ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

By Nagaraja

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತಲೇ ಇದೆ. ಶಿಕ್ಷಣ ಮುಗಿಸಿ ಹೊರ ಬರುವ ಇಂದಿನ ಯುವ ಜನಾಂಗ ಕೆಲಸಕ್ಕಾಗಿ ಅತ್ತಿತ್ತ ಅಲೆದಾಡುವ ಪರಿಸ್ಥಿತಿ ಸರ್ವೇ ಸಾಧಾರಣವಾಗಿದೆ. ಹಾಗಿರಬೇಕೆಂದರೆ ನಿರುದ್ಯೋಗಿಗಳಿಗೆ ಉತ್ಸಾಹ ತುಂಬಿರುವ 26ರ ಹರೆಯದ ಯುವಕನೋರ್ವ ಹಳೆಯ ಮಾರುತಿ ವ್ಯಾನ್ ನ ಎಂಜಿನ್ ನಲ್ಲಿ ವಿಮಾನ ನಿರ್ಮಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇದರಿಂದಲೇ ಈ ಯುವ ಆಟೋಮೊಬೈಲ್ ಎಂಜಿನಿಯರ್ ತನ್ನ ಕ್ಷೇತ್ರದಲ್ಲಿ ಎಷ್ಟೊಂದು ಪಳಗಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಆದರೂ ಇಂತಹ ಯುವಕರಿಗೆ ಸೂಕ್ತ ಕೆಲಸ ದೊರಕದೇ ಅಲೆದಾಡುವ ಪರಿಸ್ಥಿತಿ ಎದುರಾಗುತ್ತಿರುವುದು ತೀವ್ರ ಬೇಸರದ ಸಂಗತಿಯಾಗಿದೆ.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

ಉತ್ತರ ಪ್ರದೇಶದಲ್ಲಿ ಸ್ಥಿತಗೊಂಡಿರುವ ಮುಜಾಫಿರ್ ನಗರದಲ್ಲಿರುವ 26ರ ಹರೆಯದ ಅಬ್ದುಲ್ ವಾಜೀದ್ ಎಂಬವರೇ ತೀವ್ರ ಹತಾಶೆಯಿಂದಲೇ ಈ ಒಂದು ಸೀಟಿನ ವಿಮಾನವನ್ನು ನಿರ್ಮಿಸಿದ್ದಾರೆ.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನಲ್ಲಿರುವಾಗ ಸಪ್ದಾರ್ ಜುಂಗ್ ವಿಮಾನ ನಿಲ್ದಾಣದಲ್ಲಿ ಏರೋ ಮಾಡೆಲಿಂಗ್ ಗಾಗಿ ತರಬೇತಿಯನ್ನು ಪಡೆದಿರುವ ಐದು ಲಕ್ಷ ರು.ಗಳಷ್ಟು ವೆಚ್ಚದಲ್ಲಿ ಹೊಸ ವಿಮಾನ ನಿರ್ಮಿಸಿದ್ದಾರೆ.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

ನನ್ನನ್ನು ನಿಷ್ಪ್ರಯೋಜಕ ಎಂದು ಅಂದುಕೊಂಡಿರುವ ಎಲ್ಲರಿಗೂ ನಾನೇನು ಮಾಡಭಲ್ಲೆ ಎಂಬುದನ್ನು ತೋರಿಸಿಕೊಡಲು ಬಯಸುತ್ತಿದ್ದೇನೆ. ಇದಕ್ಕಿಂತ ಮಿಗಿಲಾಗಿ ನನಗೇನು ಬೇಡ ಎಂದು ವಾಜೀದ್ ವಿವರಿಸುತ್ತಾರೆ.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

ಈ ವಿಮಾನ ತನ್ನ ಚೊಚ್ಚಲ ಹಾರಾಟ ಆರಂಭಿಸುವಾಗ ಇಡೀ ವ್ಯೋಮಯಾನ ಇಲಾಖೆಯು ಗಮನಕ್ಕೆ ತೆಗೆದುಕೊಳ್ಳಲಿದೆ. ಆವಾಗಲಾದರೂ ಯಾರಾದರೂ ಬಂದು ನನಗೆ ಉದ್ಯೋಗ ನೀಡಿ ನನ್ನ ಸೇವೆಗಾಗಿ ಮತ್ತಷ್ಟು ತರಬೇತಿಯನ್ನು ನೀಡುವ ಭರವಸೆ ನನಗಿದೆ ಎಂದಿದ್ದಾರೆ.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

ಕಡಿಮೆ ಪಕ್ಷ ಉತ್ತರ ಪ್ರದೇಶ ಮುಖ್ಯಮಂತ್ರಿಯಾದರೂ ಹಣಕಾಸು ನೆರವನ್ನು ನೀಡುವ ನಂಬಿಕೆ ನನ್ನಲ್ಲಿದೆ ಎಂದು ವಾಜೀದ್ ವಿವರಿಸುತ್ತಾರೆ.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

