Jetson Flying car: ಹಾರುವ ಕಾರು ಈಗ ಖರೀದಿಗೆ ಲಭ್ಯ... ಬುಕಿಂಗ್, ಬೆಲೆ ಮಾಹಿತಿ

ಹಾರುವ ಕಾರುಗಳ ಬಿಡುಗಡೆ ಕುರಿತು ಈ ಹಿಂದೆ ಡ್ರೈವ್‌ಸ್ಪಾರ್ಕ್ ಕನ್ನಡದಲ್ಲಿ ಪ್ರಕಟವಾದ ಸುದ್ದಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗೆಯೇ ಓದುಗರು ಈ ಹಾರುವ ಕಾರು ಯಾವಾಗ ಮಾರುಕಟ್ಟೆಗೆ ಬರಲಿದೆ ಎಂದು ಪ್ರಶ್ನಿಸಿದ್ದರು. ಇದೀಗ ಆ ಸಮಯ ಬಂದಿದ್ದು, ಸ್ವೀಡನ್ ಕಂಪನಿ ಜೆಟ್ಸನ್ ತನ್ನ ಹೊಸ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರನ್ನು ಖರೀದಿಗೆ ಲಭ್ಯವಾಗಿಸಿದೆ.

ಇತ್ತೀಚೆಗೆ ಕಂಪನಿಯು ಹೊಸ ಜೆಟ್ಸನ್ ಒನ್ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರಿನ ಬೆಲೆಗಳನ್ನು ಪ್ರಕಟಿಸಿದೆ. ಗ್ರಾಹಕರು 8,000 ಡಾಲರ್ (ಸುಮಾರು 6.5 ಲಕ್ಷ ರೂಪಾಯಿ) ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ಮನೆಗೆ ತರಬಹುದು. ಈ ಎಲೆಕ್ಟ್ರಿಕ್ ಕಾರಿನ ಬೆಲೆ 98,000 ಡಾಲರ್ (ಅಂದಾಜು 80.19 ಲಕ್ಷ ರೂಪಾಯಿ). ಎಂದು ಕಂಪನಿ ತಿಳಿಸಿದೆ.

Jetson Flying car now available for purchase... Booking, price information

ಕಂಪನಿ ಹೇಳುವಂತೆ, ಇದನ್ನು ಹಾರಿಸುವುದು ತುಂಬಾ ಸುಲಭ. ಇದರಲ್ಲಿ, ವಾಹನದ ಎತ್ತರವನ್ನು ನಿಯಂತ್ರಿಸಲು ಮತ್ತು ಅದರ ದಿಕ್ಕನ್ನು ನಿಯಂತ್ರಿಸಲು ಜಾಯ್ಸ್ಟಿಕ್ ಅನ್ನು ಬಳಸಲಾಗುತ್ತದೆ. ಇದಕ್ಕಾಗಿ ಅದರ ಕಾಕ್‌ಪಿಟ್‌ನಲ್ಲಿ ಎರಡು ಜಾಯ್‌ಸ್ಟಿಕ್‌ಗಳನ್ನು ಒದಗಿಸಲಾಗಿದೆ, ಇವು ಮೂಲತಃ ಅದರ ಹಿಡಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಮೊದಲ ಬಾರಿಗೆ ಹಾರಿಸುವವರು ಕೂಡ ಯಾವುದೇ ಭಯವಿಲ್ಲದೇ ಕಲಿಯಬಹುದು.

ಇದು ನಿಖರವಾಗಿ ಕಾರಿನಂತೆ ಕಾಣದಿದ್ದರೂ, ಅದರ ರಚನೆಯು ಹೆಲಿಕಾಪ್ಟರ್ ಗಳಿಂದ ಪ್ರೇರಿತವಾಗಿ ಕಾಣುವ ಡ್ರೋನ್ ಮಾದರಿಯನ್ನು ಹೋಲುತ್ತದೆ. ವಾಸ್ತವವಾಗಿ, ಇದು ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ವಾಹನವಾಗಿದೆ. ಕೆಲವು ನಿಮಿಷಗಳ ತರಬೇತಿ ಮತ್ತು ಕಂಪ್ಯೂಟರ್ ಸಹಾಯದಿಂದ ಯಾರಾದರೂ ಸುಲಭವಾಗಿ ಹಾರಿಸುವುದನ್ನು ಕಲಿಯಬಹುದು ಎಂದು ಕಂಪನಿ ಹೇಳಿದೆ.

