ಹೆಲ್ಮೆಟ್ ಇಲ್ಲದೆ ಬೈಕ್‌ನಲ್ಲಿ ಚಕ್ಕಂದವಾಡಿದ ಜಾನ್ ಅಬ್ರಹಾಂ

Written By:

ಸದಾ ಒಂದಲ್ಲೊಂದು ಸುದ್ದಿಯಾಗಿ ಗ್ರಾಸವಾಗುತ್ತಿರುವ ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟ ಜಾನ್ ಅಬ್ರಹಾಂ, ಇದೀಗ ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿರುವುದು ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.

ಜಾನ್ ಅಬ್ರಹಾಂ ಒಬ್ಬ ಬೈಕ್ ಪ್ರೇಮಿ ಕೂಡಾ ಹೌದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗಿರುವಂತೆಯೇ ರಾತ್ರಿವೇಳೆಯಲ್ಲಿ ಅತಿ ದುಬಾರಿ ಎಪ್ರಿಲಿಯಾ ಆರ್‌ಎಸ್‌ವಿ4 ಸೂಪರ್ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆಯೇ ಚಕ್ಕಂದವಾಡಿದ್ದಾರೆ.

ಇದು ಯಾವುದೇ ಸಿನೆಮಾ ಶೂಟಿಂಗ್ ರಂಗವಲ್ಲ. ಹಾಗಿದ್ದರೂ ಜನ ಸಾಮಾನ್ಯರಿಗೆ ಮಾದರಿಯಾಗಬೇಕಾಗಿರುವ ಸೆಲೆಬ್ರಿಟಿಗಳು ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿರುವುದು ಹಲವರ ಟೀಕೆಗೆ ಗುರಿಯಾಗುತ್ತಿದೆ.

To Follow DriveSpark On Facebook, Click The Like Button
ಹೆಲ್ಮೆಟ್ ಇಲ್ಲದೆ ಬೈಕ್‌ನಲ್ಲಿ ಚಕ್ಕಂದವಾಡಿದ ಜಾನ್ ಅಬ್ರಹಾಂ

ಖಾಸಗಿ ಬದುಕಿನಲ್ಲಿ ವಿನಯಶೀಲತೆಯ ಸ್ವಭಾವ ಗುಣವನ್ನು ಹೊಂದಿರುವ ಜಾನ್ ಅಬ್ರಹಾಂ ನೂತನ ಎಪ್ರಿಲಿಯಾ ಬೈಕ್ ಟೆಸ್ಟ್ ಡ್ರೈವ್ ನಡೆಸಿದ್ದಾರೆ.

ಹೆಲ್ಮೆಟ್ ಇಲ್ಲದೆ ಬೈಕ್‌ನಲ್ಲಿ ಚಕ್ಕಂದವಾಡಿದ ಜಾನ್ ಅಬ್ರಹಾಂ

ನೂತನ ಎಪ್ರಿಲಿಯಾ ಆರ್‌ಎಸ್‌ವಿ4 999.6 ಸಿಸಿ ವಿ-4 ಸಿಲಿಂಡರ್, 6 ಸ್ಪೀಡ್ ಗೇರ್ ಬಾಕ್ಸ್, 4 ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಡಿಒಎಚ್‌ಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 180 ಬಿಎಚ್‌ಪಿ (12500 ಆರ್‌ಪಿಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೆಲ್ಮೆಟ್ ಇಲ್ಲದೆ ಬೈಕ್‌ನಲ್ಲಿ ಚಕ್ಕಂದವಾಡಿದ ಜಾನ್ ಅಬ್ರಹಾಂ

ನಿಮ್ಮ ಮಾಹಿತಿಗಾಗಿ ಇಟಲಿ ಮೂಲದ ದೈತ್ಯ ಕಂಪನಿಯಾಗಿರುವ ಪಿಯಾಜಿಯೊ ಮಾಲಿಕತ್ವದಲ್ಲಿರುವ 7 ಐಕಾನಿಕ್ ಬ್ರಾಂಡ್‌ಗಳ ಪೈಕಿ ಎಪ್ರಿಲಿಯಾ ಒಂದಾಗಿದೆ. ವೆಸ್ಪಾ, ಮೊಟೊ ಗುಝಿ, ಡೆರ್ಬಿ, ಪಿಯಾಜಿಯೊ, ಗಿಲೆರಾ ಮತ್ತು ಲಾವೆರ್ಡಾ ಇತರ ಬ್ರಾಂಡ್‌ಗಳಾಗಿವೆ.

ಹೆಲ್ಮೆಟ್ ಇಲ್ಲದೆ ಬೈಕ್‌ನಲ್ಲಿ ಚಕ್ಕಂದವಾಡಿದ ಜಾನ್ ಅಬ್ರಹಾಂ

ಆರಂಭದಲ್ಲಿ ಸ್ಕೂಟರ್ ರೂಪದಲ್ಲಿ ಮಾರುಕಟ್ಟೆ ಪ್ರವೇಶ ಪಡೆದಿದ್ದ ಎಪ್ರಿಲಿಯಾ, ನಿಧಾನವಾಗಿ ರೇಸ್ ವಿನ್ನಿಂಗ್ ಸೂಪರ್ ಬೈಕ್ ವಿಭಾಗಕ್ಕೆ ಕಾಲಿರಿಸಿತ್ತು. 1000 ಸಿಸಿ ವಿಟ್ವಿನ್ ಸೂಪರ್ ಬೈಕ್, ಆರ್‌ಎಸ್‌ವಿ ಮಿಲ್ ಮತ್ತು ಲೇಟೆಸ್ಟ್ ಆರ್‌ಎಸ್‌ವಿ4 ಪ್ರಮುಖ ಉತ್ಪನ್ನಗಳಾಗಿವೆ.

ಹೆಲ್ಮೆಟ್ ಇಲ್ಲದೆ ಬೈಕ್‌ನಲ್ಲಿ ಚಕ್ಕಂದವಾಡಿದ ಜಾನ್ ಅಬ್ರಹಾಂ

ಕಳದೆ ವರ್ಷ ಭಾರತ ಮಾರುಕಟ್ಟೆ ಪ್ರವೇಶಿಸಿದ್ದ ಎಪ್ರಿಲಿಯಾ ಆರ್‌‌ಎಸ್‌ವಿ4 ಬೈಕ್‌ನ ದರ 17.5 ಲಕ್ಷ ರು.ಗಳಾಗಿವೆ. ಇದು ದೆಹಲಿ ಎಕ್ಸ್ ಶೋ ರೂಂ ದರವಾಗಿದ್ದು, ರಸ್ತೆಗೆ ಪ್ರವೇಶಿಸುವಾಗ ಇನ್ನು ದುಬಾರಿಯೆನಿಸಲಿದೆ.

ಹೆಲ್ಮೆಟ್ ಇಲ್ಲದೆ ಬೈಕ್‌ನಲ್ಲಿ ಚಕ್ಕಂದವಾಡಿದ ಜಾನ್ ಅಬ್ರಹಾಂ

ಜಗತ್ತಿನ ಪ್ರಖ್ಯಾತ ಸೂಪರ್ ಬೈಕ್‌ಗಳಲ್ಲಿ ಗುರುತಿಸಿಕೊಂಡಿರುವ ಎಪ್ರಿಲಿಯಾ, ಪ್ರತಿ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೆಲ್ಮೆಟ್ ಇಲ್ಲದೆ ಬೈಕ್‌ನಲ್ಲಿ ಚಕ್ಕಂದವಾಡಿದ ಜಾನ್ ಅಬ್ರಹಾಂ

ಪ್ರಸ್ತುತ ಜಾನ್ ಅಬ್ರಹಾಂ ಫೇವರಿಟ್ ಎನಿಸಿಕೊಂಡಿರುವ ಎಪ್ರಿಲಿಯಾ ಬೈಕ್, ಸಾಹಸಿ ಪ್ರಿಯರಿಗೆ ಅದ್ಭುತ ಚಾಲನಾ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ.

ಫೋಟೊ ಕೃಪೆ: ರಷ್ ಲೇನ್

English summary
Here’s a glimpse of John Abraham test riding the Aprilia RSV4. Considering this is not a film shoot, it is worth asking, why he’s riding without helmet.
Story first published: Friday, September 20, 2013, 11:32 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark