ರಕ್ಷಣಾ ಕಾರ್ಯಕ್ಕೆ ಬಳಸಿದ್ದ ಜೀಪ್‍ಗೆ ಬಿತ್ತು ರೂ.3,000 ದಂಡ
ಕೇರಳ ರಾಜ್ಯದಲ್ಲಿ ಭೀಕರ ಪ್ರಳಯ ಸಂಭವಿಸಿದ್ದಾಗ ಪೊಲೀಸ್ ಇಲಾಖೆಯು ರಕ್ಷಣಾ ಕಾರ್ಯಕ್ಕೆ 4X4 ಜೀಪ್ ಅನ್ನು ಬಳಸಿತ್ತು. ಇದೀಗ ಅದೇ ಜೀಪ್ ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ಕೇರಳ ರಾಜ್ಯ ಪೊಲೀಸರು ದುಬಾರಿ ಮೊತ್ತದ ದಂಡ ವಿಧಿಸಿದ್ದಾರೆ.

ಭಾರತದ ಮೋಟಾರು ವಾಹನ ಕಾಯ್ದೆಯ ಪ್ರಕಾರ ದ್ವಿಚಕ್ರ ಅಥವಾ ನಾಲ್ಕು ಚಕ್ರ ವಾಹನಗಳನ್ನು ಅನುಮತಿ ಪಡೆಯದೇ ಯಾವುದೇ ರೀತಿಯಲ್ಲಿ ಮಾರ್ಪಾಡು ಮಾಡುವುದು ಕಾನೂನುಬಾಹಿರವಾಗಿದೆ. ಕೆಲವೊಂದು ಮೋಡ್‍ಗಳನ್ನು ಹೊರತುಪಡಿಸಿ, ಇತರ ಮಾರ್ಪಾಡುಗಳನ್ನು ಮಾಡುವುದು ಕಾನೂನು ಬಾಹಿರವಾಗಿದೆ.

2012ರಲ್ಲಿ ಸುಪ್ರೀಂ ಕೋರ್ಟ್ ಕಾರಿನ ವಿಂಡೊಗಳ ಮೇಲೆ ಡಾರ್ಕ್ ರಿಫ್ಲೆಕ್ಟಿವ್ ಫಿಲ್ಮ್ ಗಳನ್ನು ಬಳಸುವುದು ಕಾನೂನುಬಾಹಿರವೆಂದು ಆದೇಶ ನೀಡಿತ್ತು. ಈಗ ಕೇರಳದ ಜೀಪ್ ಮಾಲೀಕರೂಬ್ಬರಿಗೆ ತನ್ನ ಜೀಪಿನ ವಿಂಡೊಗಳ ಮೇಲೆ ಡಾರ್ಕ್ ರಿಫ್ಲೆಕ್ಟಿವ್ ಫಿಲ್ಮಿ ಗಳನ್ನು ಬಳಸಿರುವ ಕಾರಣಕ್ಕೆ ರೂ.3,000 ದಂಡ ವಿಧಿಸಲಾಗಿದೆ. ಕೇರಳದ ಭೀಕರ ಪ್ರವಾಹದ ಸಂದರ್ಭದಲ್ಲಿ ಜೀಪ್ ವೊಂದನ್ನು ಕೇರಳ ರಾಜ್ಯ ಪೊಲೀಸ್ ಪಡೆ ಬಳಸಿತ್ತು. ರಕ್ಷಣಾ ಕಾರ್ಯದಲ್ಲಿ ಬಳಕೆಯಾಗಿದ್ದ ಆ ಜೀಪ್‍ಗೆ ವ್ಯಾಪಕ ಹಾನಿಯಾಗಿತ್ತು.

ಇಲ್ಲಿರುವ ದಂಡ ರಸೀದಿಯ ಚಿತ್ರ ನೋಡಿದರೆ ಈ ಮಹೀಂದ್ರಾ ಜೀಪ್‍ಗೆ ಮೋಟಾರ್ ವಾಹನ ಕಾಯ್ದೆಯಡಿಯಲ್ಲಿ ರೂ.3.000 ದಂಡ ವಿಧಿಸಲಾಗಿದೆ. ಹೊಸ ಮೋಟಾರು ವಾಹನ ಕಾಯ್ದೆಗೂ ಇದಕ್ಕೂ ಯಾವುದೇ ಸಂಬಧವಿಲ್ಲ ಎಂಬುವುದನ್ನು ಗಮನಿಸಿಸಬೇಕು. ಎಂವಿ ಆಕ್ಟ್ ಪ್ರಾರಂಭದಿಂದಲೂ ಕಾರುಗಳು ಮತ್ತು ಬೈಕ್‍ಗಳಲ್ಲಿನ ಪ್ರತಿಯೊಂದು ರೀತಿಯ ಮಾರ್ಪಾಡುಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಬಿಳಿ ಎಲ್‍ಇಲ್‍ಇಡಿ ಲೈಟ್, ಟಿಂಟೆಡ್ ಗ್ಲಾಸ್ ಜೊತೆಗೆ ಎರಡು ಬದಿಯಲ್ಲಿ ವಿಂಡ್‍ಷೀಲ್ಡ್ ಹೊಂದಿರುವುದಕ್ಕಾಗಿ ದಂಡ ವಿಧಿಸಲಾಗಿದೆ.

ಕಾನೂನು ಪ್ರಕಾರ ವಾಹನವು ಹೆಡ್‍ಲೈಟ್‍ಗಳ ಮೇಲೆ ಯಾವುದೇ ಲೈಟ್‍ಗಳನ್ನು ಅಳವಡಿಸಬಾರದು. ಇದಲ್ಲದೆ ವಾಹನವನ್ನು ಚಾಲನೆ ಮಾಡುವಾಗ ಆ ಲೈಟ್‍ಗಳನ್ನು ನಿಗದಿತ ಎತ್ತರದಲ್ಲಿ ಜೋಡಿಸಬೇಕು. ರೂಫ್ ಲೈಟ್‍ಗಳನ್ನು ಶೋರೂಂದಲೇ ಅಳವಡಿಸಿಕೊಂಡಿರಬೇಕು ಅಥವಾ ಆರ್‍ಟಿಒ ಅನುಮತಿಯಿಂದ ಮಾತ್ರ ಅಳವಡಿಸಿಕೊಳ್ಳಬಹುದು, ಇಲ್ಲವಾದರೆ ಅದು ಕಾನೂನುಬಾಹಿರವಾಗುತ್ತದೆ. ಟಿಂಟೆಡ್ ಗ್ಲಾಸ್ ಅನ್ನು ಸುಪ್ರೀಂ ಕೋರ್ಟ್ 2012ರಲ್ಲಿ ನಿಷೇಧಿಸಿದೆ, ದೇಶವನ್ನೇ ಬಿಚ್ಚಿಬಿಳಿಸಿದ ನಿರ್ಭಯ ಪ್ರಕರಣದ ನಂತರ ಸುಪ್ರೀಂ ಕೋರ್ಟ್ ಟಿಂಟೆಡ್ ಗ್ಲಾಸ್ ಬಳಕೆಯನ್ನು ನಿಷೇಧಿಸಿದೆ.

ಈ ಎರಡು ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಈ ಜೀಪಿಗೆ ದಂಡ ವಿಧಿಸಲಾಗಿದೆ. ಕೇರಳದ ಪ್ರವಾಹದಲ್ಲಿ ಪೊಲೀಸರ ರಕ್ಷಣಾ ಕಾರ್ಯಚರಣೆಯ ಸಂದರ್ಭದಲ್ಲಿ ಇದೇ ವಾಹನವನ್ನು ಬಳಸಲಾಗಿದೆ ಎಂದು ಫೇಸ್‍ಬುಕ್ ಪೋಸ್ಟ್ ನಲ್ಲಿ ತಿಳಿಸಲಾಗಿದೆ. ವಾಸ್ತವವಾಗಿ ಕೇರಳದಲ್ಲಿ ಭೀಕರ ಪ್ರವಾಹ ಸಂಭವಿಸಿದಾಗ ಪ್ರವಾಹದ ರಕ್ಷಣಾ ಕಾರ್ಯಾಚರಣೆಯಲ್ಲಿ ಮಾರ್ಪಾಡು ಮಾಡಿರುವ 4X4 ವಾಹನ ಮತ್ತು ಅದರ ಮಾಲೀಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಕೇರಳದ ಇತಿಹಾಸದಲ್ಲಿ ಕಂಡು ಕೇಳಿಯರಿಯದಂತಹ ಭೀಕರ ಪ್ರಳಯ ಸಂಭವಿಸಿದಾಗ ಹಲವು ಮಾರ್ಗಗಳು ಕಡಿತಗೊಂಡಿದ್ದವು. ಪ್ರಳಯ ಸಂಭವಿಸಿದ ಪ್ರದೇಶಗಳಿಗೆ ಯಾವುದೇ ಕಾರುಗಳು ಮತ್ತು ಸಾಮಾನ್ಯ ಜೀಪ್‍ಗಳಲ್ಲಿ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ಜನರು ಪ್ರಳಯದಲ್ಲಿ ಸಿಲುಕಿಕೊಂಡಿರುವಾಗ ಅವರ ರಕ್ಷಣಾ ಕಾರ್ಯಕ್ಕೆ 4X4 ವಾಹನಗಳು ಅನಿವಾರ್ಯವಾಗಿತ್ತು. ಇಂತಹ ಸಂಕಷ್ಟದ ಸಂದರ್ಭದಲ್ಲಿ ನೆರೆವಿಗೆ 4X4 ವಾಹನಗಳು ಮತ್ತು ವಾಹನ ಮಾಲೀಕರು ಧಾವಿಸಿದ್ದರು.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಭೀಕರ ಪ್ರಳಯದಲ್ಲಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಅಸಾಧ್ಯವಾದ ದಾರಿಗಳಲ್ಲಿ ಸಾಗಿ ಪ್ರಳಯದಲ್ಲಿ ಸಿಲುಕಿಕೊಂಡಿದ್ದ ಹಲವು ಜನರನ್ನು ರಕ್ಷಣೆ ಮಾಡಿದ್ದಾರೆ. ಇಷ್ಟೆ ಅಲ್ಲದೇ ಪ್ರಳಯ ಸಂದರ್ಭದಲ್ಲಿ ನಿರಾಶ್ರಿತರಿಗೆ ಬೇಕಾದ ಪರಿಹಾರ ಸಾಮಾಗ್ರಿಗಳನ್ನು ಒದಗಿಸಲು 4X4 ಜೀಪ್‍ಗಳು ಅನಿರ್ವಾಯವಾಗಿದ್ದವು.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ವಾಹನ ಪ್ರೇಮಿಗಳು ಅವರ ನೆಚ್ಚಿನ ವಾಹನಗಳನ್ನು ಮಾರ್ಪಡು ಮಾಡುತ್ತಾರೆ ಮತ್ತು ನಮ್ಮ ದೇಶದ ಕಾನೂನುಗಳು ಅದಕ್ಕೆ ಅನುಮತಿ ನೀಡುತ್ತವೆ. ಇಲ್ಲಿ ಕಾಣಿಸಿಕೊಂಡಿರುವ ಜೀಪ್‍ನಲ್ಲಿ ಸ್ನಾರ್ಕೆಲ್‌ನಂತೆಯೇ ಕಾರುಗಳು ಮತ್ತು ಬೈಕ್‌ಗಳಲ್ಲಿ ಸಾಕಷ್ಟು ಹಾನಿಯಾಗದ ಮತ್ತು ಕಾರ್ಯಕ್ಷಮತೆ / ಪ್ರಾಯೋಗಿಕತೆ / ಸೌಕರ್ಯವನ್ನು ಹೆಚ್ಚಿಸುವ ಮಾರ್ಪಾಡುಗಳನ್ನು ಮಾಡಲಾಗಿದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಆದರೆ ಪ್ರಳಯದ ಸಂದರ್ಭದಲ್ಲಿ ಹಲವು ಜನರನ್ನು ರಕ್ಷಣೆ ಮಾಡಿರುವ ವಾಹನಕ್ಕೆ ದುಬಾರಿ ಮೊತ್ತದ ದಂಡ ವಿಧಿಸಿರುವುದು ವಿಪರಾಸ್ಯದ ಸಂಗತಿ. ಪೊಲೀಸರು ರಕ್ಷಣಾ ಕಾರ್ಯಕ್ಕಾಗಿ ಈ ಜೀಪ್ ಅನ್ನು ಬಳಸುವಾಗ ವಾಹನವು ಎಂವಿ ಕಾಯ್ದೆಯನ್ನು ಉಲ್ಲಂಘಿಸಿರುವುದು ಕಂಡು ಬಂದಿರಲಿಲ್ಲವಾ ಎನ್ನುವುದು ದೊಡ್ಡ ಪ್ರಶ್ನೆ.


Click it and Unblock the Notifications