Jetson Flying car now available for purchase... Booking, price information

ಪವರ್ ಮತ್ತು ಪರ್ಫಾಮೆನ್ಸ್:
ಜೆಟ್ಸನ್ ಒನ್ ನಾಲ್ಕು ಪ್ರೊಪೆಲ್ಲರ್‌ಗಳನ್ನು ಹೊಂದಿದ್ದು, ಗಂಟೆಗೆ ಗರಿಷ್ಟ 101 ಕಿಲೋಮೀಟರ್ ವೇಗವನ್ನು ತಲುಪಬಲ್ಲದು. ಈ ಮಟ್ಟದ ಪವರ್‌ಗಾಗಿ 88 ಕಿಲೋವ್ಯಾಟ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಸುಮಾರು 1,500 ಅಡಿ ಎತ್ತರಕ್ಕೆ ಹಾರಬಲ್ಲದು. ಚಾರ್ಜ್ ಮುಗಿದಾಗ, LIDAR ಸೆನ್ಸಾರ್‌ಗಳನ್ನು ಬಳಸಿಕೊಂಡು eVTOL ಸ್ವಯಂಚಾಲಿತವಾಗಿ ಲ್ಯಾಂಡ್ ಆಗುತ್ತದೆ.

ಜೆಟ್ಸನ್ ಒನ್ ನಲ್ಲಿ ಕೆಲವು ವಿಶೇಷ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ನೀಡಲಾಗಿದೆ. ಹಾರಾಟದ ಸಮಯದಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ನಮಗೆ ಸಂಭವನೀಯ ಅಪಾಯ ಎದುರಾದರೆ ತಕ್ಷಣವೇ ನಿಯೋಜನೆಗೊಳ್ಳಲು ಇದರಲ್ಲಿ ಬ್ಯಾಲಿಸ್ಟಿಕ್ ಪ್ಯಾರಾಚೂಟ್‌ಗಳನ್ನು ಸಹ ನೀಡಲಾಗಿದೆ. ಕಂಪನಿಯು ಅದರ ಶ್ರೇಣಿ, ಚಾರ್ಜಿಂಗ್ ಸಮಯ ಇತ್ಯಾದಿಗಳ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

Jetson Flying car now available for purchase... Booking, price information

ಬುಕಿಂಗ್ ಮಾಹಿತಿ:
ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದೆ. ಪ್ರಸ್ತುತ ಇದು ಪರೀಕ್ಷಾ ಹಂತದಲ್ಲಿದ್ದು, ಕಂಪನಿಯ ಯೋಜನೆಯ ಪ್ರಕಾರ ಅದರ ವಿತರಣೆಯನ್ನು ವರ್ಷದೊಳಗೆ ಪ್ರಾರಂಭಿಸಲಾಗುವುದು. ಇದುವರೆಗೆ ಗ್ರಾಹಕರಿಂದ ನೂರಾರು ಘಟಕಗಳಿಗೆ ಬುಕಿಂಗ್ ಸ್ವೀಕರಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇದೀಗ ಇದು ಯುಎಸ್ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟವಾಗಲಿದೆ.

ಗಾತ್ರ ಮತ್ತಿತರ ವಿಶೇಷತೆಗಳು:
ಜೆಟ್ಸನ್ ಒನ್ ಗಾತ್ರವನ್ನು ನೋಡುವುದಾದರೆ 2480 ಮಿ.ಮೀ ಉದ್ದ, 1500 ಮಿ.ಮೀ ಅಗಲ, 1030 ಮಿ.ಮೀ ಎತ್ತರವಿದೆ. ಕಂಪನಿಯ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದರ ಹಾರುವ ಸಮಯ ಸುಮಾರು 20 ನಿಮಿಷಗಳು ಎಂದು ಹೇಳಿದೆ. ಈ ಹಾರುವ ಕಾರನ್ನು ನೋಡಿದ ಮೇಲೆ ಎಲ್ಲರ ಮನದಲ್ಲಿ ಪ್ರಶ್ನೆಯೊಂದು ಮೂಡಬಹುದು, ಇದನ್ನು ಹಾರಿಸಲು ಪೈಲಟ್ ಲೈಸೆನ್ಸ್ ಬೇಕೇ? ಖಂಡಿತ ಇಲ್ಲ.

ವಾಸ್ತವವಾಗಿ, ಇದನ್ನು ಕೇವಲ 190 ಪೌಂಡ್ ಅಥವಾ 86 ಕಿಲೋಗ್ರಾಂಗಳಷ್ಟು ತೂಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಂದರೆ, eVTOL ಅಲ್ಟ್ರಾಲೈಟ್ ವಾಹನಗಳಿಗೆ US ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ನಿಯಮಗಳಿಗೆ ಅನುಗುಣವಾಗಿದೆ. ಆದ್ದರಿಂದ ಕಾರ್ಯಾಚರಣೆಗೆ ಪೈಲಟ್ ಪರವಾನಗಿ ಅಗತ್ಯವಿಲ್ಲ. ಆದಾಗ್ಯೂ, ಈ ನಿಯಮವು ಅಮೆರಿಕಾದಲ್ಲಿ ಮಾತ್ರ ಮಾನ್ಯವಾಗಿದೆ.

Article Published On: Sunday, April 30, 2023, 16:00 [IST]
English summary
Jetson flying car available purchase booking price info
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+