ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ಬಿಗ್ ಬಾಸ್ ಕನ್ನಡ ಸೀಸನ್ 7ರ ವಿನ್ನರ್ ಮತ್ತು ಕಿರುತೆರೆ ನಟ ಶೈನ್ ಶೆಟ್ಟಿ ಅವರು ಐಷಾರಾಮಿ BMW X1 ಕಾರನ್ನು ಖರೀದಿಸಿದ್ದಾರೆ. ಚಂದನವನದಲ್ಲಿ ಸಾಕಷ್ಟು ಮಂದಿ ಐಷಾರಾಮಿ ಕಾರುಗಳನ್ನು ಖರೀದಿಸಿ ಸುದ್ದಿಯಾಗಿದ್ದರು. ಇದೀಗ ಆ ಸಾಲಿಗೆ ನಟ ಶೈನ್ ಶೆಟ್ಟಿ ಕೂಡ ಸೇರಿದ್ದಾರೆ.

ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ನಟ ಶೈನ್ ಶೆಟ್ಟಿ ಅವರು ನೀಲಿ ಬಣ್ಣದ BMW X1 ಕಾರನ್ನು ಖರೀದಿಸಿದ್ದಾರೆ. ಹೊಸ ಕಾರಿನ ಮುಂದೆ ಶೈನ್ ಶೆಟ್ಟಿ ತಮ್ಮ ತಾಯಿಯೊಂದಿಗಿನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಚಿತ್ರಗಳ ಕೆಳಗೆ ಅಬಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಇನ್ನು ಇತ್ತೀಚೆಗೆ ಸಿಂಪಲ್ ಸ್ಟಾರ್ ರಕ್ಷಿತ ಶೆಟ್ಟಿಯವರು ಐಷಾರಾಮಿ ಆಡಿ ಕಾರನ್ನು ಖರೀದಿಸಿದ್ದರು. ಇನ್ನು ಜೊತೆ ಜೊತೆಯಲಿ ಸಿರೀಯಲ್ ಖ್ಯಾತಿಯ ನಟಿ ಮೇಘ ಶೆಟ್ಟಿ BMW ಮತ್ತು ಎಂಜಿ ಹೆಕ್ಟರ್ ಎಂಬ ಎರಡು ದುಬಾರಿ ಕಾರುಗಳನ್ನು ಖರೀದಿ ಸುದ್ದಿಯಾಗಿದ್ದರು.

ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

"ಮೀರಾ ಮಾಧವ', 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡ ಶೈನ್ ಶೆಟ್ಟಿ ಅವರು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ನಂತರ ಬಿಗ್ ಬಾಸ್ ಕನ್ನಡ ಸೀಸನ್ 7ರ ಕಾರ್ಯಕ್ರಮದ ವಿಜೇತರಾಗಿ ಶೈನ್ ಶೆಟ್ಟಿ ಹೊರಹೊಮ್ಮಿದರು.

ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ಬಿಗ್ ಬಾಸ್ ಕನ್ನಡ 7' ಕಾರ್ಯಕ್ರಮದಲ್ಲಿ ವಿನ್ನರ್ ಆದ ಶೈನ್ ಶೆಟ್ಟಿಗೆ ಬಹುಮಾನವಾಗಿ ಟಾಟಾ ಆಲ್ಟೋಜ್ ಕಾರು ಕೂಡ ಲಭಿಸಿತ್ತು. ಕಳೆದ ವರ್ಷವಷ್ಟೇ ಟಾಟಾ ಆಲ್ಟೋಜ್ ಕಾರಿಗೆ ಒಡೆಯನಾಗಿದ್ದ ಶೈನ್ ಶೆಟ್ಟಿ ಇದೀಗ ದುಬಾರಿ BMW ಕಾರು ಖರೀದಿ ಮಾಡಿದ್ದಾರೆ.

ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ನಟ ಶೈನ್ ಶೆಟ್ಟಿ ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ, ಮೊದಲ ಬಾರಿಗೆ ಶೈನ್ ಶೆಟ್ಟೆ ಪುನೀತ್ ರಾಜ್ ಕುಮಾರ್ ಅವರ ಜೊತೆ ತೆರೆಹಂಚಿಕೊಂಡಿದ್ದಾರೆ. ಕೇವಲ ಸ್ಯಾಂಡಲ್ ವುಡ್​ನಲ್ಲಿ ಮಾತ್ರವಲ್ಲದೇ ಹಿಂದಿ ಆಲ್ಬಂ ಸಾಂಗ್ ನಲ್ಲಿಯು ಕಾಣಿಸಿಕೊಂಡಿದ್ದಾರೆ

ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ಹೀಗೆ ನಟ ಶೈನ್ ಶೆಟ್ಟಿ ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಕೂಡ ಒಂದೆಲ್ಲ ಒಂದು ಕಾರ್ಯಕ್ರಮದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ನಿರೂಪಕರಾಗಿ ಹೆಚ್ಚು ಪ್ರಸಿದ್ದರಾಗಿರುವ ಶೈನ್ ಖಾಸಗಿ ವಾಹಿಯೊಂದರ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಮತ್ತೆ ನಿರೂಪಕನಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ಇನ್ನು ನಟ ಶೈನ್ ಶೆಟ್ಟಿ ಅವರು ಖರೀದಿಸಿದ BMW X1 ಕಾರಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 192 ಬಿಎಚ್‌ಪಿ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಇದರೊಂದಿಗೆ 2.0-ಲೀಟರ್ ಡೀಸೆಲ್ ಮಾದರಿಯು 190 ಬಿಎಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ 7-ಸ್ಪೀಡ್ ಸ್ಟೆಪ್ಟೊನಿಕ್ ಸ್ಪೋರ್ಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದ್ದು, ಡೀಸೆಲ್ ಆವೃತ್ತಿಯಲ್ಲಿ 8-ಸ್ಪೀಡ್ ಸ್ಟೆಪ್ಟೊನಿಕ್ ಸ್ಪೋರ್ಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ. ಇನ್ನು ಮರ್ಸಿಡಿಸ್ ಬೆಂಝ್ ಜಿಎಲ್ಎ ಆವೃತ್ತಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಆಕರ್ಷಕ ಬೆಲೆ ಹೊಂದಿರುವ ಎಕ್ಸ್1 ಮಾದರಿಯು ಬಿಎಸ್-6 ಎಂಜಿನ್ ಮಾತ್ರವಲ್ಲದೆ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ.

ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ಹೊಸ ಕಾರಿನ ಮುಂಭಾಗದಲ್ಲಿ ಈ ಬಾರಿ ದೊಡ್ಡಗಾತ್ರದ ಸಿಗ್ನಿಚೆರ್ ಗ್ರಿಲ್ ಜೋಡಣೆ ಮಾಡಲಾಗಿದ್ದು, ಸ್ಲಿಕ್ ಮಾದರಿಯ ಎಲ್ಇಡಿ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಸ್, ಮರುವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್‌ಲೈಟ್ ಮತ್ತು ದೊಡ್ಡ ಗಾತ್ರ ಏರ್ ಇನ್‌ಟೆಕ್ ಸೌಲಭ್ಯವನ್ನು ನೀಡಲಾಗಿದೆ.

ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ಜೊತೆಗೆ ಹೊಸ ಕಾರಿನ ಅಲಾಯ್ ವ್ಹೀಲ್ ಗಳ ವಿನ್ಯಾಸದಲ್ಲೂ ಬದಲಾವಣೆಗಳಾಗಿದ್ದು, ಈ ಹಿಂದಿನಂತೆಯೇ ಟ್ವಿನ್ ಎಕ್ಸಾಸ್ಟ್ ಪೈಪ್ಸ್ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ವ್ಯೂವ್ ಕ್ಯಾಮೆರಾ ಸೌಲಭ್ಯವಿದೆ.

ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ಹೊಸ ಕಾರಿನಲ್ಲಿ ಒಳಭಾಗದ ವಿವೈರ್ ಲೆಸ್ ಚಾರ್ಜಿಂಗ್ ಸಾಕೆಟ್, ಸ್ಮಾರ್ಟ್‌ಫೋನ್ ಕನೆಕ್ವಿಟಿ ಜೊತೆಗೆ ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, 16 ವಿವಿಧ ಬಣ್ಣಗಳ ಆ್ಯಂಬಿಯೆಂಟ್ ಲೈಟಿಂಗ್, ಕೀ ಲೆಸ್ ಎಂಟ್ರಿ, ಪನೊರಮಿಕ್ ಸನ್‌ರೂಫ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್ ಒಳಗೊಂಡಿದೆ.

ಐಷಾರಾಮಿ BMW ಕಾರು ಖರೀದಿಸಿದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ಈ BMW X1 ಕಾರು ಆಲ್ಪೈನ್ ವೈಟ್, ಬ್ಲ್ಯಾಕ್, ಬ್ಲ್ಯಾಕ್ ಸಾಫೈರ್, ಗ್ಲೆಸಿಯರ್ ವೈಟ್, ಮಿನರಲ್ ವೈಟ್, ಮಿನರಲ್ ಗ್ರೇ, ಸ್ಪಾರ್ಕಿಂಗ್ ಬ್ರೌನ್, ಸ್ಪಾರ್ಕಿಂಗ್ ಸ್ಟೋಮ್, ಮೆಡೆಟೆರಿಯನ್ ಬ್ಲೂ, ಸನ್‌ಸೆಟ್ ಆರೇಂಜ್, ಜುಕೊರೊ ಬಿಜ್ ಮತ್ತು ಸ್ಪೋರ್ಮ್ ಬೇ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ.

Most Read Articles

Kannada
English summary
Kannada actor shine shetty bought new bmw car details
Story first published: Thursday, August 26, 2021, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X