350 ಕೆ.ಜಿ ಭಾರದ ಮರದ ರಚನೆಯು ಒಂದು ಮೀಟರ್ ನಷ್ಟು ಉದ್ದವಿದ್ದು, ಇದಕ್ಕೆ ಗಟ್ಟಿಮುಟ್ಟಾದ ಸ್ಟೀಲ್ ಫ್ರೇಮ್‌ನ ಬೆಂಬಲ ನೀಡಲಾಗಿದೆ. ಅಲ್ಲದೆ ಎಲ್ಲ ಹಂತದಲ್ಲೂ ಹಾರಾಟಕ್ಕೆ ಸಿದ್ಧಗೊಂಡಿದೆ.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

ಆರಂಭದಲ್ಲಿ ಎರಡು ಬೈಕ್ ಎಂಜಿನ್ ಗಳನ್ನು ಲಗತ್ತಿಸಲಾದರೂ ವಿಮಾನದ ರೆಕ್ಕೆಗೆ ಬೇಕಾದಷ್ಟು ಶಕ್ತಿ ಉತ್ಪಾದಿಸಲು ವಿಫಲವಾಗಿತ್ತು. ಕ್ರಮೇಣ ಮಾರುತಿ ಕಾರಿನ ಹಳೆಯ ಎಂಜಿನ್ ಬಳಕೆ ಮಾಡಲುನಿರ್ಧರಿಸಿದ್ದರು.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

ತಮ್ಮ ಕುಟುಂಬ, ಸ್ನೇಹಿತರು ಮತ್ತು ಗ್ರಾಮ ವಾಸಿಗಳ ಸಹಾಯದಿಂದ ಐದು ಲಕ್ಷ ರು.ಗಳನ್ನು ಸಂಗ್ರಹಿಸಿರುವ ವಾಜೀದ್ ಈ ಅದ್ಬುತ ವಿಮಾನದ ಕನಸನ್ನು ನನಸಾಗಿಸಿದ್ದಾರೆ.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

ಇದರಲ್ಲಿ 25 ಲೀಟರ್ ಪೆಟ್ರೋಲ್ ಟ್ಯಾಂಕ್ ಲಗತ್ತಿಸಲಾಗಿದ್ದು, 10 ಕೀ.ಮೀ. ವರೆಗೆ ಗಾಳಿಯಲ್ಲಿ ತೇಲಾಡಲಿದೆ.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

ವಿಮಾನದ ಸುರಕ್ಷತೆಯ ಬಗ್ಗೆ ವಿಚಾರಿಸಿದಾಗ ತನ್ನಲ್ಲಿ ಹಾರಾಡಲು ಕೇಳಿದಾಗ ಕೈಯಲ್ಲೊಂದು ಪ್ಯಾರಾಚ್ಯೂಟ್ ಹೊತ್ತೊಯ್ಯಲಿದ್ದೇನೆ ಎಂದಿದ್ದಾರೆ.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

ಸ್ಥಳೀಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ವಾಜೀದ್ ದೆಹಲಿ ವಿಶ್ವ ವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದರು. ವಾಯುಸೇನೆ ವಿಭಾಗದ ಎನ್‌ಸಿಸಿಯಲ್ಲಿ ಸಿ ಸರ್ಟಿಫಿಕೇಟ್ ಗಿಟ್ಟಿಸಿಕೊಂಡಿರುವ ಅವರು ಏರೋ ಮಾಡೆಲಿಂಗ್ ತರಬೇತಿ ಪಡೆಯುವ ಅವಕಾಶ ಗಿಟ್ಟಿಸಿಕೊಂಡಿದ್ದರು.

ಮಾರುತಿ ವ್ಯಾನ್ ಎಂಜಿನ್‌ನಿಂದ ವಿಮಾನ ನಿರ್ಮಿಸಿದ ನಿರುದ್ಯೋಗಿ

ತದಾ ಬಳಿಕ ಅನೇಕ ಬಾರಿ ಸರ್ಕಾರಿ ಕೆಲಸಕ್ಕೆ ಶ್ರಮಿಸಿದರೂ ಯಾವುದೇ ಫಲವುಂಟಾಗಲಿಲ್ಲ. ಇವೆಲ್ಲದರಿಂದ ಬೆಸೆತ್ತ ಅವರು ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರ್ಪಡಿಸಲು ವಿಮಾನ ನಿರ್ಮಿಸುವ ಸಾಹಸಕ್ಕೆ ಮುಂದಾಗಿದ್ದರು.

More from DriveSpark

Article Published On: Friday, May 27, 2016, 15:58 [IST]
English summary
Jobless Indian Youth Builds Plane Using Maruti Van Engine
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+