದು ಪ್ರತೀಕವಾಗಿದೆ.

1934 Voisin C-25 Aerodyne
1934 Voisin C-25 Aerodyne ಫ್ರಾನ್ಸ್ ಮೂಲದ ಕಾರಾಗಿದೆ. 2011ರ Pebble Beach Concourse ಶೋದಲ್ಲಿ ಪ್ರಸ್ತುತ ಕಾರು ಶ್ರೇಷ್ಠ ಕಾರೆಂಬ ಗೌರವಕ್ಕೆ ಪಾತ್ರವಾಗಿತ್ತು.

1937 Cord 812 Westchester
1937 Cord 812 Westchester ರೇಸ್ ಕಾರು ವಿಭಾಗದಲ್ಲಿ ಪರಿಗಣಿಸಲ್ಪಟ್ಟಿದೆ.

1938 Hispano-Suiza Dubonnet
1938 Hispano-Suiza Dubonnet ಪ್ರಭಾವಶಾಲಿ ಮೃದು ವಿನ್ಯಾಸ ಹೊಂದಿದ್ದು, ಆರ್ಟ್ ಡೆಕೊ ಸಂಸ್ಕೃತಿಯಿಂದ ಪ್ರೇರಣೆ ಪಡೆದುಕೊಂಡಿದೆ.

1940 Plymouth Super Deluxe
ಜೇ ರೆನೊ ತಮ್ಮ ಸಂಗ್ರಹಾಲಯದಲ್ಲಿ ಅತಿ ವಿರಳವಾದ ಪ್ಲೈಮೌತ್ ಸೂಪರ್ ಡಿಲಕ್ಸ್ ಕಾರನ್ನು ಸಹ ಹೊಂದಿದ್ದಾರೆ.

Chrysler Airflow

Lagonda V-12 1939

Morgan Three Wheeler

Mormon Meteor III



Click it and Unblock the Notifications








