ಜಯಾ ಬಚ್ಚನ್ ರನ್ನು ಬೆಚ್ಚಿ ಬೀಳಿಸಿದ ಬೈಕ್ ಸವಾರರು

ಕೋವಿಡ್ -19 ಕಾರಣದಿಂದಾಗಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಬಹುತೇಕ ರಸ್ತೆಗಳು ಖಾಲಿಯಾಗಿವೆ. ಈ ಖಾಲಿ ರಸ್ತೆಗಳಲ್ಲಿ ಕೆಲವು ಬೈಕು ಪ್ರಿಯರು ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದಾರೆ.

ಜಯಾ ಬಚ್ಚನ್ ರನ್ನು ಬೆಚ್ಚಿ ಬೀಳಿಸಿದ ಬೈಕ್ ಸವಾರರು

ಈ ಅತಿ ವೇಗದಿಂದಾಗಿ ಕೆಲವೆಡೆ ಅಪಘಾತಗಳು ಸಂಭವಿಸಿದರೆ ಇನ್ನೂ ಕೆಲವೆಡೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ಅತಿ ವೇಗವಾಗಿ ಕರ್ಕಶ ಶಬ್ದ ಮಾಡುವ ಬೈಕ್ ಸವಾರರಿಂದ ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಸಹ ತೊಂದರೆಗೀಡಾಗಿದ್ದಾರೆ. ಗುರುವಾರ ರಾತ್ರಿ ಜಯ ಬಚ್ಚನ್ ರವರು ತಮ್ಮ ಜಲ್ಸಾ ಬಂಗಲೆಯಿರುವ ರಸ್ತೆಯಲ್ಲಿ ಸೈಲೆನ್ಸರ್ ಇಲ್ಲದೆ ಕರ್ಕಶ ಶಬ್ದ ಮಾಡುತ್ತಾ ಬೈಕ್ ಚಾಲನೆ ಮಾಡುತ್ತಿದ್ದ ಬೈಕ್ ಸವಾರರ ವಿರುದ್ಧ ಪೊಲೀಸ್ ಕಂಟ್ರೋಲ್ ರೂಂನಲ್ಲಿ ದೂರು ದಾಖಲಿಸಿದ್ದಾರೆ.

ಜಯಾ ಬಚ್ಚನ್ ರನ್ನು ಬೆಚ್ಚಿ ಬೀಳಿಸಿದ ಬೈಕ್ ಸವಾರರು

ಅಮಿತಾಬ್ ಬಚ್ಚನ್ ರವರಿಗೆ ಕರೋನಾ ವೈರಸ್ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಜಲ್ಸಾ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವೆಂದು ಘೋಷಿಸಲಾಗಿದ್ದು, ಮನೆಯ ಹೊರಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಜಯಾ ಬಚ್ಚನ್ ರನ್ನು ಬೆಚ್ಚಿ ಬೀಳಿಸಿದ ಬೈಕ್ ಸವಾರರು

ಈ ಕಾರಣದಿಂದಾಗಿ ರಸ್ತೆ ಖಾಲಿಯಾಗಿರುತ್ತದೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವು ಬೈಕ್ ಸವಾರರು ಹೈಸ್ಪೀಡ್ ಬೈಕ್‌ಗಳೊಂದಿಗೆ ರಾತ್ರಿ ವೇಳೆಯಲ್ಲಿ ಕರ್ಕಶ ಶಬ್ದವನ್ನುಂಟು ಮಾಡುತ್ತಿದ್ದಾರೆ.

ಜಯಾ ಬಚ್ಚನ್ ರನ್ನು ಬೆಚ್ಚಿ ಬೀಳಿಸಿದ ಬೈಕ್ ಸವಾರರು

ಜಯ ಬಚ್ಚನ್ ರವರು ಈ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಈ ಕರ್ಕಶ ಶಬ್ದದಿಂದಾಗಿ ಅವರಿಗೆ ನಿದ್ರೆ ಬರುತ್ತಿರಲಿಲ್ಲ. ಈ ಕಾರಣಕ್ಕೆ ಬೇಸತ್ತ ಅವರು ಗುರುವಾರ ರಾತ್ರಿ 11.30ರಿಂದ 12 ಗಂಟೆಯ ನಡುವೆ 100 ನಂಬರ್‌ಗೆ ಕರೆ ಮಾಡಿ ಬೈಕ್ ಸವಾರರ ವಿರುದ್ಧ ದೂರು ನೀಡಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಜಯಾ ಬಚ್ಚನ್ ರನ್ನು ಬೆಚ್ಚಿ ಬೀಳಿಸಿದ ಬೈಕ್ ಸವಾರರು

ಕೆಲವು ಬೈಕ್ ಸವಾರರು ಅಲ್ಲಿ ಬೈಕ್ ಚಾಲನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಬಚ್ಚನ್ ರವರ ಬಂಗಲೆಯ ಬಳಿಗೆ ಬರುವಷ್ಟರಲ್ಲಿ ಬೈಕ್ ಸವಾರರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ನೈಟ್ ಡ್ಯೂಟಿ ಪೊಲೀಸರಿಗೆ ಬೈಕ್‌ ಸವಾರರ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ.

ಜಯಾ ಬಚ್ಚನ್ ರನ್ನು ಬೆಚ್ಚಿ ಬೀಳಿಸಿದ ಬೈಕ್ ಸವಾರರು

ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆ ದೃಶ್ಯಗಳಲ್ಲಿ ಬೈಕ್ ಸಂಖ್ಯೆಯನ್ನು ಗುರುತಿಸಲಾಗಿದೆ. ಪೊಲೀಸರು ಬೈಕ್ ಸವಾರರಿಗಾಗಿ ಶೋಧ ನಡೆಸುತ್ತಿದ್ದಾರೆ. ಇದುವರೆಗೂ ಯಾರೂ ಸಿಕ್ಕಿಬಿದ್ದಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಜಯಾ ಬಚ್ಚನ್ ರನ್ನು ಬೆಚ್ಚಿ ಬೀಳಿಸಿದ ಬೈಕ್ ಸವಾರರು

ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಕರ್ಫ್ಯೂ ಹಿನ್ನೆಲೆಯಲ್ಲಿ ಜುಹು ಪ್ರದೇಶದಲ್ಲಿ ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಜನರು ಮನೆಯಲ್ಲಿಯೇ ಇರಬೇಕು. ವಿನಾಕಾರಣ ರಸ್ತೆಗಿಳಿಯುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಜಯಾ ಬಚ್ಚನ್ ರನ್ನು ಬೆಚ್ಚಿ ಬೀಳಿಸಿದ ಬೈಕ್ ಸವಾರರು

ಈ ಬೈಕ್‌ ಸವಾರರ ವಿರುದ್ಧ ಇನ್ನೂ ಹಲವು ದೂರುಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿಯ ದೃಶ್ಯಗಳು ಅಸ್ಪಷ್ಟವಾಗಿರುವ ಕಾರಣಕ್ಕೆ ಬೈಕ್ ಸವಾರನನ್ನು ಗುರುತಿಸಲಾಗಿಲ್ಲ. ಆದರೆ ಬೈಕ್‌ ನಂಬರ್ ಪತ್ತೆಯಾಗಿದ್ದು, ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದೆಂದು ಹೇಳಿದ್ದಾರೆ.

Most Read Articles

Kannada
English summary
Jaya Bachchan scared of loud exhaust bikes complaints to police. Read in Kannada.
Story first published: Saturday, July 25, 2020, 16:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X