ಜಾನ್ ಅಬ್ರಹಾಂ ಅವರಿಗೆ ಮಗದೊಂದು ಬೈಕ್ ಗಿಫ್ಟ್

Written By:

ಬೈಕ್ ಪ್ರೇಮಿಯೂ ಆಗಿರುವ ಬಾಲಿವುಡ್‌ನ ಜನಪ್ರಿಯ ನಟ ಜಾನ್ ಅಬ್ರಹಾಂ ಅವರಿಗೆ ಮಗದೊಂದು ಬೈಕ್ ಉಡುಗೊರೆಯಾಗಿ ಲಭಿಸಿದೆ. ಈಗಾಗಲೇ ತಮ್ಮ ಗ್ಯಾರೇಜ್‌ನಲ್ಲಿ ಹಲವು ಮಾದರಿಗಳ ವಾಹನಗಳನ್ನು ಹೊಂದಿರುವ ಜಾನ್ ಅವರಿಗೆ ಜಪಾನ್ ಮೂಲದ ದ್ವಿಚಕ್ರ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಯಮಹಾ, ತನ್ನ ಹೊಚ್ಚ ಹೊಸತಾದ ಎಫ್‌ಝಡ್ ವರ್ಷನ್ 2.0 ಸ್ಪೆಷಲ್ ಎಡಿಷನ್ ಬೈಕ್ ನೀಡಿ ಸನ್ಮಾನಿಸಿದೆ.

ಬೈಕ್ ಹಾಗೂ ಸ್ಕೂಟರ್ ವಿಭಾಗದಲ್ಲಿ ಗಮನಾರ್ಹ ಮಾರಾಟ ಸಾಧಿಸಿರುವ ಯಮಹಾ ಇತ್ತೀಚೆಗಷ್ಟೇ ಎಫ್‌ಝಡ್ ಸರಣಿಯಲ್ಲಿ ಪರಿಷ್ಕೃತ ಮಾದರಿಯನ್ನು ಪರಿಚಯಿಸಿತ್ತು.

To Follow DriveSpark On Facebook, Click The Like Button
ಜಾನ್ ಅಬ್ರಹಾಂ ಅವರಿಗೆ ಎಫ್‌ಝಡ್-ಎಸ್ ವರ್ಷನ್ 2.0 ಉಡುಗೊರೆ

ಸೂಪರ್ ಬೈಕ್ ಪ್ರಿಯರು ಆಗಿರುವ ಜಾನ್, ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿದ್ದಾರೆ. ಇದರಂತೆ ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ಎಫ್‌ಝಡ್ ವರ್ಷನ್ 2.0 ಬೈಕ್ ನೀಡಿ ಗೌರವಿಸಿದೆ.

ಜಾನ್ ಅಬ್ರಹಾಂ ಅವರಿಗೆ ಎಫ್‌ಝಡ್-ಎಸ್ ವರ್ಷನ್ 2.0 ಉಡುಗೊರೆ

ಯಮಹಾ ಮಿಷನ್ 1000 ಕೀ.ಮೀ. ಕಾರ್ಯಕ್ರಮಕ್ಕೆ ಜಾನ್ ಅಬ್ರಹಾಂ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳ ಸನ್ಮುಖದಲ್ಲಿ ಬೈಕ್ ನೀಡಲಾಗಿತ್ತು.

ಜಾನ್ ಅಬ್ರಹಾಂ ಅವರಿಗೆ ಎಫ್‌ಝಡ್-ಎಸ್ ವರ್ಷನ್ 2.0 ಉಡುಗೊರೆ

ಜಾನ್ ಅಬ್ರಹಾಂ ಅವರಿಗೆ ನೀಡಲಾದ ಬೈಕ್ ವಿಶೇಷ ಗ್ರಾಫಿಕ್ಸ್ ವಿನ್ಯಾಸವನ್ನು ಪಡೆದುಕೊಂಡಿತ್ತು. ಅಲ್ಲ ಈ ಸಂದರ್ಭದಲ್ಲಿ ಮಿಸ್ ಫಾಸಿನೊ 2014 ಕೋಯಲ್ ರಾಣಾ ಕೂಡಾ ಉಪಸ್ಥಿತರಿದ್ದರು.

ಜಾನ್ ಅಬ್ರಹಾಂ ಅವರಿಗೆ ಎಫ್‌ಝಡ್-ಎಸ್ ವರ್ಷನ್ 2.0 ಉಡುಗೊರೆ

ಅಷ್ಟೇ ಯಾಕೆ ಈ ವಿಶೇಷ ಬೈಕ್ ಓಡಿಸಲಿರುವ ಅಬ್ರಹಾಂ ಅವರಿಗಾಗಿ ಸ್ಪೆಷಲ್ ಹೆಲ್ಮೆಟ್ ಸಹ ನೀಡಲಾಗಿತ್ತು.

ಜಾನ್ ಅಬ್ರಹಾಂ ಅವರಿಗೆ ಎಫ್‌ಝಡ್-ಎಸ್ ವರ್ಷನ್ 2.0 ಉಡುಗೊರೆ

ಅಂದ ಹಾಗೆ ಜಾನ್ ಅಬ್ರಹಾಂ ಅವರಿಗೆ ನೀಡಲಾಗಿರುವ ಹೊಸ ಎಫ್‌ಝಡ್ ವರ್ಷನ್ 2.0 ಮ್ಯಾಟ್ ಬ್ಲ್ಯಾಕ್ ಮತ್ತು ಗ್ರೇ ಬಣ್ಣಗಳ ಮಿಶ್ರಣವನ್ನು ಹೊಂದಿದೆ.

English summary
Yamaha Gifts John Abraham Special Edition FZ-S Version 2.0
Story first published: Monday, September 22, 2014, 8:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark