ಹಣಕಾಸು ಸಮಸ್ಯೆಯಿಂದ ಬಂಗಲೆ ಮಾರಾಟ ಮಾಡಿ ದುಬಾರಿ ಕಾರು ಖರೀದಿಸಿದ ನಟಿ ಕಂಗನಾ
ಸಿನಿಮಾ ಸುದ್ದಿಗಳಿಗೆ ಹೊರತಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸುದ್ದಿಯಲ್ಲಿರಲು ಬಯಸುತ್ತಾರೆ. ಅದರಲ್ಲೂ ಬಿಜೆಪಿ ಪಕ್ಷ ಸೇರಿದ ಬಳಿಕ ನಟಿ ಕಂಗನಾ ಸಖತ್ ಸುದ್ದಿಯಲ್ಲಿದ್ದಾರೆ. ಲೋಕಸಭಾ ಚುನಾವಣೆಗೆ ಧುಮುಕಿ ನಟಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಎಂಪಿ ಆಗಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಬಟ್ ನಿರ್ದೇಶನದ ಗ್ಯಾಂಗ್ ಸ್ಟರ್ ಚಿತ್ರದ ಮೂಲಕ ಕಂಗನಾ ಹಿಂದಿ ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟವರು. ಕಂಗನಾ ಹಿಂದಿ ಚಿತ್ರರಂಗದಲ್ಲಿ ಹಲವು ಮನಮೋಹಕ ಪಾತ್ರಗಳ ಮೂಲಕ ಮುಂಚೂಣಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು.
ಸಂವಹನ ಮತ್ತು ಐಟಿ ಸಮಿತಿಯ ಸದಸ್ಯೆಯೂ ಆಗಿರುವ ಕಂಗನಾ ಇತ್ತೀಚೆಗೆ ಮುಂಬೈನಲ್ಲಿರುವ ತನ್ನ ಬಂಗಲೆಯನ್ನು ಮಾರಾಟ ಮಾಡುವ ಮೂಲಕ ಸುದ್ದಿ ಮಾಡಿದ್ದರು. ಪಾಲಿ ಹಿಲ್ ಬಂಗಲೆ ಎಂದು ಕರೆಯಲ್ಪಡುವ ಮನೆಯನ್ನು ಕಂಗನಾ 32 ಕೋಟಿಗೆ ಮಾರಾಟ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಆರ್ಧಿಕ ಸಮಸ್ಯೆಯಿಂದ ತುರ್ತು ಅಗತ್ಯದಿಂದಾಗಿ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ನಟಿ ಹೇಳಿದ್ದಾರೆ.
2017ರಲ್ಲಿ ಕಂಗನಾ ಪಾಲಿ ಹಿಲ್ ಬಂಗಲೆಯನ್ನು 20.7 ಕೋಟಿ ರೂ.ಗೆ ಖರೀದಿಸಿದ್ದರು. ಈಗ ಮಾರಾಟದಲ್ಲಿ 12 ಕೋಟಿ ಲಾಭ ಬಂದಿದೆ. ಮನೆ ಮಾರಾಟ ಮಾಡಿದ ನಂತರ, ನಟ ಹೊಸ ಐಷಾರಾಮಿ ಕಾರನ್ನು ಸಹ ಖರೀದಿಸಿದ್ದಾರೆ. ಕಾರು ಕೊಳ್ಳಲು ಮನೆ ಮಾರಿದ್ದೀರಾ ಎಂದು ಕೇಳುವರು ಕೇಳುತ್ತಿದ್ದಾರೆ . ಕಂಗನಾ ಅವರು 3 ಕೋಟಿ ರೂಪಾಯಿ ಮೌಲ್ಯದ ಹೊಸ ರೇಂಜ್ ರೋವರ್ ಐಷಾರಾಮಿ ಎಸ್‌ಯುವಿ ಹೊಂದಿದ್ದಾರೆ.

ನಟಿಯು ಹೊಸ ವಾಹನ ಖರೀದಿಯ ಸುದ್ದಿ ಭಾನುವಾರ ಹೊರಬಿದ್ದಿದೆ. ಮುಂಬೈನಲ್ಲಿ ಲ್ಯಾಂಡ್ ರೋವರ್‌ನ ಪ್ರಮುಖ ವಿತರಕ ಮೋದಿ ಮೋಟಾರ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಕಂಗನಾ ರನೌತ್‌ಗೆ ಹೊಸ ಎಸ್‌ಯುವಿಯನ್ನು ಹಸ್ತಾಂತರಿಸುವ ಡೀಲರ್‌ಶಿಪ್ ಚಿತ್ರಗಳನ್ನು ಹಂಚಿಕೊಂಡಿದೆ. ಕಂಗನಾ ತನ್ನ ಹೊಸ ಐಷಾರಾಮಿ ಕಾರಿನ ಮುಂದೆ ಚಿತ್ರಗಳಿಗೆ ಪೋಸ್ ನೀಡುತ್ತಿರುವ ಚಿತ್ರಗಳನ್ನು ಅಭಿಮಾನಿಗಳು ತೆಗೆದುಕೊಂಡಿದ್ದಾರೆ.
'ಬಾಲಿವುಡ್ ರಾಣಿ ಮಿಸ್ ಕಂಗನಾ ರಣಾವತ್ ಅವರ ಅದ್ಭುತ ಹೊಸ ಪ್ರಯಾಣಕ್ಕೆ ಅಭಿನಂದನೆಗಳು' ಎಂಬ ಶೀರ್ಷಿಕೆಯೊಂದಿಗೆ ವಿತರಕರು ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಕಾರ್‌ಪೂಜೆ ಮಾಡುತ್ತಿರುವುದು ನೋಡಬಹುದು. ನಟಿ ಕಂಗನಾ ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ ಲಾಂಗ್ ವೀಲ್ ಬೇಸ್ (LWB) ಆವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

5 ಸೀಟುಗಳ ರೇಂಜ್ ರೋವರ್ ಆಟೋಬಯೋಗ್ರಫಿ LWB ಐಷಾರಾಮಿ ಎಸ್‍ಯುವಿ ಮುಂಬೈನಲ್ಲಿ ಬೆಲೆಯು 3.81 ಕೋಟಿ ರೂ. ಆಗಿದೆ. ರೇಂಜ್ ರೋವರ್ ಆಟೋಬಯೋಗ್ರಫಿ LWB ಎಸ್‍ಯುವಿ ಮೈಲ್ಡ್ ಬ್ರಿಡ್ ತಂತ್ರಜ್ಞಾನದೊಂದಿಗೆ 3.0-ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಅತ್ಯಂತ ಜನಪ್ರಿಯ ರೂಪಾಂತರಗಳಲ್ಲಿ ಒಂದಾಗಿದೆ ಎಂಬುದು ಗಮನಾರ್ಹವಾಗಿದೆ.
ಈ ಐಷಾರಾಮಿ ಎಸ್‍ಯುವಿ ಆರು-ಸಿಲಿಂಡರ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, ಈ ಎಂಜಿನ್ 346 bhp ಪವರ್ ಮತ್ತು 700 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೇಂಜ್ ರೋವರ್ ಆಟೋಬಯೋಗ್ರಫಿ LWB 3.0 ಮಾದರಿಯು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಬಳಸುತ್ತದೆ. ಇದು ಆಲ್-ವೀಲ್ ಡ್ರೈವ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ, ಆದ್ದರಿಂದ ಇದು ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications