ಸಂಜಯ್‌ಗೆ ರೋಮ್ಯಾಂಟಿಕ್ ಹೀರೊ ಜಾನ್ ಬೈಕ್ ಗಿಫ್ಟ್
ಬಾಲಿವುಡ್‌ನ ಹ್ಯಾಂಡ್ ಸಮ್ ಬಾಯ್, ರೋಮ್ಯಾಂಟಿಕ್ ಹೀರೊ ಜಾನ್ ಅಬ್ರಹಾಂ ಅವರು ನಿರ್ದೇಶಕ ಹಾಗೂ ನಿರ್ಮಾಪಕ ಆಗಿರುವ ಸಂಜಯ್ ಗುಪ್ತಾ ಅವರಿಗೆ ಯಮಹಾ ವಿಮ್ಯಾಕ್ಸ್ ಕ್ರೂಸರ್ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ.
ತಮ್ಮ ನೂತನ ಚಿತ್ರ 'ಶೂಟೌಟ್ ಎಟ್ ವಾಡಾಲಾ' ಯಶಸ್ಸಿಗಾಗಿ ಜಾನ್ ಇಂತಹದೊಂದು ಗಿಫ್ಟ್ ನೀಡಿದ್ದಾರೆ. ಪ್ರಸ್ತುತ ಚಿತ್ರ ಮುಂಬೈ ಮಹಾನಗರಿಯ ಮೊದಲ ಶೂಟೌಟ್ ಕೇಂದ್ರಿಕರಿಸಿ ರಚಿಸಲಾಗಿದೆ.
2007ನೇ ಇಸವಿಯಲ್ಲಿ ಬಿಡುಗಡೆಯಾದ ಕ್ರೈಮ್ ಸ್ಟೋರಿ 'ಶೂಟೌಟ್ ಎಟ್ ಲೋಕಂದ್‌ವಾಲಾ' ಚಿತ್ರದ ಮುಂದುವರಿದ ಭಾಗವಾಗಿದೆ. ಅನಿಲ್ ಕಪೂರ್ ಹಾಗೂ ಕಂಗಾನಾ ರನೌತ್ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೇ 3ರಂದು ಬಿಡುಗಡೆಯಾಗಿರುವ ಶೂಟೌಟ್ ಎಟ್ ವಾಡಾಲಾ ಚಿತ್ರಕ್ಕೆ ಅಭಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ದೊರಕಿದೆ. ಇದೇ ಖುಷಿಯಲ್ಲಿ ತಮ್ಮ ಸ್ನೇಹಿತ ಹಾಗೂ ನಿರ್ಮಾಪಕ ಸಂಜಯ್ ಗುಪ್ತಾ ಅವರಿಗೆ ಯಮಹಾ ವಿಮ್ಯಾಕ್ಸ್ ಉಡುಗೊರೆಯಾಗಿ ನೀಡಲು ಜಾನ್ ಅಬ್ರಹಾಂ ನಿರ್ಧರಿಸಿದ್ದರು.

ಮುಂಬೈ ಅಂಡರ್‌ವಲ್ಡ್ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾನ್ ಅಬ್ರಹಾಂ ಹಳೆಯ ವಿಂಟೇಜ್ ಬೈಕ್‌ನಲ್ಲಿ ಸ್ಟೈಲಿಷ್ ಲುಕ್ ಕಾಪಾಡಿದ್ದಾರೆ.

ಇನ್ನು ಯಮಹಾ ವಿಮಾಕ್ಸ್ ಬೈಕ್ ಕುರಿತು ಚರ್ಚಸುವುದಾದರೆ ಇದರ ದರ ಬರೋಬ್ಬರಿ 23.21 ಲಕ್ಷ ರು.ಗಳಾಗಿವೆ. ಇದು ಗರಿಷ್ಠ ನಿರ್ವಹಣೆ, ಗುಣಮಟ್ಟ ಹಾಗೂ ವಿನ್ಯಾಸಕ್ಕೆ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಯಮಹಾ ವಿಮ್ಯಾಕ್ಸ್ ಕ್ರೂಸರ್ ಬೈಕ್ 1,679 ಸಿಸಿ ವಿ4 ಎಂಜಿನ್‌ನಿಂದ ನಿಯಂತ್ರಸ್ಪಡುತ್ತಿದ್ದು, 2000 ಪಿಎಸ್ ಪವರ್ (167 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆ ಬಳಿಕ ಟ್ವೀಟ್ ಮಾಡಿರುವ ಸಂಜಯ್ ಗುಪ್ತಾ, ನಾನೀಗ ಯಮಹಾ ವಿಮ್ಯಾಕ್ಸ್ ಬೈಕ್‌ನ ಹೆಮ್ಮೆಯ ಮಾಲಿಕನಾಗಿದ್ದು, ನನ್ನ ಹೀರೊ ಜಾನ್ ಅಬ್ರಹಾಂಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಅಂದ ಹಾಗೆ ಇದು ಮೊದಲ ಮೊದಲ ಬಾರಿಯೇನಲ್ಲ ಚಿತ್ರದ ಯಶಸ್ಸಿಗಾಗಿ ಜಾನ್ ಬೈಕ್ ಉಡುಗೊರೆಯಾಗಿ ನೀಡಿತ್ತಿರುವುದು. ಈ ಹಿಂದೆ ಹೌಸ್ ಫುಲ್ 2 ಚಿತ್ರದ ಯಶಸ್ಸಿಗಾಗಿ ಸಹನಟ ಅಕ್ಷಯ್ ಕುಮಾರ್ ಅವರಿಗೆ ಹರ್ಲಿ ಡೇವಿಡ್ಸನ್ ಬೈಕ್ ಉಡುಗೊರೆಯಾಗಿ ನೀಡಿದ್ದರು.

ಇತ್ತೀಚೆಗಷ್ಟೇ ಲಂಬೋರ್ಗಿನಿ ಗಲರ್ಡೊ ಸೂಪರ್ ಕಾರು ತಮ್ಮದಾಗಿಸಿಕೊಂಡಿದ್ದರು. ಅವರ ಬಳಿ ಆಡಿ ಕ್ಯೂ7 ಲಗ್ಷುರಿ ಎಸ್‌ಯುವಿ ಹಾಗೂ ಆಫ್ ರೋಡಿಂಗ್‌ಗಾಗಿ ಮಾರುತಿ ಜಿಪ್ಸಿ ಕಾರುಗಳಿವೆ.

ಯಮಹಾ ವಿಮ್ಯಾಕ್ಸ್

ಯಮಹಾ ವಿಮ್ಯಾಕ್ಸ್

ಯಮಹಾ ವಿಮ್ಯಾಕ್ಸ್

ಯಮಹಾ ವಿಮ್ಯಾಕ್ಸ್



Click it and Unblock the Notifications








